• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • CM ಅಂದ್ರೆ Common Man ಅಂತ ಮತ್ತೆ ಪ್ರೂವ್ ಮಾಡಿದ ಬಸವರಾಜ ಬೊಮ್ಮಾಯಿ! ಮಕ್ಕಳೊಂದಿಗೆ ಮಗುವಾದ ನಾಡದೊರೆ

CM ಅಂದ್ರೆ Common Man ಅಂತ ಮತ್ತೆ ಪ್ರೂವ್ ಮಾಡಿದ ಬಸವರಾಜ ಬೊಮ್ಮಾಯಿ! ಮಕ್ಕಳೊಂದಿಗೆ ಮಗುವಾದ ನಾಡದೊರೆ

ವಿದ್ಯಾರ್ಥಿಗಳೊಂದಿಗೆ ಬೆರೆತ ಸಿಎಂ

ವಿದ್ಯಾರ್ಥಿಗಳೊಂದಿಗೆ ಬೆರೆತ ಸಿಎಂ

'ಮುಖ್ಯಮಂತ್ರಿ ರೈತ ವಿದ್ಯಾ ನಿಧಿ' ಪ್ರಯೋಜನ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಸಿಎಂ ಬೊಮ್ಮಾಯಿ ಸಂವಾದ ನಡೆಸಿದ್ದಾರೆ. ಮಂಗಳೂರಿನ ವಿವಿಧ ಕಾಲೇಜಿನ ಆಯ್ದ ಹತ್ತು ವಿದ್ಯಾರ್ಥಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ ಮಾಡಿದ್ದಾರೆ.

  • Share this:

ದಕ್ಷಿಣ ಕನ್ನಡ: ರಾಜ್ಯದ ಮುಖ್ಯಮಂತ್ರಿ (CM) ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಿಎಂ ಅಂದ್ರೆ ಕಾಮನ್ ಮ್ಯಾನ್ (Common Man) ಎನ್ನುವುದನ್ನು ಮತ್ತೆ ನಿರೂಪಿಸಿದ್ದಾರೆ.  ಆಳ್ವಾಸ್ ಕಾಲೇಜಿನಲ್ಲಿ (Alva’s College) ನಡೆದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ಮಕ್ಕಳೊಂದಿಗೆ ಮಕ್ಕಳ ಹಾಗೆ ಬೆರೆತು ವಿದ್ಯಾರ್ಥಿಗಳ ಗಮನ ಸೆಳೆದಿದ್ದಾರೆ. ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು (Students) ನೆರೆದಿದ್ದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಕ್ಕಳೊಂದಿಗೆ ಉತ್ಸಾಹಭರಿತರಾಗಿ ಸಂವಾದ ಮಾಡಿದ್ದಾರೆ.


ವಿದ್ಯಾರ್ಥಿಗಳೊಂದಿಗೆ ಸಿಎಂ ಸಂವಾದ


ಮುಖ್ಯಮಂತ್ರಿ ರೈತ ವಿದ್ಯಾ ನಿಧಿ  ಪ್ರಯೋಜನ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಸಿಎಂ ಬೊಮ್ಮಾಯಿ ಸಂವಾದ ನಡೆಸಿದ್ದಾರೆ. ಮಂಗಳೂರಿನ ವಿವಿಧ ಕಾಲೇಜಿನ ಆಯ್ದ ಹತ್ತು ವಿದ್ಯಾರ್ಥಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ ಮಾಡಿದ್ದಾರೆ..ವಿದ್ಯಾರ್ಥಿಗಳ ಪ್ರಶ್ನೆ ಸುಧೀರ್ಘವಾದಾಗ ಮಧ್ಯಪ್ರವೇಶಿಸಿದ ನಿರೂಪಕ ರನ್ನು ತಡೆದ ಸಿಎಂ,ಮಕ್ಕಳನ್ನು ನೀವು ಮಧ್ಯ ಪ್ರವೇಶ ಮಾಡಬೇಡಿ,ಮಕ್ಕಳು ಮುಕ್ತವಾಗಿ ಮಾತನಾಡಲಿ ಅಂತಾ ಹೇಳಿದರು.


ಮುಖ್ಯಮಂತ್ರಿ ಗಳ ಸಂವಾದದಲ್ಲಿ ವಿದ್ಯಾರ್ಥಿ ಮತ್ತು ಸಿಎಂ‌ ನಡುವೆ ನಡೆದ ಸಂವಾದ ಈ ತರ ಇದೆ..


ಪೃಥ್ವಿ ಎಚ್.ಎಸ್.: ನಾನು ವಿದ್ಯಾರ್ಥಿ ನಿಧಿ ಯೋಜನೆಯ ಹಣವನ್ನು ನನ್ನ ತಂದೆಗೆ ತೋಟದ ಕೆಲಸಕ್ಕೆ ನೀಡಿದೆ. ತಂದೆಗೆ ಖುಷಿಯಾಯಿತು


ಸಿಎಂ: ನಾನು ಹಣ ನೀಡಿರೋದು ನಿಮ್ಮ ವಿದ್ಯಾರ್ಜನೆಗೆ. ಆದರೂ ತೊಂದರೆಯಿಲ್ಲ. ಚೆನ್ನಾಗಿ ಕಲಿತು ದೊಡ್ಡ ಸ್ಥಾನದಲ್ಲಿ ಕೂತು ನಿನ್ನ ತಂದೆ ತಾಯಿಯನ್ನು ಚೆನ್ಬಾಗಿ ನೋಡಿಕೋ


ಲೋಹಿತ್: ಸರ್, ವಿದ್ಯಾನಿಧಿಯ ಮೊತ್ತವನ್ನು ಏರಿಕೆ ಮಾಡಬೇಕು


ಸಿಎಂ: ನೀನು ವಿದ್ಯಾನಿಧಿ ಯೋಜನೆಯ ಹಣವನ್ನು ಏನು ಮಾಡಿದೆ? ಮೊದಲು ಈ ಯೋಜನೆಯ ಹಣ ವಿದ್ಯಾರ್ಜನೆಗೆ ಬಳಕೆಯಾಗಲಿ. ನೀವು ಪರೀಕ್ಷೆ ಗಳಲ್ಲಿ ಉತ್ತಮ ಸಾಧನೆ ಮಾಡಿ. ನಿಮ್ಮ ಸಾದನೆ ನೋಡಿ ಹೆಚ್ಚಳ ಮಾಡುತ್ತೇನೆ..


ಭಾವನಾ: ಸರ್, ರೈತರ ಮಕ್ಕಳಿಗೆ, ಬಡ ಮಕ್ಕಳಿಗೆ ಸರ್ಕಾರಿ ಕಾಂಪಿಟೇಟಿವ್ ಎಕ್ಸಾಂಗಳಿಗೆ ಕೋಚಿಂಗ್ ಸೆಂಟರ್ ಮಾಡಬಹುದಾ?
ಸಿಎಂ: ನಿಮ್ಮ ಸಲಹೆ ಚೆನ್ನಾಗಿದೆ ಮತ್ತು ಒಳ್ಳೆಯ ಕೋರಿಕೆಯಾಗಿದೆ. ಮುಖ್ಯಮಂತ್ರಿ ಮಾರ್ಗದರ್ಶಿ ಆ್ಯಪ್ ಮೂಲಕ ಕಾಂಪಿಟೇಟಿವ್ ಪರೀಕ್ಷೆ ಬರೆಯಲು ನೆರವಾಗಲಿದೆ.


ಇದನ್ನೂ ಓದಿ: Explained: ವಿದ್ಯಾರ್ಥಿಗಳೇ, ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕೆಂದು ಹೇಗೆ ನಿರ್ಧರಿಸಬೇಕು?


ಹಿತಾಶ್ರೀ: ನನ್ನ ತಂದೆ ರೈತರು, ರೈತ ನಿಧಿಯಿಂದ ಕಾಲೇಜಿನ ಫೀಸ್ ಕಟ್ಟಿದೆ ಮತ್ತು ನೀಟ್ ಎಕ್ಸಾಂಗೆ ಹಣ ವಿನಿಯೋಗಿಸಿದೆ


ಸಿಎಂ: ಪಿಯುಸಿ ಆದ್ಮೇಲೆ‌ ನೀಟ್, ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸರ್ಕಾರ ನೆರವು ನೀಡುವ ಯೋಚನೆಯನ್ನು ಮಾಡಿದೆ


ಅಕ್ಷತಾ: ರೈತ ನಿಧಿಯ ಹಣ ಬಂದಾಗ ಆಶ್ಚರ್ಯವಾಗಿತ್ತು. ಪಿಜಿಗೆ ಹಣವನ್ನು ವಿನಿಯೋಗಿಸಿದೆ


ಸಿಎಂ: ಒಳ್ಳೆಯದಾಗಲಿ, ಚೆನ್ನಾಗಿ ಓದು


ಜೋಯಿಸ್ಟನ್: ಪಾಸ್ ಬುಕ್ ಗಮನಿಸಿದಾಗ ಹಣ ಬಂದಿರುವ ವಿಚಾರ ಗೊತ್ತಾಯಿತು. ಮನೆಯಿಂದ ಕಾಲೇಜಿಗೆ 60 ಕೀ.ಮೀ. ಇದೆ. ಪ್ರಯಾಣದ ಖರ್ಚಿಗೆ ಉಪಯೋಗಿಸುತ್ತಿದ್ದೇನೆ


ಸಿಎಂ: ಒಳ್ಳೆಯದಾಗಲಿ


ಸಾನ್ವಿಕಾ ಶೆಟ್ಟಿ: ರೈತ ವಿದ್ಯಾ ನಿಧಿಯಿಂದ ತುಂಬಾ ಉಪಯೋಗ ಆಗಿದೆ. ಊಹಿಸಿರಲಿಲ್ಲ


ಸಿಎಂ: ಬೇರೆ ಸ್ಕಾಲರ್ಶಿಪ್ ಇದ್ದರೂ ರೈತ ವಿದ್ಯಾ ನಿಧಿ ಬರುತ್ತದೆ


ನಿಶ್ಮಿತಾ: ರೈತ ವಿದ್ಯಾ ನಿಧಿ ಯನ್ನು ಪ್ರಾಜೆಕ್ಟ್ ವರ್ಕ್ ಗೆ ಉಪಯೋಗಿಸಿದ್ದೇನೆ. ರೈತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಬಹುದಾ?
ಸಿಎಂ: ಸರ್ಕಾರಕ್ಕೆ ಈ ಬಗ್ಗೆ ಚಿಂತನೆ ಇದೆ


ಮಂಜುನಾಥ್: ನನ್ನ ಕಾಲೇಜು ಫೀಸ್ ಕಟ್ಟಲು ಈ ಹಣ ನೆರವಾಯಿತು..ಮೊದಲು ಸಣ್ಣ ಅಮೌಂಟ್ ಅಂತಾ ಬೇಸರ ಆಯಿತು.ಆದರೆ ಅದೇ ಹಣ ಕಷ್ಟ ನಿವಾರಿಸಿತು..ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನ್ನು ಖಾಸಗಿ ಕಾಲೇಜು ರೀತಿ ಮಾಡಬಹುದಾ?
ಸಿಎಂ: ಒಳ್ಳೆಯ ವಿಚಾರ.. ಮುಂದಿನ ದಿನದಲ್ಲಿ ಎಲ್ಲಾ ಪಾಲಿಟೆಕ್ನಿಕ್ ಕಾಲೇಜನ್ನು ಅಪ್ ಗ್ರೇಡ್ ಮಾಡುತ್ತೇವೆ..ಈ ಬಗ್ಗೆ ಸರ್ಕಾರ ಕ್ಕೆ ಯೋಚನೆ ಇದೆ..


ಇದನ್ನೂ ಓದಿ: Education: ಭಾರತಕ್ಕೆ ಫಿನ್‌ಲ್ಯಾಂಡ್‌ನ ಶಾಲಾ ವ್ಯವಸ್ಥೆ! ಏನಿದು ಹೊಸ ಶಿಕ್ಷಣ? ಸಂಪೂರ್ಣ ಮಾಹಿತಿ ಇಲ್ಲಿದೆ


ಒಟ್ಟಿನ್ನಲ್ಲಿ ಸಿಎಂ ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನಯ ಮೊದಲ ಸಂವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದು 21823 ವಿದ್ಯಾರ್ಥಿಗಳಿಗೆ ಒಟ್ಟು 787.61 ಲಕ್ಷ ಪಾವತಿಯಾಗಿದೆ. ಒಟ್ಟು ನೋಂದಾಯಿತ ಫಲಾನುಭವಿಗಳ ಸಂಖ್ಯೆ 36000 ಆಗಿದೆ.‌

First published: