• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಕೆಪಿಸಿಸಿ ಕಚೇರಿಯಲ್ಲಿ ಕೈ ಮುಖಂಡರ ನಡುವೆ ಗಲಾಟೆ; ಜಗಳ ನಡೆದಿಲ್ಲ, ಕೇವಲ ಚರ್ಚೆ ಎಂದ ಕಾರ್ಯಾಧ್ಯಕ್ಷ ಸಲೀಂ

ಕೆಪಿಸಿಸಿ ಕಚೇರಿಯಲ್ಲಿ ಕೈ ಮುಖಂಡರ ನಡುವೆ ಗಲಾಟೆ; ಜಗಳ ನಡೆದಿಲ್ಲ, ಕೇವಲ ಚರ್ಚೆ ಎಂದ ಕಾರ್ಯಾಧ್ಯಕ್ಷ ಸಲೀಂ

ಕೆಪಿಸಿಸಿ ಕಚೇರಿ

ಕೆಪಿಸಿಸಿ ಕಚೇರಿ

ಗ್ರಾಮ ಪಂಚಾಯತಿ ಚುನಾವಣೆ ಬಗ್ಗೆ ಚರ್ಚೆ ಆಗುತ್ತಿತ್ತು. ಬಿಜೆಪಿ ಪಂಚಾಯತಿ ಆಪರೇಷನ್ ‌ಮಾಡುತ್ತೆ ಅನ್ನುವ ಚರ್ಚೆ ನಡೆಯುತ್ತಿತ್ತು. ಈ ವೇಳೆ ಸ್ವಲ್ಪ ಏರುಧ್ವನಿಯಲ್ಲಿ ಚರ್ಚೆಯಾಗಿದೆ. ಅದು ಬಿಟ್ಟು ಯಾರ ಮೇಲೆ ಹಲ್ಲೆಯಾಗಿಲ್ಲ. ಯಾರು ಕೈ ಕೈ ಮಿಲಾಯಿಸಿಲ್ಲ. ಬಿದರಳ್ಳಿ ಗ್ರಾಮ ಪಂಚಾಯತಿ ಚುನಾವಣೆ ಚರ್ಚೆ ‌ನಡೆಯುತ್ತಿತ್ತು ಎಂದು ಹೇಳಿದ್ದಾರೆ.

ಮುಂದೆ ಓದಿ ...
 • Share this:

  ಬೆಂಗಳೂರು; ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಗಲಾಟೆ ನಡೆದಿದೆ. ಕಾಂಗ್ರೆಸ್ ಎಂಎಲ್​ಸಿ ನಾರಾಯಣಸ್ವಾಮಿ, ಹಾಗೂ ರಾಜಾಜಿನಗರದ ಕಾಂಗ್ರೆಸ್ ಯುವ ನಾಯಕ ಮೋನಹರ್ ನಡುವೆ ಗಲಾಟೆ ನಡೆದಿದ್ದು, ಉಭಯ ನಾಯಕರು ಕೈ ಕೈ ಮೀಲಾಯಿಸಿದ್ದಾರೆ. ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಈ ಗಲಾಟೆ ನಡೆದಿದೆ.


  ಗಲಾಟೆ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದ್ದಾರೆ. ರಾಜಭವನ ಚಲೋ ಕಾರ್ಯಕ್ರಮದಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು. ಭಾಗವಹಿಸಿದ್ದ ಎಲ್ಲರಿಗೂ ಕೆಪಿಸಿಸಿ ವತಿಯಿಂದ ಧನ್ಯವಾದಗಳು. ಪಂಚಾಯತಿ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ನಡೆಸುವ ವಿಚಾರಕ್ಕೆ ಚರ್ಚೆ ನಡೆದಿದೆ. ಈ ವೇಳೆ ಜೋರಾಗಿ ಮಾತುಕತೆ ನಡೆದಿದೆ. ಬಿಜೆಪಿಯ ಕೆಲ ಸದಸ್ಯರನ್ನು ಸೇರಿಸುವ ವಿಚಾರಕ್ಕೆ ಚರ್ಚೆ ನಡೆದಿದೆ ಅಷ್ಟೇ. ಅದು ಬಿಟ್ಟು ನಮ್ಮ ಕಚೇರಿಯಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಚರ್ಚೆ ನಡೆಯುವಾಗ ದೊಡ್ಡ ಧ್ವನಿಯಲ್ಲಿ ಚರ್ಚೆ ಆಗಿದೆ ಅಷ್ಟೇ. ಯಾರ ಮೇಲೂ ಹಲ್ಲೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


  ಇದನ್ನು ಓದಿ: ಸಾಲ ಕೊಡಿಸುವುದಾಗಿ ಆಮಿಷ, ಲಕ್ಷಾಂತರ ರೂಪಾಯಿ ವಂಚನೆ, ಇಬ್ಬರ ಬಂಧನ


  ನಾನು ಕಚೇರಿಯಲ್ಲಿ ಇದೆ. ನಾನು ಏನ್ ನೋಡಿದೆ ಅದನ್ನು ಹೇಳ್ತಾಯಿದ್ದೀನಿ ಅಷ್ಟೇ. ನೂತನವಾಗಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ರಾಮಲಿಂಗ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿ ಬಂದ್ವಿ. ಕೆಳಗೆ ಗ್ರಾಮ ಪಂಚಾಯತಿ ಚುನಾವಣೆ ಬಗ್ಗೆ ಚರ್ಚೆ ಆಗುತ್ತಿತ್ತು. ಬಿಜೆಪಿ ಪಂಚಾಯತಿ ಆಪರೇಷನ್ ‌ಮಾಡುತ್ತೆ ಅನ್ನುವ ಚರ್ಚೆ ನಡೆಯುತ್ತಿತ್ತು. ಈ ವೇಳೆ ಸ್ವಲ್ಪ ಏರುಧ್ವನಿಯಲ್ಲಿ ಚರ್ಚೆಯಾಗಿದೆ. ಅದು ಬಿಟ್ಟು ಯಾರ ಮೇಲೆ ಹಲ್ಲೆಯಾಗಿಲ್ಲ. ಯಾರು ಕೈ ಕೈ ಮಿಲಾಯಿಸಿಲ್ಲ. ಬಿದರಳ್ಳಿ ಗ್ರಾಮ ಪಂಚಾಯತಿ ಚುನಾವಣೆ ಚರ್ಚೆ ‌ನಡೆಯುತ್ತಿತ್ತು ಎಂದು ಹೇಳಿದ್ದಾರೆ.

  Published by:HR Ramesh
  First published: