• Home
  • »
  • News
  • »
  • state
  • »
  • S.C, S.T ಮೀಸಲಾತಿ ಹೆಚ್ಚಳ ಫಿಕ್ಸ್​; ಸರ್ವಪಕ್ಷಗಳ ಸಮ್ಮತದಿಂದ ನಿರ್ಧಾರ- ಸಿಎಂ ಬೊಮ್ಮಾಯಿ

S.C, S.T ಮೀಸಲಾತಿ ಹೆಚ್ಚಳ ಫಿಕ್ಸ್​; ಸರ್ವಪಕ್ಷಗಳ ಸಮ್ಮತದಿಂದ ನಿರ್ಧಾರ- ಸಿಎಂ ಬೊಮ್ಮಾಯಿ

ಸರ್ವಪಕ್ಷಗಳ ಸಭೆ

ಸರ್ವಪಕ್ಷಗಳ ಸಭೆ

ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು ನೀಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸರ್ವಪಕ್ಷಗಳ ಸಮ್ಮತದಿಂದ ಹೆಚ್ಚಳಕ್ಕೆ ನಿರ್ಣಯ ಮಾಡಲಾಗಿದೆ. ಶೀಘ್ರವೇ ಅಧಿಕೃತ ಘೋಷಣೆ ಮಾಡೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

  • Share this:

ಬೆಂಗಳೂರು (ಅ.07): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ‌ಪಂಗಡಗಳ ಮೀಸಲಾತಿ (SC-ST Reservation) ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಧ್ಯಕ್ಷತೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ನಾಯಕರ ಸಭೆ ನಡೆಸಲಾಯ್ತು.  ಸಭೆಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಸಿಎಂ ಬೊಮ್ಮಾಯಿ ನ್ಯಾಯಮೂರ್ತಿ ನಾಗಮೋಹನ್​ದಾಸ್ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯ ಅನುಷ್ಠಾನ ಸಾಧ್ಯತೆಯ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿದ ನಂತರ ಈ ತೀರ್ಮಾನ ಘೋಷಿಸಿದರು.  ಶೇ 15ರಿಂದ ಶೇ 17ಕ್ಕೆ ಹಾಗೂ ಎಸ್​ಟಿ ಮೀಸಲಾತಿಯನ್ನು ಹಾಲಿ ಅಸ್ತಿತ್ವದಲ್ಲಿರುವ ಶೇ 3ರಿಂದ 7ಕ್ಕೆ ಹೆಚ್ಚಳ ಮಾಡಲಾಗುವುದು.


ವರದಿ ನೀಡಲು 6 ತಿಂಗಳು ಸಮಯ ಕೇಳಿದ್ರು


ಸಭೆ ಬಳಿಕ ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆ ಅಧಿವೇಶನದಲ್ಲಿ ಹೇಳಿದಂತೆ ಸರ್ವಪಕ್ಷಸಭೆ ಕರೆದಿದ್ದೆ. ಎಸ್ಸಿಎಸ್ಟಿ  ಅವರು ನ್ಯಾಯಾಸಮ್ಮತ ಬೇಡಿಕೆ ಮುಂದಿಟ್ಟಿದ್ದಾರೆ. ಇತ್ತ ಸ್ವಾಮೀಜಿಗಳು 240 ದಿನಕ್ಕೂ ಅಧಿಕ ಪ್ರತಿಭಟನೆ ನಡೆಸಿದ್ರು. ನಮ್ಮ ಪಕ್ಷದ ನಾಯಕರೂ ಆ ಹೋರಾಟದಲ್ಲಿ ಭಾಗಿಯಾಗಿದ್ರು. ನಾಗ ಮೋಹನ್‌ದಾಸ್ ಅವರು ವರದಿಗಾಗಿ 6 ತಿಂಗಳು ಸಮಯ ಕೇಳಿದ್ರು.


ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು


ನಾಗಮೋಹನ್‌ದಾಸ್ ನ್ಯಾಯ ಸಮ್ಮತ ವರದಿ ನೋಡಿದ್ದಾರೆ. ನಂತರ ಸುಪ್ರೀಂ ಕೋರ್ಟ್ ತೀರ್ಪುಗಳು ಬಂದಿವೆ. ಇಂದಿರಾ ಸಹನಿ ಕೇಸ್‌ ಪ್ರಕಾರ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು ನೀಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸರ್ವಪಕ್ಷಗಳ ಸಮ್ಮತದಿಂದ ಹೆಚ್ಚಳಕ್ಕೆ ನಿರ್ಣಯ ಮಾಡಲಾಗಿದೆ.


ನಾಳೆ ಅಧಿಕೃತ ಘೋಷಣೆ  


SC 15 ರಿಂದ 17 , ST 3 ರಿಂದ 7ಕ್ಕೆ‌ ಹೆಚ್ಚಳ ಮಾಡಲಾಗುವುದು. ನಾಳೆಯೇ ಕ್ಯಾಬಿನೆಟ್ ಕರೆದು ತೀರ್ಮಾನ ಮಾಡಲಾಗುತ್ತೆ. ನಾಳೆ ಸರ್ಕಾರದ ಅಧಿಕೃತ ಮುದ್ರೆಯನ್ನ ಒತ್ತುತ್ತೇವೆ. ಸಮಗ್ರ ಮೀಸಲಾತಿ ಬಗ್ಗೆ‌ಚಿಂತನೆ ಮಾಡಬೇಕಾಗಿದೆ. ಎಸ್ಸಿ, ಎಸ್ಟಿಯಲ್ಲಿ ಒಳಗೆ ಇದ್ದವರಿಗೆ ನ್ಯಾಯ ಸಿಕ್ಕಿಲ್ಲ. ಈ ಬಗ್ಗೆ ಆಯೋಗಗಳು ವರದಿ ನೀಡಿವೆ ಎಂದ್ರು.


ಇದನ್ನೂ ಓದಿ: Population Control: ಕೋಳಿ ಕೇಳಿ ಮಸಾಲೆ ಅರೆಯಲ್ಲ, ಸಂಜಯ್ ಗಾಂಧಿ ಬ್ರಿಗೇಡ್​ ಮಾದರಿಯಲ್ಲೂ ಜಾರಿಗೆ ತರಲ್ಲ-ಸಿ ಟಿ ರವಿ


ವರದಿ ಬಂದ ನಂತರ ಕ್ರಮ


ಎಸ್ಸಿ,ಎಸ್ಟಿ ಒಳಗೆ‌ ನ್ಯಾಯ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಒಬಿಸಿ ಮೀಸಲಾತಿ ಬಗ್ಗೆ ಚರ್ಚೆ ನಡೀತಾ ಇದೆಯೋ? ಆ ಬಗ್ಗೆ ಅಧ್ಯಯನ ನಡೆಯುತ್ತಿದೆ. ಅಧ್ಯಯನ ವರದಿ ಬಂದ ನಂತರ ಯಾರಿಗೂ ಅನ್ಯಾಯ ಆಗದಂತೆ ಕ್ರಮ ತೆಗದುಕೊಳ್ಳಲಾಗುವುದು.




ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲು ಶಿಫಾರಸು


ನಾಗಮೋಹನ್ ದಾಸ್ ಸಮಿತಿಯು ಎಸ್​ಸಿ ಮೀಸಲಾತಿಯನ್ನು ಶೇ 15 ರಿಂದ ಶೇ 17ಕ್ಕೆ, ಎಸ್​ಟಿ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಎಸ್‌ಟಿಗೆ ನಿಗದಿಪಡಿಸಿರುವ ಮೀಸಲಾತಿ ಪ್ರಮಾಣವನ್ನು ಶೇ 7.5ರಷ್ಟು ನಿಗದಿಪಡಿಸಬೇಕು ಎಂದು ವಾಲ್ಮೀಸಿ ಸಮುದಾಯ ಬೇಡಿಕೆ ಇಟ್ಟು, ಸತ್ಯಾಗ್ರಹ ನಡೆಸುತ್ತಿದೆ.


ಮೀಸಲಾತಿಯನ್ನು ಶೇ 50ಕ್ಕಿಂತ ಹೆಚ್ಚಿಗೆ ನಿಗದಿಪಡಿಸಬಾರದು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆದರೆ ನಾಗಮೋಹನ್ ದಾಸ್ ಸಮಿತಿ ಶಿಫಾರಸು ಜಾರಿ ಮಾಡಿದರೆ ಮೀಸಲಾತಿ ಪ್ರಮಾಣವು ಒಟ್ಟಾರೆ ಶೇ 56ಕ್ಕೆ ಹೆಚ್ಚಳವಾಗುತ್ತದೆ. ಈ ಸಮಸ್ಯೆ ನಿರ್ವಹಿಸುವುದು ಹೇಗೆ ಎನ್ನುವ ಬಗ್ಗೆ ಮುಖ್ಯಮಂತ್ರಿ ಎಲ್ಲರ ಅಭಿಪ್ರಾಯ ಪರಾಮರ್ಶೆ ಮಾಡಲಿದ್ದಾರೆ.


ಇದನ್ನೂ ಓದಿ: DK Shivakumar: ಡಿಕೆಶಿ ಮನವಿಯನ್ನು ತಿರಸ್ಕರಿಸಿ ಶಾಕ್ ಕೊಟ್ಟ ED


ವಿಧಾನಸಭೆ ಅಧಿವೇಶನದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಚರ್ಚೆ ನಡೆದಾಗ ಮುಖ್ಯಮಂತ್ರಿ ಸರ್ವಪಕ್ಷ ಸಭೆ ನಡೆಸುವ ಭರವಸೆ ನೀಡಿದ್ದರು. ಅದರಂತೆ ಇಂದು ಸಿಎಂ ನಿವಾಸದಲ್ಲಿ ಸಭೆ ನಡೆಯುತ್ತಿದೆ. ಮುಖ್ಯಮಂತ್ರಿ ಕರೆದಿರುವ ಸಭೆಗೆ ತೆರಳುವ ಮೊದಲು ಸಿದ್ದರಾಮಯ್ಯ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ಎಸ್​ಟಿ ನಾಯಕರೊಂದಿಗೆ ಸಿದ್ದರಾಮಯ್ಯ ಕೆಲ ಸಮಯ ಮಾತುಕತೆ ನಡೆಸಿದರು. ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಖಾದರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಉಪಸ್ಥಿತರಿದ್ದರು. ವಾಲ್ಮೀಕಿ ಜನಾಂಗದ ಬೇಡಿಕೆಯ ಕುರಿತು ವಿಷಯ ಪ್ರಸ್ತಾಪವಾಯಿತು ಎಂದು ಮೂಲಗಳು ತಿಳಿಸಿವೆ.

Published by:ಪಾವನ ಎಚ್ ಎಸ್
First published: