• Home
 • »
 • News
 • »
 • state
 • »
 • CM Basavaraj Bommai: ಎಸ್ ಆರ್ ಬೊಮ್ಮಾಯಿ ಜನ್ಮದಿನ, ದೇವರ ಅರಸು ಪುಣ್ಯಸ್ಮರಣೆ; ಸಿಎಂ ಬೊಮ್ಮಾಯಿ ನಮನ

CM Basavaraj Bommai: ಎಸ್ ಆರ್ ಬೊಮ್ಮಾಯಿ ಜನ್ಮದಿನ, ದೇವರ ಅರಸು ಪುಣ್ಯಸ್ಮರಣೆ; ಸಿಎಂ ಬೊಮ್ಮಾಯಿ ನಮನ

ಸಿಎಂ ಬಸವರಾಜ್ ಬೊಮ್ಮಾಯಿ ನಮನ

ಸಿಎಂ ಬಸವರಾಜ್ ಬೊಮ್ಮಾಯಿ ನಮನ

ಕೇವಲ ಜನಪರ ಕಾಳಜಿಯಿಂದಲೇ ರಾಜಕೀಯ ಪ್ರವೇಶಿಸಿದ ಅಪರೂಪದ ಮುತ್ಸದ್ಧಿ ಎಸ್ ಆರ್  ಬೊಮ್ಮಾಯಿ, ಕೇಂದ್ರ ಸಚಿವರಾಗಿ, ಮುಖ್ಯಮಂತ್ರಿಗಳಾಗಿ ಅವರು ನಾಡಿಗೆ ನೀಡಿದ ಕೊಡುಗೆ ಅಪಾರ. ಮೌಲ್ಯಾಧಾರಿತ ರಾಜಕಾರಣಕ್ಕೆ ಒಂದು ಮಾದರಿ ಎಂಬಂತೆ ಬಾಳಿ ಬದುಕಿದರು ಎಂದು ಹೇಳಿದ್ದಾರೆ.

 • Share this:

  ಇಂದು ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ (Former CM SR Bommai) ಯವರ 98ನೇ ಜನ್ಮ ದಿನ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಆರ್ ಟಿ ನಗರದ ನಿವಾಸದಲ್ಲಿ ತಂದೆಯವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ನಮನ ಸಲ್ಲಿಸಿದರು. ನನ್ನ ಪ್ರೇರಣಾ ಶಕ್ತಿ ಹಾಗೂ ನನಗೆ ಆದರ್ಶ ಪ್ರಾಯರಾಗಿದ್ದ ನನ್ನ ತಂದೆಯವರಾದ ಮಾಜಿ ಮುಖ್ಯಮಂತ್ರಿ ದಿ. ಎಸ್. ಆರ್. ಬೊಮ್ಮಾಯಿ ಅವರ 98ನೇ ಜನ್ಮ ದಿನಾಚರಣೆ (Birth Anniversary) ಅಂಗವಾಗಿ ಇಂದು ಬೆಂಗಳೂರಿನ ಆರ್. ಟಿ. ನಗರದ ನಿವಾಸದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಯಿತು ಎಂದು ಬರೆದು ಟ್ವಿಟರ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೇವಲ ಜನಪರ ಕಾಳಜಿಯಿಂದಲೇ ರಾಜಕೀಯ ಪ್ರವೇಶಿಸಿದ ಅಪರೂಪದ ಮುತ್ಸದ್ಧಿ ಎಸ್ ಆರ್  ಬೊಮ್ಮಾಯಿ, ಕೇಂದ್ರ ಸಚಿವರಾಗಿ, ಮುಖ್ಯಮಂತ್ರಿಗಳಾಗಿ ಅವರು ನಾಡಿಗೆ ನೀಡಿದ ಕೊಡುಗೆ ಅಪಾರ. ಮೌಲ್ಯಾಧಾರಿತ ರಾಜಕಾರಣಕ್ಕೆ ಒಂದು ಮಾದರಿ ಎಂಬಂತೆ ಬಾಳಿ ಬದುಕಿದರು ಎಂದು ಹೇಳಿದ್ದಾರೆ.


  ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 40ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನ ಸೌಧದ ಆವರಣದಲ್ಲಿರುವ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗೌರವ ನಮನಗಳನ್ನು ಸಲ್ಲಿಸಿದರು. ನಾಡು ಕಂಡ ದಿಟ್ಟ ನೇತಾರ, ಬಡವರ ಪರ, ಹಿಂದುಳಿದವರ ಪರ ಒಲವನ್ನು ಹೊಂದಿದ ನಾಯಕ ಶ್ರೀ ದೇವರಾಜ ಅರಸು, ಸ್ವತಂತ್ರ ಭಾರತದ ನಂತರ ನಾಡಿನಲ್ಲಿ ಆಮೂಲಾಗ್ರ ಬದಲಾವಣೆಯನ್ನು ಜಾರಿಗೆ ತಂದ ಶ್ರೇಯ ಅರಸುರವರದ್ದಾಗಿದೆ. ಅವರು ಜಾರಿಗೆ ತಂದ ಅನೇಕ ಕಾರ್ಯಕ್ರಮಗಳು ಬಡವರ ಪಾಲಿಗೆ ಭಾಗ್ಯದ ಬೆಳಕಾಗಿವೆ ಎಂದು ದೇವರಾಜು ಅರಸು ಅವರನ್ನು ಗುಣಗಾನ ಮಾಡಿದರು.


  ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮದ ವೇಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಮಾಜಿ ಶಾಸಕ ಲೇಹರ್ ಸಿಂಗ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ದೇವರಾಜ ಅರಸು ಕುಟುಂಬದ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.


  ಇದನ್ನೂ ಓದಿ:  Udupi ಕಾರ್ಕಳದ ರಸ್ತೆಯೊಂದರ ಫಲಕದಲ್ಲಿ ನಾಥೂರಾಮ್ ಗೋಡ್ಸೆ ಹೆಸರು ಪ್ರತ್ಯಕ್ಷ; ಪೊಲೀಸರಿಂದ ತೆರವು


  ಸಿದ್ದರಾಮಯ್ಯ ನಮನ


  ಅಧಿಕಾರ, ಸಂಪತ್ತು ಮತ್ತು ಅವಕಾಶದ ಬಾಗಿಲನ್ನು ಸರ್ವರಿಗೂ ತೆರೆದು‌‌, ಸಮಾನ‌ ಹಂಚಿಕೆಗಾಗಿ ಯೋಜನೆಗಳನ್ನು ರೂಪಿಸಿದ್ದ ಮಾದರಿ‌ ಆಡಳಿತಗಾರ, ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸು ಅವರನ್ನು ಅವರ ಪುಣ್ಯ‌ಸ್ಮರಣೆಯ ದಿನದಂದು ಗೌರವದಿಂದ ಸ್ಮರಿಸುವೆ.


  ಹೆಚ್ ಡಿ ಕುಮಾರಸ್ವಾಮಿ ನಮನ


  ಮಾಜಿ ಮುಖ್ಯಮಂತ್ರಿಗಳು; ಶೋಷಿತ, ದಲಿತ, ದುರ್ಬಲರ ದನಿಯಾಗಿದ್ದವರು; ಋಣಮುಕ್ತ ಕಾಯ್ದೆ- ಭೂ ಸುಧಾರಣಾ ಕಾಯ್ದೆ ಮೂಲಕ ʼಸಮಾನತೆಯ ಕರ್ನಾಟಕʼ ನಿರ್ಮಾಣಕ್ಕೆ ನಾಂದಿ ಹಾಡಿದ ಶ್ರೀ ದೇವರಾಜ್‌ ಅರಸ್‌ ಅವರ ಪುಣ್ಯಸ್ಮರಣೆ ದಿನದಂದು ಆ ಧೀಮಂತ ನಾಯಕನಿಗೆ ನನ್ನ ಶ್ರದ್ಧಾಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ.


  ಸರಳ, ಸಜ್ಜನಿಕೆಯ ಸಾಕಾರಮೂರ್ತಿಗಳಾಗಿದ್ದ ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಆರ್.ಬೊಮ್ಮಾಯಿ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ಪ್ರಣಾಮಗಳು. ದಕ್ಷ ಆಡಳಿತಗಾರರಾಗಿದ್ದ ಬೊಮ್ಮಾಯಿ ಅವರು, ಕರ್ನಾಟಕ ಏಕೀಕರಣ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು. ಅವರು ನಮಗೆ ಸದಾ ಸ್ಮರಣೀಯರು ಮತ್ತು ಪ್ರೇರಕರು.


  ಬಿ ಎಸ್ ಯಡಿಯೂರಪ್ಪ ಟ್ವೀಟ್ 


  ಕರ್ನಾಟಕ ಏಕೀಕರಣ ಚಳವಳಿಯ ಹೋರಾಟಗಾರ, ಅತ್ಯುತ್ತಮ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್.ಬೊಮ್ಮಾಯಿ ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ.


  ಇದನ್ನೂ ಓದಿ:  Nalin Kumar Kateel: ಚಡ್ಡಿಗೆ ಬೆಂಕಿ ಹಾಕಿ ಅಂತ ಹೇಳ್ತಿರೋ ಸಿದ್ದರಾಮಯ್ಯನೇ ಆ ಬೆಂಕಿಯಲ್ಲಿ ಸುಟ್ಟು ಹೋಗ್ತಾರೆ: ಕಟೀಲ್


  ನಾಡು ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಹರಿಕಾರ ಶ್ರೀ ಡಿ.ದೇವರಾಜ ಅರಸ್ ಅವರ ಪುಣ್ಯತಿಥಿಯಂದು ಅವರಿಗೆ ಅನಂತ ಪ್ರಣಾಮಗಳು.

  Published by:Mahmadrafik K
  First published: