ಆಲಮಟ್ಟಿಗೆ ಡ್ಯಾಂಗೆ ಬಾಗಿನ ಅರ್ಪಿಸಿ, ರೈತರ ಮನವಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ

ಕೋವಿಡ್ ಹಿನ್ನೆಲೆಯಲ್ಲಿ ಬಾಗಿನ ಕಾರ್ಯಕ್ರಮ ಸರಳವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಚಿವರಾದ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಸಿ.ಸಿ ಪಾಟೀಲ್ ಹಾಗೂ ಜಿಲ್ಲೆಯ ‌ಶಾಸಕರು ಭಾಗಿಯಾಗಿದ್ದರು.

ಬಾಗಿನ ಅರ್ಪಣೆ

ಬಾಗಿನ ಅರ್ಪಣೆ

  • Share this:
    ವಿಜಯಪುರ(ಆ.21): ಸಿಎಂ ಬಸವರಾಜ ಬೊಮ್ಮಾಯಿ ಇಂದು ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಕೃಷ್ಣಾ ನದಿಗೆ ಬಾಗಿನ ಅರ್ಪಣೆ ಮಾಡಿದರು. ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಆಲಮಟ್ಟಿ ಜಲಾಶಯದಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಬಾಗಿನ ಕಾರ್ಯಕ್ರಮ ಸರಳವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಚಿವರಾದ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಸಿ.ಸಿ ಪಾಟೀಲ್ ಹಾಗೂ ಜಿಲ್ಲೆಯ ‌ಶಾಸಕರು ಭಾಗಿಯಾಗಿದ್ದರು.

    ಬಳಿಕ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಜನಪ್ರತಿನಿಧಿಗಳ ಜೊತೆಗೆ ಸಿಎಂ ಬೊಮ್ಮಾಯಿ ಸಭೆ ನಡೆಸಿದರು. ಉಭಯ ಜಿಲ್ಲೆಗಳ ಸಚಿವರು, ಶಾಸಕರು ಭಾಗಿಯಾಗಿದ್ದರು. ಕೆ.ಬಿ.ಜೆ.ಎನ್.ಎಲ್ ಕಚೇರಿಯಲ್ಲಿ ನಡೆಯುತ್ತಿರುವ ಸಭೆ ನಡೆಯುತ್ತಿದ್ದು, ಕೋವಿಡ್ ನಿರ್ವಹಣೆ ಹಾಗೂ ಪ್ರವಾಹ ಹಾನಿ, ಪರಿಹಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಸಚಿವ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಉಮೇಶ ಕತ್ತಿ, ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ, ದೊಡ್ಡನಗೌಡ ಪಾಟೀಲ್, ವೀರಣ್ಣ ಚರಂತಿಮಠ, ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ಬಸನಗೌಡ ಯತ್ನಾಳ್ ಸೇರಿದಂತೆ ಎರಡು ಜಿಲ್ಲೆಗಳ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.

    ಇದನ್ನೂ ಓದಿ:NEET 2021: ನೀಟ್ ಎಕ್ಸಾಂ ಸೆಂಟರ್, ಪರೀಕ್ಷೆಗೆ ತಯಾರಾಗುವ ಬಗ್ಗೆ ನಿಮ್ಮೆಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

    ಸಿಎಂ ಭೇಟಿಗೆ ಆಗ್ರಹಿಸಿದ ರೈತರು

    ಸಿಎಂ‌ ಭೇಟಿಗೆ ಅವಕಾಶ ನೀಡುವಂತೆ ಆಗ್ರಹಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದ ಬಳಿಯ ಕೆ ಬಿ ಜೆ ಎನ್ ಎಲ್ ಎಂಡಿ ಕಚೇರಿ ಹೊರಭಾಗದಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ರೈತರು ವಾಗ್ವಾದ ನಡೆಸಿದ್ದಾರೆ.  ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರುವ ಸಲುವಾಗಿ ಭೇಟಿಗೆ ಅವಕಾಶ ನೀಡುವಂತೆ ರೈತರು ಮಾಡುತ್ತಿದ್ದಾರೆ. ಸಿಎಂ ಇಲ್ಲೇ ಬಂದು ಸಮಸ್ಯೆ ಆಲಿಸುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ರೈತರ ಮನವರಿಕೆ ಮಾಡುತ್ತಿದ್ದಾರೆ. ಇದಕ್ಕೆ ಒಪ್ಪದ ರೈತ ಮುಖಂಡರು ಪೊಲೀಸ್ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಮುಂದಾಗಿದ್ದಾರೆ.

    ಇದನ್ನೂ ಓದಿ:ಕಾಂಗ್ರೆಸ್​ ವಿರೋಧ ಪಕ್ಷಕ್ಕೂ ನಾಲಾಯಕ್​ ಅಂತಾ ಜನ ಮನೆಗೆ ಕಳುಹಿಸಿದ್ದಾರೆ; ನಳೀನ್ ಕುಮಾರ್ ಕಟೀಲ್ ಲೇವಡಿ

    ಸಿಎಂ ಭೇಟಿಗೆ ಅವಕಾಶ ನೀಡಬೇಕೆಂದು ವಿವಿಧ ರೈತ ಸಂಘಟನೆಗಳು ಹಾಗೂ ರೈತರ ಒತ್ತಾಯ ಮಾಡುತ್ತಿದ್ದಾರೆ. ವಿವಿಧ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಿಎಂ ಗಮನ ಸೆಳೆಯಲು  ರೈತ ಸಂಘಟನೆಗಳು‌ ಯತ್ನಿಸುತ್ತಿವೆ.  ಸಿಎಂ ಬೊಮ್ಮಾಯಿ ಕೆಬಿಜೆಎನ್ಎಲ್ ಎಂಡಿ ಕಚೇರಿಯಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಸಿಎಂ
    ಸಭೆ ಎಷ್ಟು ಹೊತ್ತು ನಡೆಸೋದು? ಸಿಎಂ ಭೇಟಿಗಾಗಿ ಕಳೆದ ಎರಡು ಗಂಟೆಗಳಿಂದ ಕಾಯುತ್ತಿದ್ದೇವೆ ಎಂದು ರೈತ ಸಂಘಟನೆಗಳು ಆರೋಪ ಮಾಡುತ್ತಿವೆ. ಜೊತೆಗೆ ಸಿಎಂ ಬೊಮ್ಮಾಯಿ ಹಾಗೂ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ  ವ್ಯಕ್ತಪಡಿಸಿದ್ದಾರೆ.
    ಸಿಎಂ ಭೇಟಿ ಮಾಡಲು ಒಳಗೆ ಕಳುಹಿಸಬೇಕೆಂದು ಪೊಲೀಸ್ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ಬಳಿಕ ಸಿಎಂ ನಿಮ್ಮನ್ನು ಭೇಟಿಯಾಗುತ್ತಾರೆ ಎಂದು ಪೊಲೀಸರು ರೈತರ ಮನವೊಲಿಸುತ್ತಿದ್ದಾರೆ.

    ರೈತರ ಒತ್ತಾಯಕ್ಕೆ ಮಣಿದ ಸಿಎಂ

    ರೈತರು ಹಾಗೂ ರೈತ ಸಂಘಟನೆಗಳ ಒತ್ತಾಯಕ್ಕೆ ಮಣಿದ ಸಿಎಂ ಕೊನೆಗೂ ರೈತ ಮುಖಂಡರನ್ನು ಭೇಟಿಯಾಗಿದ್ದಾರೆ. ರೈತರ ಸಮಸ್ಯೆ ಕುರಿತ ಹಾಗೂ ಇತರೆ ಬೇಡಿಕೆಗಳ ಮನವಿಗಳನ್ನು ಸ್ವೀಕರಿಸಿದ್ದಾರೆ. ಸಿಎಂಗೆ ಮನವಿ ಸಲ್ಲಿಸಲು ರೈತರ ನೂಕು ನುಗ್ಗಲು ಉಂಟಾಗಿತ್ತು. ಪೊಲೀಸರು  ರೈತರನ್ನು ಹತೋಟಿಗೆ ತರಲು‌  ಹರ ಸಾಹಸಪಟ್ಟರು.
    Published by:Latha CG
    First published: