Bagalkot: ಕೆರೂರು ಪಟ್ಟಣದಲ್ಲಿ ಅನ್ಯಕೋಮಿನ ಗುಂಪುಗಳ ನಡುವೆ ಗಲಾಟೆ, ಇಬ್ಬರಿಗೆ ಚಾಕು ಇರಿತ

ಘರ್ಷಣೆಗೆ ಸಂಬಂಧಿಸಿದಂತೆ ಎರಡು ಗುಂಪಿನ ಹತ್ತಕ್ಕೂ ಹೆಚ್ಚು ಜನರನ್ನು ಕೆರೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ರಾತ್ರಿಯೂ ಫುಲ್ ಆಲರ್ಟ್ ಆಗಿದ್ದ ಪೊಲೀಸರು ಇನ್ನು ಕೆಲವರನ್ನು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಕೆರೂರು ಮಾರುಕಟ್ಟೆ

ಕೆರೂರು ಮಾರುಕಟ್ಟೆ

  • Share this:
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು (Keruru, Bagalakote) ಪಟ್ಟಣದಲ್ಲಿ ಎರಡು ಅನ್ಯಕೋಮಗಳ ಗುಂಪಿನ ನಡುವೆ (Clash between Two Groups) ಗಲಾಟೆ ಬುಧವಾರ ನಡೆದಿದೆ. ಗಲಾಟೆಯಲ್ಲಿ ಇಬ್ಬರಿಗೆ ಚೂರಿ ಇರಿತವಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಮುನ್ನೇಚ್ಚರಿಕೆ ಕ್ರಮವಾಗಿ ಕೆರೂರು ಪಟ್ಟಣದಲ್ಲಿಯ ಎಲ್ಲಾ ಶಾಲಾ ಕಾಲೇಜುಳಿಗೆ ರಜೆ (School And College Holiday) ಘೋಷಣೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಶುಕ್ರವಾರ ರಾತ್ರಿವರೆಗೂ ಕೆರೂರ ಪಟ್ಟಣದಲ್ಲಿ 144 ಕಲಂ (Section 144) ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಗುಂಪು ಘರ್ಷಣೆಯಲ್ಲಿ ಗಾಯಗೊಂಡವರನ್ನು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅರಣ್‌ ಮತ್ತು ಆತನ ಸಹೋದರ ಹಾಗೂ ಯಮನೂರು ಎಂದು ಗುರುತಿಸಲಾಗಿದೆ.

ಕೆರೂರು ಪಟ್ಟಣದ ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಚುಡಾಯಿಸಿದ್ದ ವಿಚಾರಕ್ಕೆ ಕೆಲ ಯುವಕರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯೇ ತೀವ್ರ ಸ್ವರೂಪ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಬೆನ್ನಲ್ಲೇ ಕೆಲವರು ತಳ್ಳುವ ಗಾಡಿಗಳಿಗೆ ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿ:  Zameer Ahmed: ಅಕ್ರಮ ಆಸ್ತಿ ಗಳಿಸಿದ್ದಾರಾ ಜಮೀರ್ ಅಹ್ಮದ್? ಎಸಿಬಿ ದಾಳಿ ವೇಳೆ ಸ್ಫೋಟಕ ಮಾಹಿತಿ

ಮೂವರಿಗೆ ಬಾಗಲಕೋಟೆಯಲ್ಲಿ ಚಿಕಿತ್ಸೆ

ಮೂವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ  ಎಂದು ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕೆರೂರ ಪಟ್ಟಣಕ್ಕೆ ಎಸ್ ಪಿ ಜಯಪ್ರಕಾಶ್ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಜಿಲ್ಲಾಧಿಕಾರಿಳಾದ ಪಿ.ಸುನಿಲ್ ಕುಮಾರ್ ಸಹ ಗುಂಪು ಘರ್ಷಣೆಯ ಸಂಪೂರ್ಣ ಮಾಹಿತಿ ಪಡೆದು, ಶಾಲಾ ಕಾಲೇಜುಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.

ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ

ಇತ್ತ ಘಟನೆ ಬೆನ್ನಲ್ಲೇ ಕೆಲ ಕಿಡಿಗೇಡಿಗಳ ಗುಂಪು ಮಾರುಕಟ್ಟೆ ಮೇಲೆ ಕಲ್ಲು ತೂರಾಟ ನಡೆಸಿ, ಅಂಗಡಿಗಳ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚಿ ಜಖಂಗೊಳಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಶುಕ್ರವಾರದವರೆಗೆ ಎಲ್ಲಾ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ.

ಹಲವರನ್ನು ವಶಕ್ಕೆ ಪಡೆದಿರುವ ಪೊಲೀಸರು

ಘರ್ಷಣೆಗೆ ಸಂಬಂಧಿಸಿದಂತೆ ಎರಡು ಗುಂಪಿನ ಹತ್ತಕ್ಕೂ ಹೆಚ್ಚು ಜನರನ್ನು ಕೆರೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ರಾತ್ರಿಯೂ ಫುಲ್ ಆಲರ್ಟ್ ಆಗಿದ್ದ ಪೊಲೀಸರು ಇನ್ನು ಕೆಲವರನ್ನು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.  ಸ್ಥಳೀಯರು ಅನಾವಶ್ಯಕವಾಗಿ ಮೆನಗಳಿಂದ ಹೊರ ಬರದಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:  Puttur: ಕಾರು, ಲಾರಿ, ಟಿಪ್ಪರ್ ಎಲ್ಲಾ ಓಡಿಸ್ತಾನೆ ಈ 12ರ ಪೋರ! ಈತನ ಹೊಸ ಆವಿಷ್ಕಾರಕ್ಕೆ ಜನರು ಫಿದಾ

ಕೆರೂರು ಪಟ್ಟಣದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ

ಬಾಗಲಕೋಟೆ ಉಪವಿಭಾಗದ ವಿವಿಧ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಸದ್ಯಕ್ಕೆ ಇಡೀ ಕೆರೂರ ಪಟ್ಟಣ ಪೊಲೀಸರ ಸರ್ಪಗಾವಲಿನಲ್ಲಿದೆ.
Published by:Mahmadrafik K
First published: