• Home
 • »
 • News
 • »
 • state
 • »
 • ಜನಪರ ಆಡಳಿತ ನೀಡುವುದೇ ನಮ್ಮ ಗುರಿ, ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವೆ; ನೂತನ ಸಿಎಂ ಬಸವರಾಜ್ ಬೊಮ್ಮಾಯಿ

ಜನಪರ ಆಡಳಿತ ನೀಡುವುದೇ ನಮ್ಮ ಗುರಿ, ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವೆ; ನೂತನ ಸಿಎಂ ಬಸವರಾಜ್ ಬೊಮ್ಮಾಯಿ

 ನೂತನ ಸಿಎಂ ಬಸವರಾಜ್​ ಬೊಮ್ಮಾಯಿ.

ನೂತನ ಸಿಎಂ ಬಸವರಾಜ್​ ಬೊಮ್ಮಾಯಿ.

ಜನಪರ ಆಡಳಿತವನ್ನು ನಮ್ಮ ಸರ್ಕಾರ ಕೊಡುತ್ತದೆ. ಎಲ್ಲರ ನೆರವು ಪಡೆದು ಸವಾಲುಗಳನ್ನು ಎದುರಿಸುತ್ತೇನೆ. ನಾನು ಸಿಎಂ ಅನ್ನುವುದಕ್ಕಿಂತ, ಟೀಂ ವರ್ಕ್ ಮಾಡುತ್ತೇನೆ. ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುತ್ತೇನೆ ಎಂದರು.

 • Share this:

  ಬೆಂಗಳೂರು(ಜು.28): ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, ಜನಪರ ಆಡಳಿತ ನೀಡೋದೇ ನಮ್ಮ ಗುರಿ. ಸರ್ಕಾರಕ್ಕೆ ಆರ್ಥಿಕ, ಸಾಮಾಜಿಕ ಸವಾಲುಗಳಿವೆ. ನಾನು ಎಲ್ಲಾ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಾಗಿ ಆಡಳಿತ ನಡೆಸುತ್ತೇನೆ ಎಂದು ಹೇಳಿದರು.


  ಬಡವರ ಕಣ್ಣೀರು ಒರೆಸುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಜನರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತದೆ. ಕಳೆದ ಒಂದು ವರ್ಷದಿಂದ ಕೊರೋನಾ ಸಂಕಷ್ಟವಿದೆ. ಕಳೆದ 2 ಬಾರಿಯಿಂದ ಪ್ರವಾಹ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.


  ಜನಪರ ಆಡಳಿತವನ್ನು ನಮ್ಮ ಸರ್ಕಾರ ಕೊಡುತ್ತದೆ. ಎಲ್ಲರ ನೆರವು ಪಡೆದು ಸವಾಲುಗಳನ್ನು ಎದುರಿಸುತ್ತೇನೆ. ನಾನು ಸಿಎಂ ಅನ್ನುವುದಕ್ಕಿಂತ, ಟೀಂ ವರ್ಕ್ ಮಾಡುತ್ತೇನೆ. ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುತ್ತೇನೆ ಎಂದರು.


  ಇದನ್ನೂ ಓದಿ:Karnataka CM: BSY ಮಾತ್ರವಲ್ಲ, ರಾಜ್ಯದ ಬಹುತೇಕ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಿಲ್ಲ!


  ರಾಜ್ಯದ ಜನತೆಗೆ ನಾನು ಕೃತ್ಯಜ್ಞನಾಗಿರುತ್ತೇನೆ. ನರೇಂದ್ರ ಮೋದಿಯ ಅವರು ಅಪಾರವಾದ ನಂಬಿಕೆ ವಿಶ್ವಾಸ ಇಟ್ಟಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ. ಕೋವಿಡ್ ಹಾಗೂ ಇತರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೇವೆ. ಕಷ್ಟದಲ್ಲಿ ಇರೋ ಜನರ ಕಣ್ಣೀರು ಒರೆಸುವ ಕೆಲಸ ಮಾಡ್ತೀವಿ ಎಂದರು.


  ಹೊಸ ಯೋಜನೆ ಘೋಷಣೆ ವಿಚಾರವಾಗಿ, ನೇರವಾಗಿ ಹೋಗಿ ಕ್ಯಾಬಿನೆಟ್ ಜೊತೆ ಚರ್ಚೆ ಮಾಡ್ತೀನಿ. ಹಣಕಾಸಿನ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡ್ತೀನಿ. ಸವಾಲುಗಳು ತುಂಬಾ ಇದೆ, ಎಲ್ಲಾ ಸಹದ್ಯೋಗಿಗಳ ಜೊತೆ ಚರ್ಚೆ ಮಾಡಿ ಎದುರಿಸುತ್ತೇನೆ ನಾನು ಮುಖ್ಯಮಂತ್ರಿ ಅನ್ನೋಗಿಂತ ಎಲ್ಲರಲ್ಲೂ ನಾನು ಒಬ್ಬನು ಅಂತ ಕೆಲಸ ಮಾಡ್ತೀನಿ ಎಂದು ಹೇಳಿದರು.


  ಕರ್ನಾಟಕದ ನೂತನ ಮುಖ್ಯಮಂತ್ರಿಗಾಗಿ ಇಂದು ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯದ 30ನೇ ಸಿಎಂ ಆಗಿ ಬೊಮ್ಮಾಯಿ ಅವರು ರಾಜಭವನದ ಗಾಜಿನ ಮನೆಯಲ್ಲಿ ಇಂದು ಅಧಿಕಾರ ಸ್ವೀಕರಿಸಿದರು. ನೂತನ ಸಿಎಂಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದರು. ದೇವರ ಹೆಸರಿನಲ್ಲಿ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದರು.


  ಇದನ್ನೂ ಓದಿ:New CM of Karnataka: ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ


  ವೇದಿಕೆ ಮುಂಭಾಗದಲ್ಲೇ ಬಿಎಸ್​ ಯಡಿಯೂರಪ್ಪ ಕುಳಿತಿದ್ದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಅರುಣ್ ಸಿಂಗ್, ನಳೀನ್ ಕುಮಾರ್ ಕಟೀಲ್, ಕಿಶನ್ ರೆಡ್ಡಿ, ಧರ್ಮೇಂದ್ರ ಪ್ರಧಾನ್, ವಿಜಯೇಂದ್ರ, ಈಶ್ವರಪ್ಪ, ಮುರುಗೇಶ್ ನಿರಾಣಿ ಮತ್ತಿತರರು ಭಾಗಿಯಾಗಿದ್ದರು. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಬೊಮ್ಮಾಯಿ ಅವರು ಬಿಎಸ್​ವೈ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

  Published by:Latha CG
  First published: