Zero Traffic: ಗೃಹ ಮಂತ್ರಿಗಳ ಬಳಿಕ ಝೀರೋ ಟ್ರಾಫಿಕ್​ ಬೇಡ ಎಂದ ಸಿಎಂ ಬೊಮ್ಮಾಯಿ

ಗೃಹ ಸಚಿವರ ಈ ನಿರ್ಧಾರದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿಗಳು ತಮಗೆ ಝೀರೋ ಟ್ರಾಫಿಕ್​ ಬೇಡ ಎಂದಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ತಮ್ಮಿಂದ ಯಾವುದೇ ಕಿರಿಕಿರಿಯಾಗದಂತಹ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

 • Share this:
  ಬೆಂಗಳೂರು (ಆ. 14): ಮುಖ್ಯಮಂತ್ರಿಗಳು ಸೇರಿದಂತೆ ಸರ್ಕಾರದ ಸಚಿವರು ಪ್ರಯಾಣಿಸುವಾಗ ವಾಹನ ದಟ್ಟಣೆಯಿಂದ ಆಗುವ ಕಿರಿಕಿರಿ ತಪ್ಪಿಸಲು ಝೀರೋ ಟ್ರಾಫಿಕ್ ಪಡೆಯುತ್ತಿದ್ದರು. ಆದರೆ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಗೃಹ ಸಚಿವರಾಗಿರುವ ಅರಗ ಜ್ಞಾನೇಂದ್ರ ತಮಗೆ ಈ ಝೀರೋ ಟ್ರಾಫಿಕ್​ ಬೇಡ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರಿಗೆ ತಿಳಿಸಿದ್ದರು. ಗೃಹ ಸಚಿವರ ಈ ನಿರ್ಧಾರದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿಗಳು ತಮಗೆ ಝೀರೋ ಟ್ರಾಫಿಕ್​ ಬೇಡ ಎಂದಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ತಮ್ಮಿಂದ ಯಾವುದೇ ಕಿರಿಕಿರಿಯಾಗದಂತಹ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಆದರೆ, ತಮ್ಮ ಸಂಚಾರದ ವೇಳೆ ಆ್ಯಂಬುಲೆನ್ಸ್​ಗೆ ಮೊದಲು ಅನುವು ಮಾಡಿಕೊಟ್ಟು, ಸಿಗ್ನಲ್​ ಮಾತ್ರ ಫ್ರೀ ಮಾಡಿಕೊಂಡುವಂತೆ ಸೂಚನೆ ನೀಡಿದ್ದಾರೆ.

  ಮುಖ್ಯಮಂತ್ರಿಗಳ ಭದ್ರತೆಗಾಗಿ ಈ ಹಿಂದೆ ಝೀರೋ ಟ್ರಾಫಿಕ್​ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅವರು ಮನೆ ಅಥವಾ ಕಾರ್ಯಕ್ರಮ, ಕಚೇರಿಯಿಂದ ಹೊರಡುವಾಗಲೇ ಅವರು ಸಂಚಾರ ಮಾಡುವ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಕ್ಕೆ ತಡೆಯೊಡ್ಡಲಾಗುತ್ತಿತ್ತು. ಇದರಿಂದ ಸಾರ್ವಜನಿಕರು ಗಂಟಗಂಟಲೇ ಟ್ರಾಫಿಕ್​ನಲ್ಲಿ ಸಿಲುಕಿ ಸಂಕಷ್ಟ ಪಡುತ್ತಿದ್ದರು. ಈ ಹಿನ್ನಲೆ ನಾನು ಸಾಮಾನ್ಯ ಜನರಂತೆ ಸಂಚಾರ ನಡೆಸುತ್ತೇನೆ. ನನ್ನಿಂದ ಇತರ ಸಂಚಾರಿಗರಿಗೆ ಯಾವುದೆ ತೊಂದರೆಯಾಗಬಾರದು. ಈ ಹಿನ್ನಲೆ ನನಗೆ ಝೀರೋ ಟ್ರಾಫಿಕ್​ನ ಅಗತ್ಯವಿಲ್ಲ ಎಂದಿದ್ದಾರೆ.

  ಇದನ್ನು ಓದಿ: ಅಂಗಾಂಗ ದಾನಕ್ಕೆ ಮುಂದಾಗಿ ಮಾದರಿಯಾದ ಸಿಎಂ ಬಸವರಾಜ ಬೊಮ್ಮಾಯಿ

  ಆದರೆ, ಬೆಂಗಳೂರು ನಗರದಲ್ಲಿ ಸಿಗ್ನಲ್​ಗಳಲ್ಲಿ ಹೆಚ್ಚಿದ್ದು, ಹಲವು ಗಂಟೆಗಳ ಕಾಲ ಕಾದು ನಿಲ್ಲಬೇಕಿರುವ ಹಿನ್ನಲೆ ತಮ್ಮ ವಾಹನ ಬಂದ ಸಮಯದಲ್ಲಿ ಸಿಗ್ನಲ್​ಗಳಲ್ಲಿ ಬೇಗ ಹೋಗಲು ಅನುವು ಮಾಡಿಕೊಟ್ಟರೆ ಸಾಕು ಎಂದಿದ್ದಾರೆ.

  ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಹಲವು ಮಾದರಿ ನಿರ್ಧಾರ ಕೈಗೊಂಡು ಮೆಚ್ಚುಗೆ ಪಡೆದಿದ್ದಾರೆ. ಈ ಹಿಂದೆ ಕಾರ್ಯಕ್ರಮದಲ್ಲಿ ಹಾರಾ ತುರಾಯಿ ಬದಲಿಗೆ ಪುಸ್ತಕಗಳನ್ನು ನೀಡುವಂತೆ ಆದೇಶ ಹೊರಡಿಸಿದ್ದರು. ಇದರ ಜೊತೆಗೆ ತಮಗೆ ವಿಮಾನ ನಿಲ್ಡಾಣ, ಕಚೇರಿ, ಕಾರ್ಯಕ್ರಮಗಳಲ್ಲಿ ದಿನಕ್ಕೆ ಐದಾರು ಬಾರಿ ಗಾರ್ಡ್​ ಆಫ್​ ಆನರ್​ ನೀಡುವ ಬದಲು, ದಿನಕ್ಕೆ ಒಂದು ಬಾರಿ ಗಾರ್ಡ್​ ಆಫ್​ ಆನರ್​ ನೀಡಿದರೆ ಸಾಕು. ಬೆಳಗ್ಗೆ ಒಂದು ಬಾರಿ ಕಚೇರಿ ಆವರಣದಲ್ಲಿ ಗಾರ್ಡ್​ ಆಫ್​ ಆನರ್​ ನೀಡಿದರೆ ಸಾಕು. ಮತ್ತೆ ನಿರ್ಗಮಿಸುವ ವೇಳೆ ಕೂಡ ಗೌರವ ರಕ್ಷೆ ನೀಡುವುದು ಬೇಡ ಎಂದು ನಿನ್ನೆಯಷ್ಟೆ ಅವರು ತಿಳಿಸಿದ್ದರು. ​

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: