Siddaramaiah ಅಧಿಕಾರವಧಿಯಲ್ಲಿ 32 ಕೊಲೆ, ನಾವು ಎಲ್ಲವನ್ನು ನಿಭಾಯಿಸಿದ್ದೇವೆ: CM Bommai

ಕಾನೂನು ಸುವ್ಯವಸ್ಥೆ ವಿಫಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಅವರು ಅಧಿಕಾರದಲ್ಲಿದ್ದಾಗ 32  ಸರಣಿ ಕೊಲೆಗಳಾಗಿವೆ. ಆಗ ಅವರು ಏನು ಮಾಡ್ತಿದ್ರು ಎಂದು ಪ್ರಶ್ನೆ ಮಾಡಿದರು.

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

  • Share this:
ದಕ್ಷಿಣ ಕನ್ನಡ ಜಿಲ್ಲೆಯೊಳಗೆ (Dakshina Kannada) 10 ದಿನಗಳಲ್ಲಿ ಮೂರು ಕೊಲೆಗಳು (Murder) ನಡೆದಿದ್ದು, ಕರಾವಳಿ ಭಾಗದಲ್ಲು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಆರ್.ಟಿ.ನಗರದ (RT Nagara) ನಿವಾಸ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಮಂಗಳೂರಿಗೆ ತೆರಳುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಯಾರು ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವರ (Home Minister) ರಾಜೀನಾಮೆ ಕೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯರ (Former CM Siddaramaih) ಹೇಳಿಕೆಗೆ ತಿರುಗೇಟು ನೀಡಿದರು. ಕೇರಳ ಭಾಗದ 55 ರಸ್ತೆಗಳಲ್ಲಿ ನಾಕಾ ಬಂದಿ ಹಾಕಿ ಖಡಕ್ ತಪಾಸಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. 10 ದಿನಗಳಲ್ಲಿ 3 ನೇ ಹತ್ಯೆ ನಡೆದಿದೆ. ಅಲ್ಲಿನ ಎಡಿಜಿಪಿಗೆ ಲಾ ಆಂಡ್ ಆರ್ಡರ್ ಮೇಂಟೆನ್ ಮಾಡೋಕೆ ಸೂಚನೆ ನೀಡಿದ್ದೀನಿ. ಪ್ರತಿಯೊಂದು ಕೊಲೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದರು.

ಬೆಂಗಳೂರಿನಲ್ಲಿ ಡಿಜಿ ಐಜಿಪಿ ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಕರವಾಳಿ ಭಾಗದಲ್ಲಿ ವಿಶೇಷ ಕಠಿಣ ಕ್ರಮ ಜಾರಿ ಮತ್ತು  ನಿರ್ಬಂಧ ಹೇರುವ ಬಗ್ಗೆ ಚರ್ಚೆ ನಡೆಸುತ್ತೇನೆ. ಕರ್ನಾಟಕದಿಂದ ಕೇರಳ ಬಾರ್ಡರ್‌ಗೆ ಓಡಾಡುವ 58 ರಸ್ತೆಗಳಿದ್ದು, ಎಲ್ಲಾ ಕಡೆಯೂ ತಪಾಸಣೆ ನಡೆಸಲಾಗ್ತಿದೆ.

CM Basavaraj Bommai reacts on Dakshina Kannada Murders mrq
ಪ್ರವೀಣ್ ನೆಟ್ಟಾರು ಮನೆಗೆ ಸಿಎಂ ಭೇಟಿ


ನಾವು ಸರಿಯಾಗಿ ನಿಭಾಯಿಸಿದ್ದೇವೆ

ಕಾನೂನು ಸುವ್ಯವಸ್ಥೆ ವಿಫಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಅವರು ಅಧಿಕಾರದಲ್ಲಿದ್ದಾಗ 32  ಸರಣಿ ಕೊಲೆಗಳಾಗಿವೆ. ಆಗ ಅವರು ಏನು ಮಾಡ್ತಿದ್ರು? ಎಲ್ಲವನ್ನೂ ರಾಜಕೀಯ ಚಷ್ಮಾದಲ್ಲಿ ನೋಡದಲ್ಲ. ನಾವು  ಸರಿಯಾಗಿ ನಿಭಾಯಿಸಿದ್ದೇವೆ. ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ SDPI ಮತ್ತು PFI ಮೇಲಿನ ಕೇಸ್ ತೆಗೆದಿದ್ದೆ ಇದಕ್ಕೆಲ್ಲ‌ ಕಾರಣ ಎಂದು ಆರೋಪ ಮಾಡಿದರು.

ಇದನ್ನೂ ಓದಿ:  Bengaluru Traffic: ಟ್ರಾಫಿಕ್ ಸಮಸ್ಯೆಗೆ ಗುಡ್‌ ಬೈ ಹೇಳಿ! ಗೂಗಲ್‌ ಜೊತೆ ಕೈ ಜೋಡಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರು

ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ

ಆರ್ಗನೈಸಡ್ ಕ್ರೈಂ ಮಟ್ಟ ಹಾಕುವ ಕೆಲಸ ಮಾಡ್ತೀವಿ. ಸಾಲು ಸಾಲು ಕೊಲೆಗಳು ನಡೆದಾಗ ಸಹಜವಾಗಿಯೇ ಸಾರ್ವಜನಿಕರಲ್ಲಿ ಆತಂಕ ಇರುತ್ತದೆ. ಪೊಲೀಸರು ಕಾನೂನು ಸುವ್ಯವಸ್ಥೆ ಮಾಡುತ್ತಿದ್ದಾರೆ. ಕೆಲವರು ಕೇರಳದಿಂದ ಬರುತ್ತಿದ್ದು, ಹಲವು ಅಯಾಮಗಳಿವೆ ಅವೆಲ್ಲವನ್ನೂ ನಿಗ್ರಹಿಸಲು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು. ಇದರ ಹಿಂದೆ ರಾಜಕೀಯ ಪ್ರೇರಣೆಯೂ ಇದೆ. ಕೆಲವು ದಿವಸಗಳಲ್ಲಿ ಕಾದು ನೋಡಿ ಎಲ್ಲ ಕ್ರಮ ನಿಮಗೆ ಗೊತ್ತಾಗುತ್ತದೆ ಎಂದು ಹೇಳಿದರು.

ಫಾಜಿಲ್ ಕೊಲೆಗೆ ಕಾರಣಗಳೇನು ಎಂಬುದರ ಪ್ರಾಥಮಿಕ ಮಾಹಿತಿ ನನಗೆ ಗೊತ್ತಿಲ್ಲ. ಪೊಲೀಸರಿಗೆ ಗೊತ್ತಿರಬಹುದು, ತನಿಖೆ ನಡೆಸುತ್ತಿದ್ದಾರೆ. ರಿವೇಂಜ್ ಕೊಲೆನಾ ಎಂಬ ಪ್ರಶ್ನೆಗೆ ಮಾಹಿತಿ ಇಲ್ಲ ಎಂದರು.

ಅಲೋಕ್ ಕುಮಾರ್ ಸುದ್ದಿಗೋಷ್ಠಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆಗಳಿಗೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಮಂಗಳೂರಿನ ಸುರತ್ಕಲ್ ನಲ್ಲಿ ಫಾಸಿಲ್ ಕೊಲೆಗೆ ಸಾಯಂಕಾಲ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಒಂದು ಕಾರ್ ಮತ್ತು ಕೆಲ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ.

CM Basavaraj Bommai reacts on Dakshina Kannada Murders mrq
ಪ್ರವೀಣ್ ನೆಟ್ಟಾರು ಮನೆಗೆ ಸಿಎಂ ಭೇಟಿ


ಕಾನೂನು ಸುವ್ಯವಸ್ಥೆ  ಕಾಪಾಡುತ್ತಿದ್ದೇವೆ. ಇವತ್ತು ಫಾಸಿಲ್ ಅಂತ್ಯಕ್ರಿಯೆ ನಡೆಸುವ ಸ್ಥಳದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಕೊಲೆ ತನಿಖೆ ನಡೆಸಲು ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಯಾವ ಕಾರಣಕ್ಕೆ? ಯಾರು ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಿದೆ ಎಂದರು.

ಪ್ರಚೋದನಾತ್ಮಕ ಪೋಸ್ಟ್ ಹಾಕಬೇಡಿ

ಮೃತ ಪಟ್ಟ ವ್ಯಕ್ತಿಯ ಫೋನ್ ಕೂಡ ಪರಿಶೀಲನೆ ಮಾಡುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಬೇರೆ ಧರ್ಮದ ಮೇಲೆ ಪ್ರಚೋದನಾತ್ಮಕ ಪೋಸ್ಟ್ ಹಾಕಬೇಡಿ. ಸೋಶಿಯಲ್ ಮೀಡಿಯಾ ಗಳಲ್ಲಿ ಅವಳೇನಕಾರಿ ಕಾಮೆಂಟ್ ಹಾಕಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಇದನ್ನೂ ಓದಿ:  Dakshina Kannada ಪ್ರವೇಶಕ್ಕೆ ಮುತಾಲಿಕ್​ಗೆ ನಿರ್ಬಂಧ: ಆರಗ ಜ್ಞಾನೇಂದ್ರರನ್ನು ಕಿತ್ತು ಹಾಕಿ; ಸಿದ್ದು ಆಕ್ರೋಶ

ನಾನು ಕೆಲವು ವಿಚಾರಗಳನ್ನು ಕಮೆಂಟ್ ಮಾಡುವುದಿಲ್ಲ. ಕೊಲೆಗೆ ಸಂಬಂಧಿಸಿದಂತೆ ಎರಡು ಮೂರು ವಿಚಾರಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಮಸೂದ್ ಕೊಲೆ ನಡೆದ 24 ಗಂಟೆ ಒಳಗಡೆಯೇ ಎಂಟು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ತಿಳಿಸಿದರು.
Published by:Mahmadrafik K
First published: