Basavaraj Bommai: ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿದ ಸಿಎಂ ಬೊಮ್ಮಾಯಿ

ಬೆಂಗಳೂರಿನ ಗಾಂಧಿ ಬಜಾರ್ ರಸ್ತೆಯಲ್ಲಿರುವ ವಿದ್ಯಾರ್ಥಿ ಭವನಕ್ಕೆ ತೆರಳಿದ ಬೊಮ್ಮಾಯಿ ಅವರು, ದೋಸೆ, ಉಪ್ಪಿಟ್ಟು ಕೇಸರಿ ಬಾತ್ ಸವಿದಿದ್ದಾರೆ. ಸಿಎಂ ಬೊಮ್ಮಾಯಿಗೆ ಸ್ಥಳೀಯ ಶಾಸಕ ಉದಯ್ ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ ಹಾಗೂ ಹಿರಿಯ ಅಧಿಕಾರಿಗಳ ಸಾಥ್ ನೀಡಿದರು.

ಮಸಾಲ ದೋಸೆ ಸವಿದ ಸಿಎಂ

ಮಸಾಲ ದೋಸೆ ಸವಿದ ಸಿಎಂ

  • Share this:
ಬೆಂಗಳೂರು: ಬಿಬಿಎಂಪಿ ಚುನಾವಣೆ (BBMP Election) ಹಿನ್ನೆಲೆ ಬಿಜೆಪಿ ಸಖತ್ ಆ್ಯಕ್ಟಿವ್​ ಆಗಿದೆ. ಬೆಂಗಳೂರಲ್ಲಿ ನಿನ್ನೆಯಿಂದ ಸಿಎಂ ಬಸವರಾಜ ಬೊಮ್ಮಾಯಿ ನಗರ ಪ್ರದಕ್ಷಿಣೆ ಹಾಕ್ತಿದ್ದಾರೆ. ಇಂದು ಸಹ ಬಸವರಾಜ ಬೊಮ್ಮಾಯಿ (Basavaraj Bommai) ಸಿಟಿ ರೌಂಡ್ಸ್ ​ ಮುಂದುವರಿಸಿದ್ದು, ಹಲವು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ್ರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಂಚ ಬಿಡುವು ಮಾಡಿಕೊಂಡು ಬಸವನಗುಡಿಯ ಗಾಂಧಿ ‌ಬಜಾರ್​ನ ವಿದ್ಯಾರ್ಥಿ ಭವನ ಹೋಟೆಲ್​ಗೆ ತೆರಳಿ ಮಸಾಲೆ ದೋಸೆ ಸವಿದರು.ದೋಸೆ, ಉಪ್ಪಿಟ್ಟು, ಕೇಸರಿ ಬಾತ್ ರುಚಿ ನೋಡಿದ ಸಿಎಂ

ಬೆಂಗಳೂರಿನ ಗಾಂಧಿ ಬಜಾರ್ ರಸ್ತೆಯಲ್ಲಿರುವ ವಿದ್ಯಾರ್ಥಿ ಭವನಕ್ಕೆ ತೆರಳಿದ ಬೊಮ್ಮಾಯಿ ಅವರು, ದೋಸೆ, ಉಪ್ಪಿಟ್ಟು ಕೇಸರಿ ಬಾತ್ ಸವಿದಿದ್ದಾರೆ.ಸಿಎಂ ಬೊಮ್ಮಾಯಿಗೆ ಸ್ಥಳೀಯ ಶಾಸಕ ಉದಯ್ ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ ಹಾಗೂ ಹಿರಿಯ ಅಧಿಕಾರಿಗಳ ಸಾಥ್ ನೀಡಿದರು. ಈ ವೇಳೆ ಸಿಎಂ ಜೊತೆ ಆಪ್ ಮುಖಂಡ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಕೂಡ ಸಾಥ್​ ನೀಡಿದ್ದಾರೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪರಿಶೀಲನೆ

ಬಿಬಿಎಂಪಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ನಗರ ಪ್ರದಕ್ಷಿಣೆ ತೀವ್ರಗೊಳಿಸಿದ್ದಾರೆ. ಇಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಂಸದರು, ಸಚಿವರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಪ್ರದಕ್ಷಿಣೆ ಹಾಕಿದ ಸಿಎಂ ಬೊಮ್ಮಾಯಿ ಅಧಿಕಾರಿಗಳಿಂದ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ: 2nd PUC Result 2022: ದ್ವಿತೀಯ ಪಿಯುಸಿ ಫಲಿತಾಂಶ; ಹೀಗೆ ಮೆಸೇಜ್ ಬಂದರೆ ನಂಬಬೇಡಿ

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಿಎಂ

ಬಸವರಾಜ ಬೊಮ್ಮಾಯಿ ಮಂಗಳವಾರ ಸಂಜೆ ದಿಢೀರ್ ಬೆಂಗಳೂರು ಸಿಟಿ ರೌಂಡ್ಸ್ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟ ನಂತರ ಸಿಎಂ ಆ ಭಾಗದ ವಿವಿಧ ಕಾಮಗಾರಿಗಳ ಅನಿರೀಕ್ಷಿತ ತಪಾಸಣೆ.

ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ

ಹೊರವರ್ತುಲ ರಸ್ತೆ ಮತ್ತು ಕೆಲವು ಪ್ರಮುಖ ರಸ್ತೆಗಳ ಸಂಚಾರ ದಟ್ಟಣೆ ನಿವಾರಣೆಗಾಗಿ ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಳಗಳಿಗೆ ದಿಢೀರ್ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ವಿವರಗಳನ್ನು ಮುಖ್ಯಮಂತ್ರಿಗಳು ಅಧಿಕಾರಿಗಳಿಂದ ಪಡೆದರು.
ನಂತರ ಮುಖ್ಯ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಸರ್ಜಾಪುರ, ಮಾರತಹಳ್ಳಿ, ಎಚ್ಎಸ್ಆರ್ ಬಡಾವಣೆಗಳಿಗೆ ತೆರಳಿ ಕಾಮಗಾರಿಯ ವಸ್ತುವನ್ನು ಅರಿತು ಅಧಿಕಾರಿಗಳು ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸುವಂತೆ ಸೂಚಿಸಿದರು.

ಮಾರತಹಳ್ಳಿ ಬ್ರಿಡ್ಜ್, ಕುಂದಲಹಳ್ಳಿ ಬಲಿಯ ಅಂಡರ್ ಕಾಮಗಾರಿ ಪಾಸ್ಗಳನ್ನು ಪರಿಶೀಲಿಸಿದರು. ವಾಹನ ದಟ್ಟಣೆ ಹೆಚ್ಚಿದ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಬಳಿಕ ಪಣತ್ತೂರು ತಾಲೂಕಿನ ಕೆಳಸೇತುವೆ ಬಳಿ ರಸ್ತೆ ಕಾಮಗಾರಿ, ಹೊಸದಾಗಿ ಆಸ್ಫಾಲ್ಟ್ ಮಾಡುತ್ತಿರುವ ವಿಎಸ್ ಎಸ್ ರಸ್ತೆ, ಜಕ್ಕಸಂದ್ರ ರಸ್ತೆ ಮೊದಲಾದವುಗಳ ತಪಾಸಣೆ ನಡೆಸಿ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಆರ್ ಟಿ ನಗರ ನಿವಾಸಕ್ಕೆ ಹಿಂದಿರುಗಿದರು. ಈ ಸಂದರ್ಭದಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಬಿಬಿಎಂಪಿಯ ಇತರ ಹಿರಿಯ ಅಧಿಕಾರಿಗಳು.

ಇದೆ  ವೇಳೆ ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೆ ಆರ್ ಮಾರ್ಕೆಟ್​ಗೂ ನಮಗೂ ಬಹಳ ಸಂಬಂಧವಿದೆ 30-40 ವರ್ಷದಿಂದ ಇಲ್ಲಿಗೆ ನಾನು ಬರ್ತಿದ್ದೇನೆ. ಇಲ್ಲಿ ಹಾರ್ಡ್ ವೇರ್ ಗೆ ನಾನು ಖಾಯಂ ಗಿರಾಕಿ, ಜನ ಉಪಯೋಗಿ ಶಾಸಕರು ಉದಯ್ ಗರುಡಾ ಚಾರ್ , ಚಿಕ್ಕಪೇಟೆ ಕ್ಷೇತ್ರದಲ್ಲಿ ಹೊಸ ಪ್ರಯೋಗ ವನ್ನು ಮಾಡಿದ್ದಾರೆ. ರಾಜಕಾಲುವೆ ಸ್ವಚ್ಚಗೊಳಿಸಿ, ಅಲ್ಲಿಗೆ ಬರುವ ನೀರನ್ನು ಡೈವರ್ಟ್ ಮಾಡಿ, ಸ್ವಚ್ಛ ವಾಗಿ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ 8ಸಾವಿರ ಕೋಟಿಗೂ ಹೆಚ್ಚು ಕೊಟ್ಟಿದ್ದೇವೆ. ಸುಗಮ ವಾಹನಗಳ ಸಂಚಾರಕ್ಕೆ ವಿನೂತನ ಯೋಜನೆ ಮಾಡ್ತಿದ್ದೇವೆ. ಮುಂದಿನ‌ ಬಾರಿ ಮಳೆ ಆದಾಗ ಯಾವುದೇ ಸಮಸ್ಯೆ ಆಗಬಾರದು ಎಂದು ಬೊಮ್ಮಾಯಿ ಹೇಳಿದ್ರು
Published by:Pavana HS
First published: