• Home
  • »
  • News
  • »
  • state
  • »
  • CM Bommai: ರಾಷ್ಟ್ರೀಯ ನಾಯಕರೇ ಬಂದು ಪ್ರಚಾರ ಮಾಡ್ತಾರೆ, ಆದರೂ ಸಿಎಂ ಬೊಮ್ಮಾಯಿಗೆ ಟೆನ್ಷನ್, ಟೆನ್ಷನ್!

CM Bommai: ರಾಷ್ಟ್ರೀಯ ನಾಯಕರೇ ಬಂದು ಪ್ರಚಾರ ಮಾಡ್ತಾರೆ, ಆದರೂ ಸಿಎಂ ಬೊಮ್ಮಾಯಿಗೆ ಟೆನ್ಷನ್, ಟೆನ್ಷನ್!

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

ಯಾವಾಗ ಯಾರ ಮೇಲೆ ಯಾವ ದಾಖಲೆ ರಿಲೀಸ್​ ಮಾಡ್ತಾರೋ ಗೊತ್ತಿಲ್ಲ. ಇದೂ ಕೂಡ ಸರ್ಕಾರಕ್ಕೆ ದೊಡ್ಡ ಟೆನ್ಷನ್​ ತಂದಿಟ್ಟಿದೆ ಎಂದು ಹೇಳಲಾಗುತ್ತಿದೆ.

  • News18 Kannada
  • Last Updated :
  • Karnataka, India
  • Share this:

ರಾಷ್ಟ್ರೀಯ ಬಿಜೆಪಿ ನಾಯಕರು (BJP Leaders) ಬರ್ತಾರೆ, 2023ರ ಚುನಾವಣೆಗೆ ಪ್ರಚಾರನೂ (Election Campaign) ಮಾಡ್ತಾರೆ. ಇದರ ಮಧ್ಯೆ ಸಿಎಂ ಬಸವರಾಜ್ ಬೊಮ್ಮಾಯಿ  (CM Basavaraj Bommai) ಅವರಿಗೆ ಟೆನ್ಷನ್​ ಶುರುವಾಗಿದೆ. ಈ ಟೆನ್ಷನ್ ಶುರುವಾಗಿದ್ದು ವಿರೋಧ ಪಕ್ಷದ ನಾಯಕರಿಂದಲ್ಲ. ಹೌದು, ಇದು ಟೆನ್ಷನ್ ಶುರುವಾಗಿದ್ದು ಸ್ವಪಕ್ಷದ ನಾಯಕರಿಂದ ಎಂದು ಹೇಳಲಾಗುತ್ತಿದೆ. ಬೆಳಗಾವಿಯಲ್ಲಿ (Belagavi Session) ಡಿಸೆಂಬರ್ 19 ರಿಂದ 29 ರವರೆಗೆ ಚಳಿಗಾಲದ ಅಧಿವೇಶನ (Winter Session) ನಡೆಯಲಿದೆ. ಆದರೆ ಬೆಳಗಾವಿ ಅಧಿವೇಶನ ಸಿಎಂ ಬೊಮ್ಮಾಯಿ ಪಾಲಿಗೆ ಮಗ್ಗುಲ ಮುಳ್ಳಾಗೋ ಲಕ್ಷಣ ಕಾಣಿಸುತ್ತಿದೆ. ಇದಕ್ಕೆ ಕಾರಣ ರಮೇಶ್​ ಜಾರಕಿಹೊಳಿ (Former Ministers), ಈಶ್ವರಪ್ಪ ಮತ್ತು ಮಂತ್ರಿಸ್ಥಾನ ಸಿಗದ ಅತೃಪ್ತರು.


ಬಿಜೆಪಿ ಬಿಡಲ್ಲ ಅಂತಿದ್ರೂ ಪಕ್ಷದ ಕಾರ್ಯಕ್ರಮಗಳಿಂದ ರಮೇಶ್​ ಜಾರಕಿಹೊಳಿ ದೂರ ಉಳಿದುಕೊಂಡಿದ್ದಾರೆ. ಮಂತ್ರಿಸ್ಥಾನ ಕೊಟ್ಟರಷ್ಟೇ ಪಕ್ಷಕ್ಕೆ ನಾನು ಹತ್ತಿರ ಅನ್ನೋದು ಈಶ್ವರಪ್ಪ ಮಾತು. ಇದು ಸಹಜವಾಗಿಯೇ ವಿಪಕ್ಷಗಳಿಗೆ ಆಹಾರ ಆಗುತ್ತೆ ಅನ್ನೋದು ಸರ್ಕಾರಕ್ಕೆ ಚಿಂತೆಯಾಗಿದೆ.


ಸರ್ಕಾರದ ವಿರುದ್ಧ ದಾಖಲೆ ಸಂಗ್ರಹ ಮಾಡಿಕೊಂಡಿರುವ ವಿಪಕ್ಷಗಳು


ಬಿಜೆಪಿ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರ ಆರೋಪ ಮಾಡಿರೋ ವಿಪಕ್ಷಗಳು ದಾಖಲೆಗಳನ್ನ ರೆಡಿ ಮಾಡಿವೆಕೊಂಡಿವೆಯಂತೆ. ಯಾವಾಗ ಯಾರ ಮೇಲೆ ಯಾವ ದಾಖಲೆ ರಿಲೀಸ್​ ಮಾಡ್ತಾರೋ ಗೊತ್ತಿಲ್ಲ. ಇದೂ ಕೂಡ ಸರ್ಕಾರಕ್ಕೆ ದೊಡ್ಡ ಟೆನ್ಷನ್​ ತಂದಿಟ್ಟಿದೆ ಎಂದು ಹೇಳಲಾಗುತ್ತಿದೆ.


cm basavaraj bommai facing internal pressure ahead cabinet expansion mrq
ಕೆಎಸ್ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ


ಸರ್ಕಾರಕ್ಕೆ ಮತ್ತೊಂದು ದೊಡ್ಡ ಚಿಂತೆ ಆಗಿರೋದು ಹೋರಾಟಗಳು, ಪ್ರತಿಭಟನೆಗಳು. ಬೆಳಗಾವಿ ಗಡಿ ಸಮಸ್ಯೆ ಬಗೆಹರಿಯದಿದ್ರೆ ಕನ್ನಡ ಸಂಘಟನೆಯವರು ಅಧಿವೇಶನದ ಸಂದರ್ಭದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಬಹುತೇಕ ಫಿಕ್ಸ್ ಆಗಿದೆ. ಇತ್ತ ಈ ಪ್ರತಿಭಟನೆ ಲಾಭ ಪಡೆಯಲು ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿಯಲ್ಲಿ ನಿಂತಿವೆ.


ಸಾಲು ಪ್ರತಿಭಟನೆಯ ಬಿಸಿ


ಇತ್ತ ರೈತರು, ಕಬ್ಬು ಬೆಳೆಗಾರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹೋರಾಟಕ್ಕೆ ರೆಡಿ ಆಗ್ತಿದ್ದಾರೆ. ವೇತನ ತಾರತಮ್ಯ, ವರ್ಗಾವಣೆ ನಿರ್ಲಕ್ಷ್ಯ, ಕಿರುಕುಳ ಅಂತ ಬಿಎಂಟಿಸಿ, ಕೆಎಸ್​ಆರ್​ಟಿಸಿ ಸಿಬ್ಬಂದಿ ಮುಷ್ಕರಕ್ಕೆ ರೆಡಿಯಾಗ್ತಿದ್ದಾರೆ.


ಅಮಿತ್ ಶಾ ಜೊತೆ ಚರ್ಚೆ


ಒಂದ್ಕಡೆ ಚುನಾವಣೆ, ಇನ್ನೊಂದ್ಕಡೆ ಪಕ್ಷದೊಳಗಿನ ಮುನಿಸು, ಮತ್ತೊಂದ್ಕಡೆ ಪ್ರತಿಭಟನೆಗಳು, ಹೋರಾಟಗಳು. ವಿವಾದಗಳು. ಎಲ್ಲದಕ್ಕೂ ಮದ್ದು ಹುಡುಕುವ ಕೆಲಸವನ್ನು ಸಿಎಂ ಬೊಮ್ಮಾಯಿ ಮಾಡುತ್ತಿದ್ದಾರೆ.


cm basavaraj bommai facing internal pressure ahead cabinet expansion mrq
ಸಿಎಂ ಬಸವರಾಜ್ ಬೊಮ್ಮಾಯಿ


ಡಿಸೆಂಬರ್ 14ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿರುವ ಸಿಎಂ ಬೊಮ್ಮಾಯಿ ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.


ಇದನ್ನೂ ಓದಿ: Karnataka Politics: ಅಧಿವೇಶನಕ್ಕೂ ಮುನ್ನ ರಮೇಶ್ ಜಾರಕಿಹೊಳಿ, ಈಶ್ವರಪ್ಪ ಕನಸು ನನಸಾಗುತ್ತಾ?


ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಶೀಲನೆ


ಸುವರ್ಣ ವಿಧಾನಸೌಧದಲ್ಲಿ (Suvarna Vidhana Soudha)  ಡಿ.19 ರಿಂದ 30 ರವರೆಗೆ ವಿಧಾನಮಂಡಳ ಚಳಿಗಾಲ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ವಸತಿ, ಊಟೋಪಾಹಾರ, ಸಾರಿಗೆ ಮತ್ತಿತರ ವ್ಯವಸ್ಥೆಯು ಪ್ರತಿ ಬಾರಿಯಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.


ವಿಧಾನಮಂಡಳದ ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು


ಇದನ್ನೂ ಓದಿ:  Online Gambling: ಆನ್​ಲೈನ್​ ಜೂಜಾಟಕ್ಕೆ ಯುವಪೀಳಿಗೆ ಬಲಿ! ವಿತ್ತ ಸಚಿವೆಗೆ ಪತ್ರ ಬರೆದ ಮಾಜಿ ಸಚಿವ


ಅಧಿವೇಶನದಲ್ಲಿ 6 ಮಸೂದೆ


6 ಮಸೂದೆಗಳನ್ನು ಈ ಅಧಿವೇಶನದಲ್ಲಿ ತರಲಾಗುತ್ತಿದೆ. ಇದರಲ್ಲಿ ಎರಡು ಮಸೂದೆಗಳನ್ನು ಈಗಾಗಲೇ ಮಂಡಿಸಲಾಗಿದ್ದು, ಚರ್ಚಿಸಿ ಅವುಗಳನ್ನು ಅಂಗೀಕರಿಸುವ ಪ್ರಕ್ರಿಯೆ ನಡೆಯಲಿದೆ. ಇದಲ್ಲದೇ ನಾಲ್ಕು ಹೊಸ ವಿಧೇಯಕಗಳು ಬಂದಿರುತ್ತವೆ. ಬೇರೆ ಯಾವುದೇ ವಿಧೇಯಕ ಇದ್ದರೆ ಸರಕಾರ ಅವುಗಳನ್ನು ಮಂಡಿಸಲಿದೆ. ಮೊದಲ ದಿನ ವಿಧಾನ ಸಭೆ ಉಪಾಧ್ಯಕ್ಷ ಆನಂದ ಮಾಮನಿ ಸೇರಿದಂತೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಕಾಗೇರಿ ಹೇಳಿದರು.

Published by:Mahmadrafik K
First published: