• Home
  • »
  • News
  • »
  • state
  • »
  • Basavaraj Bommai: ಕುಚಿಕು ಗೆಳೆಯನ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಸಿಎಂ

Basavaraj Bommai: ಕುಚಿಕು ಗೆಳೆಯನ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಸಿಎಂ

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

Raju Patil: ಹುಬ್ಬಳ್ಳಿಯ ಶಕ್ತಿನಗರದ ನಿವಾಸಿಯಾಗಿದ್ದ ರಾಜು ಪಾಟೀಲ್, ಬೊಮ್ಮಾಯಿಯವರಿಗೆ ದಶಕದಿಂದಲೂ ಪರಮಾಪ್ತ ಸ್ನೇಹಿತರಾಗಿದ್ದರು. ಅಲ್ಲದೇ ತಾಯಿಯ ಕಡೆಯಿಂದ ಸಂಬಂಧಿಯ ಸಹ ಆಗಿದ್ದರು.

  • Share this:

ಉದ್ಯಮಿ,  ಹಾಗೂ ಸಿಎಂ ಬಸವರಾಜ್​ ಬೊಮ್ಮಾಯಿ(Basavaraj Bommai) ಅವರ  ಸ್ನೆಹಿತರಾದ ರಾಜು (ಯಲ್ಲಪ್ಪಗೌಡ) ಬಿ. ಪಾಟೀಲ (63) ಬುಧವಾರ ಹೃದಯಾಘಾತದಿಂದ (Heart Attack)ನಿಧನರಾದರು.  ಮೃತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುಟುಂಬ ವರ್ಗದ ಸ್ನೇಹಿತರಾಗಿದ್ದು, ಬೆಳಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿ ನಗರಕ್ಕೆ ಬಂದಿರುವ ಸಿಎಂ  ಸ್ನೇಹಿತನ  ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 


ಹುಬ್ಬಳ್ಳಿಯ ಶಕ್ತಿನಗರದ ನಿವಾಸಿಯಾಗಿದ್ದ ರಾಜು ಪಾಟೀಲ್, ಬೊಮ್ಮಾಯಿಯವರಿಗೆ ದಶಕದಿಂದಲೂ ಪರಮಾಪ್ತ ಸ್ನೇಹಿತರಾಗಿದ್ದರು. ಅಲ್ಲದೇ ತಾಯಿಯ ಕಡೆಯಿಂದ ಸಂಬಂಧಿಯ ಸಹ ಆಗಿದ್ದರು.


ಇನ್ನು ಸ್ನೇಹಿತ ರಾಜು ಪಾಟೀಲ ಅಂತಿಮ ದರ್ಶನದ ವೇಳೆ ಸಿಎಂ ಬೊಮ್ಮಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ರಾಜು ಪಾಟೀಲ ಪಾರ್ಥಿವ ಶರೀರ ಕಂಡು ಸಿಎಂ ಕಣ್ಣೀರು ಹಾಕಿದ್ದಾರೆ.  ಸಿಎಂ ಜೊತೆ ಅವರ  ಕುಟುಂಬ ಸದಸ್ಯರು ಸಹ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಕಂಬಿನಿ ಮಿಡಿದಿದ್ದಾರೆ.


ಇದನ್ನೂ ಓದಿ: ಇನ್ನು 6 ತಿಂಗಳಲ್ಲಿ ಕೊರೋನಾ ಎಂಡೆಮಿಕ್​ ಆಗಲಿದೆ ಎಂದ ಎನ್‌ಸಿಡಿಸಿ ನಿರ್ದೇಶಕ ಸುಜೀತ್ ಸಿಂಗ್


ನ್ನ ನಿನ್ನೆ ಗೆಳೆಯನ ಸಾವಿನ ಸುದ್ದಿ ಕೇಳಿ, ಮೌನಕ್ಕೆ ಶರಣಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜು ಪಾಟೀಲ್ ಅವರ ಸಾವಿನ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ನೋವಿನ ನುಡಿಗಳನ್ನು ಸಿಎಂ ಬರೆದುಕೊಂಡಿದ್ದು, ಸಹೋದರ ಸಂಬಂಧಿ ಹಾಗೂ ಆಪ್ತ ಸ್ನೇಹಿತ ರಾಜು ಪಾಟೀಲ್ ಅವರು ಇಂದು ನಿಧನರಾಗಿದ್ದು, ನಾನು ತುಂಬಾ ದುಃಖಿತನಾಗಿದ್ದೇನೆ ಎಂದಿದ್ದಾರೆ.


ರಾಜು ಪಾಟೀಲ್ ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ರಾಜು ಪಾಟೀಲ್ ಒಬ್ಬ ಆಪ್ತ ಮಿತ್ರರಾಗಿದ್ದರು. ನಾವಿಬ್ಬರು ಬಾಲ್ಯದಿಂದ ಕೂಡಿಯೇ ಬೆಳೆದವರು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.


ಇದನ್ನೂ ಓದಿ: ಸದನದಲ್ಲಿ ಬೆಲೆ ಏರಿಕೆಗೆ ಇಡ್ಲಿ, ದೋಸೆ ಉದಾಹರಣೆ; ಗೃಹ ಸಚಿವರಿಗೆ ಹೋಂ ವರ್ಕ್​ ಕೊಟ್ಟ ಸಿದ್ದರಾಮಯ್ಯ


ನಾನು ಹುಬ್ಬಳ್ಳಿಯಲ್ಲಿ ಇದ್ದಾಗ ಅವರು ಸದಾ ನನ್ನ ಜತೆ ಇರುತ್ತಿದ್ದರು. ಅವರ ಅಗಲಿಕೆಯು ನನಗೆ ಅತೀವ ದುಃಖ ತರಿಸಿದ್ದು, ಅವರು ಇಷ್ಟು ಬೇಗ ನಮ್ಮಿಂದ ದೂರವಾಗುತ್ತಾರೆ ಅಂದುಕೊಂಡಿರಲಿಲ್ಲ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬದವರಿಗೆ ನೀಡಲಿ ಎಂದು ಭಗವಂತನಲ್ಲಿ ಕೋರುತ್ತೇನೆ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.


ಇನ್ನು ಕುಟುಂಬದ ಸದಸ್ಯರೊಂದಿಗೆ ನೇರವಾಗಿ ಪಾಟೀಲ ಮನೆಗೆ ಆಗಮಿಸಿರುವ ಸಿಎಂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Published by:Sandhya M
First published: