ದೊಡ್ಡರಸಿನಕೆರೆಯಲ್ಲಿ ಸುಮಲತಾ-ನಿಖಿಲ್​ ಮುಖಾಮುಖಿ; ಬೆಂಬಲಿಗರ ನಡುವೆ ಮಾರಾಮಾರಿ, ಪೊಲೀಸರಿಂದ ಲಘು ಲಾಠಿ ಪ್ರಹಾರ

Mandya Election News: ನಿಖಿಲ್-ಸುಮಲತಾ ಇಬ್ಬರೂ ಮುಖಾಮುಖಿಯಾದರು. ಈ ವೇಳೆ ಬೆಂಬಲಿಗರು ತಮ್ಮ ತಮ್ಮ ನಾಯಕರ ಪರ ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ  ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಬೆಂಬಲಿಗರು ಮುಂದಾದರು.

news18
Updated:April 18, 2019, 4:14 PM IST
ದೊಡ್ಡರಸಿನಕೆರೆಯಲ್ಲಿ ಸುಮಲತಾ-ನಿಖಿಲ್​ ಮುಖಾಮುಖಿ; ಬೆಂಬಲಿಗರ ನಡುವೆ ಮಾರಾಮಾರಿ, ಪೊಲೀಸರಿಂದ ಲಘು ಲಾಠಿ ಪ್ರಹಾರ
ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಬೆಂಬಲಿಗರ ನಡುವೆ ಮಾರಾಮಾರಿ
news18
Updated: April 18, 2019, 4:14 PM IST
ಮಂಡ್ಯ: ಹೈವೋಲ್ಟೆಜ್​ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಇಂದು ಮತದಾನವಾಗುತ್ತಿದ್ದು, ಬೆಳಗ್ಗೆಯಿಂದ ಶಾಂತಿಯುತ ಮತದಾನ ನಡೆದಿದೆ. ಆದರೆ, ಅಂಬರೀಷ್​ ಅವರ ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಬ್ಬರೂ ನಾಯಕರ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.

ದೊಡ್ಡರಸಿನಕೆರೆಯಲ್ಲಿ ಮತದಾನ ಮಾಡಲು ಸುಮಲತಾ ಅಂಬರೀಷ್ ಆಗಮಿಸಿದ್ದರು. ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಆಗಮಿಸಿದ್ದರು. ಈ ವೇಳೆ ನಿಖಿಲ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡ ಬೆಂಬಲಿಗರು ನಿಖಿಲ್​ಗೆ ಜೈಕಾರ ಕೂಗಿದರು. ನಂತರ ನಿಖಿಲ್-ಸುಮಲತಾ ಇಬ್ಬರೂ ಮುಖಾಮುಖಿಯಾದರು. ಈ ವೇಳೆ ಬೆಂಬಲಿಗರು ತಮ್ಮ ತಮ್ಮ ನಾಯಕರ ಪರ ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ  ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಬೆಂಬಲಿಗರು ಮುಂದಾದರು. ಆಗ ಪೊಲೀಸರು ಲಘ ಲಾಠಿ ಚಾರ್ಜ್​ ನಡೆಸಿ, ಪರಿಸ್ಥಿತಿ ಹತೋಟಿಗೆ ತಂದರು.

ಇದನ್ನು ಓದಿ: ಮೊದಲ ಬಾರಿಗೆ ನನಗೆ ನಾನೆ ಮತಹಾಕಿಕೊಳ್ಳುತ್ತಿದ್ದೇನೆ; ಹರ್ಷ ವ್ಯಕ್ತಪಡಿಸಿದ ಸುಮಲತಾ

ನಂತರ ಮಾತನಾಡಿದ ನಿಖಿಲ್, ಇಬ್ಬರು ಮುಖಾಮುಖಿಯಾದ್ವಿ. ಅಕ್ಕಾ ನಮಸ್ಕಾರ ಅಂದೆ  ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ.

First published:April 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ