2022ರ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದ (Bengaluru Palace Ground) ಗಾಯತ್ರಿ ವಿಹಾರದಲ್ಲಿ ಅಯೋಜನೆ ಮಾಡಲಾಗಿತ್ತು. ಸಮಾವೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಚಾಲನೆ ನೀಡಿದರು. ಈ ಬಾರಿ ಮೀನುಗಾರಿಕೆ ಇಲಾಖೆ, ಫ್ರೀಡಂ ಆ್ಯಪ್ ಸಹಯೋಗದಲ್ಲಿ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಮೀನುಗಾರಿಕೆ ಸಚಿವ ಎಸ್. ಅಂಗಾರ (Minister S Angara), ಸಚಿವ ಅಶ್ವತ್ಥ ನಾರಾಯಣ (Minister Ashwath Narayan) ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಮಾವೇಶಕ್ಕೆ ಚಾಲನೆ ನೀಡಿದ ಬಳಿಕ ಸ್ಟಾಲ್ಗಳಲ್ಲಿ ಮೀನು ಆಹಾರ, ಮೀನು ಕೃಷಿ ಪರಿಕರಗಳು ವೀಕ್ಷಿಸಿದರು. ಸಮಾವೇಶದಲ್ಲಿ ಮಾತನಾಡುತ್ತಿರುವ ವೇಳೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Minister BC Nagesh) ಅವರಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು.
ಸಿಎಂ ಬೊಮ್ಮಾಯಿ ಭಾಷಣದ ಸಂದರ್ಭದಲ್ಲಿ ಪಕ್ಕದಲ್ಲಿದ್ದವರ ಜೊತೆ ಬಿ.ಸಿ.ನಾಗೇಶ್ ಮಾತನಾಡುತ್ತಿದ್ದರು. ನಾಗೇಶ್ ನೀನು ಮಾತನಾಡುವುದಿದ್ದರೆ ಹೊರಗೆ ಹೋಗಿ ಮಾತನಾಡಬಹುದು. ನಾನು 5 ನಿಮಿಷಗಳಲ್ಲಿ ನನ್ನ ಮಾತು ಮುಗಿಸುತ್ತೇನೆ ಎಂದು ಸಿಎಂ ಗರಂ ಆದ್ರು. ಬಳಿಕ ಎಚ್ಚೆತ್ತುಕೊಂಡು ಬಿ.ಸಿ.ನಾಗೇಶ್ ಮಾತನಾಡೋದನ್ನು ನಿಲ್ಲಿಸಿದರು.
ಒಳನಾಡು ಮೀನುಗಾರಿಕೆಯನ್ನು ನಾವು ಬೆಳೆಸಬೇಕಿದೆ
ಶತಮಾನಗಳಿಂದ ಮೀನು ಮನುಷ್ಯನ ಆಹಾರವಾಗಿದೆ. ಮೀನು ಸಸ್ಯಾಹಾರಿ, ಆದರೆ ಮೀನು ತಿನ್ನುವ ಮನುಷ್ಯ ಮಾಂಸಾಹಾರಿ. ಆದರೆ ಮೀನು ಸಸ್ಯಹಾರಿ ಆಗಿರೋದ್ರಿಂದ ಕೆಲವು ದೇಶಗಳಲ್ಲಿ ಮೀನು ಸಸ್ಯಾಹಾರಿ ಎಂದು ಕರೆಯುತ್ತಾರೆ. ಒಳನಾಡಿನಲ್ಲಿ ಮೀನುಗಾರಿಕೆ ಉತ್ಪನ್ನಗಳನ್ನು ಹೆಚ್ಚಿಸಿದರೆ ತಾಜಾ ಆಹಾರದಂತೆ ಒದಗಿಸಬಹುದು. ಸಮುದ್ರದ ಮೀನಿಗೂ ಒಳನಾಡಿನಲ್ಲಿ ಬೆಳೆಯುವ ಮೀನಿಗೂ ವ್ಯತ್ಯಾಸವಿದೆ. ಆದರೆ ಒಳನಾಡು ಮೀನುಗಾರಿಕೆಯನ್ನು ನಾವು ಬೆಳೆಸಬೇಕಿದೆ ಎಂದು ಸಿಎಂ ಅಭಿಪ್ರಾಯ ಪಟ್ಟರು.
ಖಾಸಗಿಯವರು ಬಂದ್ರೆ ಉತ್ತೇಜನ
ಸಮುದ್ರದ ಮೀನುಗಾರಿಕೆ ಹೆಚ್ಚಿಸಲು ನಾವು ಉತ್ತೇಜನ ಕೊಡುತ್ತಿದ್ದೇವೆ. ಮೀನುಗಾರಿಕೆಗೆ ಖಾಸಗಿಯವರು ಬಂದರೆ ನಾವು ಉತ್ತೇಜನ ಕೊಡಲು ಸಿದ್ಧ. ನೀವು ಒಂದು ಹೆಜ್ಜೆ ಮುಂದೆ ಬಂದರೆ ನಾವು ಎರಡು ಹೆಜ್ಜೆ ಮುಂದಿಡುತ್ತೇವೆ. ಖಾಸಗಿ ವಲಯದವರು ಸರ್ಕಾರದಿಂದ ಸಹಾಯ ಪಡೆಯಬಹುದು ಎಂದು ತಿಳಿಸಿದರು.
ಬೆಂಗಳೂರಿನ ಪ್ರತಿ ವಾರ್ಡ್ನಲ್ಲೂ ಮೀನು ಸ್ಟಾಲ್
ಖಾಸಗಿಯವರು ಮೀನುಗಾರಿಕೆ ಉತ್ತೇಜನಕ್ಕೆ ಸಲಹೆಗಳನ್ನೂ ಕೊಡಬಹುದು. ನಾವು ನಿಮ್ಮ ಸಲಹೆಗಳನ್ನೂ ಪಡೆಯುತ್ತೇವೆ ಬೆಂಗಳೂರಿನ ಪ್ರತಿ ವಾರ್ಡ್ ನಲ್ಲೂ ಮೀನು ಸ್ಟಾಲ್, ಹೋಟೆಲ್ ಆರಂಭಿಸಲು ಸಚಿವ ಎಸ್ ಅಂಗಾರ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ವಿಷಯವನ್ನು ತಿಳಿಸಿದರು.
ಮೀನುಗಾರಿಕೆಗೆ ಉತ್ತೇಜನ ಕೊಡುವುದರಿಂದ ನಮ್ಮ ಆಂತರಿಕ ಜಿಡಿಪಿಯನ್ನೂ ಹೆಚ್ಚಿಸಬಹುದು. ಆರ್ಥಿಕತೆ ಎಂದರೆ ಹಣವಲ್ಲ ಎಂದು ನಾನು ನಂಬುತ್ತೇನೆ. ಆರ್ಥಿಕತೆ ಎಂದರೆ ಹಣವಲ್ಲ, ಅದು ದುಡಿಮೆ. ಹಿಂದೆ ನಮ್ಮಲ್ಲಿ ದುಡ್ಡೆ ದೊಡ್ಡಪ್ಪ ಎಂಬ ಮಾತಿತ್ತು. ಈಗ ಅದನ್ನು 'ದುಡಿಮೆಯೆ ದೊಡ್ಡಪ್ಪ' ಎನ್ನಬೇಕು. ಈಗ ದುಡಿಮೆಯೆ ದೊಡ್ಡಪ್ಪ ಆಗಿದೆ ಎಂದರು.
ಮೀನುಗಾರರ ವಿದ್ಯಾಭ್ಯಾಸಕ್ಕೆ ಸಹಾಯ
ಮೀನುಗಾರಿಕೆ ಇಲಾಖೆ ಸಚಿವ ಎಸ್ ಅಂಗಾರ ಮಾತನಾಡಿ, ಮೀನು ಕೃಷಿಗೆ ಉತ್ತೇಜನ ಕೊಡುವ ಉದ್ದೇಶದಿಂದ ಈ ಕಾರ್ಯಾಗಾರ ಮಾಡಿದ್ದೇವೆ. ಕಾರ್ಯಾಗಾರದಲ್ಲಿ ಒಟ್ಟು 5 ಗೋಷ್ಟಿಗಳಿವೆ. ಮೀನುಗಾರಿಕೆ ಉತ್ಪನ್ನ, ಮೀನುಗಾರರ ಆದಾಯ ಹೆಚ್ಚಳಕ್ಕೆ ಕ್ರಮಗಳನ್ನು ಸಿಎಂ ತೆಗೆದುಕೊಂಡಿದ್ದಾರೆ. ಮೀನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು.
ಮೀನುಗಾರಿಕೆ ಉತ್ಪನ್ನಗಳಿಂದ ಆದಾಯ ಹೆಚ್ಚಾಗಬೇಕು. ಎಲ್ಲದಕ್ಕೂ ಸಿಎಂ ಬೊಮ್ಮಾಯಿ ಸಹಾಯ ಮಾಡುತ್ತಿದ್ದಾರೆ. ಫ್ರೀಡಂ ಆ್ಯಪ್ ಸಹಯೋಗದಲ್ಲಿ ಒಳನಾಡು ಮೀನುಗಾರಿಗೆ ಕಾರ್ಯಾಗಾರ ಮಾಡುತ್ತಿದ್ದೇವೆ. ಸರ್ಕಾರದ ಯೋಜನೆಗಳನ್ನು ಮೀನು ಕೃಷಿಕರಿಗೆ ಕೊಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Hassan Accident: ಭೀಕರ ಅಪಘಾತಕ್ಕೆ ಕಾರಣ ಏನು? ಪೊಲೀಸರ ಮುಂದೆ ಶರಣಾದ ಲಾರಿ ಚಾಲಕ, ಒಂದೇ ಗ್ರಾಮದ 9 ಜನ ಸಾವು
ಮೀನು ಕೃಷಿ ಮಾಡಲು ಉತ್ತೇಜನ
ಕರಾವಳಿ ಹಾಗೂ ಒಳನಾಡು ಮೀನುಗಾರಿಕೆಗೆ ಉತ್ತೇಜನ ಕೊಡುತ್ತೇವೆ. ಕೃಷಿಕರು ಮೀನು ಕೃಷಿ ಮಾಡಲು ಉತ್ತೇಜನ ಕೊಡಲು ಈ ಸಮಾವೇಶ ಮಾಡುತ್ತಿದ್ದೇವೆ. ಒಳನಾಡು ಮೀನು ಕೃಷಿಗೆ ಜಿಲ್ಲಾವಾರು ಸೇರಿದಂತೆ ಉತ್ತೇಜನ ಕೊಡಲು ತೀರ್ಮಾನ ಮಾಡಿದ್ದೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ