• Home
  • »
  • News
  • »
  • state
  • »
  • Voters Data Steal: ಮತದಾರರ ಮಾಹಿತಿ ಕನ್ನ; ಕಾಂಗ್ರೆಸ್ ಆರೋಪಕ್ಕೆ 5 ಅಂಶಗಳಲ್ಲಿ ಸಿಎಂ ತಿರುಗೇಟು

Voters Data Steal: ಮತದಾರರ ಮಾಹಿತಿ ಕನ್ನ; ಕಾಂಗ್ರೆಸ್ ಆರೋಪಕ್ಕೆ 5 ಅಂಶಗಳಲ್ಲಿ ಸಿಎಂ ತಿರುಗೇಟು

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಸಿಎಂ ಬೊಮ್ಮಾಯಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಚಿಲುಮೆ ಸಂಸ್ಥೆ (Chilume Organization) ಡೇಟಾ ಕನ್ನ ಹಗರಣ (Voters Data Steal) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavraj Bommai) ಪ್ರತಿಕ್ರಿಯಿಸಿದ್ದಾರೆ. ಐದು ಅಂಶಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಮಾಡಿರುವ ಆರೋಪಗಳಿಗೆ (Congress Allegation) ಸಿಎಂ ಸ್ಪಷ್ಟೀಕರಣ ನೀಡಿದ್ದಾರೆ. ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ಶನಿವಾರ ಕಾಂಗ್ರೆಸ್ ನಿಯೋಗ ಚುನಾವಣಾ ಆಯೋಗಕ್ಕೆ (Election commission) ದೂರು ಸಲ್ಲಿಸಿದೆ. ಈ ನಡುವೆ ಬಿಜೆಪಿ ಮಾಜಿ ಶಾಸಕ ನಂದೀಶ್ ರೆಡ್ಡಿ (Former MLA Nandish Reddy), ಚಿಲುಮೆ ಟ್ರಸ್ಟ್​ ಮತ್ತು ಚಿಲುಮೆ ಗ್ರೂಪ್​ಗೆ ದೇಣಿಗೆ ರೂಪದಲ್ಲಿ 17 ಲಕ್ಷ 50 ಸಾವಿರ ರೂಪಾಯಿ ಹಣ ನೀಡಿರುವುದು ಬೆಳಕಿಗೆ ಬಂದಿದೆ. ಇತ್ತ ಸಚಿವ ಅಶ್ವತ್ಥ ನಾರಾಯಣ್ (Minister Ashwath Narayan)​, ಸಂಸದ ಪಿ.ಸಿ.ಮೋಹನ್ (MP PC Mohan) ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.


ಮತದಾರರ ಮಾಹಿತಿ ಕನ್ನ ರಾಷ್ಟ್ರ ಮಟ್ಟದಲ್ಲಿಯೂ ಸುದ್ದಿ ಮಾಡುತ್ತಿದೆ. ಮತ್ತೊಂದೆಡೆ ಇದೇ ವಿಷಯವನ್ನು ಇರಿಸಿಕೊಂಡು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಸಿಎಂ ಬೊಮ್ಮಾಯಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.


ಸಿಎಂ ಬೊಮ್ಮಾಯಿ ಹೇಳಿದ ಐದು ಅಂಶಗಳು


1.ಚಿಲುಮೆ ಸಂಸ್ಥೆಗೆ 2017 ರಲ್ಲಿ ಕಾನೂನು ಬಾಹಿರ ಅನುಮತಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ.‌ ತಮ್ಮ ಅವಧಿಯಲ್ಲಿ ಮಾಡಿದ ತಪ್ಪನ್ನು ನಮ್ಮ ಮೇಲೆ ಹೇರಲು ಕಾಂಗ್ರೆಸ್ ಹೊರಟಿದೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತಿದೆ.


2.ಸರ್ಕಾರಿ ಅಧಿಕಾರಿಗಳು ಮಾಡಬೇಕಾದ ಹೊಣೆ‌ ಚಿಲುಮೆಗೆ ಕಾನೂನು ಬಾಹಿರ ಕೊಟ್ಟಿದ್ದು ಸಿದ್ದರಾಮಯ್ಯ. ಬಿಎಲ್ಒಗಳ ನೇಮಕ ಅಧಿಕಾರ ಕೊಟ್ಟಿದ್ದು ಸಿದ್ದರಾಮಯ್ಯ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕೆಲಸವನ್ನೂ ಚಿಲುಮೆಗೆ ಕಾನೂನು ಬಾಹಿರವಾಗಿ ನೀಡಿದ್ದು ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ.


3.ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾರರನ್ನು ಕೈಬಿಡಲಾಗಿದೆ ಎಂಬ ಆರೋಪ ಶುದ್ಧ ಸುಳ್ಳು.


ಇದನ್ನೂ ಓದಿ:  Congress Leaders: ಧಮ್​ ಇದ್ರೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಿ; ಸಿಎಂ ಬೊಮ್ಮಾಯಿಗೆ ಡಿಕೆಶಿ ಸವಾಲ್​!


4.ಬಿಜೆಪಿಯು ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಹೊಣೆ ಕೊಟ್ಟಿದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಸತ್ಯ ಇಲ್ಲ. 2022-23 ರಲ್ಲಿ ಚಿಲುಮೆಗೆ ಕೇವಲ ಮತದಾರರಿಗೆ ಜಾಗೃತಿ‌ ಮೂಡಿಸುವ ಕಾರ್ಯಕ್ರಮದ ಕೆಲಸ ಮಾತ್ರ ನಾವು ನೀಡಿರುತ್ತೇವೆ. ಆದರೆ ಮತದಾರರ ಪರಿಷ್ಕರಣೆ ಹೊಣೆಯನ್ನು ಅಕ್ರಮವಾಗಿ ಕೊಟ್ಟಿದ್ದು ನಾವಲ್ಲ, ಕಾಂಗ್ರೆಸ್ ಸರ್ಕಾರ. ಚಿಲುಮೆ ವಿರುದ್ಧ ಆರೋಪ ಬಂದ ಹಿನ್ನೆಲೆಯಲ್ಲಿ ಕಳೆದ 17 ರಂದು ಪೊಲೀಸ್ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ


5.ಬೆಂಗಳೂರಿನಲ್ಲಿ 27 ಲಕ್ಷ ಮತದಾರರ ಹೆಸರು ರದ್ದು ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪ ಹಸಿ ಸುಳ್ಳು. ಭಾರತ ಚುನಾವಣಾ ಆಯೋಗ ನೀಡಿದ್ದ ಪಟ್ಟಿ ಫೋಟೋ ಸಿಮಿಲರ್ ಎಂಟ್ರಿ ಪಟ್ಟಿಯಲ್ಲಿದ್ದ 6.73 ಲಕ್ಷ ಲೋಪ ದೋಷಗಳಿದ್ದ ಮತದಾರರ ಹೆಸರು ಮಾತ್ರ ರದ್ದು ಪಡಿಸಲಾಗಿದೆ.


ಇದನ್ನೂ ಓದಿ:  Voters Data Steal: ದುಡ್ಡು ಕೊಟ್ರೆ ಮತದಾರನ ಮಾಹಿತಿ, ರವಿಕುಮಾರ್ ಸೋದರನ ಬಂಧನವೇ ರೋಚಕ


ಪ್ರತಿ ದೂರು ದಾಖಲಿಸಿದ ಬಿಜೆಪಿ


ಕಾಂಗ್ರೆಸ್ ದೂರಿನ ಬೆನ್ನಲ್ಲೇ ಬಿಜೆಪಿ ನಾಯಕರು ಕೂಡಾ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ದೂರು ಕೊಟ್ಟ ಬಳಿಕ ಮಾತಾಡಿದ ಎಂಎಲ್​ಸಿ ರವಿಕುಮಾರ್​​​, ಸಿದ್ದರಾಮಯ್ಯನವ್ರೇ ನಿಮ್ಮ ಮುಖಕ್ಕೆ ದಾಖಲಾತಿಯನ್ನ ಹಿಡಿತಾ ಇದ್ದೀನಿ. ಯಾಕೆ ಬೊಮ್ಮಾಯಿ  ರಾಜೀನಾಮೆ ಕೊಡಬೇಕು. ವಿರೋಧ ಪಕ್ಷದ ನಾಯಕರಾದ ನೀವು ರಾಜೀನಾಮೆ ಕೋಡಬೇಕು. ನಿಮಗೆ ನಾಚಿಕೆ ಮಾನ‌ ಮಾರ್ಯಾದೆ ಇದ್ರೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.


ಅಲ್ಲದೇ 6 ಲಕ್ಷದ 73 ಸಾವಿರಕ್ಕೂ ಹೆಚ್ಚು ಮತದಾರರ ಹೆಸರು ಎರಡು ಭಾರಿ ಪುನರಾವರ್ತಿತ ಆಗಿರೋದಕ್ಕೆ ಡೀಲಿಟ್ ಮಾಡಲಾಗಿದೆ ಎಂದರು.

Published by:Mahmadrafik K
First published: