Basavaraj Bommai: ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರು ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

  • Share this:
ಕೊಪ್ಪಳ (ಜು.24): ಕುಕನೂರು ತಾಲ್ಲೂಕು ಭಾನಾಪುರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) 5 ಜನ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ (Compensation) ಘೋಷಣೆ ಮಾಡಲಾಗಿದೆ. ಮೃತರ ಕುಟುಂಬಕ್ಕೆ (Family) ತಲಾ ₹5 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ (Chief Minister) ಘೋಷಿಸಿದ್ದಾರೆ ಎಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ (Halappa Achar) ಅವರು ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಗೆ ಸಚಿವ ಹಾಲಪ್ಪ ಆಚಾರ್​ ಭೇಟಿ

ಜಿಲ್ಲೆಯ ಭಾನಾಪುರ ಬಳಿ ನಿನ್ನೆ ತಡರಾತ್ರಿ ನಡೆದ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಸಚಿವ ಹಾಲಪ್ಪ ಆಚಾರ್​ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದರು.

ಬಳಿಕ ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಸ್ತೆಯಲ್ಲಿ ಸಂಚರಿಸುವಾಗ ಜಾಗೃತರಾಗಿರಬೇಕು. ಇಂತಹ ಘಟನೆಗಳು ನಡೆಯಬಾರದು, ಈ ವರ್ಷದಲ್ಲಿ ನನ್ನ ಕ್ಷೇತ್ರದಲ್ಲಿ ರೀತಿಯ ದುರ್ಘಟನೆಗಳು ನಡೆದಿರಲಿಲ್ಲ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಜೊತೆಗೆ ಘಟನೆಗೆ ಕಾರಣವಾದ ಇನ್ನೊಂದು ವಾಹನದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ:  Whatsapp Statusನಲ್ಲಿ RIP ಅಂತ ಹಾಕಿ ನೇಣಿಗೆ ಶರಣಾದ ಯುವಕ

ಅಪಘಾತದಲ್ಲಿ 5 ಮಂದಿ ಸಾವು

ಸಂಬಂಧಿಗಳ  ಮನೆಯಲ್ಲಿ ಮಗುವಿನ ಹುಟ್ಟ ಹಬ್ಬ  ಇತ್ತು. ಹೀಗಾಗಿ ಅವರೆಲ್ಲ ಈ ಹುಟ್ಟು ಹಬ್ಬ ಆಚರಿಸಿದ ನಂತರ ಊಟ ಮಾಡಿ  ತಮ್ಮ ಸ್ವಗ್ರಾಮಕ್ಕೆ ಹೊರಟಿದ್ದರು. ಆದರೆ ವಿಧಿ ಅವರನ್ನು ಸೇರಿಸಿದ್ದು ಮಾತ್ರ ಮಸಣಕ್ಕೆ.‌ ಬರ್ತ್ ಡೇ ಮುಗಿಸಿಕೊಂಡು ಸ್ಕಾರ್ಪಿಯೋದಲ್ಲಿ  ಊರಿಗೆ ಹೊರಟಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ 5 ಜನರು ಧಾರುಣವಾಗಿ ಸಾವನ್ನಪ್ಪಿದ್ದಾರೆ.  ಕುಕನೂರು ತಾಲೂಕಿನ ಭಾನಾಪೂರದ ಬಳಿ ನಿನ್ನೆ ರಾತ್ರಿ 10.30 ರ ಸುಮಾರಿಗೆ ಭೀಕರ ಅಪಘಾತವೊಂದು  ಸಂಭವಿಸಿದೆ. ಅಪರಿಚಿತ ವಾಹನವೊಂದು ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಕಾರ್ಪಿಯೋ ದಲ್ಲಿದ್ದ 9 ಜನರ ಪೈಕಿ ಐದು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನುಳಿದ ನಾಲ್ಕು ಜನರು ಗಾಯಾಳು ಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಮೊಮ್ಮಗನ ಹುಟ್ಟುಹಬ್ಬಕ್ಕೆ ಬಂದಿದ್ದ ಸಂಬಂಧಿಕರು

ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ್ ಎನ್ನುವರು ಅವರ ಕುಟುಂಬದವರನ್ನು ಕರೆದುಕೊಂಡು ಕೊಪ್ಪಳದಲ್ಲಿಯ ಮಾಜಿ ಸೈನಿಕ ಹಾಗು ಡಿಆರ್ ಮುಖ್ಯಪೇದೆ ಆಗಿರುವ ಶರಣಪ್ಪ ಕೊಪ್ಪದವರ ಮಗ ಸರ್ವೇಯರ್ ಬಸವರಾಜರ ಮಗಳ ಪ್ರಥಮ ವರ್ಷದ ಹುಟ್ಟು ಹಬ್ಬ ಆಚರಣೆ ಇತ್ತು. ಮಧ್ಯಾಹ್ನವೇ ಬಿನ್ನಾಳದ ಕೊಪ್ಪದ ಕುಟುಂಬವು ತಮ್ಮನ ಮೊಮ್ಮಗಳ ಮನೆಗೆ ಬಂದಿದ್ದರು.  ಹುಟ್ಟು ಹಬ್ಬಕ್ಕೆಂದು ಕೊಪ್ಪಳಕ್ಕೆ ಬಂದಿದ್ದರು.‌

ರಾತ್ರಿ ಉಳಿದುಕೊಳ್ಳಿ ಎಂದರೂ ಕೇಳದೇ ಹೊರಟಿದ್ದರು

ರಾತ್ರಿ ಹುಟ್ಟುಹಬ್ಬ ಮುಗಿಸಿಕೊಂಡು ಮರಳಿ ಬಿನ್ನಾಳ ಗ್ರಾಮಕ್ಕೆ ಬರುತ್ತಿದ್ದರು. ಆದರೆ ವಿಧಿ ಅವರನ್ನು ಯಮ ಲೋಕಕ್ಕೆ ಕರೆದುಕೊಂಡು ಹೋಗಿದೆ. ಶರಣಪ್ಪ ಕುಟುಂಬದಲ್ಲಿ ಸಮಾರಂಭ 10 ಗಂಟೆಗೆ ಮುಗಿದ ನಂತರ ಇವತ್ತು ಇದ್ದು ನಾಳೆ ಬೆಳಗ್ಗೆ ಬಿನ್ನಾಳಕ್ಕೆ ಹೋಗಿ ಎಂದರೂ ಕೇಳಿರಲಿಲ್ಲ. ಅವರೆಲ್ಲ ಸಂತೋಷ ಸಂಭ್ರಮದ ಸವಿ ನೆನಪಲ್ಲಿ ಹೊರಟಿದ್ದರು.

ಇದನ್ನೂ ಓದಿ:  Vijayanand Kashapanavar: ನಟಿ ಜೊತೆಗಿನ ಫೋಟೋ ವೈರಲ್; 2ನೇ ಮದ್ವೆಯಾದ್ರಾ ಕಾಶಪ್ಪನವರ್?

 ಅರ್ಧದಾರಿಯಲ್ಲೇ ನಡೆಯಿತು ಅಪಘಾತ

ಕೊಪ್ಪಳದ ಖಾಸಗಿ ಹೊಟೆಲ್ ನಲ್ಲಿ ಕಾರ್ಯಕ್ರಮದ ನಂತರ ಬೇಗ ಮನೆ ಸೇರಬೇಕೆಂದು ಹೊರಟಿದ್ದರು. ಕೊಪ್ಪಳದಿಂದ 15 ಕಿಮೀ ದೂರ ಹೋಗಿದ್ದರು. ಇನ್ನೂ ಅರ್ಧ ಗಂಟೆಯಾಗಿದ್ದರೆ, ಅವರು ಬಿನ್ನಾಳದ ಮನೆ ಸೇರುತ್ತಿದ್ದರು. ಆದರೆ ಬಾನಾಪುರ ಬಳಿಯ ಟಾಯ್ಸ್ ಕ್ಲಸ್ಟರ್ ಬಳಿ ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಸ್ಕಾರ್ಪಿಯೋ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ.

ಐವರು ಸ್ಥಳದಲ್ಲೇ ಸಾವು

ಇನ್ನು ದೇವಪ್ಪ ಕೊಪ್ಪದ (62), ಗಿರಜಮ್ಮ (45), ಪಾರವ್ವ(32) , ಶಾಂತಮ್ಮ(22) ಕಸ್ತೂರೆಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಾಳುಗಳಾದ ಚಾಲಕ ಹರ್ಷವರ್ಧನ, ಪಲ್ಲವಿ, ಪುಟ್ಟರಾಜು, ಭೂಮಿಕಾರಿಗೆ ಗಾಯವಾಗಿದೆ. ಈ ಗಾಯಾಳುಗಳಲ್ಲಿ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ.
Published by:Pavana HS
First published: