• Home
  • »
  • News
  • »
  • state
  • »
  • CM Basavaraj Bommai: ಮಹದಾಯಿ ವಿಚಾರದಲ್ಲಿ ಪ್ರತಿಪಕ್ಷಗಳಿಂದ ಅನಗತ್ಯ ವಿವಾದ; ಬೊಮ್ಮಾಯಿ ಕಿಡಿ

CM Basavaraj Bommai: ಮಹದಾಯಿ ವಿಚಾರದಲ್ಲಿ ಪ್ರತಿಪಕ್ಷಗಳಿಂದ ಅನಗತ್ಯ ವಿವಾದ; ಬೊಮ್ಮಾಯಿ ಕಿಡಿ

ಬಸವರಾಜ್ ಬೊಮ್ಮಾಯಿ, ಸಿಎಂ

ಬಸವರಾಜ್ ಬೊಮ್ಮಾಯಿ, ಸಿಎಂ

ಸಂವಿಧಾನಾತ್ಮಕವಾಗಿ ಯಾವುದೇ ತೊಡಕು ಆಗಲ್ಲ. ಇದು‌ ಮಧ್ಯಂತರ ವರದಿ ಇದೆ. ಅಂತಿಮ ಆದೇಶದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಎಂದರು.

  • Share this:

ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ಪ್ರತಿಪಕ್ಷಗಳಿಂದ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಡಿಪಿಆರ್ ಗ್ರಿನ್ ಸಿಗ್ನಲ್ ಆದೇಶದಲ್ಲಿ ಕೆಳಗಡೆ ಸಹಿ ಇದೆ. ಕಾಂಗ್ರೆಸ್ ಯಾವ ಉದ್ದೇಶಕ್ಕೆ ಆರೋಪಿಸುತ್ತಿದೆ ಗೊತ್ತಿಲ್ಲ. ಮಹದಾಯಿಗಾಗಿ (Mahadayi Issue) ನಾವು ಹೋರಾಟ ಮಾಡಿದ್ದೀವಿ. ಅವರು ಹೋರಾಟ ಮಾಡಿದ್ರು. ಈಗ ಆ ಹೋರಾಟಕ್ಕೆ ತಾರ್ಕಿಕ ಜಯ ಸಿಕ್ಕಿದೆ. 20-25 ವರ್ಷ ಹೋರಾಟಕ್ಕೆ ಫಲ ಸಿಕ್ಕಿದೆ. ಇಂತಹ ಸಂದರ್ಭಗಳಲ್ಲಿ ಲೋಪದೋಷ ಹುಡುಕುವುದು ಅವರ ಮನಸ್ಥಿತಿ ಸೂಚಿಸುತ್ತೆ. ಅವರ ಟೀಕೆ ಟಿಪ್ಪಣಿಗಳ ಬಗ್ಗೆ ತಲೆಕಡೆಸಿಕೊಳ್ಳುವುದಿಲ್ಲ. ಡಿಪಿಆರ್ ಆಗಿದೆ - ಎಂಓಎಫ್ ಕ್ಲಿಯರೆನ್ಸ್ ತೆಗೆದುಕೊಂಡು ಟೆಂಡರ್ ಕರೆದು ಕಾಮಗಾರಿ ಆರಂಭಿಸುತ್ತೇವೆ ಎಂದರು.


ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನಾತ್ಮಕವಾಗಿ ಯಾವುದೇ ತೊಂದರೆ ಇಲ್ಲ
ಪಂಚಮಸಾಲಿ - ಒಕ್ಕಲಿಗ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಸಂವಿಧಾನಾತ್ಮಕವಾಗಿ ಯಾವುದೇ ತೊಡಕು ಆಗಲ್ಲ. ಇದು‌ ಮಧ್ಯಂತರ ವರದಿ ಇದೆ. ಅಂತಿಮ ಆದೇಶದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಎಂದರು.


ಇದರಲ್ಲಿ ನಮ್ಮ ಸರ್ಕಾರ ಉದ್ದೇಶ ಹೇಳಿದ್ದೇವೆ. ಅಂತಿಮ ವರದಿಯಲ್ಲಿ ಅಂಕಿ - ಅಂಶಗಳ ಮಾಹಿತಿ ನೀಡುತ್ತೇವೆ. ಮೀಸಲಾತಿ ಜಾರಿ ವಿಚಾರದಲ್ಲಿ ಸಂಬಂಧಪಟ್ಟವರ ಜೊತೆ ಚರ್ಚಿಸಲಾಗುವುದು. ಯಾವುದೇ ಕಾರಣಕ್ಕೂ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.


cm basavaraj bommai reacts mahadayi dpr saklb mrq
ಬಸವರಾಜ್ ಬೊಮ್ಮಾಯಿ, ಸಿಎಂ


ಕೆಲ ವರ್ಗದ ಜನರಿಗೆ ಶೈಕ್ಷಣಿಕ- ಉದ್ಯೋಗದಲ್ಲಿ ಹಿನ್ನಡೆಯಾಗಿದ್ದು ನಿಜ. ಅವರಿಗೆ ನ್ಯಾಯಕೊಡುವ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಇದಕ್ಕೆ ಸ್ಪಷ್ಟೀಕರಣ ಬೇಕಾದ್ರೆ ಕೊಡುತ್ತೇವೆ. ಇದರಲ್ಲಿ ಯಾರಿಗೂ ಅನ್ಯಾಯ ಮಾಡುವ ಪ್ರಶ್ನೆಯಿಲ್ಲ. ವಿರೋಧ ಪಕ್ಷದವರು ತಾವು ಅಧಿಕಾರದಲ್ಲಿ ಇದ್ದಾಗ ಈ ಬೇಡಿಕೆ ಈಡೇರಿಸಲು ಆಗಲಿಲ್ಲ. ಈಗ ನಾವು ಮಾಡುತ್ತಿರೋದ್ರಿಂದ ಸಮಸ್ಯೆಯಾಗಿದೆ ಎಂದು ಬೊಮ್ಮಾಯಿ ಕಿಡಿಕಾರಿದರು.


ಹೊಸ ವರ್ಷದ ಶುಭಾಶಯ ತಿಳಿಸಿದ ಸಿಎಂ


ಇದೇ ವೇಳೆ ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಬೊಮ್ಮಾಯಿ, ನಾಡು ಇಂದೆಂದು ಕಾಣದಷ್ಟು ಅಭಿವೃದ್ಧಿ ಕಾಣಲಿ. ನಾಡಿನ ಸರ್ವ ಜನತೆಗೆ ಹೊಸ ವರ್ಷ ಸಂತೋಷ ತರಲಿ ಎಂದು ಆಶಿಸಿದರು.


ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಜೋಶಿ


ಕಾಂಗ್ರೆಸ್ ಮತ್ತು ಎಚ್ ಕೆ ಪಾಟೀಲ್ಗೆ ಪೊಲಿಟಿಕಲಿ ಡೇಟ್ ಎಕ್ಸಪೈರ್ ಅಗಿದೆ ಎಂದು ಕೇಂದ್ರ ಸಚಿಚ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅವರು ಯಾಕೆ ಡೇಟ್ ಬಗ್ಗೆ ತಲೆ ಕೆಡಸಿಕೊಂಡಿದ್ದಾರೆ ಗೊತ್ತಿಲ್ಲ. ರಾಜಕಾರಣಕ್ಕೋ ಅಥವಾ ಮೂರ್ಖತನಕ್ಕೆ ಎಚ್ ಕೆ ಪಾಟೀಲ್ ಹೇಳಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ ಔಟ್ ಡೇಟೆಡ್ ಪಕ್ಷ ಎಂದು ವ್ಯಂಗ್ಯ ಮಾಡಿದರು.


ಸೋನಿಯಾ ಗಾಂಧಿ ಹನಿ ನೀರು ಕೊಡೋದಿಲ್ಲ ಎಂದಿದ್ದರು. ವಿಸ್ತೃತ ವರದಿ ಯೋಜನೆಗೆ ಗ್ರೀನ್ ಸಿಗ್ನಲ್ ವಿಚಾರಕ್ಕೆ ಜೋಶಿ ತಿರುಗೇಟು‌ ನೀಡಿದರು. ಅದರಲ್ಲಿ ಡೇಟ್ ಇದೆ ನಾನು ತೋರಿಸುವೆ ಎಂದು ಹೇಳಿದರು.


cm basavaraj bommai reacts mahadayi dpr saklb mrq
ಬಸವರಾಜ ಬೊಮ್ಮಾಯಿ, ಸಿಎಂ


ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್ ಔಟ್ ಡೇಟಡ್ ಆಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿಯೇ ಫಾರೆಸ್ಟ್ ಕ್ಲಿಯರನ್ಸ್ ಆಗಿ ಬರಲಿದೆ. ಕುಡಿಯೋ ನೀರಿನ ಪ್ರಾಜೆಕ್ಟ್ ಆಗಿರೋದಕ್ಕೆ ಎನ್ ವಿರಾನಮೆಂಟ್ ಕ್ಲಿಯರನ್ಸ್ ಆಗತ್ಯವಿಲ್ಲ. ನಮ್ಮ ನ್ಯಾಯಯುತ ಬೇಡಿಕೆ ಈಡೇರಿದೆ. ಎರಡು ತಿಂಗಳಲ್ಲಿ ನಾವೇ ಶಂಕು ಸ್ಥಾಪನೆ ಮಾಡ್ತೀವಿ‌ ಎಂದರು.
ಇದನ್ನೂ ಓದಿ:  Panchamasali Reservation: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಎಷ್ಟು? ರಾಜ್ಯ ಸರ್ಕಾರದ ವಿರುದ್ಧ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಗುಡುಗು


ಕುಮಾರಸ್ವಾಮಿ ಯಾವ ATM


ಕುಮಾರಸ್ವಾಮಿ ಯಾವ ATM ಎಂದು ಪ್ರಶ್ನಿಸಿದ ಜೋಶಿ, ಸಮಾಜಕ್ಕೆ ದೇಶಕ್ಕೆ ಏನೂ ತ್ಯಾಗ ಮಾಡಿಲ್ಲ. ಅಪ್ಪ ಮಗನಿಗೆ, ಹೆಂಡತಿ ಮಗನಿಗೆ ತ್ಯಾಗ ಮಾಡಿದ್ದಾರೆ. ಕುಮಾರಸ್ವಾಮಿ ವಚನಭ್ರಷ್ಟ. ದೇವೆಗೌಡರ ಮರಿ ಮೊಮ್ಮಗ ರಾಜಕೀಯಕ್ಕೆ ಸೇರಿಸಬಹುದು. ಭ್ರಷ್ಟ ಕುಟುಂಬದ ರಾಜಕೀಯ ಪಾರ್ಟಿ ಅದಕ್ಕೇನು ಉತ್ತರ ಕೊಡೋದು ಎಂದು ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟರು.

Published by:Mahmadrafik K
First published: