CM Bommai: ನನ್ನ ಹೊಗಳಿದ್ರೆ, ನಿನ್ನ ಶಿಷ್ಯರನ್ನು ಬಿಡ್ತೇನೆ ಅಂದ್ಕೋಬೇಡ: ಕಾಂಗ್ರೆಸ್ ಶಾಸಕನಿಗೆ ಸಿಎಂ ಟಾಂಗ್

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಸಿಎಂ ಬೊಮ್ಮಾಯಿ ನಡುವೆ ಜುಗಲ್ ಬಂದಿ ನಡೆಯಿತು. ಮೊದಲು ಮಾತನಾಡಿದ ಪ್ರಸಾದ್ ಅಬ್ಬಯ್ಯ ಸಿಎಂ ಅವರನ್ನು ಹೊಗಳಿ, ಬೇಡಿಕೆಗಳನ್ನು ಮುಂದಿಟ್ಟರು. ಅದಕ್ಕೆ ಟಾಂಗ್ ಕೊಟ್ಟ ಸಿಎಂ, ನನ್ನನ್ನು ಹೊಗಳಿದ್ರೆ ನಿನ್ನ ಶಿಷ್ಯರನ್ನು ಬಿಡ್ತೇನೆ ಅಂದ್ಕೋ ಬೇಡ ಅಂದರು.

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
ಹುಬ್ಬಳ್ಳಿಯ ಪೊಲೀಸ್ ಠಾಣೆ (Hubballi Police Station) ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಕಾಂಗ್ರೆಸ್ ಶಾಸಕರಿಗೆ (Congress MLAs) ಟಾಂಗ್ ಕೊಟ್ಟ ಘಟನೆ ನಡೆದಿದೆ. ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯಗೆ (MLA Prasad Abbaiah) ಸಿಎಂ ಟಾಂಗ್ ಕೊಟ್ಟಿದ್ದಾರೆ. ‍ನೀನು ಮೈಕ್​​ನಲ್ಲಿ ನನ್ನನ್ನು ಹೊಗಳಿದರೆ ನಿನ್ನ ಶಿಷ್ಯರು ಯಾರನ್ನೂ ಬಿಡಲ್ಲ. ನೀನು ಆ ನಿರೀಕ್ಷೆ ಇಟ್ಟುಕೊಂಡು ಹೊಗಳಬೇಡ. ನಿನ್ನ ಆಲೋಚನೆ ನನಗೂ ಸ್ವಲ್ಪ ತಿಳಿಯುತ್ತೆ. ನಿನ್ನ ಶಿಷ್ಯರು ಅಪರಾಧ ಕೃತ್ಯ ಮಾಡಿದ್ರೆ ಬಿಟ್ಟು ಬಿಡುವ ಪ್ರಶ್ನೆಯೇ ಇಲ್ಲ ಅಂತ ಪರೋಕ್ಷ ಎಚ್ಚರಿಕೆ ನೀಡಿದರು. ನಿಮ್ಮ ಸರ್ಕಾರವಿದ್ದಾಗ ನಾವೂ ಹೀಗೆಯೇ ವೇದಿಕೆ ಮೇಲೆ ಕೇಳುತ್ತಿದ್ದೆವು. ನಮ್ಮ ಯಾವ ಮನವಿಯನ್ನೂ ನಿಮ್ಮ ಸರ್ಕಾರ ಲೆಕ್ಕಕ್ಕಿಡುತ್ತಿದ್ದಿಲ್ಲ. ಆದರೆ ಕನಿಷ್ಟ ನೀವು ಮಾಡೋ ಮನವಿಗೆ ಸ್ಪಂದಿಸೋ ಸರ್ಕಾರ ಈಗ ಬಂದಿದೆ ಎಂದು ಹೇಳಿದರು.

ಸಿಎಂ ಮಾತಿನಿಂದ ಮುಜುಗರಕ್ಕೊಳಗಾದ ಶಾಸಕ ಪ್ರಸಾದ್ ಅಬ್ಬಯ್ಯ ನಸುನಕ್ಕು ಸುಮ್ಮನೆ ಕುಳಿತರು. ಸಿಎಂ ಮುಂದೆ ಭಾಷಣ ಮಾಡಿದ್ದ ಪ್ರಸಾದ್ ಅಬ್ಬಯ್ಯ, ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದರು. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.

ಪೊಲೀಸ್ ಠಾಣೆ, ಆಸ್ಪತ್ರೆಗೆ ಉದ್ಘಾಟಿಸೋಕೆ ಮುಜುಗರ

ಪೊಲೀಸ್ ಠಾಣೆ ಅಥವಾ ಆಸ್ಪತ್ರೆಗಳನ್ನು ಉದ್ಘಾಟಿಸೋಕೆ ಮುಜುಗರವಾಗುತ್ತೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಸ್ಯ ಚಟಾಕಿ ಹಾಹಿಸಿದರು. ಹುಬ್ಬಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು. ಕಸಬಾಪೇಟೆ ಮತ್ತು ದಕ್ಷಿಣ ಸಂಚಾರ ಪೊಲೀಸ್ ಠಾಣೆಗಳ ಉದ್ಘಾಟನೆ ಹಾಗೂ ಗೋಕುಲ ರೋಡ್, ವಿದ್ಯಾನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗಳಿಗೆ ಸಿಎಂ ಶಿಲನ್ಯಾಸ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಹಳೆಯ ಒಡನಾಡಿಗಳನ್ನ ನೋಡಿ ಸಂತಸವಾಗುತ್ತಿದೆ ಎಂದರು.

ಸಿಎಂ ನಗೆ ಚಟಾಕಿ

ತವರು ಮನೆಗೆ ಮಗಳು ಬಂದಷ್ಟೇ ಖುಷಿಯಾಗುತ್ತಿದೆ. ಪೊಲೀಸ್ ಠಾಣೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡುತ್ತಿರೋದು ಸಂತಸದ ವಿಷಯ. ಪೊಲೀಸ್ ಠಾಣೆ ಹಾಗೂ ಆಸ್ಪತ್ರೆಗಳ ಉದ್ಘಾಟನೆ ಅಂದ್ರೆ ಮುಜುಗರ ಎನಿಸುತ್ತೆ. ಹೊಟೇಲ್​​ಗಳಿಗಾದ್ರೆ ಜನ ಬರ್ಲಿ ಅಂತ ಹಾರೈಸಬಹುದು. ಆದ್ರೆ ಪೊಲೀಸ್ ಠಾಣೆ, ಆಸ್ಪತ್ರೆಗಳಿಗೆ ಜನ ಬರ್ಲಿ ಅನ್ನೋಕಾಗಲ್ಲ ಎಂದು ಸಿಎಂ ನಗೆ ಚಟಾಕಿ ಹಾರಿಸಿದರು.

CM Basavaraj bommai gave taunt to Congress MLA Prasad Abbaiah saklb mrq
ಶಿಲಾನ್ಯಾಸ


ಪೊಲೀಸ್ ಠಾಣೆಗಳು ಅತ್ಯಂತ ಅವಶ್ಯಕವಾಗಿವೆ. ಸಮಾಜದಲ್ಲಿ ಶಿಸ್ತು, ಕಾನೂನು ಪಾಲನೆಯಾಗಬೇಕಾದ್ರೆ ಪೊಲೀಸರ ಅಗತ್ಯ ತುಂಬಾ ಇದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರ ಪಾತ್ರ ಬಹುಮುಖ್ಯ. ಕರ್ನಾಟಕ ಪೊಲೀಸರು ಅತ್ಯಂತ ದಕ್ಷ ಅಧಿಕಾರಿಗಳಾಗಿದ್ದಾರೆ. ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಪೊಲೀಸರ ಪಾತ್ರ ದೊಡ್ಡದಿದೆ. ಹುಬ್ಬಳ್ಳಿಯಲ್ಲಿ ಶಂಕುಸ್ಥಾಪನೆ ಮಾಡಿದ ಪೊಲೀಸ್ ಠಾಣೆಗಳ ಕಟ್ಟಡ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳ್ಳಲಿದೆ ಎಂದರು.

ರಾಜ್ಯದಲ್ಲಿ 8,101 ಶಾಲಾ ಕಟ್ಟಡ ನಿರ್ಮಾಣ

ಎಂಟು ತಿಂಗಳೊಳಗಾಗಿ ಈ ಠಾಣೆಗಳ ಕಟ್ಟಡ ನಿರ್ಮಾಣಕ್ಕೆ ಸೂಚನೆ ನೀಡಿದರು. ಇದೇ ಒಂದೇ ವರ್ಷದಲ್ಲಿ ರಾಜ್ಯದಲ್ಲಿ 8101 ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ಒಂದೇ ಒಂದು ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಿರಲಿಲ್ಲ. ಈ ವರ್ಷ 81 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ಸ್ಥಾಪನೆ ಮಾಡಲಾಗಿದೆ. ಪೊಲೀಸರಿಗೆ ಎನ್​​ಡಿಎ ಮಾದರಿಯಲ್ಲಿ ತರಬೇತಿ ಅಗತ್ಯ ಇದೆ. ಈ ಬಗ್ಗೆ ನಾನು ಗೃಹ ಸಚಿವನಾಗಿದ್ದಾಗ ಈ ಬಗ್ಗೆ ಚರ್ಚೆ ಮಾಡಿದ್ದೆ. ಪೊಲೀಸರು ಹಾಗೂ ಪೊಲೀಸರ ಕುಟುಂಬಗಳಿಗೆ ಹಲವು ಸೌಲಭ್ಯಗಳನ್ನ ನೀಡಲಾಗಿದೆ.ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಅವುಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟಿಬದ್ಧವಾಗಿ ಕೆಲಸ ಮಾಡಬೇಕಿದೆ. ಅಪರಾಧ ಪ್ರಕರಣಗಳನ್ನ ತಡೆಗಟ್ಟುವಲ್ಲಿ ಕೆಲಸ ಮಾಡಿದಾಗ ಮಾತ್ರ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಇದನ್ನೂ ಓದಿ:  Sister Suicide: ಗೌರಿ ತರೋ ವಿಚಾರಕ್ಕೆ ಗಲಾಟೆ, ತಂಗಿ ಜೊತೆ ಜಗಳ ಮನನೊಂದು ಅಕ್ಕ ಸೂಸೈಡ್!

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಮಾಜಿ ಸಿಎಂ ಜಗದೀಶ್​ ಶೆಟ್ಟರ್, ಸಚಿವರಾದ ಹಾಲಪ್ಪ ಆಚಾರ್,  ಶಂಕರಪಾಟೀಲ ಮುನೇನಕೊಪ್ಪ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಮತ್ತಿತರರ ಉಪಸ್ಥಿತರಿದ್ದರು.

ಅರವಿಂದ ಲಿಂಬಾವಳಿ ಘಟನೆ ಗೊತ್ತಿಲ್ಲ ಎಂದ ಸಿಎಂ

ಮಹಿಳೆಯೊಂದಿಗೆ ಅರವಿಂದ ಲಿಂಬಾವಳಿ ಅನುಚಿತ ವರ್ತನೆ ವಿಚಾರ ನನಗೆ ಗೊತ್ತಿಲ್ಲ. ನಾನು ಊರಲ್ಲಿ ಇರಲಿಲ್ಲ. ಹೀಗಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಗೊತ್ತಿಲ್ಲ. ಈ ಕುರಿತು ಲಿಂಬಾವಳಿ ಬಳಿ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವೃತ್ತಿ ಶಿಕ್ಷಣ ಕೋರ್ಸ್ ಗೆ ಪಿಯುಸಿ ಮತ್ತು ನೀಟ್ ಪರೀಕ್ಷೆಯ ಶೇ.50 ಅಂಕ ಪರಿಗಣನೆ ವಿಚಾರಕ್ಕೆ ಸಂಬಂಧಿಸಿ, ಕೋರ್ಟ್ ಆದೇಶದ ಅಧ್ಯಯನ ಮಾಡಲಾಗುವುದು. ಆದೇಶ ಜಾರಿಗೆ ತರುವ ಮುನ್ನ ಸಮಗ್ರ ಅಧ್ಯಯನ ಮಾಡ್ತೇವೆ. ಯಾರು ನೈಜವಾಗಿ ಪರೀಕ್ಷೆ ಬರೆದು ಸಿ.ಇ.ಟಿ ಯಲ್ಲಿ ಉತ್ತಮ ಪಲಿತಾಂಶ ಪಡೆದವರಿಗೆ ಅನ್ಯಾಯ ಆಗೋಕೆ ಬಿಡಲ್ಲ. ಈ ಕುರಿತು ಅಡ್ವೋಕೇಟ್ ಜನರಲ್ ಗೆ ವರದಿ ಕೊಡೋಕೆ ಹೇಳಿದ್ದೇನೆ. ನಾನು ಮತ್ತು ಉನ್ನತ ಶಿಕ್ಷಣ ಸಚಿವರು ಎ.ಜಿ ಅವರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ತೇವೆ ಎಂದರು.

ಇದನ್ನೂ ಓದಿ:  Leopard: ಚಿರತೆ ಕಾರ್ಯಾಚರಣೆ ವಿಫಲ; ಜನರ ಭಯ ದೂರ ಮಾಡಲು ಅರಣ್ಯ ಇಲಾಖೆ ಪ್ರಯತ್ನ

ಔರಾದ್ಕರ್ ವರದಿ

ಗಡಿ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನವೆಂಬರ್ 23 ಕ್ಕೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆಗೆ ಬರಲಿದೆ. ರಾಜ್ಯದ ಪರ ವಾದ ಮಂಡಿಸಲು ಸಮರ್ಥ ಕಾನೂನು ತಜ್ಞರ ತಂಡ ಹಿರಿಯ ವಕೀಲರನ್ನು ನೇಮಿಸಲು ಎ.ಜಿ. ಗೆ ನಿರ್ದೇಶಿಸಿದ್ದೇನೆ. ಔರಾದ್ಕರ್ ವರದಿ ಜಾರಿಗೆ ತಂದಿದ್ದೇವೆ.

ಕಂಪ್ಯೂಟರ್ ಕಡ್ಡಾಯಗೊಳಿಸಿರುವುದು ಎಲ್ಲ ಇಲಾಖೆಗೂ ಅನ್ವಯ. ಡಿಸೆಂಬರ್ ಒಳಗಾಗಿ ಅವರು ಕಲಿಯಲೇ ಬೇಕು. ಪೊಲೀಸ್ ಇಲಾಖೆಯವರು ಅಪ್ ಡೇಟ್ ಆಗುವುದು ಅನಿವಾರ್ಯ. ಹುಬ್ಬಳ್ಳಿ ಬೆಳಿತಾ ಇರೋದ್ರಿಂದ ಹೊಸ ಪೊಲೀಸ್ ಠಾಣೆಗಳ ಅವಶ್ಯಕತೆಯಿದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
Published by:Mahmadrafik K
First published: