• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • PSI Exam Scam: ಸಿದ್ದರಾಮಯ್ಯ ಈಗಾಗಲೇ 10 ಬಾರಿ ರಾಜೀನಾಮೆ ನೀಡ್ಬೇಕಿತ್ತು! ಹೀಗಂದಿದ್ದೇಕೆ ಸಿಎಂ ಬಸವರಾಜ ಬೊಮ್ಮಾಯಿ?

PSI Exam Scam: ಸಿದ್ದರಾಮಯ್ಯ ಈಗಾಗಲೇ 10 ಬಾರಿ ರಾಜೀನಾಮೆ ನೀಡ್ಬೇಕಿತ್ತು! ಹೀಗಂದಿದ್ದೇಕೆ ಸಿಎಂ ಬಸವರಾಜ ಬೊಮ್ಮಾಯಿ?

ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ

ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ

  • Share this:

ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಹಗರಣದ (PSI recruitment Scam) ತನಿಖೆ (Investigation) ಚುರುಕುಗೊಂಡಿದೆ. ಇದೇ ಪ್ರಕರಣದಲ್ಲಿ ನಿನ್ನೆ ಎಡಿಜಿಪಿ ಅಮೃತ್ ಪೌಲ್ (ADGP Amrit Paul) ಅವರನ್ನು ಸಿಐಡಿ ಪೊಲೀಸರು (CID Police) ಬಂಧಿಸಿದ್ದರು. ಈ ವಿಚಾರ ಈಗ ಆಡಳಿತ ಪಕ್ಷ ಬಿಜೆಪಿ (BJP) ಹಾಗೂ ವಿಪಕ್ಷ ಕಾಂಗ್ರೆಸ್ (Congress) ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತಪೌಲ್ ಅರೆಸ್ಟ್ ಆಗಿದ್ದಾರೆ. ಹೀಗಾಗಿ ಗೃಹ ಸಚಿವ (Home Minister) ಆರಗ ಜ್ಞಾನೇಂದ್ರ (Aaraga Jnanendra) ಅವರು ರಾಜೀನಾಮೆ (Resign) ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿಯೂ ಹಗರಣ (Sacm) ನಡೆದಿತ್ತು. ಹಾಗೆ ನೋಡಿದ್ರೆ ಸಿದ್ದರಾಮಯ್ಯ ಆಗ ಒಂದಲ್ಲ 10 ಬಾರಿ ರಾಜೀನಾಮೆ ನೀಡಬೇಕಿತ್ತು ಅಂತ ಕುಟುಕಿದ್ದಾರೆ.


ಆರಗ ಜ್ಞಾನೇಂದ್ರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ


ಪಿಎಸ್ಐ ನೇಮಕಾತಿ ಹಗರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಹಗರಣದ ಬಗ್ಗೆ ನಾವು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ವಿ. ಪಿಎಸ್ಐ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಿಎಂ ಹಾಗೂ ಹೋಮ್ ಮಿನಿಸ್ಟರ್ ಹೇಳಿದ್ರು. ಹೋಮ್ ಮಿನಿಸ್ಟರ್ ವೀರಾವೇಶದಿಂದ ಉತ್ತರ ಕೊಟ್ಟಿದ್ರು. ಸದ್ಯ ಇದೇ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಅರೆಸ್ಟ್ ಆಗಿ ಸಸ್ಪೆಂಡ್ ಕೂಡ ಆಗಿದ್ದಾರೆ. ಹೀಗಾಗಿ ಆರಗ ಜ್ಞಾನೇಂದ್ರ ಕೂಡ ರಾಜೀನಾಮೆ ನೀಡಬೇಕು ಅಂತ ಸಿದ್ದರಾಮಯ್ಯ ಆಗ್ರಹಿಸಿದ್ದರು.


ಇದನ್ನೂ ಓದಿ: CM Bommai: ಗೃಹ ಸಚಿವರ ರಾಜೀನಾಮೆ ಕೇಳಲು ಕಾಂಗ್ರೆಸ್​​ಗೆ ನೈತಿಕ ಹಕ್ಕಿಲ್ಲ: ಸಿಎಂ ಬೊಮ್ಮಾಯಿ ಕಿಡಿ


ಆರಗ ಜ್ಞಾನೇಂದ್ರ ರಾಜೀನಾಮೆ ಅಗತ್ಯವಿಲ್ಲ


ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ ರಾಜೀನಾಮೆ ನೀಡುವ ಅಗತ್ಯ ಇಲ್ಲ ಅಂತ ಹೇಳಿದ್ದಾರೆ. ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲ. ಅವರು ಅಧಿಕಾರದಲ್ಲಿ ಇದ್ದಿದ್ದರೆ ಈ ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದರು ಅಂತ ಆರೋಪಿಸಿದ್ದಾರೆ. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದ ಅನುಮಾನ ಬಂದ ತಕ್ಷಣ ಗೃಹ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಅವರು ಈ ವಿಚಾರದಲ್ಲಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಅವರಿಂದ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ.


ಸಿದ್ದರಾಮಯ್ಯ 10 ಬಾರಿ ರಾಜೀನಾಮೆ ನೀಡಬೇಕಿತ್ತು


ಕಾಂಗ್ರೆಸ್ ಅವಧಿಯಲ್ಲೂ ಇದೇ ಪೊಲೀಸ್ ನೇಮಕಾತಿ ವಿಚಾರದಲ್ಲಿ ಗುಲ್ಬರ್ಗಾದಲ್ಲಿ ಪ್ರಶ್ನೆಪತ್ರಿಕೆ ಲೀಕ್ ಆಗಿತ್ತು. ಪ್ರಶ್ನೆಪತ್ರಿಕೆ ಸೆಟ್ ಮಾಡಿದ್ದ ಡಿಐಜಿ ಅವರ ಮನೆಯಿಂದಲೇ ಲೀಕ್ ಆಗಿತ್ತು. ಅದು ತನಿಖೆ ಆಗಿ ಆ ಡಿಐಜಿಯನ್ನು ಆರೋಪಿ ಮಾಡಿದ್ರು. ಆದ್ರೆ ಮುಂದೆ ಈ ಪ್ರಕರಣ ಏನಾಯಿತು? ಅವರು ಯಾವ ಕ್ರಮ ತಗೊಂಡ್ರು? ಆ ಡಿಐಜಿಯನ್ನು ಸಸ್ಪೆಂಡ್ ಮಾಡಿದ್ರಾ? ಅರೆಸ್ಟ್ ಮಾಡಿದ್ರಾ? ಅಂತ ಪ್ರಶ್ನಿಸಿದ್ದಾರೆ. ರಾಜೀನಾಮೆ ಕೇಳಲು ಸಿದ್ದರಾಮಯ್ಯ ಗೆ ಯಾವ ನೈತಿಕತೆ ಇದೆ? ಈ‌ ಮಾನದಂಡದಲ್ಲಿ ಹೇಳೋದಾದ್ರೆ ಸಿದ್ದರಾಮಯ್ಯ ಹತ್ತು ಸಲ ರಾಜೀನಾಮೆ ಕೊಡಬೇಕಿತ್ತು ಅಂತ ಕುಟುಕಿದ್ದಾರೆ.


ಇದನ್ನೂ ಓದಿ: Suspend: ಕಳಂಕಿತ ಅಧಿಕಾರಿಗಳಿಗೆ ಅಮಾನತು ಶಿಕ್ಷೆ; ಡಿಸಿ ಮಂಜುನಾಥ್, ಎಡಿಜಿಪಿ ಅಮೃತ್ ಪೌಲ್ ಸಸ್ಪೆಂಡ್


ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹಗರಣ ಮುಚ್ಚಿ ಹಾಕಿದ್ರು


ಹಿಂದೆ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರದಲ್ಲಿದ್ದಾಗ ಇಂಥ ಇನ್ನೂ ಮೂರ್ನಾಲ್ಕು ಪ್ರಕರಣಗಳನ್ನು ಮುಚ್ಚಿ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಅವುಗಳ ಬಗ್ಗೆ ತಿಳಿಸ್ತೇನೆ ಅಂತ ಸಿಎಂ ಹೇಳಿದ್ದಾರೆ.

Published by:Annappa Achari
First published: