Climate Change: ಮಂಡ್ಯ ರೈತರು ಹಾಗೂ ಬೆಂಗಳೂರು ಬಾಣಸಿಗರ ಮೋಡಿ; ‘ಅಡುಗೆ ಮನೆಯ ಕಪಾಟಿನಲ್ಲಿದೆ ದೇಶದ ಭವಿಷ್ಯ‘

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರ ಆಹಾರದ ಭಾಗವಾಗಿದ್ದ ಈ ಸ್ಥಳೀಯ ತಳಿಗಳು ಈಗ ಮಾರುಕಟ್ಟೆಗಳಲ್ಲಿ ಲಭ್ಯವಿಲ್ಲ. ಆರೋಗ್ಯಕರ ಹಾಗೂ ಸ್ಥಳೀಯ ತಳಿಗಳ ಅಭಿವೃದ್ಧಿಗಾಗಿ ಈ ಹೋರಾಟಗಾರರು ರೈತರಿಗೆ ಬಂಪರ್​ ಆಫರ್​ ನೀಡಿದ್ದಾರೆ.

ವಿವಿಧ ತಳಿಯ ಅಕ್ಕಿಗಳು

ವಿವಿಧ ತಳಿಯ ಅಕ್ಕಿಗಳು

 • Share this:
  ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ (Organic Farming) ಅನ್ನೋದೆ ಕಣ್ಮರೆಯಾಗಿ ಹೋಗ್ತಿದೆ. ರೈತರು (Farmer) ಸಹ ಉತ್ತಮ ಇಳುವರಿ ಹಾಗೂ ಲಾಭದ ಉದ್ದೇಶದಿಂದ ಹೈಬ್ರೀಡ್​ ತಳಿಗಳನ್ನೇ ಆಯ್ಕೆ ಮಾಡಿಕೊಳ್ತಿದ್ದಾರೆ. ಜೊತೆ ಬೆಳೆ ಬೆಳೆಯಲು ರಸಾಯನಿಕ ಗೊಬ್ಬರವನ್ನೇ ಆಯ್ಕೆ ಮಾಡಿಕೊಳ್ತಿದ್ದಾರೆ. ಇದ್ರಿಂದ ನಾವು ತಿನ್ನೋ ಆಹಾರಗಳಲ್ಲಿ ಪೌಷ್ಠಿಕಾಂಶದ ಕೊರತೆ ಎದ್ದು ಕಾಣ್ತಿದೆ. ಈ ಮಧ್ಯೆ ಜಗತ್ತು ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಸಜ್ಜಾಗುತ್ತಿದ್ರೆ. ಇತ್ತ ಮಂಡ್ಯ ರೈತರು, ಬೆಂಗಳೂರಿನ ಹೋಟೆಲ್ (Bengaluru Hotel)​ ಚೆಫ್​ (ಬಾಣಸಿಗರು) ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿ ತಮ್ಮ ಅಡುಗೆ ಮನೆಯಿಂದಲೇ ಈ ಹವಾಮಾನ ಬದಲಾವಣೆ (Climate Change) ವಿರುದ್ಧ ಹೋರಾಡುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ.  

  ಸ್ಥಳೀಯ ತಳಿ ಬೆಳೆಯಲು ರೈತರಿಗೆ ಪ್ರೋತ್ಸಾಹ

  ಮಂಡ್ಯದ 46 ವರ್ಷದ ಘನಿ ಖಾನ್, ತನ್ನ ಕೆಲ ಸ್ನೇಹಿತರೊಂದಿಗೆ ಸೇರಿ ಈ ಅಭಿಯಾನಕ್ಕೆ ಮುಂದಾಗಿದ್ದಾರೆ. ಘನಿ ಖಾನ್ ಅವರು ಮಂಡ್ಯದ ತಮ್ಮ 16 ಎಕರೆ ಜಮೀನಿನಲ್ಲಿ 1000 ಕ್ಕೂ ಹೆಚ್ಚು ದೇಶೀಯ ಭತ್ತವನ್ನು ಸಂರಕ್ಷಿಸಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಬಿಳಿ ಅಕ್ಕಿ ತಳಿಗಳಿಗೆ ಹೋಲಿಸಿದರೆ ಈ ಸ್ಥಳೀಯ ತಳಿಗಳು ಹವಾಮಾನ ಸ್ಥಿತಿಸ್ಥಾಪಕ, ರೈತ ಸ್ನೇಹಿ ಮತ್ತು ಆರೋಗ್ಯಕರ ಎಂದು ಖಾನ್ ಹೇಳ್ತಾರೆ.

  ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರ ಆಹಾರದ ಭಾಗವಾಗಿದ್ದ ಈ ಸ್ಥಳೀಯ ತಳಿಗಳು ಈಗ ಮಾರುಕಟ್ಟೆಗಳಲ್ಲಿ ಲಭ್ಯವಿಲ್ಲ. ಆರೋಗ್ಯಕರ ಹಾಗೂ ಸ್ಥಳೀಯ ತಳಿಗಳ ಅಭಿವೃದ್ಧಿಗಾಗಿ ಈ ಹೋರಾಟಗಾರರು ರೈತರಿಗೆ ಬಂಪರ್​ ಆಫರ್​ ನೀಡಿದ್ದಾರೆ. ಸ್ಥಳೀಯ ತಳಿಗಳನ್ನು ಬೆಳೆಯಲು ಬಯಸುವ ಯಾವುದೇ ರೈತರಿಗೆ ಇವರು ಬೆಳೆ ಬೆಳೆಯಲು ಪ್ರೋತ್ಸಾಹ ಹಾಗೂ ಉಚಿತವಾಗಿ ಬೀಜಗಳನ್ನು ನೀಡುತ್ತಾರೆ.

  1,350 ಭತ್ತದ ತಳಿಗಳು ಲಭ್ಯ

  ಈ ಬಗ್ಗೆ ನ್ಯೂಸ್​ 18 ಜೊತೆ ಮಾತಾಡಿದ ಘನಿ ಖಾನ್​, ನಮ್ಮಲ್ಲಿ ಕೆಂಪು ಅಕ್ಕಿ, ಹಸಿರು ಅಕ್ಕಿ, ಕಂದು ಅಕ್ಕಿ ಮತ್ತು ಪರಿಮಳಯುಕ್ತ ಅಕ್ಕಿ ಸೇರಿದಂತೆ 1,350 ಭತ್ತದ ತಳಿಗಳಿವೆ. ಕೆಲವು ತಳಿ ಬೆಳೆಯಲಿ ಹೆಚ್ಚು ನೀರಿನ ಅವಶ್ಯಕತೆ ಇದೆ. ಇನ್ನು ಕೆಲವು ಮಳೆಗಾಲದಲ್ಲಿ ಬೆಳೆಯಬಹುದು ಮತ್ತು ಕೆಲ ತಳಿಗಳನ್ನು ಹೊಲಗಳಲ್ಲೂ ಸಹ ಬೆಳೆಯಬಹುದು ಎಂದ್ರು. ಈ ತಳಿಯ ಭತ್ತ ಆರೋಗ್ಯಕರವಾಗಿದ್ದು ಔಷಧೀಯ ಗುಣಗಳನ್ನು ಹೊಂದಿದೆ ಎನ್ನುತ್ತಾರೆ ಘನಿ ಖಾನ್​.

  ಇದನ್ನೂ ಓದಿ: Business Idea: ಕತ್ತೆ ಫಾರ್ಮ್ ಮಾಡೋಕೆ ಐಟಿ ಕೆಲ್ಸಾನೇ ಬಿಟ್ಟ ಕನ್ನಡಿಗ! ಹಾಲು ಮಾರಿಯೇ ತಿಂಗಳಿಗೆ ಇಷ್ಟು ಹಣ ದುಡಿತಾರೆ

  ತಿರುನೆಲ್ಲಿ ಅಗ್ರಿ ಪ್ರೊಡ್ಯೂಸರ್ ಕಂಪನಿ

  ವಯನಾಡ್‌ನ ರಾಜೇಶ್ ಕೃಷ್ಣನ್ ಸಹ ಸ್ಥಳೀಯ ತಳಿಯ ಭತ್ತ ಬೆಳೆಯಲು ಮತ್ತು ಸೇವಿಸುವುದನ್ನು ಉತ್ತೇಜಿಸುತ್ತಿದ್ದಾರೆ. ಪಾಲಿಶ್ ಮಾಡದ ಈ ತಳಿಗಳಲ್ಲಿ ಕಬ್ಬಿಣ ಮತ್ತು ಖನಿಜಾಂಶ ಹೆಚ್ಚಿದ್ದು ಮಧುಮೇಹಿಗಳಿಗೂ ಸಹಕಾರಿ ಎಂದು ಕೃಷ್ಣನ್ ತಿಳಿಸಿದ್ದಾರೆ. ಕೃಷ್ಣನ್ ಅವರ ಸಂಸ್ಥೆ ತಿರುನೆಲ್ಲಿ ಅಗ್ರಿ ಪ್ರೊಡ್ಯೂಸರ್ ಕಂಪನಿ (TAPCO)ಯನ್ನು 2017ರಲ್ಲಿ 10 ರೈತರೊಂದಿಗೆ ಆರಂಭಿಸಲಾಯಿತು. ಈಗ 85 ರೈತರೊಂದಿಗೆ ಸುಮಾರು 193 ಎಕರೆಗಳಲ್ಲಿ ಸ್ಥಳೀಯ ಭತ್ತ ಬೆಳೆಯೋ ಕೆಲಸ ಮಾಡುತ್ತಿದ್ದಾರೆ.

  ಈ ಕಂಪನಿಯೂ ಈ ದೇಶೀಯ ಅಕ್ಕಿಯನ್ನು ವಿವಿಧ ಪಟ್ಟಣಗಳಲ್ಲಿರೋ ಗ್ರಾಹಕರಿಗೆ ತಲುಪಿಸೋ ಕೆಲಸ ಮಾಡ್ತಿದೆ. ರೈತರ ಜೀವನಮಟ್ಟ ಸುಧಾರಿಸಲು ಹಾಗೂ ಈ ತಳಿಗಳನ್ನು ಬೆಳೆಯಲು ಪ್ರೋತ್ಸಾಹಿಸಲು ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ಹಣವನ್ನು ಪಾವತಿಸುವ ಮೂಲಕ ರೈತರಿಗೆ ಪ್ರೋತ್ಸಾಹ ನೀಡೋ ಕೆಲಸ ಮಾಡುತ್ತಿದೆ.

  ಈ ಬಗ್ಗೆ ಮಾತಾಡಿದ ಕೃಷ್ಣನ್​ ಅವ್ರು ಜಗತ್ತಿನ ಭವಿಷ್ಯವು ಅಡುಗೆ ಮನೆಯ ಕಪಾಟಿನಲ್ಲಿದೆ ಎಂದು ನಾನು ಎಲ್ಲೋ ಓದಿದ್ದೇನೆ, ನಾವು ಏನನ್ನು ಖರೀದಿಸುತ್ತೇವೆ, ತಿನ್ನುತ್ತೇವೆ ಹಾಗೂ ಜನರಿಗೆ ಏನು ಕೊಡುತ್ತೇವೆ ಅನ್ನೋದ್ರಲ್ಲಿ ಜಗತ್ತು ಹೇಗಿರುತ್ತದೆ ಎಂಬುದನ್ನು ನಿರ್ಧರಿಸಬಹುದು, ಹೀಗಾಗಿ ನಾನು ಅತ್ಯುತ್ತಮ ಆಹಾರ ಕೊಂಡು, ಉತ್ತಮ ಆಹಾರ ಸೇವಿಸಿದ್ರೆ  ದೇಶವೂ ಸುಸ್ಥಿರವಾಗಿರುತ್ತದೆ ಎಂದು ಕೃಷ್ಣನ್ ತಿಳಿಸಿದ್ದಾರೆ. ಇನ್ನು ಇಲ್ಲಿ ಕಂದಸಾಲೆ, ಕರಿ ಗೈ ವೇಲಿ, ರೈನಚೂಡಿ, ಗಂಧಸಾಲೆ, ಕಪ್ಪು ಮಲ್ಲಿಗೆ ಮತ್ತು ಕೆಂಪು ಮಲ್ಲಿಗೆಯಂತಹ ಕೆಲವು ಸ್ಥಳೀಯ ಭತ್ತದ ತಳಿಗಳನ್ನು ಜನಪ್ರಿಯಗೊಳಿಸಲು ಇವ್ರು ಮುಂದಾಗಿದ್ದಾರೆ

  ಇದನ್ನೂ ಓದಿ: ಭೂಮಿ ಮೇಲೆ ಇವನಂತೆ ಬದುಕೋರು ಯಾರು ಇಲ್ಲ! ಸದಾ ಇವನ ಸುತ್ತ ಇರ್ತಾರೆ ರಂಭೆ, ಊವರ್ಶಿಯರು

  ರೈತರೊಂದಿಗೆ ಕೈ ಜೋಡಿಸಿದ ಹೋಟೆಲ್ ಚೆಫ್​

  ಸ್ಥಳೀಯ ತಳಿ ಬಳಸಿ ಬೆಳೆದ ಅಕ್ಕಿಯನ್ನು ಬಳಸಿ ರುಚಿಕರ ಹಾಗೂ ವೈವಿದ್ಯಮಯ ಭಕ್ಷ್ಯಗಳನ್ನು ಹೇಗೆ ತಯಾರಿಸಬಹುದು ಅನ್ನೋದನ್ನು ಇಲ್ಲಿನ ಬಾಣಸಿಗರು ತೋರಿಸಿಕೊಟ್ಟಿದ್ದಾರೆ. ಚೆಫ್ ಸುಶೀಲ್,  ಚೆಫ್​ ಸರಬ್ಜೀತ್ ಮತ್ತು ಚೆಫ್​ ಫಸೀಯುಲಾ ಅವರು ಗ್ರೀನ್‌ಪೀಸ್ ಇಂಡಿಯಾ ಆಯೋಜಿಸಿದ ಚೆಫ್​ ಟೇಬಲ್​ನಲ್ಲಿ ವೈವಿಧ್ಯಮಯ ಆಹಾರದ ತಯಾರಿಸಿ ತೋರಿಸಿಕೊಟ್ಟಿದ್ದಾರೆ. ಈ ಅಕ್ಕಿಯಲ್ಲಿ ಔಷಧೀಯ ಗುಣಗಳು ಅಡಗಿತ್ತು ಇವುಗಳನ್ನೇ ಹೆಚ್ಚು ತಿನ್ನಲು ಶುರು ಮಾಡುವಂತೆ ಚೆಫ್​ ಸರಬ್ಬೀತ್​ ಸಲಹೆ ನೀಡುತ್ತಾರೆ.

  ವರದಿ: ಹರೀಶ್​ ಉಪಾಧ್ಯ
  Published by:Pavana HS
  First published: