ಹಾವೇರಿ: ಶಿಗ್ಗಾಂವಿ ಪಟ್ಟಣದ (Shiggaon) ತಹಶೀಲ್ದಾರ್ ಕಚೇರಿಯಲ್ಲಿ ಸಾಂಕೇತಿಕವಾಗಿ ಮೊದಲ ಹಂತದ ನಾಮಪತ್ರವನ್ನು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಸಲ್ಲಿಕೆ ಮಾಡಿದರು. ಕುಟಂಬಸ್ಥರೊಂದಿಗೆ ತೆರಳಿ ಸಿಎಂ ಬೊಮ್ಮಾಯಿಂದ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಮೂರು ಬಾರಿ ಗೆದ್ದು ಬೀಗಿರುವ ಸ್ಕಾರ್ಪಿಯೋ ಕಾರ್ನಲ್ಲಿಯೇ (Car) ಸಿಎಂ ಬಂದಿರೋದು ವಿಶೇಷವಾಗಿತ್ತು. ಸಿಎಂ ಕಾರ್ನಲ್ಲಿಯೇ ಸಚಿವ ಸಿ ಸಿ ಪಾಟೀಲ್ (Minister CC Patil), ಸಂಸದ ಉದಾಸಿ (MP Udasi) ಹಾಗೂ ಸ್ಥಳೀಯ ಮುಖಂಡರು ಬಂದರು. ಈ ಹಿಂದೆ ಇದೇ ಕಾರ್ನಲ್ಲಿಯೇ ಸಿಎಂ ಚುನಾವಣಾ ಪ್ರಚಾರ ನಡೆಸಿದ್ದರು. ಹಾಗಾಗಿ ಈ ವಾಹನದಲ್ಲಿ ಬಂದ್ರೆ ಗೆಲ್ಲುತ್ತೇವೆ ಅನ್ನೋ ನಂಬಿಕೆಯನ್ನು ಹೊಂದಿದ್ದಾರೆ.
ಶಿಗ್ಗಾಂವಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಾಂಕೇತಿಕವಾಗಿ ಮೊದಲ ಹಂತದ ನಾಮಪತ್ರವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಸಲ್ಲಿಕೆ ಮಾಡಿದರು. ಕುಟಂಬಸ್ಥರೊಂದಿಗೆ ತೆರಳಿ ಸಿಎಂ ಬೊಮ್ಮಾಯಿ ಅವರಿಂದ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ನಾಮಪತ್ರ ಸಲ್ಲಿಕೆ ಹಿನ್ನೆಲೆ ಸಿಎಂ ಬಸವರಾಜ್ ಬೊಮ್ಮಾಯಿ ಹುಬ್ಬಳ್ಳಿಯ ಆರಾಧ್ಯ ದೈವ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಮನೆಯಲ್ಲಿ ಪೂಜೆ ನೆರವೇರಿಸಲಾಗಿತ್ತು.
ಇದನ್ನೂ ಓದಿ: JDS Manifesto: ಶಿಕ್ಷಣ ಕ್ಷೇತ್ರಕ್ಕೆ ದೇವೇಗೌಡರು ನೀಡಿದ ಭರವಸೆಗಳೇನು? ಇಲ್ಲಿದೆ ಮಾಹಿತಿ
ತಹಶೀಲ್ದಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದೆ. ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈ ತಾಲೂಕಿನ ಅಭಿವೃದ್ಧಿ ಮತವನ್ನ ಕ್ಷೇತ್ರದ ಜನರು ನೀಡಿದ್ದಾರೆ. ಈ ಹಿಂದಿನಕ್ಕಿಂತಲೂ ಹೆಚ್ಚನ ಬೆಂಬಲ ನೀಡುತ್ತಾರೆ. ಆಡಳಿತ ಪಕ್ಷ, ಹಲವು ಹಾಲಿ ಶಾಸಕನ್ನ ತೆಗೆದಾಗ ಬಂಡಾಯ ಸಹಜ. ಈ ಕೊನೆಯ ಪಟ್ಟಿ ಬಿಡುಗಡೆಯಾಗಲಿದೆ. ಎಲ್ಲವೂ ಶಮನ ಆಗುತ್ತೆ ಎಂದು ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಯಾರಿಗೆ ಪೈಪೋಟಿ ಮಾಡಿದರು ಪರವಾಗಿಲ್ಲ.ಎದುರಾಳಿ ಯಾರೇ ಬರಲಿ, ವಿರೋಧಿ ಯಾವಾಗಲೂ ವಿರೋದಿಗಳೇ. ಕಾಂಗ್ರೆಸ್ ನವರು ನನ್ನ ವಿರೋದಿಗಳು,ಅವರ ಮಾತಿಗೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದರು.
ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆ
ಮುಧೋಳ ತಹಶೀಲ್ದಾರ ಕಚೇರಿಯಲ್ಲಿ ಇಂದು ಸಾಂಕೇತಿಕವಾಗಿ ಸಚಿವ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆ ಮಾಡಿದರು. ಮುಧೋಳ ಬಿಜೆಪಿ ಮುಖಂಡ ರಾಮಣ್ಣ ತಳೇವಾಡ ಹಾಗೂ ಮುಧೋಳ ಬಿಜೆಪಿ ಮುಖಂಡರ ಜೊತೆ ಬಂದು ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಾಯ್ತು.
ಎಪ್ರಿಲ್ 18ರಂದು ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನದ ಮೂಲಕ ಪುನಃ ನಾಮಪತ್ರ ಸಲ್ಲಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ