ಮೈತ್ರಿ ಸರ್ಕಾರದ ನಿರ್ಲಕ್ಷ್ಯದಿಂದ ಸ್ಪೀಕರ್ ಹಾಗೂ ಹಂಗಾಮಿ ಸಭಾಪತಿ ನಡುವೆ ಕಂದಕ!

news18
Updated:August 29, 2018, 8:48 AM IST
ಮೈತ್ರಿ ಸರ್ಕಾರದ ನಿರ್ಲಕ್ಷ್ಯದಿಂದ ಸ್ಪೀಕರ್ ಹಾಗೂ ಹಂಗಾಮಿ ಸಭಾಪತಿ ನಡುವೆ ಕಂದಕ!
news18
Updated: August 29, 2018, 8:48 AM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ.29): ರಾಜ್ಯದಲ್ಲಿ ಮೈತ್ರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಸಮೀಪಿಸಿದರೂ ಪಕ್ಷದ ಮುಖಂಡರ ಅಸಮಾಧಾನಗಳು ತಣ್ಣಗಾದಂತೆ ಕಾಣುತ್ತಿಲ್ಲ. ಅಧಿಕಾರಕ್ಕಾಗಿ ಶಾಸಕರ ನಡುವೆ ಭಿನ್ನಮತ ಇದ್ದರೆ, ಇತ್ತ ವಿಧಾನಪರಿಷತ್ ಹಂಗಾಮಿ ಸಭಾಪತಿ ಮತ್ತು ವಿಧಾನಸಭೆ ಸ್ಪೀಕರ್ ನಡುವೆ ಕಂದಕವೇ ಸೃಷ್ಟಿಯಾಗಿದೆ.

ಪರಿಷತ್​ಗೆ ಅಧಿಕೃತವಾಗಿ ಇನ್ನು ಸಭಾಪತಿ ಸೇರಿದಂತೆ ಉಪಸಭಾಪತಿ ಹಾಗೂ ಸರ್ಕಾರದ ಮುಖ್ಯ ಸಚೇತಕರ ನೇಮಕ ಆಗಿಲ್ಲ. ಸಭಾಪತಿ ಸ್ಥಾನಕ್ಕೆ ಹಂಗಾಮಿಯಾಗಿ ಜೆಡಿಎಸ್​ನ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರನ್ನು ನೇಮಿಸಲಾಗಿದೆ. ಆದರೆ, ಅವರು  ಹಂಗಾಮಿಯಾದ ಕಾರಣಕ್ಕೆ ಅವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನ ಹೊರಟ್ಟಿ ಅವರಲ್ಲಿದೆ.

ಹಂಗಾಮಿಯಾದ ಕಾರಣಕ್ಕೆ ಹೊರಟ್ಟಿ ಅವರನ್ನು ಯಾವ ಸಭೆಗಳಿ​ಗೂ ಆಹ್ವಾನ ನೀಡುತ್ತಿಲ್ಲ. ಈ ಸಂಬಂಧ ಹೊರಟ್ಟಿ ಅವರು ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರಿಗೆ ಪತ್ರವನ್ನು ಬರೆದಿದ್ದರೂ ಅದಕ್ಕೆ ಸ್ಪೀಕರ್ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಅಲ್ಲದೇ ಕರೆ ಮಾಡಿದರೂ ಸ್ಪೀಕರ್​, ಹಂಗಾಮಿ ಸಭಾಪತಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಕಾಮಗಾರಿ, ನೇಮಕಾತಿ ಯಾವ ತೀರ್ಮಾನವೂ ಹಂಗಾಮಿ ಸಭಾಪತಿ ಗಮನಕ್ಕೆ ಬರುತ್ತಿಲ್ಲ. ಸಚಿವಾಲಯದ ಸಮಸ್ಯೆ ಕುರಿತು ಚರ್ಚಿಸಲು ಸಭಾಪತಿ ಕೈಗೆ ಸ್ಪೀಕರ್ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿವೆ. ಸಂಭಾವಿತ ರಾಜಕಾರಣಿ ಎಂದು ಹೆಸರು ಪಡೆದಿರುವ ಸ್ಪೀಕರ್, ಹಂಗಾಮಿ ಸಭಾಪತಿಯನ್ನು ಕಡೆಗಣಿಸುತ್ತಿದ್ದಾರೆ ಎನ್ನಲಾಗಿದೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...