ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಇಂದು ರಾಜ್ಯ ಬಜೆಟ್ (Karnataka State Budget 2023-24) ಮಂಡಿಸಲಿದ್ದಾರೆ. ಚುನಾವಣಾ ವರ್ಷದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಜೆಟ್‌ನಲ್ಲಿ ಮಹಿಳೆಯರ (Women) ಮನಗೆಲ್ಲೋಕೆ ಬೊಮ್ಮಾಯಿ ಸರ್ಕಾರ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ. ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ (JDS Pancharatna Yatra) ಮಹಿಳಾ ಸ್ವಸಹಾಯ ಸಂಘಗಳ (Women's Self-Help Groups) ಸಾಲಮನ್ನಾ (Loan Waiver ) ಮಾಡುವುದಾಗಿ ಘೋಷಣೆ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆ (Lakshmi Yojana) ಮೂಲಕ ಪ್ರತಿ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ಘೋಷಣೆ ಮಾಡಿದೆ. ಆದ್ದರಿಂದ ಬೊಮ್ಮಾಯಿ ಕೂಡಾ ಮಹಿಳೆಯರಿಗೆ ಬಿಗ್ ಗಿಫ್ಟ್ ನೀಡುವ ನಿರೀಕ್ಷೆ ಇದೆ.
ಇಂದು 10:15ಕ್ಕೆ ಬಜೆಟ್ ಮಂಡನೆ ಆರಂಭ
ಚುನಾವಣೆಯ ಬಜೆಟ್ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರ ಮೇಲಿನ ನಿರೀಕ್ಷೆಗಳೂ ಗರಿಗೆದರಿವೆ. ಇಂದು ಬೆಳಗ್ಗೆ 10:15ಕ್ಕೆ ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಅಂದಹಾಗೆ, ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇದಾಗಿರಲಿದ್ದು, ಸಿಎಂ ಬೊಮ್ಮಾಯಿ ಅವರ ಎರಡನೇ ಬಜೆಟ್ ಆಗಿರಲಿದೆ.
ರಾಜ್ಯ ಆದಾಯ ಹೆಚ್ಚಳದಿಂದ ಬಜೆಟ್ ಗಾತ್ರವೂ ಹೆಚ್ಚಳ ಸಾಧ್ಯತೆ
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ಬಜೆಟ್ ಬಗ್ಗೆ ಜನಸಾಮಾನ್ಯರ ನಿರೀಕ್ಷೆಗಳೂ ಗರಿಗೆದರಿವೆ. ಇದಕ್ಕೆ ಪೂರಕವಾಗಿ ಕಳೆದ 10 ತಿಂಗಳುಗಳಲ್ಲಿ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆ ಆದಾಯವೂ ಸಂಗ್ರಹವಾಗಿದೆ. ಹೀಗಾಗಿ ದೊಡ್ಡ ಗಾತ್ರದ ಬಜೆಟ್ ಅನ್ನು ಬೊಮ್ಮಾಯಿ ಮಂಡಿಸಬಹುದು ಎಂದು ಹೇಳಲಾಗುತ್ತಿದೆ.
ಕಳೆದ ಬಾರಿ 2 ಲಕ್ಷದ 65 ಸಾವಿರದ 720 ಕೋಟಿ ರೂಪಾಯಿ ಗಾತ್ರದ ಬಜೆಟ್ನ್ನ ಮಂಡನೆ ಮಾಡಿದ್ದರು. ಈ ವರ್ಷದ ತೆರಿಗೆ ಆದಾಯ ಹೆಚ್ಚಳವಾಗಿರುವುದರಿಂದ ಸಹಜವಾಗಿಯೇ ಬಜೆಟ್ ಗಾತ್ರ ಹೆಚ್ಚಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಜನಪ್ರಿಯ ಯೋಜನೆಗಳಿಗೆ ಮಣೆ ಹಾಕ್ತಾರಾ ಸಿಎಂ ಬೊಮ್ಮಾಯಿ
ಈಗಾಗಲೇ ಬಜೆಟ್ ಮಂಡನೆಗೆ ಸಿದ್ಧತೆಗಳು ಬಹುತೇಕ ಮುಕ್ತಾಯವಾಗಿದ್ದು, ಚುನಾವಣೆಯ ಹೊಸ್ತಿನಲ್ಲಿ ಜನಪ್ರಿಯ ಯೋಜನೆಗಳಿಗೆ ಸಿಎಂ ಬೊಮ್ಮಾಯಿ ಮಣೆ ಹಾಕಲಿದ್ದಾರೆ ಎನ್ನಲಾಗಿದೆ. ಗ್ರಾಮೀಣ, ರೈತರು ಹಾಗೂ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ಉಳಿದಂತೆ 7ನೇ ವೇತನ ಆಯೋಗ ರಚನೆ ಆಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಬಜೆಟ್‌ನಲ್ಲಿ ಮಹತ್ವ ಘೋಷಣೆ ಆಗುವ ನಿರೀಕ್ಷೆ ಇದ್ದು, ಸರ್ಕಾರಿ ನೌಕರರ ವೋಟ್ಗಳನ್ನು ಸೆಳೆಯಲು ಬಿಜೆಪಿ ಸರ್ಕಾರ ಮುಂದಾಗುತ್ತಾ ಕಾದು ನೋಡಬೇಕಿದೆ.
ಎರಡನೇ ಬಾರಿಗೆ ಬಜೆಟ್ ಮಂಡಿಸಲಿರುವ ಸಿಎಂ ಬೊಮ್ಮಾಯಿ
ಕೋವಿಡ್ ಸಂಕಷ್ಟ ಅವಧಿಯ ಬಳಿಕ ಇಂದಿಗೂ ಸಣ್ಣ ವ್ಯಾಪಾರಸ್ಥರು, ಉದ್ದಿಮೆದಾರರು, ವಾಹನ ಚಾಲಕರು, ರೈತರು ಆರ್ಥಿಕತವಾಗಿ ಚೇತರಿಸಿಕೊಳ್ಳುತ್ತಿದ್ದು, ಎಲ್ಲಾ ವರ್ಗಗಳ ಜನರನ್ನು ಗಮನ ಸೆಳೆಯುವ ಯೋಜನೆಗಳಿಗೆ ಸರ್ಕಾರ ಮಣೆ ಹಾಕಲಿದೆ ಎನ್ನಲಾಗಿದೆ.
ಅದರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಪತನದ ಬಳಿಕ ಸರ್ಕಾರ ರಚನೆ ಮಾಡಿದ್ದ ಯಡಿಯೂರಪ್ಪ ಅವರು ಕೋವಿಡ್ ಸಂಕಷ್ಟದ ಅವಧಿಯಲ್ಲಿ ಬಜೆಟ್ ನೀಡಿದ್ದರು. ಆ ಬಳಿಕ ಅಧಿಕಾರ ವಹಿಸಿಕೊಂಡ ಬೊಮ್ಮಾಯಿ ಅವರಿಗೆ ಎರಡನೇ ಬಾರಿಗೆ ಬಜೆಟ್ ಮಂಡಿಸುವ ಅವಕಾಶ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ