• Home
  • »
  • News
  • »
  • state
  • »
  • Rahul Gandhi Letter: ಕರ್ನಾಟಕ ಕೋಮು ಸಂಘರ್ಷದ ಕಾರ್ಖಾನೆ; ರಾಗಾ ಹೇಳಿಕೆಗೆ ಸಿಎಂ ತಿರುಗೇಟು

Rahul Gandhi Letter: ಕರ್ನಾಟಕ ಕೋಮು ಸಂಘರ್ಷದ ಕಾರ್ಖಾನೆ; ರಾಗಾ ಹೇಳಿಕೆಗೆ ಸಿಎಂ ತಿರುಗೇಟು

ಬಸವರಾಜ ಬೊಮ್ಮಾಯಿ, ರಾಹುಲ್​ ಗಾಂಧಿ

ಬಸವರಾಜ ಬೊಮ್ಮಾಯಿ, ರಾಹುಲ್​ ಗಾಂಧಿ

ಕಾಂಗ್ರೆಸ್ ಅತಿಯಾದ ತುಷ್ಟೀಕರಣದಿಂದಲೇ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅಡಳಿತ ಬಂದ ಮೇಲೆ ದೇಶದಲ್ಲಿ ಆಂತರಿಕ ಹಾಗೂ ಬಾಹ್ಯ ಭದ್ರತೆ ಸುರಕ್ಷಿತವಾಗಿದೆ.

  • Share this:

ಹುಬ್ಬಳ್ಳಿ: ಕರ್ನಾಟಕ ಕೋಮು ಸಂಘರ್ಷದ (Communal Clash) ಕಾರ್ಖಾನೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಹೇಳಿಕೆ‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮತ್ತೊಬ್ಬರನ್ನು ತುಷ್ಟೀಕರಣ ಮಾಡಲು ಆರ್​ಎಸ್​ಎಸ್​ (RSS) ಬಗ್ಗೆ ಮಾತನಾಡ್ತಾರೆ. ಆರ್​ಎಸ್​ಎಸ್ ಒಂದು ರಾಷ್ಟ್ರಭಕ್ತ ಸಂಘಟನೆ. ಕಾಂಗ್ರೆಸ್ (Congress) ಅಡಳಿತ ಇರುವ ರಾಜಸ್ಥಾನದಲ್ಲಿ (Rajasthan) ಯಾವ ಪರಿಸ್ಥಿತಿ ಇದೆ ಅದರ ಬಗ್ಗೆ ಮಾತನಾಡಲಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ, ರಾಹುಲ್ ಗಾಂಧಿಗೆ ತಿರುಗೇಟು ನೀಡಿದರು.


ಕಾಂಗ್ರೆಸ್ ಅತಿಯಾದ ತುಷ್ಟೀಕರಣದಿಂದಲೇ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅಡಳಿತ ಬಂದ ಮೇಲೆ ದೇಶದಲ್ಲಿ ಆಂತರಿಕ ಹಾಗೂ ಬಾಹ್ಯ ಭದ್ರತೆ ಸುರಕ್ಷಿತವಾಗಿದೆ. ರಾಹುಲ್ ಗಾಂಧಿ ತುಷ್ಟೀಕರಣ ಹೇಳಿಕೆ ನೀಡೋದು ಬಿಡಲಿ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಯಾವ ಸ್ಥಿತಿ ಇದೆ ಅನ್ನೋದನ್ನ ಅರಿಯಲಿ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.


ಮಾಮನಿ ನಿಧನಕ್ಕ ಸಿಎಂ ಕಂಬನಿ


ಆನಂದ್ ಮಾಮನಿ ನಿಧನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅತ್ಯಂತ ಕ್ರಿಯಾಶೀಲ ಶಾಸಕರನ್ನು ಕಳೆದುಕೊಂಡಿದ್ದೇವೆ. ಸವದತ್ತಿ ಕ್ಷೇತ್ರದ ನೀರಾವರಿ, ಅಭಿವೃದ್ಧಿ ಸಾಕಷ್ಟು ಶ್ರಮಿಸಿದ್ದರು. ಅವರು ತಂದೆಯವರು ಸಹ ಉಪ ಸಭಾಪತಿ ಇದ್ದಾಗಲೇ ನಿಧನರಾಗಿದ್ದರು. ಅವರು ಸಹೋದರ ಸಹ ಅಕಾಲಿಕ‌ ನಿಧನರಾಗಿದ್ದರು.


cm basavaraj bommai reacts rahul gandhi letter saklb mrq
ಆನಂದ್ ಮಾಮನಿ


ಮಾಮನಿ ಕುಟುಂಬದಲ್ಲಿ ಒಂದಾದ ಮೇಲೆ‌ ಒಂದು ಸಾವು ಸಂಭವಿಸುತ್ತಿವೆ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವೆ. ಅವರ ಅಂತಿಮ ದರ್ಶನಕ್ಕೆ ಸವದತ್ತಿಗೆ ತೆರಳುತ್ತಿದ್ದೇನೆ. ಸಕಲ ಸರ್ಕಾರಿ ಗೌರವದೊಂದಿಗೆ  ಅಂತ್ಯಕ್ರಿಯೆ ನಡೆಯಲಿದೆ ಎಂದು ಬೊಮ್ಮಾಯಿ ತಿಳಿಸಿದರು.


ಇದನ್ನೂ ಓದಿ:  Basavalinga Swamiji Suicide: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ; ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ


ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದ ಬೆಲ್ಲದ್


ನನಗೆ ಸಚಿವ ಸ್ಥಾನವನ್ನ ನೀಡುವುದು ಹೈಕಮಾಂಡ್​ಗೆ ಬಿಟ್ಟಿದ್ದು. ನಾನು ಶಾಸಕನಾಗಿ ಏನ್ ಕೆಲಸ ಮಾಡಬೇಕೋ ಅದನ್ನ ಮಾಡುತ್ತಿದ್ದೇನೆ ಎಂದು ಹುಬ್ಬಳ್ಳಿ - ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ (MLA Arvind Bellad) ಅಭಿಪ್ರಾಯಪಟ್ಟಿದ್ದಾರೆ.


ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನದ ಕುರಿತು ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬಾರದು. ರಾಜಕೀಯ ಜೀವನ ಇನ್ನೂ ದೊಡ್ಡದಿದೆ, ನನಗೆ ಈಗ 52 ವರ್ಷ, ಅದಕ್ಕೆ ಇನ್ನೂ 23 ವರ್ಷ ಇದೆ. ನನಗೆ ನೀಡಿದ ಜವಾಬ್ದಾರಿಯನ್ನ ನಾನು ಮಾಡಬೇಕು. ಕೆಲಸವನ್ನ ಹೈಕಮಾಂಡ್​ ನಾಯಕರು ಗುರುತಿಸುತ್ತಾರೆ. ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಲಾಬಿ ಮಾಡಿಲ್ಲ ಎಂದರು.


cm basavaraj bommai reacts rahul gandhi letter saklb mrq
ಅರವಿಂದ್ ಬೆಲ್ಲದ್


ಮುಸ್ಲಿಮರ ಮೀಸಲಾತಿ ಕಡಿತಗೊಳಿಸಿ


ಮುಸ್ಲಿಮರಿಗೆ ಮೀಸಲಾತಿ ಕೊಡಬಾರದೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮುಸ್ಲಿಮರ ಓಲೈಕೆಗೆ ಕಾಂಗ್ರೆಸ್ ಹಿಂದುಳಿದ ವರ್ಗ ಕಡೆಗಣಿಸಿದೆ. ಅದರಲ್ಲಿಯೂ ಪಂಚಮಸಾಲಿ ಸಮುದಾಯಕ್ಕೆ ಸೂಕ್ತ ಮೀಸಲಾತಿ ಸಿಕ್ಕಿಲ್ಲ. ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಕೊಡುವಂತೆ ಮನವಿ ಮಾಡಿದ್ದೇನೆ. ಜೊತೆಗೆ ಮುಸ್ಲಿಮರ ಮೀಸಲಾತಿ ಕಡಿತ ಮಾಡುವಂತೆಯೂ ಮನವಿ ಮಾಡಿದ್ದೇನೆ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಬೆಲ್ಲದ್ ತಿಳಿಸಿದ್ದಾರೆ.


ಇದನ್ನೂ ಓದಿ:  Rahul Gandhi Letter: ಕರುನಾಡಿನಲ್ಲಿ ಭಾರತ್ ಜೋಡೋ ಯಾತ್ರೆ ಅಂತ್ಯ; ಕನ್ನಡಿಗರಿಗೆ ರಾಹುಲ್ ಗಾಂಧಿ ಪತ್ರ


ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು!


ಚಿಕ್ಕಮಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರೋ ಧಾರಾಕಾರ ಮಳೆಗೆ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ. ಅಜ್ಜಂಪುರ ತಾಲೂಕಿನ ಸುತ್ತಮತ್ತ ಹತ್ತಾರು ಗ್ರಾಮಗಳಲ್ಲಿ ಈರುಳ್ಳಿ ಬೆಳೆದ ರೈತರು ಇದೀಗ ಅಕ್ಷರಶಃ ಕಣ್ಣೀರು ಹಾಕ್ತಿದ್ದಾರೆ. ಮಳೆಯಿಂದಾಗಿ ಈರುಳ್ಳಿ ಸಂಪೂರ್ಣ ಕೊಳೆತು ಹೋಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದ ರೈತರ ಬದುಕು ಮೂರಾಬಟ್ಟೆಯಾಗಿದೆ. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Published by:Mahmadrafik K
First published: