Puneeth Rajkumar: ಅಪ್ಪುಗೆ ನವೆಂಬರ್ 1ಕ್ಕೆ ಕರ್ನಾಟಕ ರತ್ನ; ಸಿಎಂ ಘೋಷಣೆ

ಕೊರೋನಾದಿಂದ ನಿಂತಿದ್ದ ಫಲಪುಷ್ಪ ಪ್ರದರ್ಶನ ಮತ್ತೆ ಆರಂಭವಾಗಿದೆ. ಹೂವಲ್ಲಿ ಮೂಡಿಬಂದ ಪುನೀತ್ ರಾಜ್ ಕುಮಾರ್ ಎಲ್ಲರ ಕಣ್ಮನ ಸೆಳೆಯುತ್ತಿದೆ. ಅಣ್ಣಾವ್ರಿಗೂ ಪುಷ್ಪ ನಮನ ಸಲ್ಲಿಸಲಾಗ್ತಿದೆ.

ಅಪ್ಪುಗೆ ನಮನ

ಅಪ್ಪುಗೆ ನಮನ

  • Share this:
ಬೆಂಗಳೂರು :  ಬೆಂಗಳೂರಿನ ಸುಂದರ ತಾಣಗಳಲ್ಲಿ ಲಾಲ್​ಬಾಗ್​ (Lalbagh) ಕೂಡ ಒಂದು. ಸದಾ ಹಚ್ಚಹಸಿರಿನ ತಾಣ, ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ (Flower Show) ಆರಂಭವಾಗಿದೆ. ಕೊರೋನಾ (Corona) ಕರಿಛಾಯೆಯಿಂದ ತಪ್ಪಿಸಿಕೊಂಡ ನಂತರ ನಡೆಯುತ್ತಿರೋ ಫಲಪುಷ್ಪ ಪ್ರದರ್ಶನ ಇದಾಗಿದೆ. ಅಂದರೆ 2 ವರ್ಷಗಳ ನಂತರ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು ಇಂದಿನಿಂದ ಭರ್ಜರಿ ಚಾಲನೆ ಸಿಕ್ಕಿದೆ. ಸ್ವಾತಂತ್ರ್ಯ ದಿನಾಚರಣೆ (Independence Day) ಅಂಗವಾಗಿ ನಡೆಯುತ್ತಿರೋ ಈ ಫಲಪುಷ್ಪ ಪ್ರದರ್ಶನದಲ್ಲಿ ರಾಜಕುಮಾರನಿಗೆ (Puneeth Rajkumar) ವಿಶೇಷ ಗೌರವ ಸಲ್ಲಿಸಲಾಗ್ತಿದೆ. ಇಂದು ಸಿಎಂ ಬೊಮ್ಮಾಯಿ (Basavaraj Bommai) ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ರು. ಈ ವೇಳೆ ಅಪ್ಪು ಅಭಿಮಾನಿಗಳಿಗೆ ಸಿಎಂ ಗುಡ್​ನ್ಯೂಸ್​ ಕೊಟ್ರು. ನವೆಂಬರ್ 1ರಂದು ನಡೆಯೋ ಕನ್ನಡ ರಾಜ್ಯೋತ್ಸವದಂದು (Karnataka Rajyotsava) ಪುನೀತ್ ರಾಜ್​ಕುಮಾರ್​ಗೆ ಕರ್ನಾಟಕ ರತ್ನ ನೀಡೋದಾಗಿ ಘೋಷಿಸಿದ್ರು.

ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದಂದು ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತೆ. ಅದರಲ್ಲೂ ಕೊರೋನಾದಿಂದ ನಿಂತಿದ್ದ ಫಲಪುಷ್ಪ ಪ್ರದರ್ಶನ ಮತ್ತೆ ಆರಂಭವಾಗಿದೆ. ಹೂವಲ್ಲಿ ಮೂಡಿಬಂದ ಪುನೀತ್ ರಾಜ್​ಕುಮಾರ್​ ಎಲ್ಲರ ಕಣ್ಮನ ಸೆಳೆಯುತ್ತಿದೆ. ಅಣ್ಣಾವ್ರಿಗೂ ಪುಷ್ಪ ನಮನ ಸಲ್ಲಿಸಲಾಗ್ತಿದೆ.

ಕನ್ನಡ ರಾಜ್ಯೋತ್ಸವಕ್ಕೆ ಅಪ್ಪುಗೆ ಕರ್ನಾಟಕ ರತ್ನ

ಸಸ್ಯಕಾಶಿ ಲಾಲ್ ಬಾಗ್​ನಲ್ಲಿ ನಡೆಯುತ್ತಿರುವ 212ನೇ ಫ್ಲವರ್ ಶೋಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಚಾಲನೆ ಕೊಟ್ಟರು. ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ್ರು. ಬಳಿಕ, ಈ ವರ್ಷ ಡಾ.ರಾಜ್, ಅಪ್ಪು ಸ್ಮರಣಾರ್ಥವಾಗಿ ಫಲಪುಷ್ಪ ಪ್ರದರ್ಶನ ಮಾಡಲಾಗ್ತಿದೆ. ನವೆಂಬರ್ 1 ರಂದು ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಕೊಡಲಿದ್ದೇವೆ ಅಂತಾ ಅಧಿಕೃತವಾಗಿ ಘೋಷಿಸಿದ್ರು.

Flower show lalbagh after corona puneeth rajkumar Karnataka Rathna
ಪುನೀತ್ ರಾಜ್​ಕುಮಾರ್​ಗೆ ಪುಷ್ಪನಮನ


ಅಪ್ಪು ನೆನೆದು ಶಿವಣ್ಣ ಗದ್ಗದಿತ

ಫ್ಲವರ್​ ಶೋ ಉದ್ಘಾಟನಾ ಸಮಾರಂಭದಲ್ಲಿ ಶಿವರಾಜ್ ಕುಮಾರ್, ಅಪ್ಪುನ ನೆನೆದು ಗದ್ಗದಿತರಾದ್ರು. ಅಪ್ಪು ಯಶಸ್ಸು, ಆತನ ಜೀವನ ಹೇಳಿಕೆಗೆ ನಿಲುಕದ್ದು. ಇದು ತುಂಬಾ ನೋವಿನಿಂದ ಮಾತನಾಡುವ ಪರಿಸ್ಥಿತಿ. ಅಪ್ಪು ಸದಾ ನಮ್ಮ ಜೊತೆಗೆ ಇರ್ತಾರೆ. ಪುನೀತ್ ಹೂವಿನಂತೆ ಸದಾ ಫ್ರೆಶ್. ಅಪ್ಪು-ಅಪ್ಪನ ಆಸೆ ಹೂವಿನ ರೂಪದಲ್ಲಿ ಪ್ರೀತಿಯಿಂದ ಬಂದಿದೆ ಅಂದ್ರು.

ಇದನ್ನೂ ಓದಿ: ಲಾಲ್‌ಬಾಗ್‌ನಲ್ಲಿ ಅರಳಿದ ಅಪ್ಪು! 500 ಬಗೆಯ ಹೂಗಳಲ್ಲಿ ನಗುತ್ತಿರುವ ರಾಜಕುಮಾರ!

ಅಪ್ಪು ಬಂದಂತೆ ಅನಿಸ್ತು-ರಾಘಣ್ಣ

ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್ ರಾಜ್​ಕುಮಾರ್​ನ್ನು ನೆನೆದು ರಾಘವೇಂದ್ರ ರಾಜ್ ಕುಮಾರ್ ಭಾವುಕರಾದರು. ಇಂದು ಅಪ್ಪು, ಅಪ್ಪನ ಜೀವನದೊಳಗೆ ಹೋಗಿ ಬಂದಂತೆ ಭಾಸವಾಯ್ತು. ಅದ್ಭುತವಾಗಿ ಫಲಫುಷ್ಪ ಪ್ರದರ್ಶನ ಮಾಡಿದ್ದಾರೆ ಅಂದ್ರು.

Flower show lalbagh after corona puneeth rajkumar Karnataka Rathna
ಲಾಲ್​ಬಾಗ್​ ಫ್ಲವರ್​ ಶೋ, ಪುನೀತ್​ ರಾಜ್​ ಕುಮಾರ್​


ಅಪ್ಪು, ರಾಜ್​ಗೆ ಪುಷ್ಪ ನಮನ

ಕಲರ್ ಫುಲ್ 100ಕ್ಕೂ ಹೆಚ್ಚು ಬಗೆಯ ಹೂವುಗಳಿಂದ ಪುನೀತ್ ರಾಜ್ ಕುಮಾರ್ ಕಂಗೊಳಿಸ್ತಿದ್ದಾರೆ. ಪುಷ್ಪಲೋಕದ ನಡುವೆ ಕಂಚಿನ ಪ್ರತಿಮೆ ಎಲ್ಲರನ್ನು ಸೆಳೆಯುತ್ತಿದೆ. ಗಾಜಾನೂರಿನಲ್ಲಿ ಅಣ್ಣಾವ್ರು ಹುಟ್ಟಿದ ಮಾದರಿಯಲ್ಲಿ ಫ್ಲವರ್ ಶೋ ನಿರ್ಮಾಣ ಮಾಡಲಾಗಿದೆ. 30 ಲಕ್ಷ ವೆಚ್ಚದಲ್ಲಿ ಡಾ.ರಾಜ್ ಕುಮಾರ್ ನಟನೆಯ ಬೇಡರ ಕಣ್ಣಪ್ಪ ಚಿತ್ರದ ವಾಲ್ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: Helava ಸಮುದಾಯದ ಮಕ್ಕಳನ್ನ ಶಾಲೆಗೆ ಕರೆ ತಂದ ಶಿಕ್ಷಕ; ಯಾರು ಈ ಹೆಳವರು? ಎಲ್ಲಿರ್ತಾರೆ?

ಆಗಸ್ಟ್​ 15ರವರೆಗೆ ಫ್ಲವರ್ ಶೋ

ಇಂದಿನಿಂದ ಆರಂಭವಾದ ಫ್ಲವರ್ ಶೋ ಆಗಸ್ಟ್​ 15ರವೆರೆಗೂ ನಡೆಯಲಿದೆ. ಒಟ್ಟು 11 ದಿನ ನಡೆಯೋ ಫ್ಲವರ್ ಶೋವನ್ನು ಈ ಬಾರಿ 15 ಲಕ್ಷಕ್ಕು ಅಧಿಕ ಮಂದಿ ವೀಕ್ಷಿಸುವ ನಿರೀಕ್ಷೆ ಇದೆ. ಇನ್ನು ಫ್ಲವರ್ ಶೋಗೆ 1 ರಿಂದ 10 ನೇ ತರಗತಿ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ವಯಸ್ಕರಿಗೆ ರಜಾದಿನಗಳಲ್ಲಿ, ವಾರಾಂತ್ಯದಲ್ಲಿ 100 ರೂಪಾಯಿ, ಸಾಮಾನ್ಯ ದಿನಗಳಲ್ಲಿ 80 ರೂಪಾಯಿ ನಿಗದಿ ಪಡಿಸಲಾಗಿದೆ.
Published by:Thara Kemmara
First published: