• Home
  • »
  • News
  • »
  • state
  • »
  • Basavaraj Bommai: ಪೊಲೀಸರು PFI ಮತ್ತು SDPI ಮುಖಂಡರ ಮನೆ ಮೇಲೆ ದಾಳಿ ನಡೆಸಿಲ್ಲ ಎಂದ್ರು ಸಿಎಂ ಬೊಮ್ಮಾಯಿ

Basavaraj Bommai: ಪೊಲೀಸರು PFI ಮತ್ತು SDPI ಮುಖಂಡರ ಮನೆ ಮೇಲೆ ದಾಳಿ ನಡೆಸಿಲ್ಲ ಎಂದ್ರು ಸಿಎಂ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

ಪೊಲೀಸರು PFI ಮತ್ತು SDPI ಮುಖಂಡರ ಮನೆ ಮೇಲೆ ದಾಳಿ ನಡೆಸಿಲ್ಲ. ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದಾರೆ. ಅದು ಕೂಡ ತಹಶೀಲ್ದಾರ್ ಮೂಲಕ ತೆಗೆದುಕೊಳ್ಳಲಾಗಿದೆ. ಹತ್ತು ಹಲವಾರು ಮಾಹಿತಿಗಳು ಪೊಲೀಸರಿಗೆ ಬಂದಿದೆ. ಹೀಗಾಗಿ ನಮ್ಮ ಕರ್ನಾಟಕ ಪೊಲೀಸರು ಕ್ರಮಕೈಗೊಂಡಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

ಮುಂದೆ ಓದಿ ...
  • Share this:

ರಾಜ್ಯದ ಹಲವೆಡೆ ಇಂದು (ಸೆ. 27) ಬೆಳಗ್ಗೆ ಪಿಎಫ್​ಐ (PFI) ಮತ್ತು ಎಸ್​ಡಿಪಿಐ ಮುಖಂಡರ (SDPI Leaders) ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯೆ ನೀಡಿ, ಪೊಲೀಸರು ಮುಂಜಾಗ್ರತವಾಗಿ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ದೇವನಹಳ್ಳಿ (Devanahalli) ತಾಲೂಕಿನ ಹರಳೂರಿನ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್​ನಲ್ಲಿ (Aerospace Park) ನಿರ್ಮಾಣವಾಗಲಿರುವ ಎಕ್ಸೈಡ್ ಕಂಪನಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿದರು. ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತಾಡಿದ ಅವರು ಪೊಲೀಸರ ದಾಳಿ ಬಗ್ಗೆ ವಿವರಣೆ ನೀಡಿದ್ದಾರೆ.  


ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದಾರೆ


ಪೊಲೀಸರು PFI ಮತ್ತು SDPI ಮುಖಂಡರ ಮನೆ ಮೇಲೆ ದಾಳಿ ನಡೆಸಿಲ್ಲ. ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದಾರೆ. ಅದು ಕೂಡ ತಹಶೀಲ್ದಾರ್ ಮೂಲಕ ತೆಗೆದುಕೊಳ್ಳಲಾಗಿದೆ. ಹತ್ತು ಹಲವಾರು ಮಾಹಿತಿಗಳು ಪೊಲೀಸರಿಗೆ ಬಂದಿದೆ. ಹೀಗಾಗಿ ನಮ್ಮ ಕರ್ನಾಟಕ ಪೊಲೀಸರು ಕ್ರಮಕೈಗೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಎಷ್ಟು ಜನರನ್ನ ವಶಕ್ಕೆ ಪಡೆಯಲಾಗಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು, ನಾನು ಇನ್ನೂ ಪಡೆದುಕೊಂಡಿಲ್ಲ ಎಂದರು.


ಪಿಎಫ್ಐ, ಎಸ್.ಡಿ.ಪಿ.ಐ. ಮುಖಂಡರು ವಶಕ್ಕೆ


ರಾಜ್ಯಾದ್ಯಂತ ಎಸ್.ಡಿ.ಪಿ.ಐ ಮತ್ತು ಪಿಎಫ್ಐ ಮುಖಂಡರ ಮನೆ ಮೇಲೆ ದಾಳಿ ಮುಂದುವರಿದಿದೆ. ಧಾರವಾಡ ಜಿಲ್ಲೆಯಲ್ಲಿಯೂ ಪ್ರತ್ಯೇಕ ಕಡೆ ದಾಳಿ ಮಾಡಿ ಒಂಬತ್ತು ಜನರನ್ನ ವಶಕ್ಕೆ ಪಡೆಯಲಾಗಿದೆ. ಹಳೇ ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿ ಏಳು ಜನ  ಎಸ್.ಡಿ.ಪಿ.ಐ ಮತ್ತು ಪಿಎಫ್ಐ ಮುಖಂಡರು ವಶಕ್ಕೆ ಪಡೆಯಲಾಗಿದೆ. ಕಸಬಾಪೇಟ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳುಜನ ಅಂದರ್ ಆಗಿದ್ದಾರೆ. ಹೆಚ್ಚಿನ ವಿಚಾರಣೆಗೆ ಪೊಲೀಸರು‌ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.


ಇದನ್ನೂ ಓದಿ: Sudha Murthy: ರಾಜಮಾತೆ ಕಾಲಿಗೆ ನಮಸ್ಕರಿಸಿದ ಸುಧಾ ಮೂರ್ತಿ; ನೀವು ಮಾಡಿದ್ದು ಸರೀನಾ ಎಂದು ನೆಟ್ಟಿಗರ ಪ್ರಶ್ನೆ!


ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿ ಮಿಶ್ರಿಕೋಟಿ ಗ್ರಾಮದ ಇಬ್ಬರು ವಶಕ್ಕೆ ಪಡೆಯಲಾಗಿದೆ. ಮಿಶ್ರಕೋಟಿ ಗ್ರಾಮದ ಸಿಕಂದರ್ ಶಾಲಗಾರ್ ಹಾಗೂ ಫಾರೂಕ್ ಕುಂಬಿ ವಶಕ್ಕೆ ಪಡೆಯಲಾಗಿದೆ. ಕಳೆದ‌ ನಾಲ್ಕು‌ ದಿನಗಳ ಹಿಂದೆ ಎನ್ ಐ ಎ‌ ತಂಡ ಪಿ‌ಎಫ್ ಐ ಕಾರ್ಯಕರ್ತರನ್ನ ವಶಕ್ಕೆ ಪಡೆದಿತ್ತು. ಈ‌ ವೇಳೆ  ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದ ಪಿ ಎಫ್ ಐ ಕಾರ್ಯಕರ್ತರು, ಪ್ರತಿಭಟನೆ ವೇಳೆ‌ ಸಿಕಂದರ್ ಹಾಗೂ ಫಾರೂಕ್ ಪೊಲೀಸರಿಗೆ‌ ತಳ್ಳಾಟ‌ ನಡೆಸಿದ್ದರು. ಸಿ ಆರ್ ಪಿ ಸಿ 107 ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಧಾರವಾಡ ಗ್ರಾಮೀಣ ಡಿವೈಎಸ್ ಪಿ ಸಂಕದ ತಂಡದಿಂದ ವಶಕ್ಕೆ ಪಡೆದಿದ್ದು, ಕಲಘಟಗಿ ಠಾಣೆಯಲ್ಲಿ ವಿಚಾರಣೆ‌ ನಡೆಸುತ್ತಿದ್ದಾರೆ.


ಮಂಡ್ಯದಲ್ಲಿ ಜಿಲ್ಲಾ ಘಟಕ ಅಧ್ಯಕ್ಷ ಸಯ್ಯದ್‌ ಬಂಧನ


ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ ಆರೋಪದ ಮೇಲೆ ಪಿಎಫ್‌ಐ (ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ) ಜಿಲ್ಲಾ ಘಟಕ ಅಧ್ಯಕ್ಷ ಸಯ್ಯದ್‌ ಇರ್ಫಾನ್‌ ಅವರನ್ನು ಪೂರ್ವ ಠಾಣೆ ಪೊಲೀಸರು ಮಂಗಳವಾರ ನಸುಕಿನಲ್ಲಿ ಬಂಧಿಸಿದ್ದಾರೆ. ಸಯ್ಯದ್‌ ಬಂಧನ ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾದ ಇತರ ಮೂವರು ಸದಸ್ಯರೂ ಬಂಧನಕ್ಕೊಳಗಾಗಿದ್ದಾರೆ.


ಇದನ್ನೂ ಓದಿ: Uttara Kannada: ಅಡಿಕೆ ಕೊಳೆರೋಗಕ್ಕೆ ಮನೆಮದ್ದು! ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್


ಗುತ್ತಲು ಬಡಾವಣೆಯ ಸಯ್ಯದ್‌ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ತಕ್ಷಣ ಅವರನ್ನು ಬಂಧಿಸಿದರು. ನಸುಕಿನಲ್ಲೇ ತಹಶೀಲ್ದಾರ್‌ ನಿವಾಸದಲ್ಲಿ ಹಾಜರುಪಡಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಯಿತು.


ಮತ್ತೆ ಮೂವರ ಬಂಧನ: ಸಯ್ಯದ್‌ ಇರ್ಫಾನ್‌ ಬಂಧನ ಖಂಡಸಿ ಪ್ರತಿಭಟನೆ ನಡೆಸಲು ಮುಂದಾದ ದಾದಾ ಪೀರ್‌, ಮುಖ್ತಾರ್‌, ಮೊಹಮ್ಮದ್‌ ಇಬ್ರಾಹಿಂ ಅವರನ್ನೂ ಪೊಲೀಸರು ವಶಕ್ಕೆ ಪಡೆದರು. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿಸಿ ತಹಶೀಲ್ದಾರ್‌ ಮುಂದೆ ಹಾಜರುಪಡಿಸಿದರು. ನಂತರ ಅವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

Published by:ಪಾವನ ಎಚ್ ಎಸ್
First published: