ಸಿದ್ದರಾಮಯ್ಯ ಮಾತುಮಾತಿಗೂ ಅನ್ನಭಾಗ್ಯ ಅಂತಾರೆ, ಅದಕ್ಕೂ ಮೊದಲು ಯಾರೂ ಅಕ್ಕಿ ಕೊಟ್ಟಿರಲಿಲ್ವಾ: CM Bommai

cm basavaraj bommai v/s siddaramaiah: ಅಕ್ಕಿಗೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಹಣ ಕೊಡ್ತಿದೆ. 29 ರುಪಾಯಿ ಕೊಟ್ಟವರನ್ನು ಬಿಟ್ಟು 3 ರುಪಾಯಿ ಕೊಟ್ಟವರ ಫೋಟೋ ಹಾಕ್ಕೊಂಡ್ರು.

ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ

  • Share this:
ಹಾವೇರಿ: ಉಪ ಚುನಾವಣೆ (by election) ಹಿನ್ನೆಲೆಯಲ್ಲಿ ಹಾನಗಲ್​​ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (cm basavaraj bommai) ಭರ್ಜರಿ ಮತಬೇಟೆಗೆ ಇಳಿದಿದ್ದಾರೆ. ಬಮ್ಮನಹಳ್ಳಿ ಗ್ರಾಮದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅನ್ನಭಾಗ್ಯ, ಅನ್ನಭಾಗ್ಯ ಅಂತಾರೆ(annabhagya scheme). ಸ್ವಾತಂತ್ರ್ಯ ಬಂದ್ಮೇಲೆ ಪಡಿತರದಲ್ಲಿ ಅಕ್ಕಿನೇ ಕೊಡ್ತಿರಲಿಲ್ಲವೇನೋ ಅನ್ನೋ ರೀತಿಯಲ್ಲಿ ಹೇಳ್ತಿದ್ದಾರೆ. ಅಕ್ಕಿಗೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಹಣ ಕೊಡ್ತಿದೆ. 29 ರುಪಾಯಿ ಕೊಟ್ಟವರನ್ನು ಬಿಟ್ಟು 3 ರುಪಾಯಿ ಕೊಟ್ಟವರ ಫೋಟೋ ಹಾಕ್ಕೊಂಡ್ರು. 30 ಕೆಜಿ‌ ಇದ್ದಿದ್ದು 7 ಕೆಜಿ ಆಯ್ತು, ನಂತರ 3 ಕೆಜಿ ಆಯ್ತು. ಚುನಾವಣೆ ಬಂದಾಗ ಏಳು ಕೆಜಿ ಅಂದರು. ಕೇಂದ್ರ ಸರ್ಕಾರವನ್ನ ಮರೆಮಾಚಿ ಅನ್ನಭಾಗ್ಯ ಅನ್ನಭಾಗ್ಯ ಅಂದರು. ಅವರ ಯೋಜನೆಗಳು ಜನರ ಮನೆ ಬಾಗಿಲಿಗೆ ಮುಟ್ಟಲಿಲ್ಲ. 2018ರಲ್ಲಿ ಜನರು ಅವರನ್ನ ಮನೆ ಬಾಗಿಲಿಗೆ ಬರಬೇಡಿ ಅನ್ನೋ ಫಲಿತಾಂಶ ನೀಡಿದರು ಎಂದು ವ್ಯಂಗ್ಯವಾಡಿದರು.

ಬೈ ಎಲೆಕ್ಷನ್​ನಲ್ಲಿ ಗೆಲುವು ನಿಶ್ಚಿತ

ಹಿಂದೆ ಉಪಚುನಾವಣೆಯಲ್ಲಿ ಗೆದ್ದಾಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹಣಬಲ,  ತೋಳ್ಬಲದಿಂದ ಗೆದ್ದಿದ್ದಾರೆ ಅಂತಾ ಹೇಳಿದರು. ಅವರು ಗೆದ್ದಾಗ ಜನಬಲ ಅಂತಾರೆ. ಅವರ‌ ಅನುಭವ ಮತ್ತು ಸೋಲಿನ‌ ಭಯದಿಂದ ಆ ರೀತಿ ಮಾತನಾಡ್ತಿದ್ದಾರೆ. ಹಾನಗಲ್‌ನಲ್ಲಿ ಈ ಬಾರಿ ಬಿಜೆಪಿಯ ಭಾವುಟ ನೂರಕ್ಕೆ ನೂರರಷ್ಟು ಹಾರುತ್ತದೆ. ಹಾನಗಲ್ ತಾಲೂಕಿನ ಬಿಜೆಪಿಯ ವಿಜಯ ನಿಶ್ಚಿತ. ಇವತ್ತಿನಿಂದ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ನಮ್ಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಪ್ಪತ್ತೈದು ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉದಾಸಿಯವರನ್ನು ಹಾಡಿ ಹೊಗಳಿದ ಸಿಎಂ

ನಾನು ಬಿಜೆಪಿಗೆ ಬರಲು, ಶಾಸಕನಾಗಲು, ಮಂತ್ರಿ ಆಗಲು, ಮುಖ್ಯಮಂತ್ರಿ ಆಗಲು ಅವರ ಉದಾಸಿಯವರ ಆಶೀರ್ವಾದವಿದೆ. ನೀರಾವರಿ ಬಗ್ಗೆ ದಿವಂಗತ ಉದಾಸಿಯವರಿಗಿದ್ದ ಕಳಕಳಿ ರಾಜಕಾರಣದಲ್ಲಿ ಬೆಳೆಯೋ ಯುವಕರಿಗೆ ಮಾದರಿ. ಕೇವಲ ಭಾಷಣ ಮಾಡಿ, ಘೋಷಣೆ ಮಾಡೋರನ್ನ ಹೆಚ್ಚು ಗುರ್ತಿಸೋ ಕೆಲಸವನ್ನ ನಾವು ಮಾಡ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ನೀರಿನ ತೆರಿಗೆ ಹಾಕೋ ವಿಚಾರ ಮಾಡಿದಾಗ ಈಡಿ ರಾಜ್ಯದ ಜನರನ್ನ ಜಾಗೃತ ಮಾಡಿದ ಕ್ಷೇತ್ರ ಹಾನಗಲ್ ನದ್ದು. ದಿವಂಗತ ಉದಾಸಿಯವರು ಪಕ್ಷೇತರರಾಗಿ ನಿಂತಿದ್ದಾಗ ಹೆಚ್ಚಿನ ಮತಗಳ ಅಂತರದಿಂದ ದಿವಂಗತ ಉದಾಸಿ ಗೆದ್ದು ಬಂದಿದ್ದರು ಎಂದು ಹಾಡಿ ಹೊಗಳಿದರು.

ಯಡಿಯೂರಪ್ಪ ಎಂದೂ ರಾಜಿ ಮಾಡಿಕೊಂಡಿಲ್ಲ

ಪಕ್ಕದ ಶಿಕಾರಿಪುರದಲ್ಲಿ ಬಗರಹುಕುಂ ರೈತರ ಹೋರಾಟ ನಡಿತಿತ್ತು, ಅಲ್ಲಿ ನೇತೃತ್ವ ವಹಿಸಿದ್ದವರು ಯಡಿಯೂರಪ್ಪ. 1983ರಲ್ಲಿ ರಾಜ್ಯದಲ್ಲಿ ದೊಡ್ಡ ಬದಲಾವಣೆಯಾಯ್ತು. ಎಲ್ಲವೂ ಶಿವಮೊಗ್ಗ, ಧಾರವಾಡದ ಸುತ್ತವಿದೆ. ರಾಜಕಾರಣ ಬದಲಾವಣೆ ಆಗ್ತದೆ, ಜನಪರ ರಾಜಕಾರಣ ಎಲ್ಲಿ ಹುಟ್ಟುತ್ತದೆ ಅನ್ನೋ ಕಾರಣಕ್ಕೆ ಈ ಕೆಲವು ಮಾತುಗಳನ್ನ ನಿಮಗೆ ಹೇಳಿದ್ದೇನೆ. ಹೋರಾಟದಿಂದ ಬಂದಿರೋ ಈ ರಾಜಕಾರಣ ರಾಜ್ಯದಲ್ಲಿ ಗಟ್ಟಿಯಾಗಿ‌ ನಿಂತಿರೋದಕ್ಕೆ ಯಡಿಯೂರಪ್ಪ ಕಾರಣ‌. ರೈತರ ವಿಚಾರದಲ್ಲಿ ಯಡಿಯೂರಪ್ಪ ಎಂದೂ ರಾಜಿ ಮಾಡಿಕೊಂಡಿಲ್ಲ.ರೈತರ ವಿಷಯಗಳು ಬಂದಾಗ ಎಂದೂ ರಾಜಿ ಮಾಡಿಕೊಂಡಿಲ್ಲ ಎಂದರು.

ಇದನ್ನೂ ಓದಿ: By Elections 2021: ಅದೇ ಇದ್ನಲ್ಲಾ... ಮಂಚದ ಜಾರಕಿಹೊಳಿ; ಹಾನಗಲ್ ಬಹಿರಂಗ ಸಭೆಯಲ್ಲಿ ಡಿಕೆಶಿ ಟೀಕೆ

ಬಿಎಸ್​ವೈ ಆಡಳಿತಕ್ಕೆ ಫುಲ್​ ಮಾರ್ಕ್ಸ್​

2008ರಲ್ಲಿ ಯಡಿಯೂರಪ್ಪ ಸಿಎಂ ಆದಾಗ ರೈತರ ಹತ್ತು ಎಚ್.ಪಿ‌ ವಿದ್ಯುತ್ ಪಂಪಗೆ ಸರಕಾರ ಕಟ್ಟುತ್ತದೆ. ವರ್ಷಕ್ಕೆ ನಾಲ್ಕು ಸಾವಿರ ಕೋಟಿ ರುಪಾಯಿ ಅನುದಾನವನ್ನ ಸರಕಾರ ಕೊಡುತ್ತದೆ. ರೈತರ ಉದ್ಧಾರ ಮಾಡ್ತೀನಿ ಅಂತಾರೆ. ಅದಕ್ಕೆ ಯಡಿಯೂರಪ್ಪ ಬರಬೇಕಾಯಿತಾ..? ಅಧಿಕಾರವನ್ನ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳೋದು ನಿಮ್ಮ ರಾಜಕಾರಣನಾ.? ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಿದ್ದು ಯಡಿಯೂರಪ್ಪ. ಸಂದ್ಯಾಸುರಕ್ಷಾ ಸೇರಿದಂತೆ ಬಡವರಿಗೆ ಅನೇಕ ಮಾಶಾಸನ ಆರಂಭ ಮಾಡಿದರು ಎಂದು ವಿಪಕ್ಷಗಳ ಟೀಕೆ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್ಸಿಗರಿಗೆ ಸಮಾಧಾನವೇ ಇಲ್ಲ

ದಿನನಿತ್ಯ ಅವರ ಮನೆಗೆ ಸಾಕಷ್ಟು ಜನರು ಬರುತ್ತಿದ್ದರು. ಬಡವರ ಹೃದಯ ಅರ್ಥ ಮಾಡಿಕೊಂಡು ಅನೇಕ ಯೋಜನೆಗಳನ್ನ ಜಾರಿಗೆ ತಂದರು. ಭಾಗ್ಯಲಕ್ಷ್ಮೀ ಯೋಜನೆ ಈಡಿ ದೇಶದಲ್ಲೆ ಮಾದರಿ ಆಗುವಂಥಾ ಯೋಜನೆ ಮಾಡಿದರು. ಈ ತಾಲೂಕಿನಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಲಾಭ ಪಡೆದುಕೊಂಡವರು ಯಡಿಯೂರಪ್ಪನವರ ಪಕ್ಷಕ್ಕೆ ವೋಟು ಹಾಕ್ತಾರೋ ಅಥವಾ ಕಾಂಗ್ರೆಸ್ ಗೆ ವೋಟು ಹಾಕ್ತಾರಾ.? ನಮ್ಮ ಜನರು ಉಪಕಾರ ಸ್ಮರಣೆ ಮಾಡೋರು. ಕಾಂಗ್ರೆಸ್ ನವರು ಗೆಲ್ತೀವಿ ಗೆಲ್ತೀವಿ ಅಂತಾರೆ. ನಮ್ಮ ಬ್ಯಾಲೇನ್ಸ್ ಸೀಟು ಇಲ್ಲಿದೆ. ಜನರು ದೇವರ ಮನೆಯಲ್ಲಿ ನಿಂರು ಯಾರು ನಮಗೆ ಸಹಾಯ ಮಾಡಿದ್ದಾರೆ ಅಂತಾ ನೆನಪು ಮಾಡಿಕೊಂಡ್ರೆ ಸಜ್ಜನರ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನವರು ನೂರು ಕೋಟಿ ವ್ಯಾಕ್ಸಿನ್ ಮಾಡಿದ್ದೇವೆ ಅಂದ್ರೆ ಅದನ್ನು ಟೀಕೆ ಮಾಡ್ತಾರೆ. ಅವರಿಗೆ ಅಧಿಕಾರದಲ್ಲಿ ಇದ್ದರೆ ಮಾತ್ರ ಸಮಾಧಾನ ಎಂದು ವಾಗ್ದಾಳಿ ನಡೆಸಿದರು.
Published by:Kavya V
First published: