CM Basavaraj Bommai: ಡಿಕೆಶಿ, ಸಿದ್ದರಾಮಯ್ಯ ತಿಕ್ಕಾಟದಿಂದ ಬಹಳ ಜನರು ಕಾಂಗ್ರೆಸ್ ಬಿಡ್ತಾರೆ ವಿನಃ, ಕಾಂಗ್ರೆಸ್ ಸೇರಲ್ಲ

CM Basavaraj Bommai: ಇದೇನು ಹೊಸದೇನು ಅಲ್ಲ, ಯಾರಾದರೂ ಅತಂತ್ರ ಆದರೆ ನಾವು ಸ್ವತಂತ್ರ ಆಗ್ತೇವೆ ಅನ್ನೋದು ಅವರ ಆಸೆ. ಅದು ಅವರಿಗೆ ಮೊದಲಿನಂದಲೇ ಇದೆ ಅಂತಾ ಕುಮಾರಸ್ವಾಮಿ ಗೆ ನಗೆ ಮೂಲಕ ಉತ್ತರ ಕೊಟ್ಟಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

  • Share this:
ರಾಜ್ಯ ರಾಜಕಾರಣದಲ್ಲಿ (State Politics) ದಿನಕ್ಕೊಂದು ಬೆಳವಣಿಗೆಗೆಗಳು ಸಂಭವಿಸುತ್ತಿದೆ. ಒಂದೆಡೆ ಜಿಲ್ಲಾ ಉಸ್ತುವಾರಿ (District incharge)  ನೇಮಕ ವಿಚಾರವಾಗಿ ಪಕ್ಷದ ಸಚಿವರು ಕೋಪಗೊಂಡಿದ್ದರೆ, ಇನ್ನೊಂದೆಡೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಬಿಜೆಪಿ ಶಾಸಕರು (BJP MLA)   ಕಾಂಗ್ರೆಸ್​ (Congress) ಸಂಪರ್ಕದಲ್ಲಿದ್ದರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ (CM) ಬಸವರಾಜ್ ಬೊಮ್ಮಾಯಿ,  ಸಿದ್ದರಾಮಯ್ಯ ಮಾತಾಡಿರೋದು ದೊಡ್ಡ ಸುಳ್ಳು,  ಯಾರು ಬರ್ತಾರೆ ಅನ್ನೋ ನಿಮ್ಮ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ ಎಂದಿದ್ದಾರೆ.

ಇದರ ಹಿಂದೆ ಸಿದ್ದು ಹಾಗೂ ಡಿಕೆಶಿ ನಡುವೆ ಅಂತರಿಕ ಫೈಪೋಟಿ ಇದೆ. ಡಿಕೆಶಿ ಅವರು ಅಲ್ಲೇ ಸುದ್ದಿಗೋಷ್ಢಿ ಮಾತಾಡಿ, ಅವರು ಬರ್ತಾರೆ, ಇವರು ಬರ್ತಾರೆ ಅಂತಾರೆ. ಇದನ್ನು ನೋಡಿದ ಸಿದ್ದರಾಮಯ್ಯ ಅಭದ್ರೆತೆಯಿಂದ ಅವರು ಬರ್ತಾರೆ ಇವರು ಬರ್ತಾರೆ ಎನ್ನುತ್ತಿದ್ದಾರೆ. ಇವರ ತಿಕ್ಕಾಟದಿಂದ ಬಹಳ ಜನರು ಕಾಂಗ್ರೆಸ್ ಬಿಡ್ತಾರೆ ವಿನಃ, ಕಾಂಗ್ರೆಸ್ ಸೇರಲ್ಲ ಇಲ್ಲಿಂದ ಅಲ್ಲಿಗೆ ಯಾರು ಹೋಗುವ ಪ್ರಶ್ನೆಯೇ ಇಲ್ಲ,  ಯುಪಿಯಲ್ಲಿ ಕಾಂಗ್ರೆಸ್ ಗೆ ನೆಲೆಯೇ ಇಲ್ಲ. ಪಂಜಾಬ್ ನಲ್ಲಿ ಅಧಿಕಾರ ಕಳೆದುಕೊಳ್ತಿದ್ದಾರೆ. ಹೀಗಾಗಿ ಈ ಐದು ರಾಜ್ಯ ಚುನಾವಣೆ ಆದ ಮೇಲೆ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಅಪ್ರಸ್ತುತ ಆಗಲಿದೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ಧರಾಮಯ್ಯ ಹೇಳಿಕೆಗ ಸುಳ್ಳು- ಸಿಎಂ ಬಸವರಾಜ್ ಬೊಮ್ಮಾಯಿ

ಯಾವಾಗ ರಾಷ್ಟ್ರಮಟ್ಟದಲ್ಲಿ ಅಪ್ರಸ್ತುತ ಆಗುತ್ತೋ ಅದರ ಕರಿನೆರಳು ರಾಜ್ಯದ ಕಾಂಗ್ರೆಸ್ ಗೂ ಆಗುತ್ತದೆ. ಇದು ಅವರವರ ಆಂತರಿಕ ಪೈಪೋಟಿ ಅಷ್ಟೇ, ಇದಕ್ಕೆ ಯಾವುದೇ ಸತ್ಯವೂ ಇಲ್ಲ, ವಾಸ್ತಾವಾಂಶವೂ ಇಲ್ಲ, ಭೂಮಿಕೆಯೂ ಇಲ್ಲ. ರಮೇಶ್ ಜಾರಕಿಹೊಳಿ ಜೊತೆ ಯಾರು ಸಂಪರ್ಕ ದಲ್ಲಿದ್ದಾರೆ ಅನ್ನೋದನ್ನು ಅವರಿಂದ ಕೇಳಿ ವಿಚಾರ‌ ಮಾಡ್ತೀನಿ ಎಂದಿದ್ದಾರೆ.

ಇನ್ನು  ನಾನೊಬ್ಬ ಜವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿ, ಅವರ ರೀತಿ ನಾನು ಬೇಜವ್ದಾರಿಯಾಗಿ ಮಾತಾಡೋಕೆ‌ ಹೋಗಲ್ಲ ಎಂದು ಸಿದ್ಧರಾಮಯ್ಯಗೆ ಟಾಂಗ್​ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವೇ ಬೇಕು ಎಂಬ ಹೆಚ್ಡಿಕೆ ಹೇಳಿಕೆ ವಿಚಾರದ ಬಗ್ಗೆ ಸಹ ಮಾತನಾಡಿದ ಸಿಎಂ ಇದು ಅವರ ಸದಾಸೆ, ಯಾವಾಗಲೂ ಹಾಗೆಯೇ ಇರುತ್ತದೆ.

ಇದನ್ನೂ ಓದಿ: ಉಮೇಶ ಕತ್ತಿ ನೇತೃತ್ವದಲ್ಲಿ ನಡೆದ ಗೌಪ್ಯ ಸಭೆ: ಹೆಚ್ಚಿನ ‌ಮಹತ್ವ ಕೊಡಬೇಕಿಲ್ಲ ಎಂದ ಬಾಲಚಂದ್ರ ಜಾರಕಿಹೊಳಿ

ಇದೇನು ಹೊಸದೇನು ಅಲ್ಲ, ಯಾರಾದರೂ ಅತಂತ್ರ ಆದರೆ ನಾವು ಸ್ವತಂತ್ರ ಆಗ್ತೇವೆ ಅನ್ನೋದು ಅವರ ಆಸೆ. ಅದು ಅವರಿಗೆ ಮೊದಲಿನಂದಲೇ ಇದೆ ಅಂತಾ ಕುಮಾರಸ್ವಾಮಿ ಗೆ ನಗೆ ಮೂಲಕ ಉತ್ತರ ಕೊಟ್ಟಿದ್ದಾರೆ.

ಇನ್ನು ಈ ಬಗ್ಗೆ ಬೆಳಗಾವಿ ಅಧಿವೇಶನದ  ಸಮಯದಲ್ಲಿ ಮಾತನಾಡಿದ ಶಾಸಕ ರೇಣುಕಾಚಾರ್ಯ, ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಕಾಂಗ್ರೆಸ್ ಶಾಸಕರೇ ಬಿಜೆಪಿ ನಾಯಕರ ಸಂಪರ್ಕದಲ್ಲಿ ಇದ್ದಾರೆ ಎನ್ನುವ ಮೂಲಕ ಹೊಸ ಬಾಂಬ್ ಹಾಕಿದ್ದಾರೆ.

ಬಿಜೆಪಿ, ಜೆಡಿಎಸ್​ ಶಾಸಕರು ಕಾಂಗ್ರೆಸ್​ ಸಂಪರ್ಕದಲ್ಲಿದ್ದಾರೆ ಎಂದ ಸಿದ್ಧರಾಮಯ್ಯ, ಇದೀಗ ಪಕ್ಷದ ಸಿದ್ಧಾಂತ, ನಾಯಕತ್ವಗಳನ್ನು ಒಪ್ಪಿ ಷರತ್ತು ಇಲ್ಲದೆ ಪಕ್ಷಕ್ಕೆ ಸೇರಲು ಬಯಸುವ ಶಾಸಕರಿಗೆ ಸ್ವಾಗತವಿದೆ ಎಂದಿದ್ದಾರೆ. ಹಾಗೆಯೇ, ಕಾಂಗ್ರೆಸ್‌ಬಿಟ್ಟು ಹೋದವರೂ ಮರಳಿ ಪಕ್ಷಕ್ಕೆ ಸೇರುವುದಾದಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಕಾಂಗ್ರೆಸ್‌ ಪಕ್ಷ ಸೇರಲು ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರ ಸಂಪರ್ಕ ಈಗಲೂ ಇದೆ. ಸದ್ಯ ಅವರ ಹೆಸರನ್ನು ಹೇಳುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಕಾಂಗ್ರೆಸ್​ನ 16 ಶಾಸಕರು ಸಂಪರ್ಕದಲ್ಲಿದ್ದಾರೆ- ಹೊಸ ಬಾಂಬ್ ಸಿಡಿಸಿದ ರಮೇಶ್ ಜಾರಕಿಹೊಳಿ

ಈ ಎಲ್ಲ ಹೇಳಿಕೆಗಳ ನಡುವೆ  ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ, ಪ್ರತಿಪಕ್ಷ ಕಾಂಗ್ರೆಸ್‌ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದು, ಬಿಜೆಪಿ ಹೈಕಮಾಂಡ್‌ ಒಪ್ಪಿಗೆ ನೀಡಿದರೆ,ಅವರನ್ನು ಬಿಜೆಪಿಗೆ ಕರೆತರುತ್ತೇನೆ ಎನ್ನುವ ಮೂಲಕ ಶಾಕ್ ನೀಡಿದ್ದಾರೆ.

ಇದನ್ನೂ ಓದಿ: ರಾಜಧಾನಿಯಲ್ಲಿ ಸದ್ದಿಲ್ಲದೆ ಹಬ್ತಿದೆ ಓಮೈಕ್ರಾನ್; ಶೇ.90ರಷ್ಟು ಮಂದಿಗೆ ರೂಪಾಂತರಿ ಸೋಂಕು

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವನ್ನು ತೊರೆಯುವಾಗ ನನ್ನ ಜತೆ 36 ಶಾಸಕರು ಇದ್ದರು. ಈ ಪೈಕಿ 17 ಶಾಸಕರು ಬಿಜೆಪಿಗೆ ಬಂದಿದ್ದೇವೆ. ಪ್ರಸ್ತುತ 16 ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.
Published by:Sandhya M
First published: