• Home
  • »
  • News
  • »
  • state
  • »
  • Voter ID Controversy: ಮತದಾರರ ಮಾಹಿತಿ ಕಳವು; ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಪ್ರತಿಕ್ರಿಯೆ

Voter ID Controversy: ಮತದಾರರ ಮಾಹಿತಿ ಕಳವು; ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಪ್ರತಿಕ್ರಿಯೆ

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

ಯಾರು ತಪ್ಪು ಮಾಡಿದ್ದಾರೆ ಅದು ತಪ್ಪು. ಏನಾದರೂ ತಪ್ಪು ಇದ್ದರೂ ಚುನಾವಣಾ ಆಯೋಗಕ್ಕೆ ದೂರು ಕೊಡಲಿ ಎಂದು ಕಾಂಗ್ರೆಸ್ ಆರೋಪಗಳಿಗೆ ಅಶ್ವತ್ಥ ನಾರಾಯಣ್ ತಿರುಗೇಟು ನೀಡಿದರು.

  • Share this:

ಮತದಾರರ ಮಾಹಿತಿ (Voter Details Steal) ಕಳವು ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ (Congress) ಸುದ್ದಿಗೋಷ್ಠಿ ನಡೆಸಿತು. ಇದೀಗ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ನಿಜವಾಗಿಯೂ ಕೂಡ ಕಾಂಗ್ರೆಸ್​​ನವರು ಈ ವಿಚಾರದಲ್ಲಿ ದಿವಾಳಿಯಾಗಿದ್ದಾರೆ. ಚುನಾವಣಾ ಆಯೋಗ (Election Commission) ಸಮೀಕ್ಷೆ ಮಾಡೋದಕ್ಕೆ ಬಿಬಿಎಂಪಿಗೆ (BBMP) ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಕೊಟ್ಟಿರುತ್ತಾರೆ. ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು ಸಮೀಕ್ಷೆ ಮಾಡಲು ಎನ್​​ಜಿಓಗೆ ಕೊಡ್ತಾರೆ. ಇದು ಮೊದಲನೇ ಸಲ ಆಗಿದ್ದೇನೂ ಅಲ್ಲ. ಈ ಹಿಂದೆಯೂ ನಡೆದಿದೆ. 2018ರಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಇದ್ದಾಗಲೂ ಮಾಹಿತಿ ಸಂಗ್ರಹಣೆಗೆ ನೀಡಲಾಗಿತ್ತು ಎಂದು ಹೇಳಿದರು.


ಎನ್‌ಜಿಓ ಬಿಎಲ್​​ಡಿ ಅದೇನೋ ದುರ್ಬಳಕೆ ಮಾಡಿಕೊಂಡಿದೆ ಎನ್ನುವಂಥದ್ದು ಹೊರಗೆ ಬರಲಿದೆ. ಚುನಾವಣಾ ಆಯೋಗದಿಂದ ಕೊಟ್ಟಿರುವ ಅನುಮತಿ ಇದಾಗಿದೆ.  ಆ ಮೇಲೆ ಅವರು ದುರ್ಬಳಕೆ ಮಾಡಿರುವಂತದ್ದಾಗಿದೆ. ಆ ಎನ್​ಜಿಓ ಜೊತೆಗೆ ಏನು ಲಿಂಕ್ ಇದೆ, ಬೇರೆ ಏನಿದೆ? ಈ ಎಲ್ಲದರ ಕುರಿತು ಸಮಗ್ರ ತನಿಖೆ ಮಾಡಲು ನಾನು ಸೂಚನೆಯನ್ನು ಕೊಟ್ಟಿದ್ದೇನೆ ಎಂದು ತಿಳಿಸಿದರು.


ಕಾಂಗ್ರೆಸ್ ದಿವಾಳಿ ಆಗಿದೆ


ತನಿಖೆ ಆಗಿ ಎಲ್ಲವೂ ಹೊರಗೆ ಬರಲಿ. ಕಾಂಗ್ರೆಸ್​ ದೂರು ಕೊಡಲಿ, ದೂರು ಕೊಟ್ಟರೆ ತನಿಖೆ ಆಗುತ್ತದೆ. ಅವರ ನಡೆಯೇ ಹಾಸ್ಯಾಸ್ಪದ, ಸಂಬಂಧ ಇಲ್ಲದ್ದನ್ನು ಕೇಳುತ್ತಿದ್ದಾರೆ. ಅದಕ್ಕೆ ಅವರು ದಿವಾಳಿ ಆಗಿದ್ದಾರೆ ಅಂತಾ ನಾನು ಹೇಳಿದ್ದು ಎಂದು ವಾಗ್ದಾಳಿ ನಡೆಸಿದರು.


ತನಿಖೆ ನಡೆಸಲು ಸಿಎಂ ಬೊಮ್ಮಾಯಿ ಸೂಚನೆ


ಇದನ್ನೇ ನಾವು ತೆಗೆದುಕೊಂಡರೆ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರು ನೂರು ಬಾರಿ ರಾಜೀನಾಮೆ ಕೊಡಬೇಕಾಗಿತ್ತು. ಇದು ಚುನಾವಣಾ ಆಯೋಗ, ಬಿಬಿಎಂಪಿ ಹಾಗೂ ಆ ಸಂಸ್ಥೆಯ ಮಧ್ಯದ ವಿಚಾರ. ಕಾಂಗ್ರೆಸ್ ನವರು ಮಾಡುತ್ತಿರುವುದು ಆಧಾರ ರಹಿತ ಆರೋಪ. ತನಿಖೆ ನಡೆದು ಸತ್ಯ ಹೊರಗೆ ಬರಲಿ.  ಪ್ರಕರಣ ದಾಖಲಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಹೇಳಿದ್ದೇನೆ ಎಂದರು.


ಅಶ್ವಥ್ ನಾರಾಯಣ್ ಪ್ರತಿಕ್ರಿಯೆ


ಇನ್ನು ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಎನ್.ಅಶ್ವಥ್ ನಾರಾಯಣ್, ಇಂಥಹ ಆಧಾರ ಇಲ್ಲದ ಆರೋಪಗಳನ್ನು ಖಂಡಿಸುತ್ತೇವೆ. ಕಳ್ಳನ‌ ಮನಸ್ಸು ಹುಳ್ ಹೊಳ್ಗೆ ಅಂತರಲ್ಲ ಹಾಗೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.


ಚುನಾವಣಾ ಆಯೋಗಕ್ಕೆ ದೂರು ನೀಡಲಿ


ಚುನಾವಣಾ ಸಮಯದಲ್ಲಿ ಇಂತಹ ಸಂಸ್ಥೆಗಳಿಗೆ  ಚುನಾವಣಾ ಆಯೋಗ ಕೊಡುವುದು. ಇದು ಸರ್ಕಾರಕ್ಕೆ ಸಂಬಂಧ ಇರುವುದಿಲ್ಲ. ಯಾರು ತಪ್ಪು ಮಾಡಿದ್ದಾರೆ ಅದು ತಪ್ಪು. ಏನಾದರೂ ತಪ್ಪು ಇದ್ದರೂ ಚುನಾವಣಾ ಆಯೋಗಕ್ಕೆ ದೂರು ಕೊಡಲಿ ಎಂದು ಕಾಂಗ್ರೆಸ್ ಆರೋಪಗಳಿಗೆ ಅಶ್ವತ್ಥ ನಾರಾಯಣ್ ತಿರುಗೇಟು ನೀಡಿದರು.


ಇದನ್ನೂ ಓದಿ:  Congress: ಸರ್ಕಾರ, ಬಿಬಿಎಂಪಿಯಿಂದ ಮತದಾರರ ಮಾಹಿತಿ ಕಳ್ಳತನ; ಕಾಂಗ್ರೆಸ್ ಆರೋಪ


ಫೋಟೋ ಬಗ್ಗೆ ಪ್ರತಿಕ್ರಿಯೆ


ಹೊಂಬಾಳೆ ಮತ್ತು ಚಿಲುಮೆ ಸಂಸ್ಥೆಗೆ ಯಾವುದೇ ಸಂಬಂಧ ಇಲ್ಲ. ಬುದ್ದಿ ಇಲ್ಲದವರು  ಈ ರೀತಿ ಹೇಳಿಕೆ ಕೊಡುತ್ತಾರೆ. ರವಿಕುಮಾರ್ ನಮಗೆ ಗೊತ್ತು. ಗೊತ್ತಿಲ್ಲ ಅನ್ನೋದು ತಪ್ಪು ಆಗುತ್ತದೆ, ರವಿ ಕುಮಾರ್ ನಮ್ಮ ಕ್ಷೇತ್ರದವರು. ಕಾರ್ಯಕ್ರಮಕ್ಕೆ ಹೋದಾಗ ಫೋಟೋ ತೆಗೆಸಿಕೊಂಡರೆ ನಾನು ಏನೂ ಮಾಡ್ಲಿ ಎಂದು ಕಾಂಗ್ರೆಸ್ ಬಿಡುಗಡೆಗೊಳಿಸಿದ ಫೋಟೋ ಬಗ್ಗೆ ಪ್ರತಿಕ್ರಿಯಿಸಿದರು.


ಇವರನ್ನು ಕೇಳಿ ನಾವು ಕಾರ್ಯಕ್ರಮಕ್ಕೆ ಹೋಗಬೇಕಾ? ಕಾಂಗ್ರೆಸ್​ನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಪಿಎಸ್​​ಐ ಹಗರಣ ಬಂದರೂ ಅಶ್ವಥ್ ನಾರಾಯಣ್ ಬಗ್ಗೆ ಮಾತನಾಡುತ್ತಾರೆ. ರವಿಕುಮಾರ್ ನನಗೆ ಗೊತ್ತು ಆದ್ರೆ ಚಿಲುಮೆ ಸಂಸ್ಥೆ ಬಗ್ಗೆ  ಗೊತ್ತಿಲ್ಲ ಎಂದು ತಿಳಿಸಿದರು. ಇದೇ ವೇಳೆ ಕಾಂಗ್ರೆಸ್ ತಮ್ಮನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕಿಡಿಕಾರಿದರು.

Published by:Mahmadrafik K
First published: