ಬೆಂಗಳೂರಿನ (Bangalore) ಒಟ್ಟು ಎಂಟು ಶಾಲೆಗಳಿಗೆ (School) ಇಂದು ಆಗಂತುಕರು ಬಾಂಬ್ ಬೆದರಿಕೆ (Bomb threat) ಸಂದೇಶ ಕಳುಹಿಸಿದ್ದು, ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೆಣ್ಣೂರಿನ ವಿನ್ಸೆಂಟ್ ಪಲ್ಲೋಟಿ ಶಾಲೆ, ಹೆಬ್ಬಗೋಡಿಯ ಎಬಿನೈಸರ್, ಶಾ ಸರ್ಜಾಪುರ ರಸ್ತೆಯ ಡೆಲ್ಲಿ ಪಬ್ಲಿಕ್ ಸ್ಕೂಲ್, ಮಹದೇವಪುರದ ಗೋಪಾಲನ್ ಇಂಟರ್ ನ್ಯಾಷನಲ್ ಸ್ಕೂಲ್, ಮಾರತ್ತಳ್ಳಿಯ ನ್ಯೂ ಅಕಾಡೆಮಿ ಸ್ಕೂಲ್ ಹಾಗೀ ಗೋವಿಂದಪುರದ ಇಂಡಿಯನ್ ಪಬ್ಲಿಕ್ ಸ್ಕೂಲ್ಗೆ ಈ ಬಾಂಬ್ ಬೆದರಿಕೆ ಸಂದೇಶ ರವಾನೆ ಆಗಿದೆ.
ಇಂದು ಬೆಳಗ್ಗೆ ಆಗಂತುಕರು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶವನ್ನು ಇದರಿಂದಾಗಿ ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳ ರಕ್ಷಣೆ ಶಾಲಾ ಸಿಬ್ಬಂದಿ ಮುಂದಾದರು. ತಕ್ಷಣಕ್ಕೆ ಶಾಲಾ ಸಿಬ್ಬಂದಿಗಳು ಮಕ್ಕಳನ್ನು ಕ್ಲಾಸ್ ರೂಮ್ ಗಳಿಂದ ಹೊರಗೆ ಕಳುಹಿಸಿ, ಮಕ್ಕಳನ್ನು ಒಂದೆಡೆ ಸೇರಿಸಲು ಮುಂದಾದರು. ತಕ್ಷಣಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು.
ಬಾಂಬ್ ಬೆದರಿಕೆ ಸಂದೇಶ
ನಿಮ್ಮ ಸ್ಕೂಲ್ ಆವರಣದಲ್ಲಿ ಬಾಂಬ್ ಇರಿಸಲಾಗಿದೆ. ಇದು ಜೋಕ್ ಅಲ್ಲ, ತಕ್ಷಣ ಪೊಲೀಸ್ರಿಗೆ ಮಾಹಿತಿ ನೀಡಿ. ಇದು ನಿಮ್ಮನ್ನು ಸೇರಿ ನೂರಾರು ಜೀವಗಳ ಪ್ರಶ್ನೆ ಇದು ತಡ ಮಾಡ್ಬೇಡಿ ...ಎಲ್ಲವೂ ನಿಮ್ಮ ಕೈಯಲ್ಲಿದೆ ಎಂಬ ಸಂದೇಶ ರವಾನೆ ಆಗಿದೆ.
ಇದನ್ನು ಓದಿ: ಧ್ವನಿವರ್ಧಕ ಬಳಕೆ ವಿವಾದ ನಡುವೆ Hubli-Dharwadದಲ್ಲಿ 268 ಧಾರ್ಮಿಕ ಕೇಂದ್ರಗಳಿಗೆ ನೋಟಿಸ್
ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಶಾಲಾ ವ್ಯಾಪ್ತಿಯ ಪೊಲೀಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆಗೆ ಮುಂದಾದರು. ಬಾಂಬ್ ಪತ್ತೆ ದಳ, ಶ್ವಾನದಳ ಕೂಡ ಆರು ಶಾಲೆಗಳ ಶೌಚಾಲಯ ಸೇರಿದಂತೆ ಎಲ್ಲ ಕಟ್ಟಡಗಳ ಪರಿಶೀಲನೆ ನಡೆಸಿದ್ದು, ಎಲ್ಲಿಯೂ ಬಾಂಬ್ ಪತ್ತೆ ಆಗಿಲ್ಲ. ಈ ಬಾಂಬ್ ಬೆದರಿಕೆಯಿಂದಾಗಿ ಶಾಲಾ ಆಡಳಿತ, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಶಾಲಾ ಅಡಳಿತ ಮಂಡಳಿ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಒಂದೆಡೆ ಅಸೆಂಬಲ್ ಮಾಡಿಸಿದ್ದಾರೆ. ಪೋಷಕರು ಕೂಡ ಮಾಹಿತಿ ರವಾನೆ ಆಗಿದ್ದು, ಆತಂಕದಲ್ಲಿ ಶಾಲೆಗೆ ಬಂದ ಪೋಷಕರು ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ.
ಇದನ್ನು ಓದಿ:
ಆನೇಕಲ್ ಬಳಿ ಖಾಸಗಿ ಶಾಲೆಗೆ Bomb ಬೆದರಿಕೆ; ಆತಂಕದ ವಾತಾವರಣ ನಿರ್ಮಾಣ
ಯಾವುದೇ ಅನುಮಾನಾಸ್ಪದ ವಸ್ತು ಕೂಡ ಪತ್ತೆ ಆಗಿಲ್ಲ
ಆರು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಾಕ್ಷಣ ಪ್ರಾಥಮಿಕ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಅನುಮನಾಸ್ಪದ ವಸ್ತು ಪತ್ತೆಯಾಗಿಲ್ಲ. ನಕಲಿ ಮೇಲ್ ಐಡಿ ಬಳಸಿ ಶಾಲೆಗಳಿಗೆ ಮೇಲ್ ಮಾಡಿರೋ ಶಂಕೆ ಹಿನ್ನಲೆ ಸೈಬರ್ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಎಲ್ಲಾ ಶಾಲೆಗಳಿಗೂ ಬೇರೆ ಬೇರೆ ಐಡಿಗಳಿಂದ ಈ ಇ ಮೇಲ್ ಸಂದೇಶ ರವಾನೆ ಆಗಿದೆ.
ರಾಜ್ಯಕ್ಕೆ ಕೆಟ್ಟ ಹೆಸರು ತರಲು ಮಾಡಿರುವ ಕೆಲಸವಿದು
ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಸುದ್ದಿ ತಿಳಿದ ಕೂಡ ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ್ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪರಿಸ್ಥಿತಿ ವಿವರಣೆ ನೀಡಿದ್ದಾರೆ. ಅಲ್ಲದೇ, ಪೊಲೀಸರ ತಪಾಸಣೆ, ಶಾಲೆಗಳಲ್ಲಿ ಭದ್ರತೆ ಮಾಹಿತಿ ನೀಡಿದರು. ಇನ್ನು ಘಟನೆ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಇವೆಲ್ಲ ಶಾಂತಿ ಕದುಡುವ ಹುನ್ನಾರ ನಡೀತ್ತಿದೆ. ಕರ್ನಾಟಕ ಪ್ರಗತಿ ಹೊಂದುತ್ತಿರುವ ರಾಜ್ಯ ಆಗಿದ್ದು, ಪ್ರಗತಿ ಹೊಂದಿದ ರಾಜ್ಯಕ್ಕೆ ಕೆಟ್ಟ ಹೆಸರು ತರಲು ಯತ್ನ ನಡೆಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ. ಅವರನ್ನು ಬಂಧಿಸುವಂತೆ ಸೂಚನೆ ನೀಡಿದ್ದೇನೆ. ಎಲ್ಲ ಕಡೆಯೂ ಪೊಲೀಸರು ತಪಾಸಣೆ ಮಾಡ್ತಿದ್ದಾರೆ ಎಂದು ತಿಳಿಸಿದರು.
ಮೇಲ್ ಮೂಲ ಪತ್ತೆಗೆ ತನಿಖೆ ಚುರುಕು
ಇನ್ನು ಘಟನೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಕಮಲ್ಪಂತ್, ಬೆದರಿಕೆ ಇಮೇಲ್ ಮಾಡಿದವರ ಪತ್ತೆಗೆ ತನಿಖೆ ಚುರುಕು ಮಾಡಿದ್ದೇವೆ. ನಕಲಿ ಇಮೇಲ್ ಐಡಿಯಿಂದ ಈ ಸಂದೇಶ ರವಾನೆ ಆಗಿರುವ ಅನುಮಾನ ವ್ಯಕ್ತವಾಗಿದೆ. ಇ-ಮೇಲ್ ಮಾಡಿದವರ ಪತ್ತೆ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ಮೇಲ್ ಮಾಡಿದವರನ್ನ ಹಿಡಿಯುತ್ತೇವೆ. ಎಲ್ಲಿಂದ ಮೇಲ್ ಬಂದಿದೆ ಅಂತ ಪರಿಶೀಲಿಸುತ್ತಿದ್ದೇವೆ. ಸೈಬರ್ ಪೊಲೀಸರಿಂದ ಮೇಲ್ ಐಡಿಯ ಮೂಲ ಪತ್ತೆ ನಡೆಸಲಾಗಿದದು, ಉಗ್ರ ನಿಗ್ರಹ ದಳ, ಸಿಸಿಬಿ ಪೊಲೀಸರೂ ಭೇಟಿ ನೀಡಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ