ನನ್ನದು 'ಭ್ರಷ್ಟಾಚಾರ ರಹಿತ ಸರ್ಕಾರ ಆಗಬೇಕು; ಇದಕ್ಕೆ‌ ಸಹಕಾರ ಕೊಡುವಂತೆ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ತಾಕೀತು.!

ಇಲಾಖೆಯ ಮುಖ್ಯಸ್ಥರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಪ್ರವಾಹ ಹಾಗೂ ಕೋವಿಡ್ ಸಂದರ್ಭದಲ್ಲಿ ಅಧಿಕಾರಿಗಳು ಸಾಕಷ್ಟು ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ

ಗೃಹ ಸಚಿವ ಬಸವರಾಜ ಬೊಮ್ಮಾಯಿ

  • Share this:
ಬೆಂಗಳೂರು(ಜು.28): ಇಂದು‌ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ ಅಧಿಕಾರಿಗಳ ಜೊತೆ ತಮ್ಮ ಚೊಚ್ಚಲ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪ್ರಮುಖವಾಗಿ ಭ್ರಷ್ಟಾಚಾರದ ಕುರಿತು ಉಲ್ಲೇಖ ಮಾಡಿ 'ಭ್ರಷ್ಟಾಚಾರ ರಹಿತ' ಸರ್ಕಾರ ನನ್ನದಾಗ ಬೇಕು. ಅದಕ್ಕೆ ನೀವೆಲ್ಲರೂ ಸಹಕರಿಸಬೇಕು ಎಂದು ತಾಕೀತು ಮಾಡಿದ್ದಾರೆ. 

ಟೀಂ ವರ್ಕ್ ಆಗಿ ಕೆಲಸ ಮಾಡಬೇಕು : ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಕಿವಿ ಮಾತು.!!

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು.‌ ಈ ನಿಟ್ಟಿನಲ್ಲಿ ಅಧಿಕಾರಿಗಳು  ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ನೂತನ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದ ಅವರು, ಅಧಿಕಾರಿಗಳು ಒಂದು ತಂಡವಾಗಿ ಪರಸ್ಪರ ಸಮನ್ವಯತೆಯಿಂದ ಕೆಲಸ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:Basavaraj Bommai: ಸೇಫ್ ಗೇಮ್ ಆಡುವ ಬೊಮ್ಮಾಯಿ ಈಗ ನಂಬರ್ 3; ಮಂತ್ರಿಗಿರಿ‌ ಕೊಡಲು ಹಿಂಜರಿದಿದ್ದವರು ಈಗ ಸಿಎಂ ಸ್ಥಾನವನ್ನೇ ಕೊಟ್ಟರು!

ಜನರ ಸುತ್ತ ಆಡಳಿತ ಇರಬೇಕು : ಆಡಳಿತದ ಸುತ್ತ ಜನರು ಇರಬಾರದು.!!

ಇಲಾಖೆಯ ಮುಖ್ಯಸ್ಥರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಪ್ರವಾಹ ಹಾಗೂ ಕೋವಿಡ್ ಸಂದರ್ಭದಲ್ಲಿ ಅಧಿಕಾರಿಗಳು ಸಾಕಷ್ಟು ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು ಎಂಬ ಮಾಹಿತಿ ಲಭ್ಯವಾಗಿದೆ. ಜನಪರ, ಪಾರದರ್ಶಕತೆಯ ಸರ್ಕಾರ ನೀಡಲು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕು. ಜನರ ಸುತ್ತ ಆಡಳಿತ ಇರಬೇಕು ಆಡಳಿತದ ಸುತ್ತ ಜನರು ಇರುವಂತಾಗಬಾರದು. ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ  ರಾಜ್ಯವನ್ನು ನಂಬರ್ ಒನ್ ಮಾಡಲು ಶ್ರಮಿಸಬೇಕು.‌ ಇದನ್ನು ಮಾಜಿ ಸಿಎಂ ಯಡಿಯೂರಪ್ಪ ಅವರೂ ಕೂಡಾ ಬಯಸಿದ್ದರು.‌ ಈ ನಿಟ್ಟಿನಲ್ಲಿ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.‌

ಇದೇ ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವ ಹೊಂದಿರಬಾರದು ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ನಾನು ಯಾವುದೇ ಕಾರಣಕ್ಕೂ ಹಣದ ದುರುಪಯೋಗ ಮಾಡುವುದಿಲ್ಲ. ಜನರ ದುಡ್ಡನ್ನು ಬಹಳ ಎಚ್ಚರಿಕೆಯಿಂದ ಬಳಸಿಕೊಳ್ಳುತ್ತೇನೆ. ನನ್ನ ಇಂಥಾ ಯೋಚನೆಗಳಿಗೆ ಎಲ್ಲಾ ಇಲಾಖೆಯಿಂದಲೂ ಬೆಂಬಲ ಸಿಗಬೇಕು.‌ ಎಲ್ಲಾ ಇಲಾಖೆಯ‌ ಖರ್ಚುಗಳಲ್ಲೂ ಶೇ. 5% ಇಳಿಕೆಯಾಗಬೇಕು.‌ ನನ್ನ ಕಚೇರಿ‌ ಬಾಗಿಲು ಸದಾ ತೆರದಿರಲಿದೆ. ಯಾರು ಬೇಕಿದ್ರು ಯಾವಾಗ ಬೇಕಿದ್ರು ಬಂದು ನನಗೆ ಸಲಹೆ‌ ಸೂಚನೆ ಕೊಡಬಹುದಾಗಿದೆ. ಜನ ಸಮಾನ್ಯರಿಗೆ ಸರ್ಕಾರದ ಕಾರ್ಯಕ್ರಮ ಮುಟ್ಟುವ ಎಲ್ಲಾ ಯೋಜನೆಗಳನ್ನೂ‌ ಕೈಗೊಳ್ಳಬೇಕು. ಹೀಗೆ ಹಲವು‌ ವಿಚಾರಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ ಅಧಿಕಾರಿಗಳ ಸಮನ್ವಯತೆ ಬಗ್ಗೆ ಉಲ್ಲೇಖಿಸಿದರು.

ಇದನ್ನೂ ಓದಿ:ಸಿಎಂ ಆದ ಕೂಡಲೇ ಬೊಮ್ಮಾಯಿ ಬಂಪರ್ ಕೊಡುಗೆ; ರೈತರ ಮಕ್ಕಳಿಗೆ ಸ್ಕಾಲರ್​ಶಿಪ್​​, ವಿಧವಾ ವೇತನ ಹೆಚ್ಚಳ

ಈ ಸಭೆಯಲ್ಲಿ‌ ಸರ್ಕಾರದ ಪ್ರಧಾನಿ‌ ಕಾರ್ಯದರ್ಶಿಗಳು, ಪೊಲೀಸ್ ಇಲಾಖೆ‌ ಮುಖ್ಯಸ್ಥರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಕಂದಾಯ‌ ಇಲಾಖೆ, ಅಬಕಾರಿ‌ ಇಲಾಖೆ ಹೀಗೆ ಸರ್ಕಾರದ ಪ್ರಮುಖ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Latha CG
First published: