BJP Government: ಸಿಎಂ ಬೊಮ್ಮಾಯಿ ಸರ್ಕಾರ ರಚನೆಯಾಗಿ 1 ವರ್ಷ; ಹೊಸ ಯೋಜನೆಗಳ ಘೋಷಣೆ

ಶೀಘ್ರದಲ್ಲಿಯೇ ಸಬರ್ಬನ್ ಯೋಜನೆ, ಹೆಬ್ಬಾಳ ಫ್ಲೈಓವರ್‌ ಕಾಮಗಾರಿ ಮತ್ತು ಗೊರಗುಂಟೆ ಪಾಳ್ಯ ಫ್ಲೈಓವರ್‌ ಕಾಮಗಾರಿಗೆ ಶೀಘ್ರವೇ ಆರಂಭಿಸಲಾಗುತ್ತದೆ ಎಂದು ಹೇಳಿದರು.

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

  • Share this:
ರಾಜ್ಯದಲ್ಲಿ ಬಿಜೆಪಿ ಸರ್ಕಾರ (BJP Government) ಮೂರು ವರ್ಷ ಪೂರೈಸಿದ್ರೆ, ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಮುಖ್ಯಮಂತ್ರಿಗಳಾಗಿ ಒಂದು ವರ್ಷ ಆಗಿದೆ. ಈ ಹಿನ್ನೆಲೆ ಇಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ (Janotsava) ಆಚರಣೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದ್ರೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟೂರ್ ಕೊಲೆ (Praveen Nettur Murder Case) ಹಿನ್ನೆಲೆ ಕಾರ್ಯಕ್ರಮ ರದ್ದುಗೊಳಿಸಿತು. ಈ ಹಿನ್ನೆಲೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಪಕ್ಷದ ಸಚಿವರು, ಶಾಸಕರು, ಕಾರ್ಯಕರ್ತರಿಗೆ, ಬಿಜೆಪಿ ಹೈಕಮಾಂಡ್ ನಾಯಕರಿಗೆ ಧನ್ಯವಾದ ಸಲ್ಲಿಸಿದರು. ನಮ್ಮದು ಬದ್ಧತೆ ಇರುವ ಸಚಿವ ಸಂಪುಟವಾಗಿದ್ದು, ಸರ್ಕಾರದ ಸಾಧನೆಯಲ್ಲಿ ಇವರ ಪಾಲಿದೆ. ಕೋವಿಡ್ ಪರಿಸ್ಥಿತಿಯನ್ನ ಯಡಿಯೂರಪ್ಪನವರು (BS Yediyurappa) ಸಮರ್ಥವಾಗಿ ಎದುರಿಸಿದ್ರು. ಆ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಸಹಕರಿಸಿದ್ರು. ಬಿಜೆಪಿಯದ್ದು ಜನಪರವಾದ ಆಡಳಿತ ಎಂದರು.

ರಾಜ್ಯದ ಸಮಗ್ರ ಅಭಿವೃದ್ಧಿಯೇ ನಮ್ಮ ಆದ್ಯತೆ. ನಮ್ಮ ಮೊದಲ ನಿರ್ಣಯ ರೈತರ ಪರವಾಗಿ. ರೈತರಿಗಾಗಿ ವಿದ್ಯಾನಿಧಿ ಯೋಜನೆ ಆರಂಭಿಸಿದ್ದೀವಿ. ಕೆಳ ಸ್ಥರದ ವರ್ಗಕ್ಕೆ ಆರ್ಥಿಕ ನೆರವು ನೀಡಿದ್ದೇವೆ. SC-ST ಸಮಾಜಕ್ಕೆ ಅನುಕೂಲ ಮಾಡಿದ್ದೇವೆ. ಬಡ ಕುಟುಂಬಗಳಿಗೆ 75 ಯುನಿಟ್ ವಿದ್ಯುತ್ ದರ ವಿನಾಯಿತಿ ನೀಡಲಾಗಿದೆ.  100 ಎಸ್‌ಸಿ-ಎಸ್‌ಟಿ ಹಾಸ್ಟೆಲ್ ಮಾಡುತ್ತಿದ್ದೇವೆ. 50 ಓಬಿಸಿ ಹಾಸ್ಟೆಲ್ ಮಾಡುತ್ತಿದ್ದೇವೆ ಎಂದು ಸರ್ಕಾರದ ಕೆಲಸಗಳ  ಬಗ್ಗೆ ಮಾಹಿತಿ ನೀಡಿದರು.

ಕರ್ನಾಟಕದಲ್ಲಿ 1.63 ಲಕ್ಷ ಕೋಟಿ ಹೂಡಿಕೆ

ಸ್ತ್ರೀಶಕ್ತಿ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿತ್ತಿದ್ದೇವೆ. ಇದು 33 ಸಾವಿರ ಸ್ತ್ರೀಶಕ್ತಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. 5 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಅನುಕೂಲವಾಗಲಿದೆ. ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಿದ್ದು, ಕೊರೊನಾ ಬಳಿಕ ಈ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಕರ್ನಾಟಕದಲ್ಲಿ 1.63 ಲಕ್ಷ ಕೋಟಿ ಹೂಡಿಕೆಯಾಗಿದೆ ಎಂದು ತಿಳಿಸಿದರು.

ಶೀಘ್ರದಲ್ಲಿಯೇ ಸಬರ್ಬನ್ ಯೋಜನೆ, ಹೆಬ್ಬಾಳ ಫ್ಲೈಓವರ್‌ ಕಾಮಗಾರಿ ಮತ್ತು ಗೊರಗುಂಟೆ ಪಾಳ್ಯ ಫ್ಲೈಓವರ್‌ ಕಾಮಗಾರಿಗೆ ಶೀಘ್ರವೇ ಆರಂಭಿಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Praveen Murder: ಕಂಡೋರ ಮಕ್ಕಳನ್ನು ಸಾವಿನ ದವಡೆಗೆ ನೂಕಿ ಮತ ಫಸಲು ತೆಗೆಯುವ ನರಹಂತಕ ರಾಜಕಾರಣ ನಿಲ್ಲಲಿ; HDK

ಎಸ್‌ಸಿ-ಎಸ್‌ಟಿಗೆ  ಕುಟೀರ ಜ್ಯೋತಿ ಯೋಜನೆಯಡಿ  75 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ. 8 ಸಾವಿರ ಶಾಲಾ-ಕೊಠಡಿಗಳು ಮತ್ತು 100 ಪಿಹೆಚ್‌ಸಿ ಸೆಂಟರ್ ಮೇಲ್ದರ್ಜೆಗೆ ಏರಿಸಲಾಗುವುದು. ಇದರಲ್ಲಿ 71 ಪಿಹೆಚ್‌ಸಿ ಕೇಂದ್ರಗಳು ಕಲ್ಯಾಣ ಕರ್ನಾಟಕದಲ್ಲಿವೆ.

ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ

ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಆರಂಭಿಸಲಾಗುವುದ. ಪ್ರತೀ ಗ್ರಾಮದಲ್ಲೂ ವಿವೇಕಾನಂದ ಯುವಶಕ್ತಿ ಸಂಘ ಆರಂಭವಾಗಲಿದ್ದು, 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗದಲ್ಲಿ ಭಾಗಿಯಾಗುವ ಪುಣ್ಯಕೋಟಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಹಸುವನ್ನು ದತ್ತು ಪಡೆಯುವ ಕಾರ್ಯಕ್ರಮ ಇದಾಗಿದ್ದು, ಪ್ರತೀ ವ್ಯಕ್ತಿ 11 ಸಾವಿರ ಕೊಡಬಹುದು. ಇದೇ ಯೋಜನೆಯಡಿಯಲ್ಲಿ ಗೋಶಾಲೆಗಳಿಗೆ ಹಣ ಕೊಡಲಾಗುತ್ತದೆ.

ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಘೋಷಿಸಿದ್ದು, ಇದರಿಂದ 12 ಸಾವಿರ ಮಕ್ಕಳಿಗೆ ಲಾಭವಾಗಲಿದೆ. ವಿದ್ಯಾನಿಧಿ ಯೋಜನೆ ವ್ಯಾಪ್ತಿಗೆ ಟ್ಯಾಕ್ಸಿ ಡ್ರೈವರ್ ಮತ್ತು ಮೀನುಗಾರರ ಮಕ್ಕಳು ಬರುತ್ತಾರೆ.

5 ಹೊಸ ನಗರಗಳ ಕಟ್ಟುವ ಪ್ರಕ್ರಿಯೆ

ಇನ್ನೂ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆಗೆ ‘ವಿವೇಕ’ ಹೆಸರಿಡಲಾಗಿದ್ದು, ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸಲಾಗುವುದು. ರಾಜ್ಯದ ಆರ್ಥಿಕತೆ ಹೆಚ್ಚಿಸಿ ಎಲ್ಲಾ ವರ್ಗಗಳಿಗೆ ಅನುಕೂಲ ಕಲ್ಪಿಸಲಾಗುವುದು. 5 ಹೊಸ ನಗರಗಳನ್ನ ಕಟ್ಟುವ ಪ್ರಕ್ರಿಯೆ ಆರಂಭ, 6 ಇಂಜನಿಯರಿಂಗ್ ಕಾಲೇಜುಗಳು ಐಐಟಿ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗವುದು. ಅತಿಥಿ ಉಪನ್ಯಾಸಕರ ಗೌರವಧನ 26,000 ರೂ.ಗಳಿಂದ 32,000ಕ್ಕೆ ಏರಿಕೆ ಮಾಡಲಾಗುವುದು.

ಇತರೆ ಯೋಜನೆಗಳು

*SC,ST ನಿಗಮಕ್ಕೆ 580.19 ಕೋಟಿ ಹೆಚ್ಚುವರಿ ಅನುದಾನ. SC,ST ವಿದ್ಯಾರ್ಥಿಗಳಿಗೆ 572 ಕೋಟಿ ವಿದ್ಯಾರ್ಥಿ ವೇತನ

*ದೀನದಯಾಳ್​​ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯಕ್ಕೆ ಅನುದಾನ. 5 ಜಿಲ್ಲೆಗಳಲ್ಲಿ ಹಾಸ್ಟೆಲ್​, ಕಾಂಪ್ಲೆಕ್ಸ್​ ನಿರ್ಮಾಣ. ₹250 ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ

*ಭೂ ಒಡೆತನ ಯೋಜನೆ: ಘಟಕ ವೆಚ್ಚ 15ರಿಂದ 20 ಲಕ್ಷಕ್ಕೆ ಹೆಚ್ಚಳ

*ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಡಿ 9.98 ಲಕ್ಷ ವಿದ್ಯಾರ್ಥಿಗಳಿಗೆ ₹428 ಕೋಟಿ ವಿದ್ಯಾರ್ಥಿ ವೇತನ

ಇದನ್ನೂ ಓದಿ:  Praveen Murder: ಏಳು SDPI ಕಾರ್ಯಕರ್ತರು ವಶಕ್ಕೆ; ಆತ್ಮೀಯ ಗೆಳೆಯ ಪ್ರವೀಣ್ ಬಗ್ಗೆ ಆರೀಫ್ ಹೇಳಿದ್ದು ಹೀಗೆ

*PM ಕಿಸಾನ್ ​​ಸಮ್ಮಾನ್​​ ನಿಧಿ ಯೋಜನೆಯಡಿ ರೈತರಿಗೆ ನೆರವು. 2021-22ನೇ ಸಾಲಿನಲ್ಲಿ 50.53 ಲಕ್ಷ ರೈತರಿಗೆ ಸಹಾಯ. ಪ್ರವಾಹದಿಂದಾದ ಬೆಳೆ ನಷ್ಟಕ್ಕೆ 48 ಗಂಟೆಗಳಲ್ಲೇ ಪರಿಹಾರ ಮತ್ತು PM ಕಿಸಾನ್ ​​ಸಮ್ಮಾನ್​​ ನಿಧಿ - 18.56 ಲಕ್ಷ ರೈತರಿಗೆ ಅನುಕೂಲ

*ಕೃಷಿ ಯಾಂತ್ರೀಕರಣ ಪ್ರೋತ್ಸಾಹ: ಎಕರೆಗೆ ₹250 ಡೀಸೆಲ್​​ ಸಹಾಯಧನ

*ರೈತರ ಆದಾಯ ಹೆಚ್ಚಿಸಲು ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ

*ದ್ರಾಕ್ಷಿ ಅಭಿವೃದ್ಧಿ ಮತ್ತು ದ್ರಾಕ್ಷಾರಸ ಮಂಡಳಿ ಸ್ಥಾಪನೆ

*ನೇಕಾರ ಸಮ್ಮಾನ್​​ ನೆರವಿನ ಮೊತ್ತ 2ರಿಂದ 5 ಸಾವಿರಕ್ಕೆ ಹೆಚ್ಚಳ. 2021-22ನೇ ಸಾಲಿನಲ್ಲಿ 49,544 ನೇಕಾರರಿಗೆ ನೇರ ನಗದು

*110 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ ನೆರವು

*ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಯೋಜನೆ ಜಾರಿ

*2.97 ಲಕ್ಷ ವಿದ್ಯಾರ್ಥಿಗಳಿಗೆ 462.12 ಕೋಟಿ ರೂ. ಮಂಜೂರು

*ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮೈತ್ರಿ, ಮನಸ್ವಿನಿ

*ವಿಕಲಚೇತನರ ಮಾಶಾಸನ ಏರಿಕೆ

*ಆಸಿಡ್​​ ಸಂತ್ರಸ್ತರ ಯೋಜನೆಗಳ ಪಿಂಚಣಿ ಮೊತ್ತ ಹೆಚ್ಚಳ
Published by:Mahmadrafik K
First published: