• Home
  • »
  • News
  • »
  • state
  • »
  • Heart Attack: 6ನೇ ತರಗತಿಯ ವಿದ್ಯಾರ್ಥಿಗೆ ಹೃದಯಾಘಾತ; ಪೋಷಕರ ಮಡಿಲಲ್ಲೇ ಕೊನೆಯುಸಿರೆಳೆದ ಬಾಲಕ

Heart Attack: 6ನೇ ತರಗತಿಯ ವಿದ್ಯಾರ್ಥಿಗೆ ಹೃದಯಾಘಾತ; ಪೋಷಕರ ಮಡಿಲಲ್ಲೇ ಕೊನೆಯುಸಿರೆಳೆದ ಬಾಲಕ

ಮೃತ ಬಾಲಕ ಕೀರ್ತನ್

ಮೃತ ಬಾಲಕ ಕೀರ್ತನ್

ತೀವ್ರ ಹೃದಯಾಘಾತದಿಂದ 6ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರಿನಲ್ಲಿ ನಡೆದಿದೆ. 12 ವರ್ಷದ ಬಾಲಕ ಕೀರ್ತನ್​ ಮೃತ ವಿದ್ಯಾರ್ಥಿಯಾಗಿದ್ದಾನೆ.

  • Share this:

ಮಡಿಕೇರಿ: ಇತ್ತೀಚೆಗೆ ಹೃದಯಾಘಾತದಿಂದ (Heart Attack)  ಸಾವನ್ನಪ್ಪುವ ಯುವಕರ ಸಂಖ್ಯೆ ಹೆಚ್ಚಾಗಿದೆ. 20-45ರವೊಳಗಿನ ಪುರುಷರು ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ನಿಧನದ ನಂತರ ಹೆಚ್ಚಿನ ಯುವಕರು ಹೃದಯ ತಪಾಸಣೆ ಒಳಗಾದರಾದರೂ, ಸಾವಿನ ಪ್ರಮಾಣ ತಗ್ಗಿಲ್ಲ.  ತೀವ್ರ ಹೃದಯಾಘಾತದಿಂದ 6ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ (Class 6 Student) ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ (Kushalnagar) ತಾಲೂಕಿನ ಕೂಡುಮಂಗಳೂರಿನಲ್ಲಿ ನಡೆದಿದೆ.


12 ವರ್ಷದ ಬಾಲಕ ಕೀರ್ತನ್​ ಮೃತ ವಿದ್ಯಾರ್ಥಿಯಾಗಿದ್ದಾನೆ. ನಿನ್ನೆ ರಾತ್ರಿ ಮನೆಯಲ್ಲಿದ್ದ ವೇಳೆ ಬಾಲಕ ಕಿರುಚಿಕೊಂಡಿದ್ದು, ಆತಂಕಗೊಂಡ ಪೋಷಕರು ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮಾರ್ಗ ನಡುವೆಯೇ ಬಾಲಕ ಕೊನೆಯುಸಿರೆಳೆದಿದ್ದಾನೆ. ಪುತ್ರನನ್ನು ಕಳೆದುಕೊಂಡ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.


Doctor saves life of man who suffered heart attack shopping at an IKEA store in Bengaluru
ಸಾಂದರ್ಭಿಕ ಚಿತ್ರ


12ನೇ ವರ್ಷದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು


ಇತ್ತೀಚೆಗೆ ದೇಶದಲ್ಲಿ ಚಿಕ್ಕ ವಯಸ್ಸಿನ ಮಕ್ಕಳು, ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಡಿಸೆಂಬರ್​ 8ರಂದು ಕೋಲಾರ (Kolar) ಜಿಲ್ಲೆಯ 7ನೇ ತರಗತಿ ವಿದ್ಯಾರ್ಥಿನಿ (Student) ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ವರದಿಯಾಗಿತ್ತು.


ಇದನ್ನೂ ಓದಿ: Crime News: ಪ್ರೀತಿ ಮರೆತ ವಿದ್ಯಾರ್ಥಿನಿಗೆ ಚಾಕು ಇರಿದ ಪವನ್ ಕಲ್ಯಾಣ್! ಪ್ರಿಯತಮೆ ಸಾವು, ಪಾಗಲ್ ಪ್ರೇಮಿ ಸ್ಥಿತಿ ಚಿಂತಾಜನಕ


ಜಿಲ್ಲೆಯ ಕೆಜಿಎಫ್ (KGF) ತಾಲೂಕಿನ ಜಯಶ್ರೀ (12) ಸಾವನ್ನಪ್ಪಿದರು. ವಿದ್ಯಾರ್ಥಿನಿ ಜಯಶ್ರೀ ಅವರು KGFನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.


ಶಾಲೆಗೆ ಹೋಗಿದ್ದ ವಿದ್ಯಾರ್ಥಿಗೆ ಹಾರ್ಟ್​ ಅಟ್ಯಾಕ್


ಕೆಲ ತಿಂಗಳ ಹಿಂದೆ ಹುಬ್ಬಳ್ಳಿ -ಧಾರವಾಡ ಜಿಲ್ಲೆ ಕಲಘಟಗಿ (Kalaghatagi, Dharwad) ತಾಲೂಕಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿತ್ತು. ಶಾಲೆಗೆ (School) ಹೋಗಿದ್ದ ವಿದ್ಯಾರ್ಥಿಯೋರ್ವ (Student) ಹೃದಯಾಘಾತಕ್ಕೆ (Heart Attack) ತುತ್ತಾಗಿ ಕೊನೆಯುಸಿರೆಳೆದಿದ್ದ. ಜವರಾಯನ ಅಟ್ಟಹಾಸದ ಮುಂದೆ ಪೋಷಕರ ಪ್ರಾರ್ಥನೆ ಫಲಿಸಿಲ್ಲ. ಬಾಲಕ ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದರು.


ವಿದ್ಯಾರ್ಥಿಗೆ ಹಾರ್ಟ್ ಅಟ್ಯಾಕ್ ಆಗಿ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದಲ್ಲಿ ನಡೆದಿತ್ತು. ಕಲಘಟಗಿ ಪಟ್ಟಣದ ಸರಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಇಂದು ಮುಂಜಾನೆ ವಿದ್ಯಾರ್ಥಿ ಕ್ಲಾಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿದ್ಯಾರ್ಥಿ ಮುಕ್ತುಂ ಮಹ್ಮದ್ ರಫಿ ಮನಿಯಾರ ಎಂದು ತಿಳಿದು ಬಂದಿದೆ. ಆತ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.


ಸಾಂದರ್ಭಿಕ ಚಿತ್ರ


ಬಾಲಕನಿಗಿತ್ತು ಹೃದಯದ ಸಮಸ್ಯೆ


ವಿದ್ಯಾರ್ಥಿ ಕಲಘಟಗಿ ನಿವಾಸಿಯಾಗಿದ್ದು, ಬಾಲಕನಿಗೆ ಮುಂಚೆಯೇ ಹೃದಯದಲ್ಲಿ ತೊಂದರೆ ಇರುವುದು ತಿಳಿದು ಬಂದಿದೆ. ಮುಂಜಾನೆ ಎಂದಿನಂತೆ ಶಾಲೆಗೆ ಬಂದಿದ್ದು ಕ್ಲಾಸಿನಲ್ಲಿ ಕುಸಿದು ಬಿದ್ದಿದ್ದಾನೆ. ನಂತರ ಶಿಕ್ಷಕರು ಕೂಡಲೇ ಅವನನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.


ಇದನ್ನೂ ಓದಿ: Gadag: ಅಕ್ರಮ ಸಂಬಂಧಕ್ಕೆ ಛಿದ್ರ ಛಿದ್ರವಾದ ಕುಟುಂಬ; ಎರಡು ಜೀವ ಬಲಿ, ಅಪ್ಪನಿದ್ರೂ ಅನಾಥಳಂತೆ ಬದುಕುತ್ತಿರೋ ಬಾಲಕಿ


25 ವರ್ಷದ ವಿದ್ಯಾರ್ಥಿ ಸಾವು


ಮೈಸೂರು: ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಸಾಂಸ್ಕೃತಿಕ ನಗರಿಯ ಯುವಕ, ಕೇವಲ 25 ವರ್ಷದ ಕಾನೂನು ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿದ್ದ. ಇಷ್ಟು ಚಿಕ್ಕ ವಯಸ್ಸಿಗೆ ಹಾರ್ಟ್ ಅಟ್ಯಾಕ್ ನಿಂದ ಮೃತಪಟ್ಟಿರುವುದು ಎಲ್ಲರಿಗೂ ಶಾಕ್ ನೀಡಿತ್ತು.


ಮೃತ ಯುವಕನನ್ನು ನಂಜಾಪುರ ಗ್ರಾಮದ ನಿತಿನ್ ಕುಮಾರ್(25) ಎಂದು ಗುರುತಿಸಲಾಗಿದೆ. ಹುಣಸೂರಿನ ಟಿಫಾನಿಸ್ ಹೋಂ ಹೋಟೆಲ್ ನಲ್ಲಿ ಉಪಹಾರ ಸೇವಿಸುತ್ತಿದ್ದಾಗ ನಿತಿನ್ ಏಕಾಏಕಿ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದ. ಬೆಳಗಿನ ತಿಂಡಿ ತಿನ್ನುವಾಗ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಯುವಕ ಏಕಾಏಕಿ ಕುಸಿದು ಬೀಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Published by:Sumanth SN
First published: