ರೀ ಹೇಳಿದ್ದೆ ಜನ ಸೇರಿಸ್ಬೇಡಿ ಅಂತ, ಬುದ್ದಿಗಿದ್ದಿ ಇದ್ಯಾ ನಿಮ್ಗೆ? ಪೊಲೀಸರಿಗೆ CM Basavaraj Bommai ಫುಲ್ ಕ್ಲಾಸ್!

ಕಾರ್ ನಿಂದ ಇಳಿಯತ್ತಲೇ ಡಿವೈಎಸ್ಪಿ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡ ದೃಶ್ಯ ಕಂಡು ಬಂತು. ಜನ ಸೇರಿಸಬೇಡಿ ಎಂದು ಹೇಳಿದ್ದರೂ ಯಾಕೆ ಸೇರಿಸಿದ್ದೀರಾ ಎಂದು ಪ್ರಶ್ನೆ ಮಾಡಿದರು.

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
ತುಮಕೂರು: ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯ (Sri Sri Shivakumar Swamiji) 3ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಇಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಸಿದ್ದಗಂಗಾ ಮಠಕ್ಕೆ (Siddaganga Mutt) ನೀಡಿ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋವಿಡ್ (COVID 19) ಹಿನ್ನೆಲೆ ದಾಸೋಹ ಕಾರ್ಯಕ್ರಮವನ್ನು (Dasoha Program) ಸರಳವಾಗಿ ಆಚರಣೆ ಮಾಡಲಾಗಿತ್ತು. ಗದ್ದುಗೆಯ ದರ್ಶನ ಪಡೆದ ಮುಖ್ಯಮಂತ್ರಿಗಳು ಮಕ್ಕಳಿಗೆ ಊಟ ಬಡಿಸುವ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ತುಮಕೂರಿಗೆ (Tumakuru) ಬರುತ್ತಿದ್ದಂತೆ ಕಾರ್ ನಿಂದ ಇಳಿಯುತ್ತಲೇ ಸೇರಿದ್ದ ಜನರನ್ನು ಕಂಡು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಕಾರ್ ನಿಂದ ಇಳಿಯತ್ತಲೇ ಡಿವೈಎಸ್ಪಿ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡ ದೃಶ್ಯ ಕಂಡು ಬಂತು. ರೀ ಹೇಳಿದ್ದೆ ತಾನೇ ಜನರನ್ನು ಸೇರಿಸಬೇಡಿ ಅಂತಾ, ಬುದ್ದಿಗಿದ್ದಿ ಇದೆಯಾ ನಿಮಗೆ, ದೂರ ನಿಂತ್ಕೊಳ್ಳಿ ಸರೀರಿ. ಜನ ಸೇರಿಸಬೇಡಿ ಎಂದು ಹೇಳಿದ್ದರೂ ಯಾಕೆ ಸೇರಿಸಿದ್ದೀರಾ ಎಂದು ಪ್ರಶ್ನೆ ಮಾಡಿದರು. ಸೀನಿಯರ್ ಆಫೀಸರ್ ನಿಮಗೂ ಗೊತ್ತಾಗಲಿಲ್ವಾ ಎಂದು ಐಜಿ ಚಂದ್ರಶೇಣಜರ್ ಅವರ ವಿರುದ್ಧವೂ ಅಸಮಾಧಾನ ಹೊರ ಹಾಕಿದರು. ಸಿದ್ದಗಂಗಾ ಮಠದ ಆವರಣದಲ್ಲಿ ಸುಮಾರು 300 ಕ್ಕೂ ಹೆಚ್ಚು ಜನ ಸೇರಿದ್ದರು.

ದಾಸೋಹ ಕರ್ನಾಟಕದ ಪರಂಪರೆ

ದಾಸೋಹ ನಮ್ಮ ಕರ್ನಾಟಕದ ಒಂದು ಪರಂಪರೆ. ವಿಶೇಷವಾಗಿ ಶ್ರೀಶರಣರು ಅದನ್ನ ನಡೆಸಿಕೊಂಡು ಬಂದಿದ್ದಾರೆ. ಲಿಂಗೈಕೈ ಶಿವಕುಮಾರ ಶ್ರೀಗಳ ಎಂಟತ್ತು ದಶಕಗಳಿಂದ ಅನ್ನದಾಸೋಹ ಜೊತೆಗೆ ಅಕ್ಷರ ದಾಸೋಹ, ಜ್ಞಾನ ದಾಸೋಹ ಮಾಡಿದ್ದಾರೆ. ಈ ಆಧುನಿಕ ಕಾಲದಲ್ಲಿ ಇದಕ್ಕೆ ಮಹತ್ವ ಕೊಡಬೇಕು ಅನ್ನೋ ನಿಟ್ಟಿನಲ್ಲಿ ದಾಸೋಹ ದಿನ ಮಾಡುತ್ತಿದ್ದೇವೆ. ನಮ್ಮಷ್ಟಕ್ಕೆ ನಾವೇ ದಾಸೋಹ ಪರಂಪರೆಗೆ ಸಮರ್ಪಣೆ ಮಾಡಿಕೊಳ್ಳುವ ಧ್ಯೇಯ  ನಮ್ಮ ಸರ್ಕಾರ ಅನ್ನ ದಾಸೋಹ ಮಾಡೋದ್ರಲ್ಲಿ ಹಲವು ಕ್ರಮ ಕೈಗೊಂಡಿದೆ. 4 ಕೆಜಿ ಅಕ್ಕಿಯಿಂದ 5ಕೆಜಿ ಅಕ್ಕಿ,ಗೋಧಿ ಹೆಚ್ಚಳ ಮಾಡಿದೆ ಎಂದು ತಿಳಿಸಿದರು.ಇದನ್ನೂ ಓದಿ:  Bengaluru: 3 ವರ್ಷದ ಮಗನಿಗೆ ಮದ್ಯ ಕುಡಿಸಿದ್ರು, ಪತಿಗೆ ಸೋದರನ ಪತ್ನಿಯೊಂದಿಗೆ ಸಂಬಂಧ: ಮಹಿಳೆಯಿಂದ ದೂರು

ದಾಸೋಹಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದು ಕೋವಿಡ್-19 ಕುರಿತು ಸಭೆ ಕರೆಯಲಾಗಿದೆ. ಅಲ್ಲಿ ಹಲವಾರು ವಿಚಾರಗಳು ಚರ್ಚೆಯಾಗುತ್ತವೆ. ಕಳೆದ ವಾರದ ಸ್ಥಿತಿಗತಿಗೂ ಈ ವಾರದ ಸ್ಥಿತಿಗತಿಗೂ ಬದಲಾವಣೆ ಆಗಿದೆ. ನಮ್ಮ ತಜ್ಱರು ಏನು ಅಭಿಪ್ರಾಯ ಹೇಳುತ್ತಾರೆ ಎಂದು ನೋಡೋಣ ಅಂತ ಹೇಳಿದರು.

ಶಾಲೆ ರಜೆ ಅಥವಾ ಆರಂಭದ ಕುರಿತು ಚರ್ಚೆ

ವೀಕೆಂಡ್ ಮತ್ತು ನೈಟ್ ಕರ್ಫ್ಯೂನಿಂದ ಏನು ಫಲಶೃತಿ ಆಗಿದೆ‌? ಬರುವಂತಹ ದಿನಗಳಲ್ಲಿ ಕೋವಿಡ್ ಸಂಬಂಧ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯ ಪಡೆಯುತ್ತೇವೆ‌. ಶಾಲಾ ಮಕ್ಕಳದ್ದು ವಿವಿಧ ಜಿಲ್ಲೆಗಳಲ್ಲಿ ಯಾವ ಪರಿಣಾಮ ಬೀರಿದೆ. ಶಾಲೆಗೆ ರಜೆ ಕೊಡುವ ವಿಚಾರ ಸೇರಿದಂತೆ ಎಲ್ಲಾ ವಿಚಾರಗಳು ಅಲ್ಲಿಯೇ ಚರ್ಚೆ ಆಗುತ್ತದೆ ಎಂದರು.ಈ ರೀತಿ ದಾಸೋಹ ಮಾಡುವಂತಹ ಮಠಗಳಿಗೆ ಪಡಿತರ ವ್ಯವಸ್ಥೆ ಮಾಡುತ್ತಿದ್ದೇವೆ. ಇದರ ಜೊತೆಗೆ ಮಕ್ಕಳಿಗೆ ಅಕ್ಷರ ದಾಸೋಹ ಮಾಡುವಂತದ್ದು, ಕಾರ್ಮಿಕರ ಮಕ್ಕಳಿಗೆ ವಿದ್ಯೆ ಕೊಡುವ ಉದ್ದೇಶದಿಂದ 150 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಇದರ ಜೊತೆಗೆ ಆಶ್ರಯ ದಾಸೋಹ ಕೈಂಕರ್ಯವನ್ನು ಕೈಗೊಂಡಿದ್ದೇವೆ ಎಂಬ ಮಾಹಿತಿ ನೀಡಿದರು.ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ 5 ಸಾವಿರ ಮನೆಗಳನ್ನು ನೀಡುತ್ತಿದ್ದೇವೆ. ಕರ್ನಾಟಕದಲ್ಲಿರುವ ಯಾರಿಗೆ ಅನ್ನ, ಅಕ್ಷರ, ಆಶ್ರಯ ಅವಶ್ಯಕತೆ ಇದೆಯೋ ಅವರಿಗೆ ನೀಡುವ ಕೆಲಸ ಮಾಡ್ತಿದ್ದೇವೆ.  ಕರ್ನಾಟಕ ಜನರಿಗೆ ಈ ದಾಸೋಹದ ದಿನವನ್ನ ಸಮರ್ಪಣೆ ಮಾಡಿದ್ದೇವೆ.

ಇದನ್ನೂ ಓದಿ:  Weekend Curfew ಇರುತ್ತಾ? ಇರಲ್ವಾ?: ಎಲ್ಲರ ಚಿತ್ತ ಸಿಎಂ ಸಭೆಯತ್ತ!

ಶ್ರೀಗಳಿಗೆ ಭಾರತ ರತ್ನ ನೀಡುವ ಕುರಿತು ಶಿಫಾರಸ್ಸು

ನಾನು ಇಂದು ಸಾಂಕೇತಿಕವಾಗಿ ದಾಸೋಹದ ದಿನಕ್ಕೆ ಚಾಲನೆ ನೀಡಿದ್ದೇನೆ. ಹಿರಿಯ ಶ್ರೀಗಳು ಈ ಮಠದಲ್ಲಿ ದಾಸೋಹ ಪರಂಪರೆಯನ್ನ ಮಾಡಿದ್ದಾರೆ. ಅದಕ್ಕೆ ನಾವು ಗೌರವ ಸಲ್ಲಿಸುತ್ತಿದ್ದೇವೆ. ಈ ದಾಸೋಹ ಪರಂಪರೆಯನ್ನ ಸರ್ಕಾರ ಗುರುತಿಸಿದೆ.. ದಾಸೋಹ ದಿನ ಮುಂದುವರೆಸಲು ವ್ಯವಸ್ಥಿತವಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಮುಂದುವರೆಸುತ್ತೇವೆ. ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಭರವಸೆಯನ್ನು ನೀಡಿದರು.
Published by:Mahmadrafik K
First published: