ಮಡಿಕೇರಿಯಲ್ಲಿ ಇಬ್ಬರು ಹೆಂಡಿರ ಜಗಳ - ಒಬ್ಬರ ಕೊಲೆಯೊಂದಿಗೆ ಅಂತ್ಯ

ಮೂವರುಒಂದೇ ಮನೆಯಲ್ಲೇ ಸಂಸಾರ ಮಾಡುತ್ತಿದ್ದರು. ಆದರೆ, ಕೆಲವು  ದಿನಗಳಿಂದ  ಇಬ್ಬರು  ಹೆಂಡತಿಯರ ನಡುವೆ  ಜಗಳ ನಡೆಯುತ್ತಲೇ ಇತ್ತು ಎನ್ನಲಾಗಿದೆ.

G Hareeshkumar | news18-kannada
Updated:January 4, 2020, 10:40 PM IST
ಮಡಿಕೇರಿಯಲ್ಲಿ ಇಬ್ಬರು ಹೆಂಡಿರ ಜಗಳ - ಒಬ್ಬರ ಕೊಲೆಯೊಂದಿಗೆ ಅಂತ್ಯ
ಪ್ರಾತಿನಿಧಿಕ ಚಿತ್ರ
  • Share this:
ಮಡಿಕೇರಿ(ಜ.04): ಇಬ್ಬರು ಮಹಿಳೆಯರ ನಡುವೆ ಆರಂಭವಾದ ಜಗಳ ಒಬ್ಬರು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಳಂಜಬೆರೆಯ ಕಾಫಿ ತೋಟದ ಲೈನ್​​​ ಮನೆಯಲ್ಲಿ ನಡೆದಿದೆ.

ಜಾರ್ಖಂಡ್ ಮೂಲದ ವಶಿಕಾ ದೇವಿ ಹತ್ಯೆಯಾದ(27)ಗೃಹಿಣಿ ಎಂದು ಗುರುತಿಸಲಾಗಿದೆ. ಈಕೆಯ ಅಕ್ಕ ಆಶಿಕಾ ಕೊಲೆ ಮಾಡಿ ಪರಾರಿಯಾಗಿದ್ದಾಳೆ. ಜಾರ್ಖಂಡ್ ಮೂಲದ ದಯಾನಂದ್ ಎಂಬಾತ ಕಳೆದ 7 ವರ್ಷಗಳ ಹಿಂದೆ ಆಶಿಕಾಳನ್ನು ಮದುವೆಯಾಗಿದ್ದ.

ಬಳಿಕ ವರ್ಷದ ನಂತರದಲ್ಲೇ ವಶಿಕಾ ದೇವಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಮೂವರುಒಂದೇ ಮನೆಯಲ್ಲೇ ಸಂಸಾರ ಮಾಡುತ್ತಿದ್ದರು. ಆದರೆ, ಕೆಲವು  ದಿನಗಳಿಂದ  ಇಬ್ಬರು  ಹೆಂಡತಿಯರ ನಡುವೆ  ಜಗಳ ನಡೆಯುತ್ತಲೇ ಇತ್ತು ಎನ್ನಲಾಗಿದೆ.

ಇಂದು ಕೂಡ ಕಾಫಿ ತೋಟದಲ್ಲಿ ಕೆಲಸಕ್ಕೆ  ಹೋಗಿ ಬರುತ್ತಿದ್ದಾಗ ಆಶಿಕಾ ಮತ್ತು ವಶಿಕಾ ದೇ ನಡುವೆ ಜಗಳವಾಗಿದೆ. ಜಗಳ  ಮಿತಿ ಮೀರಿ ಕೊಲೆಯ ಹಂತಕ್ಕೆ ತಲುಪಿದೆ. ಹೀಗಾಗಿ ಆಶಿಕಾ ವಶಿಕಾ ದೇವಿಯನ್ನು ಕತ್ತಿಯಿಂದ ಕಡಿದು ಪರಾರಿಯಾಗಿದ್ದಾಳೆ . ಪರಿಣಾಮ ತೀವ್ರ ರಕ್ತ ಸ್ರಾವವಾಗಿ ವಶಿಕಾ ದೇವಿ ಕಾಫಿ ತೋಟನದ ಲೈನ್​​​​ ಮನೆಯಲ್ಲಿ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ : ಚಂದಾಪುರದಲ್ಲಿ ದುಷ್ಕರ್ಮಿಗಳಿಂದ ವ್ಯಕ್ತಿಯ ಮೇಲೆ ಆ್ಯಸಿಡ್ ದಾಳಿ

ಈ ಘಟನ ಸಂಬಂಧ ಸಿದ್ದಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ವಶಿಕಾ ದೇವಿಯ ಮೃತ ದೇಹವನ್ನು ಸಿದ್ದಾಪುರ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.
First published: January 4, 2020, 10:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading