ಬೆಳಗಾವಿ: ಕಲಾಪದಲ್ಲಿ ಹುಬ್ಬಳ್ಳಿಯ (Hubli) ಹಜರತ್ ಷಾ ಖಾದ್ರಿ ದರ್ಗಾ ತೆರವು (Demolition of Hubballi Dargah) ವಿಚಾರ ಪ್ರತಿಧ್ವನಿಸಿದೆ. ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Ex CM Siddaramaiah) ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಹುಬ್ಬಳ್ಳಿಯ ಹಜರತ್ ಷಾ ಖಾದ್ರಿ ದರ್ಗಾ ಬಹಳ ವರ್ಷದಿಂದ ಇದೆ. ನಾನು ಸಿಎಂ ಇದ್ದಾಗಿನಿಂದ ಹೇಳಿದ್ದೆ. ದರ್ಗಾ ಇರಲಿ, ದೇವಸ್ಥಾನ ಆಗಲಿ ಹೊಡೆಯದೇ ಪಕ್ಕದ ಜಾಗ ಪಡೆದು ರಸ್ತೆ ಮಾಡುವಂತೆ ಸೂಚಿಸಿದೆ. ಈಗ ಕಾಮಗಾರಿ ಮಾಡಿಯಾಗಿದ್ರೂ, ತೆರವುಗೊಳಿಸೋ ಆದೇಶ ಮಾಡಿದೆ. ಸರ್ಕಾರ ಸ್ಟೇ ತೆಗೆದುಕೊಂಡು ಬರಬೇಕಿತ್ತು. ಈ ದರ್ಗಾ ಸರ್ವಧರ್ಮ ಸಮನ್ವಯ ಇದ್ದಂತೆ. ಆದರೆ ದರ್ಗಾ ತೆರವಿನಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತೆ. ದ್ವೇಷದ ರಾಜಕಾರಣಕ್ಕೆ ಎಡೆಮಾಡಿಕೊಡಲಿದೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುವಂತೆ ಸಿಎಂಗೆ ಸಿದ್ದರಾಮಯ್ಯ ಮನವಿ ಮಾಡಿದರು.
ನಮ್ಮ ಉದ್ದೇಶ ಧಾರ್ಮಿಕ ಭಾವನೆಗೆ ಧಕ್ಕೆ ತರೋದಲ್ಲ
ದರ್ಗಾ ತೆರವು ಕುರಿತಂತೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ ಅವರು, ನಮ್ಮ ಉದ್ದೇಶ ಧಾರ್ಮಿಕ ಭಾವನೆಗೆ ಧಕ್ಕೆ ತರೋದಲ್ಲ, ಹೈಕೋರ್ಟ್ ಸ್ಟೇ ವೆಕೇಟ್ ಮಾಡಿದೆ. ಆರು ಬಾರಿ ಮಾತುಕತೆಯಾಗಿದೆ. ನಮ್ಮ ಉದ್ದೇಶ ಒಂದೇ ಉತ್ತಮ ರಸ್ತೆ ನಿರ್ಮಾಣ ಮಾಡೋದು. ಶೀಘ್ರವೇ ಎಲ್ಲವೂ ಸರಿಪಡಿಸಿ, ರಸ್ತೆ ನಿರ್ಮಾಣ ಮಾಡ್ತೀವಿ ಅಂತ ಸ್ಪಷ್ಟಪಡಿಸಿದರು.
ಅಲ್ಲದೇ, ಹುಬ್ಬಳ್ಳಿ ಧಾರವಾಡ ರಸ್ತೆ ವಿಸ್ತರಣೆ ಮಾಡುವಾಗ ರಸ್ತೆಯನ್ನೇ ಶಿಫ್ಟ್ ಮಾಡಿ 25 ವರ್ಷದಿಂದ ನಡೆಯುತ್ತಿದೆ. BMRTC ಕಾಮಗರಿ ಮಾಡಿದಾಗ ಹಲವು ಜಾಗ ಸ್ವಾಧೀನಪಡಿಸಿಕೊಳ್ಳಲಾಗಿದೆ. ವ್ಯಾಪಾರ ಮಾಡುವ ಶೋ ರೂಮ್, ಅಂಗಡಿ, ನನ್ನ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದ್ದಾರೆ. 5 ಕೋಟಿ ರೂಪಾಯಿ ಪರಿಹಾರದಲ್ಲಿ, ಐದು ಲಕ್ಷ ರೂಪಾಯಿ ಮಾತ್ರ ಬಂದಿದೆ. ದೇಶ ಬೆಳೆಯುವಾಗ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ಭೂಮಿ ಸ್ವಾಧೀನ ಮಾಡಿಕೊಳ್ಳುವುದು ಅನಿವಾರ್ಯ ಆದ್ರೆ ಮಾಡಲೇಬೇಕು.
ಈ ಸಂಘರ್ಷ ಹಲವು ವರ್ಷದಿಂದ ನಡೆಯುತ್ತಿದೆ. ನಮ್ಮ ಉದ್ದೇಶ ಧಾರ್ಮಿಕ ಭಾವನೆಗೆ ಧಕ್ಕೆ ತರೋದಲ್ಲ. ಹೈಕೋರ್ಟ್ ಕೂಡ ಸ್ಟೇ ವಾಪಸ್ ಪಡೆದುಕೊಂಡಿದೆ. ನಾವು 25 ವರ್ಷದಿಂದ ಸ್ಥಳವನ್ನು ಬಿಟ್ಟುಕೊಟ್ಟಿರಲಿಲ್ಲ. ಈ ಬಗ್ಗೆ ಆರು ಬಾರಿ ಮಾತುಕತೆಯಾಗಿದೆ. ಸ್ಥಳೀಯರು ಶಿಫ್ಟ್ ಮಾಡಲು ಅವಕಾಶ ಕೇಳಿದ್ದಾರೆ. ಆದರೆ ಹೊರಗಿನವರು ಹೇಳಿಕೆ ಕೊಡುತ್ತಿದ್ದಾರೆ. ಶುಕ್ರವಾರ ನಾನು ಹುಬ್ಬಳ್ಳಿಗೆ ಹೋಗುತ್ತಿದ್ದೇನೆ, ಈ ಬಗ್ಗೆ ಮಾತನಾಡುತ್ತೇನೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಶೀಘ್ರವೇ ಎಲ್ಲವೂ ಸರಿಪಡಿಸಿ, ರಸ್ತೆ ನಿರ್ಮಾಣ ಮಾಡ್ತೀವಿ ಎಂದರು.
ಇದನ್ನೂ ಓದಿ: CM Basavaraj Bommai: ನಾನು ಸತ್ತರೆ ಇದೇ ಮಣ್ಣಲ್ಲಿ ಹೂಳಬೇಕು; ಶಿಗ್ಗಾವಿಯಲ್ಲಿ ಸಿಎಂ ಬೊಮ್ಮಾಯಿ ಭಾವುಕ
ಪರಿಷತ್ನಲ್ಲೂ ‘ದರ್ಗಾ’ ಪ್ರತಿಧ್ವನಿ
ಪರಿಷತ್ನಲ್ಲೂ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್, ದರ್ಗಾ ವಿಚಾರವನ್ನು ಪ್ರಸ್ತಾಪಿಸಿದ್ರು. ದರ್ಗಾವನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಕೂಡಲೇ ನಿಲ್ಲಿಸಬೇಕು ಎಂದು ಸರ್ಕಾರ ಸೂಚನೆ ಕೊಡಬೇಕು, ಜಿಲ್ಲಾಡಳಿತಕ್ಕೆ ಸೂಚನೆ ಕೊಡಬೇಕು ಎಂದು ಸಲೀಂ ಒತ್ತಾಯಿಸಿದರು.
ಬಿಗಿ ಭದ್ರತೆಯಲ್ಲಿ ದರ್ಗಾ ತೆರವು ಕಾರ್ಯಾಚರಣೆ
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆಯನ್ನು ಇಂದು ಆರಂಭ ಮಾಡಲಾಗಿತ್ತು. ದರ್ಗಾ ಸುತ್ತಲೂ ಬ್ಯಾರಿಕೇಡ್ ಹಾಕಿ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ದರ್ಗಾ ತೆರವಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಶಾಸಕ ಪ್ರಸಾದ್ ಅಬ್ಬಯ್ಯ ಖಂಡಿಸಿದ್ದಾರೆ. ಇತ್ತ ಮುನ್ನೆಚ್ಚರಿಕೆ ಕ್ರಮವಾಗಿ ಹುಬ್ಬಳ್ಳಿ -ಧಾರವಾಡ ಅವಳಿ ನಗರದಲ್ಲಿ ಪೊಲೀಸ್ ಆಯುಕ್ತ ಲಾಭೂ ರಾಮ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಇದನ್ನೂ ಓದಿ: Hubballi Dargah Row: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಿಷೇಧಾಜ್ಞೆ; ದರ್ಗಾ ತೆರವಿಗೆ ಶಾಸಕರ ಖಂಡನೆ
ಬಿಆರ್ಟಿಎಸ್ ಕಾರಿಡಾರ್ ಯೋಜನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ -ಧಾರವಾಡ ಮುಖ್ಯ ರಸ್ತೆಯಲ್ಲಿರುವ ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. BRTS ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅದರ ವಿರುದ್ಧ ದರ್ಗಾ ಸಮಿತಿ ಕೋರ್ಟ್ ಮೊರೆ ಹೋಗಿತ್ತು. ಆದ್ರೆ ಹೈಕೋರ್ಟ್ ದರ್ಗಾ ತೆರವಿಗೆ ಆದೇಶಿಸಿದೆ. ಈ ಹಿನ್ನೆಲೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದ ಹಾಗೆ ತೆರವು ಕಾರ್ಯಾಚರಣೆ ಮಾಡಲಾಗಿದೆ ಅಂತ ಜಿಲ್ಲಾಧಿಕಾರಿ ಗುರುದತ್ತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ