• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election: ಸಿಟಿ ರವಿಗೆ ಸಿಎಂ ಬೊಮ್ಮಾಯಿ ಪರೋಕ್ಷ ಟಾಂಗ್! ಕುಚುಕು ಗೆಳೆಯನ ಬಗ್ಗೆ ಶ್ರೀರಾಮುಲು ಅಚ್ಚರಿ ಹೇಳಿಕೆ

Karnataka Election: ಸಿಟಿ ರವಿಗೆ ಸಿಎಂ ಬೊಮ್ಮಾಯಿ ಪರೋಕ್ಷ ಟಾಂಗ್! ಕುಚುಕು ಗೆಳೆಯನ ಬಗ್ಗೆ ಶ್ರೀರಾಮುಲು ಅಚ್ಚರಿ ಹೇಳಿಕೆ

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ನಮ್ಮದು ಮೋದಿ ಸಂಸ್ಕೃತಿ ಎನ್ನೋ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಸ್ವ-ಪಕ್ಷದ ಮುಖಂಡ ಸಿ.ಟಿ ರವಿಗೆ ಟಾಂಗ್ ಕೊಟ್ಟರೆ, ಅನುಗಾಲದ ಗೆಳೆಯನ ಮನವೊಲಿಕೆಯ ಪ್ರಶ್ನೆಯೇ ಇಲ್ಲ ಅಂತ ಜನಾರ್ದನ ರೆಡ್ಡಿಗೆ ಸಚಿವ ಶ್ರೀರಾಮುಲು ಟಾಂಗ್ ಕೊಟ್ಟಿದ್ದಾರೆ.

  • News18 Kannada
  • 3-MIN READ
  • Last Updated :
  • Hubli-Dharwad (Hubli), India
  • Share this:

ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸ್ವಪಕ್ಷದ ಮುಖಂಡನಿಗೆ ಟಾಂಗ್ ಕೊಟ್ಟಿದ್ದಾರೆ. ಇದೇ ವೇಳೆ ಸಾರಿಗೆ ಸಚಿವ ಶ್ರೀರಾಮುಲು (Sriramulu) ಅನುಗಾಲದ ಗೆಳೆಯನಿಗೆ ಟಾಂಗ್ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ನಮ್ಮದು ನರೇಂದ್ರ ಮೋದಿ (PM Modi) ಸಂಸ್ಕೃತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಒಂದು ಕಡೆ ನಮ್ಮದು ಮೋದಿ ಸಂಸ್ಕೃತಿ (Culture) ಅಂತ ಬೊಮ್ಮಾಯಿ ಹೇಳಿದ್ದು,  ಮತ್ತೊಂದೆಡೆ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy ) ಮನವೊಲಿಕೆಯ ಪ್ರಶ್ನೆಯೇ ಇಲ್ಲ ಅಂತ ಹೇಳುವ ಮೂಲಕ  ಶ್ರೀರಾಮುಲು ಅಚ್ಚರಿ ಮೂಡಿಸಿದ್ದಾರೆ.


ಸಿ.ಟಿ.ರವಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತೀಕ್ಷ್ಣ ಪ್ರತಿಕ್ರಿಯೆ


ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,  ಕಾಂಗ್ರೆಸ್ ದು ಟಿಪ್ಪು ಸುಲ್ತಾನ್ ವಂಶಸ್ಥರ ಸಂಸ್ಕೃತಿ, ನಮ್ಮದು ನಾಲ್ವಡಿ ಕೃಷ್ಣರಾಜರ ಸಂಸ್ಕೃತಿ ಎಂಬ ಸಿ.ಟಿ.ರವಿ ಹೇಳಿಕೆಗೂ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಯಾರ್ಯಾರದ್ದು ಯಾವ ಸಂಸ್ಕೃತಿ ಎಂಬುದು ಜನರಿಗೆ ಗೊತ್ತಿದೆ. ನನ್ನ ಪ್ರಕಾರ ನಮ್ಮದು ನರೇಂದ್ರ ಮೋದಿ ಸಂಸ್ಕೃತಿ. ಮೋದಿ ಭಾರತವನ್ನ ಅತ್ಯಂತ ಸಶಕ್ತವಾಗಿ, ಶ್ರೀಮಂತವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರು ಅಮೃತ ಕಾಲವನ್ನು ಕರ್ತವ್ಯ ಕಾಲ. ಕರ್ತವ್ಯದ ಮೂಲಕ ದೇಶವನ್ನ ಇಡೀ ಜಗತ್ತಿಗೆ ಸರ್ವ ಶ್ರೇಷ್ಠವನ್ನಾಗಿಸಲು ಹೊರಟಿದ್ದಾರೆ. ಆ ಧ್ಯೇಯ ಇಟ್ಟುಕೊಂಡು ನಾವು ಆಡಳಿತ ಮಾಡುತ್ತಿದ್ದೇವೆ  ಎಂದು ಹೇಳಿದ್ದಾರೆ.




ಇದನ್ನೂ ಓದಿ: Zameer Ahmed: 'ಕ್ಷೀರಭಾಗ್ಯ' ಬದಲು 'ಶೀಲಭಾಗ್ಯ' ಎಂದ ಜಮೀರ್ ಅಹ್ಮದ್! ಸಿದ್ದು ಸರ್ಕಾರದ ಭ್ಯಾಗಗಳನ್ನು ಸ್ಮರಿಸುವಾಗ ಎಡವಟ್ಟು


ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಬೇಡ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಮೊದಲಿನಿಂದಲೂ ಯಡಿಯೂರಪ್ಪನವರು ಅದನ್ನೇ ಹೇಳುತ್ತಿದ್ದಾರೆ. ನನ್ನ ಹೆಸರು ನಾಮಕರಣ ಬೇಡ ಎಂದು ಹೇಳಿದ್ದಾರೆ. ಆದರೆ ಶಿವಮೊಗ್ಗದ ಜನ ಒತ್ತಡ ತಂದಿದ್ದಾರೆ. ಈ ಕುರಿತು ಬಿಎಸ್ ವೈ ಜೊತೆ ಮಾತನಾಡುತ್ತೇನೆ. ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಸರಿಡುವ ಕುರಿತು ಒಮ್ಮೆಗೇ ಚರ್ಚೆ ಮಾಡುತ್ತೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.


ರೆಡ್ಡಿ ಮನವೊಲಿಕೆ ಮುಗಿದ ಅಧ್ಯಾಯ ಎಂದ ಶ್ರೀರಾಮುಲು


ಪ್ರತ್ಯೇಕ ಪಕ್ಷ ಕಟ್ಟಿದ ಮೇಲೆ ಜನಾರ್ದನ ರೆಡ್ಡಿ ಮನವೊಲಿಕೆ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು‌ ತಿಳಿಸಿದ್ದಾರೆ ಅನುಗಾಲದ ಗೆಳೆಯನ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮನವೊಲಿಕೆ ಮುಗಿದ ಅಧ್ಯಾಯ, ರೆಡ್ಡಿ ಅವರು ಈಗಾಗಲೇ ಪಕ್ಷ ಘೋಷಣೆ ಮಾಡಿದ್ದಾರೆ. ಇನ್ನೇನಿದ್ದರೂ ಚುನಾವಣೆಯಲ್ಲಿ ಎದುರಿಸೋದು. ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತ ಕೇಳ್ತೀವಿ. ಮುಂದೆ ಏನ್ ಆಗತ್ತೆ ಗೊತ್ತಿಲ್ಲ. ಆದರೆ ನಾನು ಮುಂದಿನ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧೆ ಮಾಡ್ತೇನೆ ಎಂದರು.


ಪರಿಶಿಷ್ಟ ಪಂಗಡದವರು, ಬ್ರಾಹ್ಮಣರು ಸಿಎಂ ಆಗಬಹುದು


ಬ್ರಾಹ್ಮಣರು ಕೂಡಾ ಸಿಎಂ ಆಗಬಹುದು, ಅವರು ಸಿಎಂ ಆಗಬಾರದು ಎಂದರೆ ಹೇಗೆ‌ ಎಂದು ಹೆಚ್.ಡಿ.ಕೆ ಹೇಳಿಕೆಗೆ ಶ್ರೀರಾಮು ಟಾಂಗ್‌ ಕೊಟ್ಟರು. ಕುಮಾರಸ್ವಾಮಿಯಿಂದ ಜಾತಿಗಳ ನಡುವೆ ವಿಷ ಬೀಜ ಬಿತ್ತೋ ಕೆಲಸ ಆಗುತ್ತಿದೆ. ಸಿಎಂ ಹುದ್ದೆಯನ್ನು ಕುಮಾರಸ್ವಾಮಿ ಕುಟುಂಬದವರು ಗುತ್ತಿಗೆ ತೆಗೆದುಕೊಂಡಿದ್ದಾರಾ? ಪ್ರಜಾಪ್ರಭುತ್ವದಲ್ಲಿ  ಇವರೇ ಮುಖ್ಯಮಂತ್ರಿ ಆಗಬೇಕು ಅನ್ನೋದೆ ಇಲ್ಲ. ಸಂವಿಧಾನದಲ್ಲಿ ಯಾವ ಜಾತಿ ಅವರು ಕೂಡಾ ಸಿಎಂ ಆಗಬಹುದು. ಪರಿಶಿಷ್ಟ ಪಂಗಡದವರು, ಬ್ರಾಹ್ಮಣರು ಸಿಎಂ ಆಗಬಹುದು.


ಇದನ್ನೂ ಓದಿ: BDA, Lokayuktha Ride: ಮತ್ತೆ ಅಖಾಡಕ್ಕೆ ಲೋಕಾಯುಕ್ತ ಎಂಟ್ರಿ; BDA ಕಚೇರಿ ಮೇಲೆ ದಾಳಿ, ಸತತ 3 ಗಂಟೆಗಳಿಂದ ದಾಖಲೆ ಪತ್ರ ಪರಿಶೀಲನೆ!


ಕುಮಾರಸ್ವಾಮಿ ಪ್ರಹ್ಲಾದ್ ಜೋಶಿ ಅವರನ್ನು ಪೇಶ್ವೆ ಸಂಸ್ಕೃತಿ ಎಂದು ಹೇಳ್ತಾರೆ.  ಕುಮಾರಸ್ವಾಮಿ ಈ ರೀತಿ ಮಾತನಾಡುತ್ತಾರೆ ಅಂತ ನಾವು ಯಾರು ತಿಳಿದುಕೊಂಡಿರಲಿಲ್ಲ. ಕುಮಾರಸ್ವಾಮಿ ಈ ರೀತಿ ಮಾತಾಡೋದು ಬಿಡಬೇಕಾಗುತ್ತೆ. ವೈಕ್ತಿಕವಾದ ಟೀಕೆ ಮಾಡಬಾರದು.


ಬಿಜೆಪಿಯಲ್ಲಿ ರಾಜ್ಯ ರಾಜಕಾರಣದಲ್ಲಿ ಚರ್ಚೆ ಆಗಿಲ್ಲ. ಜೋಶಿ ಇವತ್ತು ಬಹಳ ಶಕ್ತಿವಂತ ನಾಯಕರು. ಅವರ ಬಗ್ಗೆ ಏಕವಚನದಲ್ಲಿ ಮಾತಾಡೋದು ಸರಿ ಅಲ್ಲ. ಜೋಶಿ ಅವರನ್ನು ಕೇವಲ ಬ್ರಾಹ್ಮಣರೆಂದು ನಾವು ನೋಡುತ್ತಿಲ್ಲ. ಮೀಸಲಾತಿ ವಿಚಾರದಲ್ಲಿ ಜೋಶಿ ನಮ್ಮ ಜೊತೆ ನಿಂತಿದ್ದಾರೆ ಎಂದರು. ಯಡಿಯೂರಪ್ಪ ಪರ ಕುಮಾರಸ್ವಾಮಿ ಓಲೈಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಮುಲು, ಯಡಿಯೂರಪ್ಪ ಪರಸ್ಥಿತಿ ದುರಪಯೋಗ ಮಾಡಿಕೊಳ್ಳುವುದು ಸರಿ ಅಲ್ಲ ಎಂದರು.

Published by:Sumanth SN
First published: