• Home
 • »
 • News
 • »
 • state
 • »
 • Milk-Curd Price: ಹಾಲು, ಮೊಸರು ಬೆಲೆ ಇಳಿಸಲು ಸೂಚನೆ ನೀಡುವೆ: ಸಿಎಂ ಬೊಮ್ಮಾಯಿ

Milk-Curd Price: ಹಾಲು, ಮೊಸರು ಬೆಲೆ ಇಳಿಸಲು ಸೂಚನೆ ನೀಡುವೆ: ಸಿಎಂ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

ಸಾಮಾಜಿಕ ಜಾಲತಾಣ ಸೇರಿ ಹಲವೆಡೆ ಹಾಲು-ಮೊಸರು ದರ ಹೆಚ್ಚಳ ಕುರಿತು ಜನಸಾಮಾನ್ಯರು ವಿರೋಧ ವ್ಯಕ್ತಪಡಿಸಿದ್ದರು.  

 • Share this:

  ಬೆಂಗಳೂರು: ಇಂದಿನಿಂದ ಹಾಲು - ಮೊಸರು ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನಸಾಮಾನ್ಯರ ಆಕ್ರೋಶ ಭುಗಿಲೆದ್ದಿತ್ತು. ಸಾಮಾಜಿಕ ಜಾಲತಾಣ ಸೇರಿ ಹಲವೆಡೆ ಹಾಲು-ಮೊಸರು ದರ (Milk Price Hike) ಹೆಚ್ಚಳ ಕುರಿತು ಜನಸಾಮಾನ್ಯರು ವಿರೋಧ ವ್ಯಕ್ತಪಡಿಸಿದ್ದರು.  ಜನಸಾಮಾನ್ಯರ-ಗ್ರಾಹಕರ ವಿರೋಧವನ್ನು ಪರಿಗಣಿಸಿ ನಂದಿನಿ ಹಾಲು-ಮೊಸರು ಬೆಲೆ ಇಳಿಕೆಗೆ ಕೆಎಂಎಫ್​ಗೆ (KMF Products Price Hike) ಸೂಚನೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ತಿಳಿಸಿದ್ದಾರೆ.ಕೇಂದ್ರದ ನೂತನ GST ನೀತಿ ಜಾರಿ ಹಿನ್ನೆಲೆ ನಂದಿನಿ ಉತ್ಪನ್ನಗಳನ್ನು ಏರಿಕೆ ಮಾಡಲಾಗಿದ್ದು, ಜುಲೈ 18 ರಿಂದ ಹೊಸ ದರಗಳು ಜಾರಿಗೆ ಬಂದಿದ್ದವು. ನಂದಿನಿ ಉತ್ಪನ್ನಗಳು (Nandini Products) ಜನಸಾಮಾನ್ಯರ ಜೇಬನ್ನು ಸುಡಲು ಆರಂಭಿಸಲಿದೆ.


  ಮೊದಲೇ ಬೆಲೆ ಏರಿಕೆ(Price Hike), ಜಿಎಸ್​ಟಿ ಏರಿಕೆಯಿಂದ (GST Hike) ತತ್ತರಿಸಿರುವ ಕರ್ನಾಟಕದ ಜನತೆಗೆ ಹೊಸ ಶಾಕ್​​ ಎದುರಾಗಿತ್ತು. ಹಾಲು ಹೊರತಾಗಿ ಇತರೆ ಉತ್ಪನ್ನಗಳ ದರದಲ್ಲಿ ಹೆಚ್ಚಳ ಆಗಿತ್ತು. ಒಂದು ಲೀಟರ್ ಮೊಸರಿಗೆ 3 ರೂಪಾಯಿ ಹೆಚ್ಚಳ, ಮಜ್ಜಿಗೆ 200ml ಗೆ 1 ರೂಪಾಯಿ ಹೆಚ್ಚಳ ಹಾಗೂ ಲಸ್ಸಿ 200ml ಗೆ 1 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಸದ್ಯಕ್ಕೆ  ವಸ್ತುಗಳ ಮೇಲೆ ಹಳೆಯ ದರವೇ ಮುದ್ರಣವಾಗಿರಲಿದ್ದು ಹೊಸ ದರ ನೀಡುವಂತೆ ಕೋರಿಕೆ ಮಾಡಲಾಗಿತ್ತು.


  ಯಾವುದರ ಬೆಲೆ ಎಷ್ಟು ಏರಿಕೆ ಆಗಿತ್ತು?
  10 ರೂಪಾಯಿಯಿಂದ 200 ml ನಂದಿನಿ ಮೊಸರಿನ ಬೆಲೆ 12 ರೂ.ಗೆ ಏರಿಸಲಾಗಿದೆ. 2 ರೂಪಾಯಿಗಳನ್ನು ಹೆಚ್ಚಿ ಮಾಡಲಾಗಿದೆ.22 ರೂಪಾಯಿಯಿದ್ದ ಅರ್ಧ ಲೀಟರ್​ ಮೊಸಲಿನ ಪ್ಯಾಕ್​ಗೆ​ ಈಗ 24 ರೂ. ಆಗಿದೆ. 1 ಲೀಟರ್​ ಮೊಸರು ಪ್ಯಾಕೇಟ್​ 3 ರೂ. ಏರಿಕೆಯೊಂದಿಗೆ 46 ರೂ. ಆಗಿದೆ. ಇನ್ನು 200 ml ಮಜ್ಜಿಗೆ ಸ್ಯಾಚೆ 7 ರಿಂದ 8 ರೂ. ಆಗಿದೆ. ಟೆಟ್ರಾ ಪ್ಯಾಕ್​ 10 ರಿಂದ 11 ರೂ. ಹಾಗೂ ಪೆಟ್​ ಬಾಟಲ್​ ಬೆಲೆ 12 ರಿಂದ 13 ರೂ. ಆಗಿದೆ. ಇನ್ನು 200 ml ನಂದಿನಿ ಲಸ್ಸಿ ಮೇಲೆ 1 ರೂಪಾಯಿ ಏರಿಸಿ ಹೊಸ ದರಗಳ ಪಟ್ಟಿಯನ್ನು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹೊರಡಿಸಿದೆ.


  ಇದನ್ನೂ ಓದಿ: Nandini Products Price Hike: ಕನ್ನಡಿಗರಿಗೆ ಬಿಗ್ ಶಾಕ್; ನಾಳೆಯಿಂದ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ


  ಶೇಕಡಾ 5ರಷ್ಟು ತೆರಿಗೆ ಅನ್ವಯ
  ಪ್ಯಾಕ್‌ ಮಾಡಿ ಲೇಬಲ್ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ಹಲವಾರು ಉತ್ಪನ್ನಗಳಿಗೆ ತೆರಿಗೆ ವಿನಾಯಿತಿಯನ್ನು ಕೊನೆಗೊಳಿಸುವ ಕುರಿತ ಜಿಎಸ್‌ಟಿ ಕೌನ್ಸಿಲ್‌ನ ನಿರ್ಧಾರದ ಬಗ್ಗೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಗುರುವಾರವಷ್ಟೇ ಅಧಿಸೂಚನೆ ಹೊರಡಿಸಿತ್ತು. ಇಂತಹ ವಸ್ತುಗಳ ಮೇಲೆ ಜುಲೈ 18 ರಿಂದ ಶೇ. 5ರಷ್ಟು ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗಲಿದೆ.


  ಹಾಲಿನ ಉತ್ಪನ್ನಗಳಿಗೆ ಹೊಸ ದರ !
  • ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ 5%ರಷ್ಟು GST


  • ಮೊಸರು 1 ಲೀಟರ್ಗೆ 43 ಇದ್ದದ್ದು ಜುಲೈ 18ರಿಂದ ₹46


  • ಅರ್ಧ ಲೀಟರ್ ಮೊಸರು ₹22 ಇದ್ದದ್ದು ಜುಲೈ 18ರಿಂದ ₹24


  • ಮಜ್ಜಿಗೆ 200ML ಬೆಲೆ ಜುಲೈ 18ರಿಂದ ₹1 ಏರಿಕೆ


  • ಲಸ್ಸಿ ಬೆಲೆಯಲ್ಲೂ ಜುಲೈ 18ರಿಂದ ₹1 ಏರಿಕೆ


  ಇದನ್ನೂ ಓದಿ: GST Rate Hike: ಜನರ ಮೇಲೆ ಕೇಂದ್ರದ GST ಬರೆ: ಸೋಮವಾರದಿಂದ ಈ ಎಲ್ಲಾ ವಸ್ತುಗಳ ಬೆಲೆ ಏರಿಕೆ!


  10 ರೂಪಾಯಿಯಿಂದ 200 ml ನಂದಿನಿ ಮೊಸರಿನ ಬೆಲೆ 12 ರೂ.ಗೆ ಏರಿಸಲಾಗಿದೆ. 2 ರೂಪಾಯಿಗಳನ್ನು ಹೆಚ್ಚಿ ಮಾಡಲಾಗಿದೆ.22 ರೂಪಾಯಿಯಿದ್ದ ಅರ್ಧ ಲೀಟರ್​ ಮೊಸಲಿನ ಪ್ಯಾಕೇಸ್​ ಈಗ 24 ರೂ. ಆಗಿದೆ. 1 ಲೀಟರ್​ ಮೊಸರು ಪ್ಯಾಕೇಟ್​ 3 ರೂ. ಏರಿಕೆಯೊಂದಿಗೆ 46 ರೂ. ಆಗಿದೆ. ಇನ್ನು 200 ml ಮಜ್ಜಿಗೆ ಸ್ಯಾಚೆ 7 ರಿಂದ 8 ರೂ. ಆಗಿದೆ. ಟೆಟ್ರಾ ಪ್ಯಾಕ್​ 10 ರಿಂದ 11 ರೂ. ಹಾಗೂ ಪೆಟ್​ ಬಾಟಲ್​ ಬೆಲೆ 12 ರಿಂದ 13 ರೂ. ಆಗಿದೆ. ಇನ್ನು 200 ml ನಂದಿನಿ ಲಸ್ಸಿ ಮೇಲೆ 1 ರೂಪಾಯಿ ಏರಿಸಿ ಹೊಸ ದರಗಳ ಪಟ್ಟಿಯನ್ನು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹೊರಡಿಸಿದೆ.
  ಒಟ್ಟಿನಲ್ಲಿ ಬರಗಾಲದಲ್ಲೇ ಅಧಿಕಮಾಸ ಅನ್ನೋ ಗಾಧೆ ಈಗ ಅಕ್ಷರಶಃ ಸತ್ಯವಾಗ್ತಿದೆ. ಈಗಾಗಲೇ ಹಣದುಬ್ಬರದಿಂದಾಗಿ ಬೆಲೆ ಏರಿಕೆ ಆಕಾಶಕ್ಕೆ ಮುಟ್ಟಿದೆ. ಇಂಥಾ ಸಂದರ್ಭದಲ್ಲಿ ಮತ್ತೆ ಗಾಯದ ಮೇಲೆ ಕೇಂದ್ರ ಬರೆ ಎಳೆಯುತ್ತಿರೋದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿತ್ತು.

  Published by:guruganesh bhat
  First published: