• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Women's Day: ಅಮೆರಿಕಾ ಬ್ಯಾಂಕ್​ vs ಮಹಿಳೆಯರ ಜೀರಿಗೆ ಡಬ್ಬಿ; ಯಾರಿಗೆ ಗೆಲುವು ಅಂತ ವಿವರಿಸಿದ ಸಿಎಂ ಬೊಮ್ಮಾಯಿ!

Women's Day: ಅಮೆರಿಕಾ ಬ್ಯಾಂಕ್​ vs ಮಹಿಳೆಯರ ಜೀರಿಗೆ ಡಬ್ಬಿ; ಯಾರಿಗೆ ಗೆಲುವು ಅಂತ ವಿವರಿಸಿದ ಸಿಎಂ ಬೊಮ್ಮಾಯಿ!

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಅಮೆರಿಕಾ ಬ್ಯಾಂಕ್ vs ಮಹಿಳೆಯರ ಜೀರಿಗೆ ಡಬ್ಬಿ ಬಗ್ಗೆ ವಿವರಣೆ ಕೊಟ್ಟ ಸಿಎಂ, ಬ್ಯಾಂಕ್ ಗಳು ಬೇಕಾದರೆ ದಿವಾಳಿ ಆಗುತ್ತೆ. ಆದರೆ ಮಹಿಳೆಯರು ಮನೆಯಲ್ಲಿ ಕೂಡಿಟ್ಟ ಹಣ ಯಾವತ್ತೂ ಏನು ಆಗಲ್ಲ. ಮಹಿಳೆಯರಲ್ಲಿ ಉಳಿತಾಯದ ಗುಣವಿರುತ್ತೆ. ಅಮೆರಿಕಾದ ಬ್ಯಾಂಕ್ ಮತ್ತು ಜೀರಿಗೆ ಡಬ್ಬಿ ಪಂದ್ಯ ಇಟ್ಟರೆ ನಮ್ಮ ಜೀರಿಗೆ ಡಬ್ಬಿನೇ ಗೆಲ್ಲೋದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಮಹಿಳಾ ದಿನಾಚರಣೆ ವಿಶೇಷವಾಗಿ ಇಂದು ನಗರದ (Bengaluru) ಪ್ಯಾಲೇಸ್‌ ಗ್ರೌಂಡ್‌ನಲ್ಲಿ (Palace Ground) ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ ಕಾರ್ಯಕ್ರಮವನ್ನು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಮಹಿಳೆಯ ಸಾಧನೆಯನ್ನು (Achievements) ಹಾಡಿ ಹೊಗಳಿದರು. ಅಲ್ಲದೆ, ಅಮೆರಿಕಾ ಬ್ಯಾಂಕ್​ ಹಾಗೂ ಭಾರತದ ಮಹಿಳೆಯರ ಜೀರಿಗೆ ಡಬ್ಬಿ ನಡುವೆ ಪೈಪೋಟಿ ಇಟ್ಟರೆ ಭಾರತ ಜೀರಿಗೆ ಡಬ್ಬಿಯೇ ಗೆಲುವು ಸಾಧಿಸುತ್ತದೆ ಎಂದು ಹೇಳಿದರು. ಇದೇ ವೇಳೆ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ನೀಡಿರುವ ಯೋಜನೆಗಳು, ಸ್ತ್ರೀ ಶಕ್ತಿ ಸಂಘಗಳಿಗೆ ನೀಡಿರುವ ಕಾರ್ಯಕ್ರಮಗಳು ಸೇರಿದಂತೆ ಸರ್ಕಾರದ ಸಾಧನೆಗಳನ್ನು ವಿವರಿಸಿದರು.


ತಂದೆ-ತಾಯಿ ಸಂಬಂಧ ಶ್ರೇಷ್ಠವಾದ ಪವಿತ್ರವಾದ ನೈಸರ್ಗಿಕ ಸಂಬಂಧ


ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಜಗತ್ತಿನಲ್ಲಿ ಎಲ್ಲಾ ದೇಶದಲ್ಲಿ ಮಹಿಳಾ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಮಹಿಳೆಯರ ಸುರಕ್ಷಿತ ಮತ್ತು ಆರ್ಥಿಕ ಸುಧಾರಣೆಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ. ನಾಡಿನ ಎಲ್ಲಾ ಮಹಿಳೆಯರಿಗೆ ಅಂತರಾಷ್ಟ್ರೀಯ ದಿನಾಚರಣೆಯ ಶುಭಾಶಯಗಳು.


ಇದನ್ನೂ ಓದಿ: Karnataka 2nd PUC Exam: ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ- ಈ ಷರತ್ತು ಅನ್ವಯ


ಜನ್ಮ ಪೂರ್ವದ ಸಂಬಂಧ ಪ್ರತಿಯೊಬ್ಬ ಮನುಷ್ಯನಿಗೆ ಯಾವುದಾದರೂ ಇದ್ದರೆ ಅದು ತಾಯಿಯ ಸಂಬಂಧ. ಶ್ರೇಷ್ಠವಾದ ಸಂಬಂಧ ತಾಯಿ ಸಂಬಂಧ, ನಂತರ ತಂದೆ ಬರುತ್ತಾರೆ. ಇದೊಂದು ಶ್ರೇಷ್ಠವಾದ ಪವಿತ್ರವಾದ ನೈಸರ್ಗಿಕ ಸಂಬಂಧ. ತಾಯಿ ಸಂಬಂಧ ಇಲ್ಲದೆ ಹೋದರೆ ಬೆಳವಣಿಗೆ ಅಸಾಧ್ಯ. ಇದನ್ನು ಎಲ್ಲಾ ಪುರುಷರು ಅರ್ಥಮಾಡಿಕೊಳ್ಳಬೇಕು. ಎಲ್ಲಾ ಕೆಲಸವನ್ನು ಮಹಿಳೆಯರಿಂದ ಮಾಡಿಸಿಕೊಳ್ಳುತ್ತೇವೆ.


ನಮ್ಮ ಬಜೆಟ್ ನಲ್ಲಿ ರೈತ ಮಹಿಳೆಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ


ಮೊದಲು ಇಂಥ ಕೆಲಸ ಪುರುಷರು ಇಂಥ ಕೆಲಸ ಮಹಿಳೆಯರು ಮಾತ್ರ ಮಾಡಬೇಕು ಅಂತಿತ್ತು. ಆದರೆ ಈಗ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಪುರಾಣದಲ್ಲೂ ಮಹಿಳೆಯರ ಪಾತ್ರ ಎನಿತ್ತು ಎನ್ನೋದು ಜಗತ್ತಿಗೆ ಗೊತ್ತಿದೆ. ಅವತ್ತು ಕಿತ್ತೂರು ರಾಣಿ ಚನ್ನಮ್ಮ‌ಇದ್ದರು, ಇವತ್ತು ನಮ್ಮ ಚೀಫ್ ಸೆಕ್ರೆಟರಿ ವಂದಿತಾ ಶರ್ಮಾ ಮಹಿಳೆ, ಮಹಿಳೆಯರಿಗೆ ಯಾವುದು ಅಸಾಧ್ಯ ಅಂತ ಇಲ್ಲ. ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ. ಮಂಜುಳ ಅವರು ಮೂರ್ನಾಲ್ಕು ಇಲಾಖೆಯನ್ನ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.


ಗ್ರಾಮೀಣ ಆರ್ಥಿಕತೆಯಲ್ಲೂ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಮನೆಯಲ್ಲೂ ಕೆಲಸ ಮಾಡಿ ಗದ್ದೆಯಲ್ಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಾಳೆ. ವಿಧಾನಸೌಧಲ್ಲಿ ಬಿಸ್ಲರಿ ಬಾಟೆಲ್ ಇಟ್ಟುಕೊಂಡು ಚರ್ಚೆ ಮಾಡೋದು ಸರಿಯಲ್ಲ. ಹಾಗೇ ಜನರ ಬಳಿ ಹೋಗಿ ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ಈ ವರ್ಷ ನಮ್ಮ ಬಜೆಟ್ ನಲ್ಲಿ ರೈತ ಮಹಿಳೆಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ. ಅಂಗನವಾಡಿ ಕಾರ್ಯಕರ್ತರರ ಸಹನೆ ಮೆಚ್ಚಿಕೊಳ್ಳಬೇಕು. ಈ ವರ್ಷ 1 ಸಾವಿರ ಗೌರವ ಧನ ಹೆಚ್ಚಳ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗೌರವ ಧನ ನೀಡುವ ಭರವಸೆ ನೀಡುತ್ತಿದ್ದೇವೆ.



ಬಿಎಂಟಿಸಿ ಬಸ್ ಚಾಲಕಿಯ ಶ್ರಮಕ್ಕೆ ಮೆಚ್ಚುಗೆ ಸೂಚಿಸಿ ಸಿಎಂ


ನನ್ನ ನಂಬಿಕೆ ನನ್ನ ತಾಯಂದಿರ ಮೇಲೆ ಜಾಸ್ತಿ. ಯಾವ ಗಂಡಸರು ತಪ್ಪು ತಿಳಿದುಕೊಳ್ಳಬೇಡಿ. ಮಹಿಳೆಯರರು ತಮ್ಮ‌ ಕರ್ತವ್ಯ ಪ್ರಜ್ಞೆ ಜೊತೆ, ಪ್ರಮಾಣಿಕರಾಗಿ ಇರುತ್ತಾರೆ. ಎಲ್ಲಾ ರಂಗದಲ್ಲೂ ಮುಂದೆ ಬಂದಿದ್ದಾರೆ. ಬಿಎಂಟಿಸ್ ನಲ್ಲಿ ಮಹಿಳಾ ಡ್ರೈವರ್ ಇದ್ದಾರೆ. ಅವರು ಬಸ್​ ಓಡಿಸಿದರೆ ನನಗೆ ಬಹಳ ನಂಬಿಕೆ ಇರುತ್ತೆ. ಬೇರೆ ನಮ್ಮ ಗಂಡಸರಾದರೆ ಸಂಜೆ ಎಲ್ಲೋ ಹೋಗಬೇಕು ಅಂತಿರುತ್ತೆ ಅವರದ್ದು ಎಂದು ನಗೆ ಚೆಲ್ಲಿದರು. ನಾನು ಮಹಿಳಾ ಬಸ್ ಡ್ರೈವರ್ ಗೆ ಕೇಳಿದೆ, ಯಾವೆಲ್ಲ ಗಾಡಿ ಚಾಲನೆ ಮಾಡ್ತೀರಾ ಅಂತ ಯಾವ ಗಾಡಿ ಕೊಟ್ಟರು ಓಕೆ ಎಂದ ಚಾಲಕಿಯ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.




ಇದನ್ನೂ ಓದಿ: Kantara Hero: ಕಾಡು ಸುತ್ತಿ ಬಂದು ಸಿಎಂ ಭೇಟಿಯಾದ ರಿಷಬ್ ಶೆಟ್ಟಿ! ಕಾರಣವೇನು?


ನಮ್ಮ ಜೀರಿಗೆ ಡಬ್ಬಿನೇ ಗೆಲ್ಲೋದು


ಅಮೆರಿಕಾ ಬ್ಯಾಂಕ್ vs ಮಹಿಳೆಯರ ಜೀರಿಗೆ ಡಬ್ಬಿ ಬಗ್ಗೆ ವಿವರಣೆ ಕೊಟ್ಟ ಸಿಎಂ, ಬ್ಯಾಂಕ್ ಗಳು ಬೇಕಾದರೆ ದಿವಾಳಿ ಆಗುತ್ತೆ. ಆದರೆ ಮಹಿಳೆಯರು ಮನೆಯಲ್ಲಿ ಕೂಡಿಟ್ಟ ಹಣ ಯಾವತ್ತೂ ಏನು ಆಗಲ್ಲ. ಮಹಿಳೆಯರಲ್ಲಿ ಉಳಿತಾಯದ ಗುಣವಿರುತ್ತೆ. ಅಮೆರಿಕಾದ ಬ್ಯಾಂಕ್ ಮತ್ತು ಜೀರಿಗೆ ಡಬ್ಬಿ ಪಂದ್ಯ ಇಟ್ಟರೆ ನಮ್ಮ ಜೀರಿಗೆ ಡಬ್ಬಿನೇ ಗೆಲ್ಲೋದು ಎಂದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ‌ ಕನ್ನಡದ ತಾಯಂದಿರು ಬೆಳೆಯಬೇಕು.


ಪೆಟ್ರೋಲ್ ಬಂಕ್, ಟ್ರಕ್, DRDO ಸೇರಿದಂತೆ ಪೈಲಟ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಒಮ್ಮೆ ಕಲಬುರಗಿಗೆ ವಿಮಾನದಲ್ಲಿ ಹೋಗುವಾಗ ಏನೋ ಜಾಸ್ತಿ ಶೇಕ್ ಆಗಿತ್ತು. ಹೋಗಿ ವಿಚಾರಿಸುವಂತ ಹೋದರೆ ಅದು ಮಹಿಳಾ ಪೈಲಟ್. ಏನು ಅಗಿಲ್ಲ ಚಿಕ್ಕ ಸಮಸ್ಯೆ ಅಂದರು, ನನಗೆ ಮೇಲೆ ಕೆಳಗೆ ನೀಡಿದರೆ ಭಯವಾಗಿತ್ತು. ಆದರೆ 10 ನಿಮಿಷದಲ್ಲಿ ಪ್ರಾಬ್ಲಂ ದೂರ ಮಾಡಿ ಸೇಫ್​ ಲ್ಯಾಂಡ್ ಮಾಡಿದರು. ಆದರೆ ಇದೇ ವೇಳೆ ಪುರುಷ ಪೈಲಟ್​​ ಇದ್ದಿದ್ದರೆ ದಡಬಡ ಅಂತ ಇಳಿಸ್ತಾರೆ ಎಂದು ತಮ್ಮ ನೆನಪನ್ನು ಬಿಚ್ಚಿಟ್ಟರು.

Published by:Sumanth SN
First published: