ಕ್ಷುಲ್ಲಕ ಕಾರಣಕ್ಕೆ 2 ಗುಂಪಿನ ನಡುವೆ ಘರ್ಷಣೆ; ಹೈವೇಯಲ್ಲೇ ಹೊತ್ತಿ ಉರಿಯಿತು ಫಾರ್ಚುನರ್ ಕಾರು

ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಯಿತು. ಆದರೆ ಅಷ್ಟೊತ್ತಿಗಾಗಲೇ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಈ  ಸಂಬಂಧ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

news18-kannada
Updated:January 13, 2020, 11:35 AM IST
ಕ್ಷುಲ್ಲಕ ಕಾರಣಕ್ಕೆ 2 ಗುಂಪಿನ ನಡುವೆ ಘರ್ಷಣೆ; ಹೈವೇಯಲ್ಲೇ ಹೊತ್ತಿ ಉರಿಯಿತು ಫಾರ್ಚುನರ್ ಕಾರು
ಬೆಂಕಿಗಾಹುತಿಯಾದ ಕಾರು
  • Share this:
ಹಾಸನ(ಜ.13): ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ  ಮಾರಾಮಾರಿ ನಡೆದು,  ಇಬ್ಬರ ಜಗಳದಲ್ಲಿ ಫಾರ್ಚುನರ್​ ಕಾರು ಬೆಂಕಿಗಾಹುತಿಯಾಗಿದೆ. ಈ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಟ್ಟನವವಿಲೆ  ಗ್ರಾಮ (ರಾಷ್ಟ್ರೀಯ ಹೆದ್ದಾರಿ 75) ದಲ್ಲಿ ನಡೆದಿದೆ. 

ಊಟದ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದೆ ಎಂದು ತಿಳಿದು ಬಂದಿದೆ. ಯುವಕರ ಗುಂಪೊಂದು ಫಾರ್ಚುನರ್​ ಕಾರಿನಲ್ಲಿ ಬೆಂಗಳೂರಿನಿಂದ ಹಾಸನ ಕಡೆಗೆ ತೆರಳುತ್ತಿತ್ತು. ಮಾರ್ಗಮಧ್ಯೆ ಅಂದರೆ ಮಟ್ಟನವಿಲೆ ಬಳಿ ಊಟಕ್ಕಾಗಿ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಅಲ್ಲಿಗೆ ಸ್ಥಳೀಯ ಯುವಕರು ಬಂದಿದ್ದರು. ಆಗ ಊಟದ ವಿಚಾರವಾಗಿ ಎರಡು ಗುಂಪುಗಳ ನಡುವೆ ಇದ್ದಕ್ಕಿದ್ದಂತೆ ಜಗಳ ಶುರುವಾಗಿದೆ.

ಮಂಗಳೂರಿನಲ್ಲಿ ಸಿಎಎ ವಿರೋಧಿ ಪ್ರತಿಭಟನೆ: ಸಭೆಗೆ ಬಳಸಿದ್ದ 2,500 ಕುರ್ಚಿಗಳಿಗೆ ಕಿಡಿಗೇಡಿಗಳಿಂದ ಬೆಂಕಿ

ಬೆಂಗಳೂರಿನಿಂದ ಬಂದಿದ್ದ ಯುವಕರು ಸ್ಥಳೀಯ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಕೋಪಗೊಂಡ ಸ್ಥಳೀಯ ಯುವಕರ ಗುಂಪು ಪ್ರತಿಯಾಗಿ ಅವರ ಫಾರ್ಚುನರ್​ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಕ್ಷಣಾರ್ಧದಲ್ಲೇ ಫಾರ್ಚುನರ್ ಕಾರು ಸುಟ್ಟು ಭಸ್ಮವಾಗಿದೆ.  ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಧ್ಯರಾತ್ರಿ ಕಾರು ಹೊತ್ತಿ ಉರಿದಿದೆ.

ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಯಿತು. ಆದರೆ ಅಷ್ಟೊತ್ತಿಗಾಗಲೇ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಈ  ಸಂಬಂಧ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಶಬರಿಮಲೆ ಪ್ರಕರಣದ ವಿಚಾರಣೆ ಇಂದು ಸಾಧ್ಯವಿಲ್ಲ; ಸುಪ್ರೀಂಕೋರ್ಟ್​​ ಮು. ನ್ಯಾ. ಬೋಬ್ಡೆ ಸ್ಪಷ್ಟನೆ
Published by: Latha CG
First published: January 13, 2020, 11:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading