• Home
  • »
  • News
  • »
  • state
  • »
  • Cabinet Expansion: ಸಂಪುಟ ವಿಸ್ತರಣೆಗೆ ಹೆಚ್ಚಾದ ಒತ್ತಡ; BSY ಭೇಟಿಯಾದ ಸಿಎಂ; ಸಚಿವಾಕಾಂಕ್ಷಿಗಳ ಪಟ್ಟಿ ಹೀಗಿದೆ

Cabinet Expansion: ಸಂಪುಟ ವಿಸ್ತರಣೆಗೆ ಹೆಚ್ಚಾದ ಒತ್ತಡ; BSY ಭೇಟಿಯಾದ ಸಿಎಂ; ಸಚಿವಾಕಾಂಕ್ಷಿಗಳ ಪಟ್ಟಿ ಹೀಗಿದೆ

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

ಒಂದು ವೇಳೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ರೆ ಈ ವಾರದೊಳಗೆ ಸಂಪುಟ ವಿಸ್ತರಣೆ ಆಗುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ಸಕ್ರಿಯರಲ್ಲದ ಸಚಿವರನ್ನು  (Ministers) ಸಂಪುಟದಿಂದ ಕೈ ಬಿಡ್ತಾರಾ ಅನ್ನೋ ಪ್ರಶ್ನೆಗಳು ಚರ್ಚೆಯಲ್ಲಿವೆ.

  • Share this:

ವಿಧಾನಸಭೆ ಚುನಾವಣೆಗೆ (Assembly Election 2023) ಏಳೆಂಟು ತಿಂಗಳು ಬಾಕಿ ಉಳಿದಿರುವ  ಹಿನ್ನೆಲೆ ರಾಜ್ಯ ಬಿಜೆಪಿ ಅಂಗಳದಲ್ಲಿ ಸಂಪುಟ ವಿಸ್ತರಣೆ (Cabinet Expansion) ಮಾಡಬೇಕೆಂಬ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆ ಇಂದು ಬೆಳಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಅವರನ್ನು ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಚರ್ಚೆ ನಡೆಸಿದರು. ದಿನೇ ದಿನೇ ಸಂಪುಟ ವಿಸ್ತರಣೆಗೆ ಆಕಾಂಕ್ಷಿಗಳ ಒತ್ತಡ ಹೆಚ್ಚಾಗಿದೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಮುಖ್ಯಮಂತ್ರಿಗಳು ದೆಹಲಿಗೆ (Delhi) ತೆರಳುವ ಸಾಧ್ಯತೆಗಳಿವೆ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (BJP President JP Nadda) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minster Amit Shah) ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ (Cabinet Reshuffle) ಎಂಬುದರ ಬಗ್ಗೆ ಸ್ಪಷ್ಟನೆ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ರೆ ಈ ವಾರದೊಳಗೆ ಸಂಪುಟ ವಿಸ್ತರಣೆ ಆಗುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ಸಕ್ರಿಯರಲ್ಲದ ಸಚಿವರನ್ನು  (Ministers) ಸಂಪುಟದಿಂದ ಕೈ ಬಿಡ್ತಾರಾ ಅನ್ನೋ ಪ್ರಶ್ನೆಗಳು ಚರ್ಚೆಯಲ್ಲಿವೆ.


ಸಚಿವಾಕಾಂಕ್ಷಿಗಳ ಪಟ್ಟಿ ಹೀಗಿದೆ


ರಮೇಶ್ ಜಾರಕಿಹೊಳಿ, ಗೋಕಾಕ್, ಕೆ.ಎಸ್​​​ ಈಶ್ವರಪ್ಪ, ಶಿವಮೊಗ್ಗ ನಗರ, ಎಂಪಿ ರೇಣುಕಾಚಾರ್ಯ, ಹೊನ್ನಾಳಿ , ರಾಜೂಗೌಡ, ಸುರಪುರ, ಎಸ್​​.ಎ ರಾಮದಾಸ್, ಕೃಷ್ಣರಾಜ ಕ್ಷೇತ್ರ , ಅಪ್ಪಚ್ಚು ರಂಜನ್, ಮಡಿಕೇರಿ, ಪಿ.ರಾಜೀವ್, ಕುಡಚಿ, ಎಂ.ಪಿ ಕುಮಾರಸ್ವಾಮಿ, ಮೂಡಿಗೆರೆ, ಜಿ.ಹೆಚ್ ತಿಪ್ಪಾರೆಡ್ಡಿ,


ಚಿತ್ರದುರ್ಗ, ಕೆ.ಪೂರ್ಣಿಮಾ ಶ್ರೀನಿವಾಸ್, ಹಿರಿಯೂರು, ದತ್ತಾತ್ರೇಯ ಪಾಟೀಲ್ ರೇವೂರ, ಕಲಬುರಗಿ ದಕ್ಷಿಣ, ಎನ್.ಮಹೇಶ್, ಕೊಳ್ಳೇಗಾಲ, ಸಿ.ಪಿ ಯೋಗೇಶ್ವರ್, ಪರಿಷತ್ ಸದಸ್ಯ, ಅರವಿಂದ್ ಬೆಲ್ಲದ, ಹು-ಧಾರವಾಡ ಪಶ್ಚಿಮ


CM Basavaraj bommai meets BS Yediyurappa Regarding Cabinet Expansion mrq
ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ


ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರಾ?  ಕಟೀಲ್ ಹೇಳಿದ್ದೇನು?


ರಮೇಶ್ ಜಾರಕಿಹೊಳಿ ಖಂಡಿತವಾಗಿ ಮಂತ್ರಿ ಆಗ್ತಾರೆ. ಯಾವಾಗ ಆಗ್ತಾರೆ ಅನ್ನೋದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಹಾಲಿ ಬಿಜೆಪಿ ಶಾಸಕರ‌‌ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಕಟೀಲ್, ಹಾಲಿ ಶಾಸಕರನ್ನ ಬದಲಾಯಿಸುವ ಪ್ರಶ್ನೆ ಇಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದರೆ ಅದು ಪಕ್ಷದ ಶಕ್ತಿ. ಹಾಲಿ ಶಾಸಕರನ್ನ ಬದಲಾಯಿಸುವ ಬಗ್ಗೆ ಯಾವುದೇ ಯೋಚನೆ, ಚರ್ಚೆ ನಮ್ಮ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದರು.


ಇದನ್ನೂ ಓದಿ:  Karnataka Assembly Elections: ಬೊಮ್ಮನಹಳ್ಳಿಯಲ್ಲಿ ಗೆಲುವಿನ ಕಿಂದರಿ ಬಾರಿಸುವ ಜೋಗಿ ಯಾರು? ಹಾಲಿ ಶಾಸಕರಿಗೆ ಹೇಗಿದೆ ಜನಬೆಂಬಲ?


ಸಿದ್ದರಾಮೋತ್ಸವ ಮೂಲಕ ಹಿಂದುಳಿದ ವರ್ಗಗಳ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿರುವ ಹಿನ್ನೆಲೆ ಕೆ.ಎಸ್ಈಶ್ವರಪ್ಪ, ರಮೇಶ್ ಜಾರಕಿಹೊಳಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳಿವೆ. ವರಿಷ್ಠರು ಒಪ್ಪಿಗೆ ಸೂಚಿಸಿದರೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ 4 ಸ್ಥಾನಗಳನ್ನು ಭರ್ತಿ ಮಾಡಲು ಸಿಎಂ ನಿರ್ಧರಿಸಿದ್ದಾರೆ.


ಭಾರತ್​ ಜೋಡೋ ಬಿಜೆಪಿ ಟೀಕೆಗೆ ಸೀಮಿತವಾಯ್ತಾ?


ಭಾರತ್​ ಜೋಡೋ ಯಾತ್ರೆ ಬಿಜೆಪಿ ಟೀಕೆಗೆ ಮಾತ್ರ ಸೀಮಿತವಾಯ್ತಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಕನ್ನಡ ಭಾಷೆ, ಸಂಸ್ಕೃತಿ, ಉದ್ಯೋಗದ ಬಗ್ಗೆ ಮಾತನಾಡುತ್ತವೆ ಅನ್ನೋರ ಬಾಯಿ ಮುಚ್ಚಿಸುವ ಕೆಲಸ ಆಗ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.


ಇದನ್ನೂ ಓದಿ:  Uttara Kannada: ಉತ್ತರ ಕನ್ನಡಿಗರಿಗೆ ಖುಷಿ ಸುದ್ದಿ! ಬಸ್​ಗೆ ದುಬಾರಿ ಹಣ ತೆರಬೇಕಿಲ್ಲ


ಅರುಣ್​​ ಜಾವಗಲ್​ ಸರಣಿ ಟ್ವೀಟ್


ಈ ಬಗ್ಗೆ ಕನ್ನಡಪರ ಹೋರಾಟಗಾರ ಅರುಣ್​​ ಜಾವಗಲ್​ ಸರಣಿ ಟ್ವೀಟ್ ಮಾಡಿದ್ದಾರೆ. ಐಕ್ಯತಾ ಯಾತ್ರೆ ಸಮಯದಲ್ಲಿ ಮಾತನಾಡಲು ಹೋಗಿದ್ದೆ. ಒಕ್ಕೂಟ ವ್ಯವಸ್ಥೆ, ಹಿಂದಿ ಹೇರಿಕೆ ಬಗ್ಗೆ ಕಾಂಗ್ರೆಸ್​ಗೆ ಪ್ರಶ್ನೆ ಮಾಡಲಾಯ್ತು. RSS, BJP ಬಗ್ಗೆ ಮಾತನಾಡುವವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಬೇರೆ ವಿಚಾರ ಮಾತನಾಡುವವರಿಗೆ ಅವಕಾಶ ಸಿಗಲಿಲ್ಲ. ಅವಕಾಶ ಸಿಗದ ಕಾರಣಕ್ಕೆ ಅರ್ಧದಲ್ಲೇ ಎದ್ದು ಬಂದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

Published by:Mahmadrafik K
First published: