ಇಂದು ಆಲಮಟ್ಟಿ ಡ್ಯಾಂಗೆ ಬಾಗಿನ ಅರ್ಪಿಸಲಿರುವ ಸಿಎಂ; ಸಂತ್ರಸ್ಥರ ಬೇಡಿಕೆ ಈಡೇರಿಸ್ತಾರಾ ಬೊಮ್ಮಾಯಿ?

ಇಂದು ಆಲಮಟ್ಟಿ ಜಲಾಶಯಕ್ಕೆ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಾಗಿನ ಅರ್ಪಣೆ ಮಾಡಲು ಮುಂದಾಗಿದ್ದಾರೆ.  ಹೀಗಾಗಿ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ  ಬಾಧಿತ ಸಂತ್ರಸ್ಥರು ಇದೀಗ ನ್ಯಾಯ ನೀಡುವಂತೆ ಸಿಎಂಗೆ ಮನವಿ ನೀಡಲು ಮುಂದಾಗಿದ್ದಾರೆ.

ಆಲಮಟ್ಟಿ ಡ್ಯಾಂ

ಆಲಮಟ್ಟಿ ಡ್ಯಾಂ

 • Share this:
  ಬಾಗಲಕೋಟೆ(ಆ.21): ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಆಲಮಟ್ಟಿ ಅಣೆಕಟ್ಟೆಯ ಕೃಷ್ಣಾ ನದಿಗೆ ಇಂದು ಬಾಗಿನ ಅರ್ಪಿಸಲು  ಆಲಮಟ್ಟಿಗೆ  ಬರುತ್ತಿದ್ದಾರೆ. ಈ ಹಿನ್ನೆಲೆ  ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಯ ನೀರಾವರಿ ಸಮಸ್ಯೆ ಸೇರಿದಂತೆ ಪ್ರಮುಖ ಜಲ್ವಂತ ಸಮಸ್ಯೆ ಗಳನ್ನು ಬಗೆಹರಿಯಲಿವೆಯಾ ಎಂಬ ಆಶಾಭಾವನೆ ಸಂತ್ರಸ್ಥರಲ್ಲಿ ಈಗ ಮನೆ ಮಾಡಿದೆ. ಹೀಗಾಗಿ ಇಂದು ಸಿಎಂ ಭೇಟಿಗೆ ಮುಂದಾಗಿರೋ ಸಂತ್ರಸ್ಥರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.

  ಹೌದು, ರಾಜ್ಯದ ಮಹತ್ವದ ಯೋಜನೆಗಳಲ್ಲೊಂದಾಗಿರೋ ಕೃಷ್ಣಾ ಮೇಲ್ದಂಡೆಯ  ಯೋಜನೆ ಇನ್ನೂ ಪರಿಪೂರ್ಣವಾಗಿಲ್ಲ. ಇವುಗಳ ಮಧ್ಯೆ ಮತ್ತೆ ಇಂದು ಆಲಮಟ್ಟಿ ಜಲಾಶಯಕ್ಕೆ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಾಗಿನ ಅರ್ಪಣೆ ಮಾಡಲು ಮುಂದಾಗಿದ್ದಾರೆ.  ಹೀಗಾಗಿ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ  ಬಾಧಿತ ಸಂತ್ರಸ್ಥರು ಇದೀಗ ನ್ಯಾಯ ನೀಡುವಂತೆ ಸಿಎಂಗೆ ಮನವಿ ನೀಡಲು ಮುಂದಾಗಿದ್ದಾರೆ. ಪ್ರಮುಖವಾಗಿ 3 ನೇ ಹಂತದ ಹಿನ್ನೀರಿನಲ್ಲಿ ಮುಳಗಡೆಯಾಗುವ ಭೂ ಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡಬೇಕು ಮತ್ತು ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಪರಿಹಾರ ನೀಡಿದ ನಂತರ ಪುನಃ ಬದುಕು ಕಟ್ಟಿಕೊಳ್ಳಲು ಕಾಲಾವಕಾಶ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಬಜೆಟ್ ಮಾಡಿ ಹಣ ಒದಗಿಸಬೇಕು. ಜೊತೆಗೆ ಸಂತ್ರಸ್ಥರ ಕುಟುಂಬಗಳಿಗೆ ಶಿಕ್ಷಣ ಭಾಗ್ಯ ಒದಗಿಸಬೇಕು ಎಂದು ಸಂತ್ರಸ್ಥರು ಆಗ್ರಹಿಸಿದ್ದಾರೆ.

  ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆ; 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

  ಇನ್ನು ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ ಅವರು ಸಹ ನೀರಾವರಿ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಉಳ್ಳವರು. ಅದ್ರಲ್ಲೂ ಕೃಷ್ಣಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಯೋಜನೆ ಸೇರಿದಂತೆ ಉತ್ತರ ಕರ್ನಾಟಕದ ಯೋಜನೆಗಳ ಬಗ್ಗೆ ತೀವ್ರ ಆಸಕ್ತಿಯುಳ್ಳವರಾಗಿದ್ದಾರೆ. ಹೀಗಾಗಿ ಒಟ್ಟಾರೆ ಬಾಗಲಕೋಟೆ ಜಿಲ್ಲೆಗೆ ಇದೀಗ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಗಬೇಕಾದ ಕೆಲಸಗಳು ಈಗ ಕೈಗೂಡಲಿವೆ ಅನ್ನೋ ವಿಶ್ವಾಸ ಸಂತ್ರಸ್ಥರಲ್ಲಿ ಮೂಡಿದೆ.

  ಇವುಗಳ ಮಧ್ಯೆ ಬಾಗಲಕೋಟೆ ಜಿಲ್ಲೆಯು ಇದೀಗ ರಾಜಕೀಯವಾಗಿ ಶಕ್ತಿಯುತ ಕೇಂದ್ರವಾಗಿ ಪರಿಣಮಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದ ಸಂಪುಟದಲ್ಲಿ ಜಲ ಸಂಪನ್ಮೂಲ ಸಚಿವ ಸ್ಥಾನವನ್ನ ಹಿರಿಯ ಶಾಸಕ ಗೋವಿಂದ ಕಾರಜೋಳ ಅವರಿಗೆ ನೀಡಲಾಗಿದೆ. ಇದರಿಂದ ಬಾಗಲಕೋಟೆ ಜಿಲ್ಲೆಯ ಸಂತ್ರಸ್ಥರಿಗೆ ಸಮಸ್ಯೆ ಬಗೆ ಹರಿಯುವ ವಿಶ್ವಾಸ ಇಮ್ಮಡಿಗೊಂಡಿದೆ.  ಈಗಾಗಲೇ ವಿರೋಧ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಎಸ್.ಆರ್.ಪಾಟೀಲ ಇಬ್ಬರೂ ಬಾಗಲಕೋಟೆ ಜಿಲ್ಲೆಯ ಜನಪ್ರತಿನಿಧಿಗಳೇ ಅಗಿದ್ದು, ಇವುಗಳ ಮಧ್ಯೆ ಈಗ ಜಲಸಂಪನ್ಮೂಲ ಸಚಿವ ಸ್ಥಾನವೂ ಸಹ ಬಾಗಲಕೋಟೆ ಜಿಲ್ಲೆಯ  ಪಾಲಾಗಿದೆ. ಹೀಗಾಗಿ ಇವರೆಲ್ಲರ ಇಚ್ಛಾಶಕ್ತಿಯಿಂದ ಇಂದು ಆಲಮಟ್ಟಿಗೆ ಬರಲಿರುವ ಸಿಎಂ ಸಹ ಮನಸ್ಸು ಮಾಡಿ ಹೆಚ್ಚಿನ ಅನುದಾನ ಘೋಷಣೆ ಮಾಡಿ 3ನೇ ಹಂತದ ಸ್ಥಳಾಂತರ ಕಾರ್ಯಕ್ಕೆ ವೇಗ ನೀಡಬೇಕು ಅಂತಾರೆ ಸಂತ್ರಸ್ಥರು.

  ಇದನ್ನೂ ಓದಿ:ಮೊದಲ ದಿನ ಉತ್ತಮ ಹಾಜರಾತಿಯ ನಿರೀಕ್ಷೆ: ಶಿಕ್ಷಣ ಸಚಿವ ಬಿ.ಸಿ ನಾಗೇಶ್; ಆ.23ರಿಂದ ಶಾಲೆಗಳು ಆರಂಭ

  ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಘಟಾನುಘಟಿ ನಾಯಕರಿಗೆ ಪ್ರಮುಖ ಸ್ಥಾನಗಳು ಸಿಗುವ ಮೂಲಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗಬಹುದೆನ್ನುವ ಲೆಕ್ಕಾಚಾರವಿದೆ.  ಇದರ ಜೊತೆಗೆ ಉತ್ತರ ಕರ್ನಾಟಕ ನೀರಾವರಿ ಬಗ್ಗೆ ಸಮಗ್ರ ಮಾಹಿತಿ ತಿಳಿದುಕೊಂಡಿರುವ ಮುಖ್ಯಮಂತ್ರಿ ಅವರು ನಾಳೆ ಬಾಗಿನ ಅರ್ಪಣೆ ಸಮಯದಲ್ಲಿ ಹೊಸ ಯೋಜನೆ ಘೋಷಣೆ ಮಾಡಲಿದ್ದಾರೆಯೇ ಎಂದು ಕಾಯ್ದು ನೋಡಬೇಕಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  (ವರದಿ: ಮಂಜುನಾಥ್ ತಳವಾರ)
  Published by:Latha CG
  First published: