Praveen Murder: ಮಧ್ಯರಾತ್ರಿ 12.15ಕ್ಕೆ ಸಿಎಂ ಸುದ್ದಿಗೋಷ್ಠಿ; PFI ಬ್ಯಾನ್ ಆಗುತ್ತಾ?

ಗುರುವಾರ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮ ಕೂಡ ರದ್ದು ಮಾಡಿದ್ದೇವೆ. ಪರಿಶಿಷ್ಟರ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕಿದೆ. ಹಾಗಾಗಿ ನಾಳೆ ಸುದ್ದಿಗೋಷ್ಠಿ ಮೂಲಕ ಕಾರ್ಯಕ್ರಮ ಮಾಹಿತಿ ನೀಡ್ತೀನಿ ಎಂದರು.

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

  • Share this:
ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಬುಧವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ 12.15ಕ್ಕೆ ಸುದ್ದಿಗೋಷ್ಠಿ ಕರೆಯುವ ಸಂದೇಶ ರವಾನಿಸಿದ್ದರು. ಅಂತೆಯೆ ರಾತ್ರಿ ಸುಮಾರು 12 ಗಂಟೆಯ ನಂತರ ತಮ್ಮ ಆರ್.ಟಿ.ನಗರದ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದದರು. ಆರಂಭದಲ್ಲಿಯೇ ತಡರಾತ್ರಿ ಸುದ್ದಿಗೋಷ್ಠಿಗೆ ಕರೆದಿರೋದಕ್ಕೆ ಕ್ಷಮೆಯಾಚಿಸಿದರು. ನನಗೆ ನಿನ್ನೆ ರಾತ್ರಿಯಿಂದ ಪ್ರವೀಣ್ ನೆಟ್ಟಾರ್ (Praveen Nettar) ಹತ್ಯೆ ಸುದ್ದಿ ಬಂದಮೇಲೆ ಬಹಳ ನೋವು ಕಳವಳವಾಗಿದೆ. ಪೊಲೀಸ್ (Police) ಅಧಿಕಾರಿಗಳಿಗೆ ತನಿಖೆ ನಡೆಸುವಂಇತೆ ಸೂಚನೆ ನೀಡಿದ್ದೇನೆ. ಅತ್ಯಂತ ಅಮಾಯಕ ಯುವಕನನ್ನ ಸಂಚಿನಿಂದ ಕೊಲೆ ಆಗಿರೋದು ಅಮಾನವೀಯ ಖಂಡನೀಯ ಎಂದು ಪ್ರವೀಣ್ ನೆಟ್ಟಾರು ಹತ್ಯೆಗೆ ಆಕ್ರೋಶ ಹೊರಹಾಕಿದರು.

ಶಿವಮೊಗ್ಗದ ಹರ್ಷನ ಕೊಲೆಯ ಕೆಲವೇ ದಿನದಲ್ಲಿ ಪ್ರವೀಣ್ ಕೊಲೆ ಆಗಿದೆ. ಅವರೇ ನಿಂತು ಅಲ್ಲಿ ಸಮಾಧಾನ ಮಾಡುವ, ಕುಟುಂಬಕ್ಕೆ ಸಾಂತ್ವಾನ ಹೇಳುವ ಕೆಲಸ ಕಟೀಲ್ ಮಾಡಿದ್ದಾರೆ. ನಮ್ಮ ಮುಗ್ಧ ಕಾರ್ಯಕರ್ತನ ಕೊಲೆಯಾಗಿದೆ ಎಂಬ ಜಿಜ್ಞಾಸೆಯಲ್ಲಿ ನಾನಿದ್ದೆ.

ದೊಡ್ಡಬಳ್ಳಾಪುರದ ಕಾರ್ಯಕ್ರಮ ರದ್ದು

ಯಡಿಯೂರಪ್ಪ ಹಾಗೂ ನಮ್ಮ ಸರ್ಕಾರಕ್ಕೆ ಮೂರು ವರ್ಷ ತುಂಬಿದೆ. ಜನಪರ ಕೆಲಸ ಮಾಡಿದ್ದು, ಜನರಲ್ಲಿ ವಿಶ್ವಾಸ ತುಂಬಬೇಕಿದೆ. ಸಂಭ್ರಮ ಮಾಡಲು ಜನೋತ್ಸವ ಮಾಡುತ್ತಿಲ್ಲ. ನಾನು ಆ ಹುಡುಗನ ತಾಯಿಯ ಆಕ್ರಂದನ ನೋಡಿ, ಅಳಲನ್ನ ನೋಡಿ ನಾನೇ ತೀರ್ಮಾನ ಮಾಡಿದೆ. ಈ ಸಂದರ್ಭದಲ್ಲಿ ಗುರುವಾರ ನಡೆಯುವ ದೊಡ್ಡಬಳ್ಳಾಪುರ ಕಾರ್ಯಕ್ರಮ ರದ್ದು ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ:  Praveen Nettar ಹತ್ಯೆ ಖಂಡಿಸಿ BJP ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ; ಸರ್ಕಾರಕ್ಕೆ ಬಿಸಿತುಪ್ಪವಾದ ಆಕ್ರೋಶ

ಗುರುವಾರ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮ ಕೂಡ ರದ್ದು ಮಾಡಿದ್ದೇವೆ. ಪರಿಶಿಷ್ಟರ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕಿದೆ. ಹಾಗಾಗಿ ನಾಳೆ ಸುದ್ದಿಗೋಷ್ಠಿ ಮೂಲಕ ಕಾರ್ಯಕ್ರಮ ಮಾಹಿತಿ ನೀಡ್ತೀನಿ ಎಂದರು.

CM Basavaraj Bommai Press meet Janotsava Cancelled mrq
ಪ್ರವೀಣ್ ನೆಟ್ಟಾರು


ಮನಸಾಕ್ಷಿಯಾಗಿ ಕಾರ್ಯಕ್ರಮ ರದ್ದು

ನಾಳೆ ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಕ್ಷಮೆ ಕೇಳ್ತೀನಿ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಸಂಘಟನೆ ಆಗಿತ್ತು. ಮನಸಾಕ್ಷಿ ಅನುಗುಣವಾಗಿ ಕಾರ್ಯಕ್ರಮ ರದ್ದು ಮಾಡಿದ್ದೇನೆ. ದೇಶ ದ್ರೋಹದ ಕೆಲಸ ಮಾಡಿ, ಜನರ ನಡುವೆ ದ್ವೇಷ ಬಿತ್ತನೆ ಮಾಡಿದ್ದಾರೆ. ಕೋಮು ಕೋಮುಗಳ ನಡುವೆ ಸಂಘರ್ಷ ನಡೆಸಲಾಗ್ತಿದೆ.

ನೇರವಾಗಿ ಕ್ರಮ

ಇದು ದೇಶ ವ್ಯಾಪ್ತಿ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ 22ಕ್ಕೂ ಹೆಚ್ಚು ಕಡೆ ಹತ್ಯೆ ನಡೆದಿದೆ. ಯಾವ ರೀತಿ ಹತ್ಯೆ ಆಗಿದ್ದು, ಕ್ರಮ ತೆಗೆದುಕೊಳ್ಳಲಾಗಿದೆ. ಮಂಗಳೂರು, ಡಿ.ಜೆ ಹಳ್ಳಿಯಲ್ಲಿ ನಡೆದ ರೀತಿ ಮಾಡದೇ ನೇರವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ದೃಢವಾದ ಸಂಕಲ್ಪ ಮಾಡಿದ್ದೇವೆ, ಹೊರಗೆ ತರಬೇಕು. ಸಾಮಾನ್ಯ ತನಿಖೆ ಜೊತೆ, ವಿಶೇಷ ಕಾನೂನು ತರಲಾಗ್ತಿದೆ. PFI ಟೆರರಿಸ್ಟ್ ಅಂತ ಹೇಳಿದ್ದು, ಅದಕ್ಕೆಲ್ಲಾ ಸಾಕ್ಷಿ ಇದೆ. ಈಗಿರುವ ವ್ಯವಸ್ಥೆ ಹೊರತಾಗಿ, ಸಂಪೂರ್ಣವಾಗಿ ಕಮಾಂಡರ್ ಫೋರ್ಸ್ ಮತ್ತು ಇಂಟಲಿಜೆನ್ಸ್ ಆ್ಯಂಟಿ ಟೆರರಿಸ್ಟ್ ಕಮಾಂಡ್ ರಾಜ್ಯದಲ್ಲಿ ಸ್ಥಾಪನೆ ಮಾಡುತ್ತೇವೆ.

ಯುವ ಜನರ ಆಕ್ರೋಶ ಅರ್ಥವಾಗುತ್ತೆ

ನನಗೆ ನಮ್ಮ ಪ್ರತಿಯೊಬ್ಬ ಕಾರ್ಯಕರ್ತನ ಸಾಮಾನ್ಯ ಜನರ ಜೀವ ಮುಖ್ಯ. ದುಷ್ಟ ಶಕ್ತಿಗಳ ಪಾಪದ ಕೊಡ ತುಂಬಿದೆ. ಈಗ ಹೆಚ್ಚು ಮಾತನಾಡದೆ, ಬರುವ ದಿನದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾನು ಯುವ ಜನರ ಆಕ್ರೋಶ ಅರ್ಥ ಮಾಡಿಕೊಳ್ತೇನೆ.

CM Basavaraj Bommai Press meet Janotsava Cancelled mrq
ಹತ್ಯೆಯಾದ ಪ್ರವೀಣ್ ನೆಟ್ಟಾರ್


ಕೇವಲ ಕರಾವಳಿ ಮಾತ್ರವಲ್ಲದೆ, ಬೇರೆ ಬೇರೆ ಕಡೆ ಕೂಡ ನಡೆದಿದೆ. ನಾನು ಹೋಮ್ ಮಿನಿಸ್ಟರ್ ಆಗಿದ್ದಾಗ ತಿಹಾರ್ ಜೈಲ್, ಬೇರೆ ಬೇರೆ ಜೈಲಿಗೆ ಕಳಿಸಿದ್ದೇನೆ. ಘಟನೆ ನಡೆದಾಗ, ನಾವೇ ಕುದ್ದು ಘಟನಾ ಸ್ಥಳಕ್ಕೆ ತೆರಳಿ ಕ್ರಮ ತೆಗೆದುಕೊಂಡಿದ್ದೆ. ಈ ಹಿಂಸೆ ವಿರುದ್ಧ ನಮ್ಮ ಗೃಹ ಇಲಾಖೆ ಪೊಲೀಸರು ತೆಗೆದುಕೊಳ್ಳಲಿದ್ದಾರೆ. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ, ನಾನು ತೊಳಲಾಟದಲ್ಲಿದ್ದೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:  NIA ಗೆ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ? ಶಾಸಕ ರೇಣುಕಾಚಾರ್ಯ ರಾಜೀನಾಮೆ? ಬೆಳ್ಳಾರೆಯಲ್ಲಿ ಸೆಕ್ಷನ್ 144 ಜಾರಿ

PFI ಬ್ಯಾನ್ ಮಾಡಲಾಗುವುದು

ಅದರ ಬಗ್ಗೆ ಮಾತನಾಡಿದ್ರೆ ತನಿಖೆಗೆ ತೊಂದರೆ ಆಗಲಿದೆ. ಇದು ಅಂತರಾಜ್ಯ ವಿಚಾರ. ಅಪರಾಧಿಗಳು ಜಾಗೃತ ಆಗ್ತಾರೆ. ಛತ್ತೀಸ್ಗಢದಲ್ಲಿ PFI ಬ್ಯಾನ್ ಆಗಿದೆ. ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆದು PFI ಬ್ಯಾನ್ ಮಾಡಲಾಗುವುದು.  ರಾಜ್ಯದಲ್ಲಿ, ಸೆಂಟ್ರಲ್ ಹಾಗೂ ಎಲ್ಲಾ ಇಲಾಖೆ ನೋಡಿ ವಿಶೇಷ ತಂಡ ರಚನೆ ಮಾಡುತ್ತೇವೆ ಎಂದರು.
Published by:Mahmadrafik K
First published: