Saalumarada Thimmakka: ಸಾಲು ಮರದ ತಿಮ್ಮಕ್ಕನಿಗೆ BDA ನಿವೇಶನ; ಕ್ರಯಪತ್ರ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ

ಇಂದು ಬೆಳಗ್ಗೆ ರೇಸ್ ಕೋರ್ಸ್ ನಿವಾಸದಲ್ಲಿ ಸಾಲುಮರದ ತಿಮ್ಮಕ್ಕ ಹಾಗೂ ಆಕೆಯ ಸಾಕು ಪುತ್ರನಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಡಿಎ ನಿವೇಶನದ ಕ್ರಯಪತ್ರ ವಿತರಣೆ ಮಾಡಿದ್ರು

ಸಾಲು ಮರದ ತಿಮ್ಮಕ್ಕನಿಗೆ ನಿವೇಶನ

ಸಾಲು ಮರದ ತಿಮ್ಮಕ್ಕನಿಗೆ ನಿವೇಶನ

  • Share this:
ಬೆಂಗಳೂರು (ಜೂ 25): ಶತಾಯುಷಿ ಸಾಲುಮರದ ತಿಮ್ಮಕ್ಕ (Saalumarada Thimmakka) ಅವರಿಗೆ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (BDA) 50*80 ಅಳತೆಯ ನಿವೇಶನವನ್ನು ಮಂಜೂರು ಮಾಡಲಾಗಿತ್ತು. ಇಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವ್ರು ನಿವೇಶನದ ಕ್ರಯ ಪತ್ರವನ್ನು ಸಾಲು ಮರದ ತಿಮ್ಮಕ್ಕನಿಗೆ ಹಸ್ತಾಂತರ ಮಾಡಿದ್ರು. ಈ ವೇಳೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ (S.R Vishwanath) ಮತ್ತು ಆಯುಕ್ತ ರಾಜೇಶ್ ಗೌಡ ಉಪಸ್ಥಿರಿದ್ರು. ಇಂದು ಬೆಳಗ್ಗೆ ರೇಸ್ ಕೋರ್ಸ್ ನಿವಾಸದಲ್ಲಿ ಸಾಲುಮರದ ತಿಮ್ಮಕ್ಕ ಹಾಗೂ ಆಕೆಯ ಸಾಕು ಪುತ್ರನಿಗೆ ಸಿಎಂ ಕ್ರಯಪತ್ರ ವಿತರಿಸಿದರು.

ಸಾಲು ಮರದ ತಿಮ್ಮಕ್ಕನಿಗೆ ಸಿಎಂ ಸಹಾಯ

ಮರಗಳನ್ನು ಮಕ್ಕಳಂತೆ ಪೋಷಣೆ ಮಾಡಿ ಜನಪ್ರಿಯರಾಗಿರೋ ಸಾಲು ಮರದ ತಿಮ್ಮಕ್ಕ ಇದೀಗ ತನ್ನ ಸಾಕು ಮಗ ಉಮೇಶ್ ಜೊತೆಯಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಸಾಕು ಮಗ ಉಮೇಶ್ ಜೊತೆಯಲ್ಲಿ ಜೂನ್ 21ರಂದು ಸಿಎಂ ಮನೆಗೆ ತೆರಳಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ರು. ಈ ವೇಳೆ ಸಿಎಂ ಜೊತೆ ವಿಚಾರಿಸಿದರು. ತಿಮ್ಮಕ್ಕನ ವಾಸಕ್ಕೆ ಬೆಂಗಳೂರಿನಲ್ಲಿ ಸೂಕ್ತ ನಿವೇಶನ ಇಲ್ಲದಿರುವುದನ್ನು ಮನಗಂಡ ಸಿಎಂ ತಕ್ಷಣವೇ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್‌ಗೆ ಕರೆ ಮಾಡಿದ್ದಾರೆ.

ತಿಮ್ಮಕ್ಕನಿಗೆ ಬಿಡಿಎ ಸೈಟ್​ ಅಲರ್ಟ್​

ವಿಶ್ವನಾಥ್ ಜೊತೆ ಮಾತನಾಡಿ ಸಾಲು ಮರದ ತಿಮ್ಮಕ್ಕನಿಗೆ ಬೆಂಗಳೂರಿನಲ್ಲಿ ನಿವೇಶನವನ್ನು ನೀಡುವಂತೆ ತಿಳಿಸಿದ್ದಾರೆ. ಇದರಿಂದಾಗಿ ಶತಾಯುಷಿಯಾಗಿರುವ ಸಾಲುಮರದ ತಿಮ್ಮಕ್ಕನಿಗೆ ಇಳಿವಯಸ್ಸಿನಲ್ಲಿ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50*80 ಅಳತೆಯ ನಿವೇಶನವನ್ನು ಮಂಜೂರು ಮಾಡಿದೆ.

CM Basavaraj Bommai hand over site to saalumarada thimmakka pvn
ಸಾಲು ಮರದ ತಿಮ್ಮಕ್ಕನಿಗೆ ನಿವೇಶನ


ಇದನ್ನೂ ಓದಿ: Yellamma Devi: ಮಾಟ ಮಾಡಿದವರಿಗೆ ಶಿಕ್ಷೆ ಕೊಟ್ರೆ 50,001 ರೂಪಾಯಿ ಹುಂಡಿಗೆ ಹಾಕ್ತೀನಿ! ಯಲ್ಲಮ್ಮ ದೇವಿಗೆ ಭಕ್ತನ ಪತ್ರ

ಪರಿಸರ ರಕ್ಷಣೆಯತ್ತ ಕಾಳಜಿವಹಿಸಿ- ಸಾಲುಮರದ ತಿಮ್ಮಕ್ಕ

ನಿವೇಶನಕ್ಕಾಗಿ ಸಮಾಜ ಕಲ್ಯಾಣ ಇಲಾಖೆ 1.12 ಕೋಟಿ ರೂ ಹಣ ಪಾವತಿಸಿದೆ ಎಂದು ಬಿಡಿಎ ಆಯುಕ್ತ ರಾಜೇಶ್ ಗೌಡ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಾಲುಮರದ ತಿಮ್ಮಕ್ಕ, ನನಗೆ ಬಿಡಿಎ ವತಿಯಿಂದ ನಿವೇಶನವನ್ನು ನೀಡಿರುವುದಕ್ಕೆ ಸಂತಸವಾಗುತ್ತಿದೆ. ಎಲ್ಲರೂ ಪರಿಸರ ರಕ್ಷಣೆಯತ್ತ ಕಾಳಜಿ ವಹಿಸಬೇಕು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರಲ್ಲಿ ಪರಿಸರ ಕಾಳಜಿ ಮೂಡುವಂತೆ ಮಾಡಬೇಕೆಂದು ಹಾರೈಸಿದರು.

ಮಕ್ಕಳಂತೆ ಮರಗಳನ್ನು ಸಾಕಿದ ತಿಮ್ಮಕ್ಕ

ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು. ಇವರಿಗೆ ಯಾವುದೇ ಶಿಕ್ಷಣ ಲಭ್ಯವಾಗದೆ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡ್ತಿದ್ರು. ಇವರು ಚಿಕ್ಕಯ್ಯ ಎಂಬ ಒಬ್ಬ ದನಕಾಯುವವರನ್ನು ಮದುವೆಯಾಗಿದ್ದು ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮಕ್ಕೆ ಬಂದ್ರು.  ಈ ದಂಪತಿಗೆ ಮಕ್ಕಳಿರಲಿಲ್ಲ ಅವರು ತಮಗೆ ಮಕ್ಕಳಿರದ ದುಖಃವನ್ನು ಮರೆಯಲು ಗಿಡಗಳನ್ನು ನೆಟ್ಟು ಮರವಾಗಿಸೋ ಕೆಲಸದಲ್ಲಿ ನಿರತರಾಗಿದ್ರು.

ಇದನ್ನೂ ಓದಿ: Uttara Kannada: ಸಹಸ್ರಲಿಂಗ ಕ್ಷೇತ್ರದಲ್ಲಿ ಕಣ್ಮರೆಯಾಗ್ತಿವೆ ಲಿಂಗಗಳು; ಐತಿಹಾಸಿಕ ಕ್ಷೇತ್ರದಲ್ಲಿ ಏನಾಗ್ತಿದೆ?

ಕುದೂರಿನಿಂದ ಹುಲಿಕಲ್ ತನಕವಿರುವ ರಾಜ್ಯ ಹೆದ್ದಾರಿ 94ರಲ್ಲಿ ತಿಮ್ಮಕ್ಕರವರು ಬೆಳಸಿದ ಮರಗಳು ಹೇರಳವಾಗಿದೆ. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿಮಾಡಲು ಆರಂಭಿಸಿದರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ 4 ಕಿ.ಮೀ. ಉದ್ದಳತೆಯ ದೂರದಲ್ಲಿ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ 20 ಸಸಿಗಳನ್ನು ನೆಟ್ಟರು

ಇವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಈ ಗಂಡ-ಹೆಂಡತಿ ಸಸಿಗಳಿಗೆ ನೀರುಣಿಸಲು ಬಿಂದಿಗೆ ಹಿಡಿದು 3-4 ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಜೊತೆಗೆ ಈ ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದರು. ತಿಮ್ಮಕ್ಕನವರು ಈ ಮರ ಬೆಳೆಸೋ ಕಾಯಕದಿಂದಲೇ ಜನಪ್ರಿಯರಾಗಿದ್ದಾರೆ.
Published by:Pavana HS
First published: