ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟ : ಬಯಸಿದ ಖಾತೆ ಸಿಗದಿದ್ದರೆ ರಾಜೀನಾಮೆ- ಆನಂದ್​​ಸಿಂಗ್​

ಸಿಎಂ ಮುಂದೆ ಇಂತಹದ್ದೇ ಖಾತೆ ಬೇಕೆಂದು ಬೇಡಿಕೆ ಇಟ್ಟಿದ್ದೆ. ಆದರೆ ನನ್ನ ನಿರೀಕ್ಷೆಯ ಖಾತೆ ಕೊಟ್ಟಿಲ್ಲ. ಬಯಸಿದ ನನಗೆ ಖಾತೆ ಸಿಗದೆ ಇದ್ದರೆ ರಾಜೀನಾಮೆಗೆ ಸಿದ್ಧ ಎಂದಿದ್ದಾರೆ.

ಆನಂದ್​ ಸಿಂಗ್​

ಆನಂದ್​ ಸಿಂಗ್​

  • Share this:
    ಬಳ್ಳಾರಿ: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆಯ 2 ದಿನಗಳ ಬಳಿಕ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಅಧಿಕೃತ ಪಟ್ಟಿ ಹೊರಡಿಸಿದ್ದಾರೆ. ಆದರೆ ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಆನಂದ ಸಿಂಗ್ ಅವರಿಗೆ ಭೂವಿಜ್ಞಾನ ಮತ್ತು ಪರಿಸರ, ಪ್ರವಾಸೋದ್ಯಮ ಖಾತೆ ನೀಡಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ನಿರೀಕ್ಷೆ ಮಾಡಿದ ಖಾತೆಯನ್ನು ಮುಖ್ಯಮಂತ್ರಿಗಳು ಕೊಟ್ಟಿಲ್ಲ, ನನಗೆ ಇದರ ಬಗ್ಗೆ ನೋವಿದೆ. ನಾಳೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಮತ್ತೆ ಬೇಡಿಕೆ ಇಡುತ್ತೇನೆ. ನೋಡೋಣ ಕೊಡುತ್ತಾರೆ ಎಂಬ ನಂಬಿಕೆ ಇದೆ. ಒಂದು ವೇಳೆ ಕೊಡದೆ ಇದ್ದರೆ ಮುಂದೆ ಏನು ಮಾಡಬೇಕು ಎಂದು ನೋಡೋಣ ಎಂದು ಬಳ್ಳಾರಿಯಲ್ಲಿ ಸಚಿವ ಆನಂದ್ ಸಿಂಗ್ ಬಂಡಾಯದ ಬಾವುಟ ಹಾರಿಸಿದರು.

    ಸಿಎಂ ಮುಂದೆ ಇಂತಹದ್ದೇ ಖಾತೆ ಬೇಕೆಂದು ಬೇಡಿಕೆ ಇಟ್ಟಿದ್ದೆ. ಆದರೆ ನನ್ನ ನಿರೀಕ್ಷೆಯ ಖಾತೆ ಕೊಟ್ಟಿಲ್ಲ. ಬಯಸಿದ ನನಗೆ ಖಾತೆ ಸಿಗದೆ ಇದ್ದರೆ ರಾಜೀನಾಮೆಗೆ ಸಿದ್ಧ ಎಂದಿದ್ದಾರೆ. ಸರ್ಕಾರ ರಚನೆಗೆ ಮೊದಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದೇನೆ. ನನಗೆ ಸರ್ಕಾರದ ಮೇಲೆ ಭರವಸೆ ಇದೆ ನಿರೀಕ್ಷಿತ ಖಾತೆ ಕೊಡ್ತಾರೆ ಅಂತ, ಸರ್ಕಾರಕ್ಕೆ ನಾನು ಕೂಡ ಮನವಿ ಮಾಡಿದ್ದೇನೆ.  ಇಂದು ರಾತ್ರಿ ಬೆಂಗಳೂರಿಗೆ ಹೊರಟಿದ್ದೇನೆ, ಸಿಎಂ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ಚರ್ಚೆ ಮಾಡ್ತೀನಿ. ಸರ್ಕಾರ ಯಾವ ರೀತಿ ಸ್ಪಂದಿಸುತ್ತಾ ಅಂತಾ ಕಾದು ನೋಡುತ್ತೇನೆ. ಸ್ಪಂದಿಸದೆ ಇದ್ದರೆ ನನ್ನ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು. ನಿರೀಕ್ಷಿತ ಖಾತೆ ಸಿಕ್ಕಿಲ್ಲ ಅಂತ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ ಆನಂದ್ ಸಿಂಗ್ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಳಿ ಡಿಪಿಎಆರ್, ಹಣಕಾಸು, ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಖಾತೆಗಳನ್ನ ಇರಿಸಿಕೊಂಡಿದ್ದಾರೆ. ಹಾಗೂ ಇನ್ನೂ ಹಂಚಿಕೆಯಾಗದೇ ಉಳಿದ ಇತರೆಲ್ಲಾ ಖಾತೆಗಳು ಸದ್ಯ ಸಿಎಂ ಬಳಿಯೇ ಇರಲಿವೆ.



    ಬೊಮ್ಮಾಯಿ ಸಂಪುಟದ ಸಚಿವರಿಗೆ ಹಂಚಿಕೆಯಾದ ಖಾತೆಗಳು:

    1) ಗೋವಿಂದ ಕಾರಜೋಳ: ಜಲಸಂಪನ್ಮೂಲ ಖಾತೆ

    2) ಕೆಎಸ್ ಈಶ್ವರಪ್ಪ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ3) ಆರ್ ಅಶೋಕ್: ಕಂದಾಯ (ಮುಜರಾಯಿ ಇಲ್ಲ)

    4) ಬಿ ಶ್ರೀರಾಮುಲು: ಸಾರಿಗೆ ಮತ್ತು ಎಸ್​ಟಿ ಕಲ್ಯಾಣ

    5) ವಿ ಸೋಮಣ್ಣ: ವಸತಿ, ಮೂಲಸೌಕರ್ಯ ಅಭಿವೃದ್ಧಿ

    6) ಉಮೇಶ್ ಕತ್ತಿ: ಅರಣ್ಯ, ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರ

    7) ಎಸ್ ಅಂಗಾರ: ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ

    8) ಜೆ ಸಿ ಮಾಧು ಸ್ವಾಮಿ: ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ

    9) ಅರಗ ಜ್ಞಾನೇಂದ್ರ: ಗೃಹ ಖಾತೆ

    10) ಡಾ. ಅಶ್ವಥ ನಾರಾಯಣ: ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ

    11) ಸಿಸಿ ಪಾಟೀಲ್: ಲೋಕೋಪಯೋಗಿ

    12) ಆನಂದ್ ಸಿಂಗ್: ಭೂವಿಜ್ಞಾನ ಮತ್ತು ಪರಿಸರ, ಪ್ರವಾಸೋದ್ಯಮ

    13) ಕೋಟ ಶ್ರೀನಿವಾಸ ಪೂಜಾರಿ: ಸಾಮಾಜಿಕ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ

    14) ಪ್ರಭು ಚೌಹಾಣ್: ಪಶು ಸಂಗೋಪನೆ

    15) ಮುರುಗೇಶ್ ನಿರಾಣಿ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ

    16) ಶಿವರಾಮ್ ಹೆಬ್ಬಾರ್: ಕಾರ್ಮಿಕ ಸಚಿವ

    17) ಎಸ್ ಟಿ ಸೋಮಶೇಖರ್: ಸಹಕಾರ

    18) ಬಿ ಸಿ ಪಾಟೀಲ್: ಕೃಷಿ

    19) ಬೈರತಿ ಬಸವರಾಜು: ನಗರ ಅಭಿವೃದ್ಧಿ

    20) ಡಾ. ಕೆ ಸುಧಾಕರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ

    21) ಕೆ ಗೋಪಾಲಯ್ಯ: ಅಬಕಾರಿ ಖಾತೆ

    22) ಶಶಿಕಲಾ ಜೊಲ್ಲೆ: ಮುಜರಾಯಿ ಮತ್ತು ಹಜ್ ವಕ್ಫ್

    23) ಎಂಟಿಬಿ ನಾಗರಾಜು: ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ವಲಯ ಕೈಗಾರಿಕೆ

    24) ನಾರಾಯಣಗೌಡ: ರೇಷ್ಮೆ ಖಾತೆ, ಯುವಜನ ಕ್ರೀಡೆ

    25) ಬಿ. ಸಿ. ನಾಗೇಶ್: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಖಾತೆ

    26) ವಿ ಸುನೀಲ್ ಕುಮಾರ್: ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ

    27) ಹಾಲಪ್ಪ ಆಚಾರ್: ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕ ಸಬಲೀಕರಣ

    28) ಶಂಕರ್ ಪಾಟೀಲ್ ಮುನೇನಕೊಪ್ಪ: ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಖಾತೆ

    29) ಮುನಿರತ್ನ: ತೋಟಗಾರಿಕೆ ಮತ್ತು ಯೋಜನಾ ಖಾತೆ, ಸಾಂಖ್ಯಿಕ ಇಲಾಖೆ
    Published by:Kavya V
    First published: