ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ವಿನೂತ ರೀತಿಯ ರಸ್ತೆ ನಿರ್ಮಾಣ ಮಾಡುತ್ತೇವೆ ಅಂತ ಬಿಬಿಎಂಪಿ (BBMP) ಬಿಲ್ಡಪ್ ಕೊಟ್ಟಿತ್ತು. ಈಗ ರ್ಯಾಪಿಡ್ ಮಾದರಿಯಲ್ಲಿ ರಸ್ತೆ ನಿರ್ಮಿಸಿ (Bengaluru Rapid Road) ಇತರರಿಗೆ ಮಾದರಿ ಆಗ್ತೀವಿ ಅಂತ ಹೇಳಿದ್ದ ಬಿಬಿಎಂಪಿ ಅಸಲಿ ಮುಖ ಒಂದೇ ತಿಂಗಳಿಗೆ ಬಯಲಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಗರಂ ಆಗಿದ್ದಾರೆ. ಹೌದು, ಕಳೆದ ತಿಂಗಳು ಇಡೀ ದೇಶವೇ ಸಿಲಿಕಾನ್ ಸಿಟಿ (Silicon City) ಕಡೆ ತಿರುಗಿ ನೋಡಿತ್ತು. ಬಿಬಿಎಂಪಿ ರಸ್ತೆ ನಿರ್ಮಾಣದಲ್ಲಿ ಹೊಸ ಮೈಲುಗಲ್ಲು ನಿರ್ಮಾಣ ಮಾಡಿತ್ತು. ತ್ವರಿತ ಗತಿಯಲ್ಲಿ ಎಂದರೇ ರ್ಯಾಪಿಡ್ ಟೆಕ್ನಾಲಜಿ ಬಳಸಿ ರಸ್ತೆ ನಿರ್ಮಾಣ ಮಾಡಿ ಎಲ್ಲರನ್ನು ಬೆರುಗುಗೊಳಿತ್ತು.
ರ್ಯಾಪಿಡ್ ರಸ್ತೆಯನ್ನು ಸ್ವತಃ ಸಿಎಂ ಬೊಮ್ಮಾಯಿ ಅವರಿಂದಲೇ ಉದ್ಘಾಟನೆ ಮಾಡಿಸಿತ್ತು ಬಿಬಿಎಂಪಿ. ಈ ರಸ್ತೆ ಸುಮಾರು 40-50 ವರ್ಷ ಬರುತ್ತೆ ಅಂತಲೇ ಪಾಲಿಕೆ ಹೇಳಿತ್ತು. ಆದರೆ ಆ ರಸ್ತೆ ಒಂದೇ ತಿಂಗಳಿಗೆ ಕಿತ್ತುಹೋಗಿದೆ. ಹೀಗಾಗಿ ರ್ಯಾಪಿಡ್ ರಸ್ತೆಯೂ ಕಳಪೆ ಅನ್ನೋದು ಗೊತ್ತಾಗಿದೆ. ಪಾಲಿಕೆ ಈ ಪ್ರಯೋಗ ಕೈಬಿಟ್ಟಿದೆ.
ಇದನ್ನೂ ಓದಿ: Bengaluru: ಬಸ್ ಹತ್ತೋ ಪ್ರಯಾಣಿಕರೇ ಎಚ್ಚರ; ಪ್ರಯಾಣಿಕರಂತೆ ಬಂದು ಮೊಬೈಲ್ಗೆ ಕನ್ನ!
ಱಪಿಡ್ ರೋಡ್ ಕೈ ಬಿಡುವಂತೆ ಸೂಚಿಸಿದ್ರಾ ಸಿಎಂ?
ಮೊದಲ ಚುಂಬನದಲ್ಲೇ ದಂತ ವಿಘ್ನ ಅಂತರಲ್ಲಾ ಹಾಗಾಗಿದೆ ನೋಡಿ ಬಿಬಿಎಂಪಿಯ ರ್ಯಾಪಿಡ್ ರೋಡ್ ಟೆಕ್ನಾಲಜಿ ರಸ್ತೆ. ನಮ್ಮ ಬಿಬಿಎಂಪಿ ಸೋ ಕಾಲ್ಡ್ ಇಂಜಿನಿಯರ್ ತಂದ ಯೋಜನೆ ಮೊದಲ ಯತ್ನದಲ್ಲೇ ಫ್ಲಾಪ್ ಆಗಿದೆ.
ಕೇವಲ ಮೂರೇ ದಿನದಲ್ಲಿ ರೆಡಿಯಾಗಿದ್ದ, ಈ ರಸ್ತೆ ಹಾಳಾಗಿರುವುದರಿಂದ ಸಿಎಂ ಬೊಮ್ಮಾಯಿ ಗರಂ ಆಗಿದ್ದಾರೆ. ಹೀಗಾಗಿ ಈ ಯೋಜನೆಯನ್ನ ಕೈ ಬಿಡುವಂತೆ ಸಿಎಂ ಸೂಚನೆ ಕೊಟ್ಟಿದ್ದಾರಂತೆ. ಆದರೆ ಬಿಬಿಎಂಪಿ ಮಾತ್ರ ತನಿಖೆ ನಡೆಸ್ತೀವಿ ಅಂತ ಸಮಜಾಯಿಷಿ ನೀಡುತ್ತಿದೆ.
ಇನ್ನು ರಸ್ತೆ ನಿರ್ಮಾಣಕ್ಕೂ ಮುನ್ನವೇ ತಜ್ಞರು ಈ ಮಾದರಿ ರಸ್ತೆ ಬೇಡ ಅಂತ ಎಂದಿದ್ದರಂತೆ. ಈ ಕುರಿತ ವರದಿ ಕೊಟ್ಟಿದ್ದರೂ ಬಿಬಿಎಂಪಿ ಅಧಿಕಾರಿಗಳು ಕಮಿಷನ್ ಆಸೆಗೆ ರ್ಯಾಪಿಡ್ ರಸ್ತೆ ನಿರ್ಮಿಸಿದ್ದರಂತೆ. ಸದ್ಯ ರ್ಯಾಪಿಡ್ ರಸ್ತೆ ಬಿರುಕು ಬಿಟ್ಟಿರೋ ಕುರಿತಂತೆ IISC ವರದಿ ಸಿದ್ದಪಡಿಸ್ತಿದ್ದು, ಗುಣಮಟ್ಟದ ವರದಿ ಶೀಘ್ರದಲ್ಲೇ ಬರಲಿದೆ.
ಬಿಬಿಎಂಪಿ ಏನು ಹೇಳಿತ್ತು?
ಸ್ಥಳದಲ್ಲಿ ಯಾವುದೇ ಕಾಂಕ್ರಿಟ್ ಮಿಶ್ರಣ ಇಲ್ಲದೆ ಕಾರ್ಖಾನೆಗಳಲ್ಲೇ ತಯಾರಾದ ಸ್ಲಾಬ್ಗಳನ್ನು ತಂದು ಜೋಡಿಸಿ ಈ Rapid ರೋಡ್ ಟೆಕ್ನಾಲಜಿ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ವೈಟ್ ಟಾಪಿಂಗ್ ಮಾಡಿದರೆ ರಸ್ತೆ ಟ್ರಾಫಿಕ್ ಫ್ರೀ ಮಾಡೋಕೆ 25 ದಿನಗಳ ಅವಧಿ ಬೇಕು.
ಆದರೆ ರ್ಯಾಪಿಡ್ ರೋಡ್ ಟೆಕ್ನಾಲಜಿ ಮೂಲಕ ನಿರ್ಮಿಸಿದರೆ ಕೇವಲ ನಾಲ್ಕೇ ದಿನದಲ್ಲಿ ಸಂಚಾರಕ್ಕೆ ರಸ್ತೆ ಮುಕ್ತವಾಗಲಿದೆ. ಪೈಲಟ್ ಯೋಜನೆಯಾಗಿ ನಗರದ ಹಳೆ ಮದ್ರಾಸ್ ರಸ್ತೆಯ 500 ಮೀಟರ್ ರಸ್ತೆಗೆ ಸ್ಲಾಬ್ ಅಳವಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: Bengaluru: ಬಿಬಿಎಂಪಿಯ ‘ಮನಸು ಗಾಂಧಿ ಬಜಾರ್’ ಯೋಜನೆಗೆ ಸ್ಥಳೀಯರ ವಿರೋಧ; ಕಾರಣವೇನು?
ರ್ಯಾಪಿಡ್ ರೋಡ್ ಬಿಟ್ಟು ಮತ್ತೆ ವೈಟ್ಟಾಪಿಂಗ್ ಮಾಡುವಂತೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ. ಸದ್ಯ ರ್ಯಾಪಿಡ್ ರೋಡ್ ಕೈಬಿಟ್ಟಿರೋ ಪಾಲಿಕೆ ಎಂಜಿನಿಯರ್ಗಳು ಮುಂದೆ ಇನ್ನೆಂತಾ ರೋಡ್ ರೆಡಿ ಮಾಡ್ತಾರೋ ಕಾದುನೋಡ್ಬೇಕು.
ಮಲ್ಲೇಶ್ವರಂನಲ್ಲಿ ಎರಡು ದಿನಗಳ ದ್ರಾಕ್ಷಾರಸ ಮೇಳ
ತೋಟಗಾರಿಕೆ ಇಲಾಖೆ (Horticulture Department) ಮತ್ತು ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ (Karnataka Wine Board) ಹಾಗೂ ಮಂತ್ರಿ ಮಾಲ್ (Mantri Mall) ಸಹಯೋಗದಲ್ಲಿ ಎರಡು ದಿನಗಳ ದ್ರಾಕ್ಷಾರಸ ಮೇಳ ಆರಂಭಗೊಂಡಿದೆ. ಮಲ್ಲೇಶ್ವರಂನಲ್ಲಿ ಈ ವೈನ್ ಸುಗ್ಗಿ ನಡೀತಿದೆ. ಮಹಿಳೆಯರು ಸ್ಥಳದಲ್ಲೇ ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನ್ (wine-mela) ಅನ್ನು ತಯಾರಿಸಿ ಸಂಭ್ರಮಿಸಿದ್ದಾರೆ. ತರಹೇವಾರಿ ವೈನ್ ಟೇಸ್ಟ್ ಮಾಡಿ ಖುಷಿಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ