• Home
  • »
  • News
  • »
  • state
  • »
  • SR Vishwanath: ಬಿಜೆಪಿ ಶಾಸಕರ ವಿಚಾರಕ್ಕೆ ಕಾರ್ಯಕರ್ತೆಯರ ಜಡೆ ಜಗಳ; ದೂರು ದಾಖಲು

SR Vishwanath: ಬಿಜೆಪಿ ಶಾಸಕರ ವಿಚಾರಕ್ಕೆ ಕಾರ್ಯಕರ್ತೆಯರ ಜಡೆ ಜಗಳ; ದೂರು ದಾಖಲು

ಎಸ್​ ಆರ್​ ವಿಶ್ವನಾಥ್​

ಎಸ್​ ಆರ್​ ವಿಶ್ವನಾಥ್​

ಎಸ್​.ಆರ್.ವಿಶ್ವನಾಥ್ ಅವರಿಗೆ ಕುರಿತು ಸಂದೇಶವನ್ನು ಭಾಗ್ಯ ಎಂಬವರು ಬಿಜೆಪಿ ಕಾರ್ಯಕರ್ತರ ಮೊಬೈಲ್​ ಸಂಖ್ಯೆಗೆ ವಾಟ್ಸಪ್ ಮಾಡಿದ್ದರು. ಇದೇ ವಿಷಯ ಜಡೆ ಜಗಳಕ್ಕೆ ಕಾರಣವಾಗಿದೆ.

  • Share this:

ಬಿಜೆಪಿ ಶಾಸಕ ಎಸ್​.ಆರ್.ವಿಶ್ವನಾಥ್ (BJP MLA SR Vishwanath) ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಕಾರ್ಯಕರ್ತೆಯರು (Activist) ಕೈ ಕೈ ಮಿಲಾಯಿಸಿಕೊಂಡಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾಂಗ್ರೆಸ್ ಕಾರ್ಯಕರ್ತೆ ಭಾಗ್ಯ ಎಂಬವರು ಮಾಡಿದ ಮೆಸೇಜ್​ನಿಂದ (Whatsapp Message) ಜಗಳ ಆರಂಭವಾಗಿದೆ. ಇದೀಗ ಬಿಜೆಪಿ ಕಾರ್ಯಕರ್ತೆಯರು ದೂರು ದಾಖಲಿಸಿದ್ದಾರೆ. ಎಸ್​.ಆರ್.ವಿಶ್ವನಾಥ್ ಅವರಿಗೆ ಕುರಿತು ಸಂದೇಶವನ್ನು ಭಾಗ್ಯ ಎಂಬವರು ಬಿಜೆಪಿ ಕಾರ್ಯಕರ್ತರ ಮೊಬೈಲ್​ ಸಂಖ್ಯೆಗೆ ವಾಟ್ಸಪ್ ಮಾಡಿದ್ದರು. ಇದೇ ವಿಷಯ ಜಡೆ ಜಗಳಕ್ಕೆ ಕಾರಣವಾಗಿದೆ.


ಎಸ್​.ಆರ್.ವಿಶ್ವನಾಥ್ ಪವರ್ ಏನಿದ್ರೂ ಅಭಿಮಾನಿಗಳ ಮುಂದೆ ಮಾತ್ರ. ಆದರೆ ವಿಶ್ವನಾಥ್​​ನಿಂದ ನೊಂದಿರುವ ಭಾಗ್ಯಳ ಮುಂದೆ ಪವರ್ ಆಫ್. ಪವರ್ ಇಲ್ಲದಿರುವ ವಿಶ್ವನಾಥ್, ಈ ಭೂಮಿ ಮೇಲೆ ಇರೋದಕ್ಕೆ ನಾನೇ ಕಾರಣ ಎಂದು ಬರೆದಿರುವ ಪೋಸ್ಟರ್​ನ್ನು ವಾಟ್ಸಪ್​ನಲ್ಲಿ ಶೇರ್ ಮಾಡಲಾಗಿತ್ತು.


ಕಾಂಗ್ರೆಸ್ ಕಾರ್ಯಕರ್ತೆಯ ಮನೆಗೆ ಬಿಜೆಪಿ ಕಾರ್ಯಕರ್ತೆಯರು


ಈ ಮಸೇಜ್ ವೈರಲ್ ಆಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತೆಯರಾದ ಅನಿತಾ, ಲಕ್ಷ್ಮಿ, ವೀಣಾ, ಅರ್ಚನಾ ಮತ್ತು  ಶಕುಂತಲಾ ಎಂಬವರು ಮೆಸೇಜ್ ಮಾಡಿದ್ದ ಮಹಿಳೆಯ ವಿಳಾಸ ಪತ್ತೆ ಮಾಡಿದ್ದಾರೆ. ಎಲ್ಲರೂ ಜೊತೆಯಾಗಿ ಭ್ಯಾಗ ಮನೆಗೆ ತೆರಳಿದ್ದಾರೆ. ಈ ಸಮಯದಲ್ಲಿ ಶಾಸಕರ ಬಗ್ಗೆ ಸುಳ್ಳು ಆರೋಪ ಯಾಕೆ ಮಾಡ್ತಿದ್ದೀಯಾ? ಈ ರೀತಿ ಪದ ಬಳಕೆ ಮಾಡಿದ್ದು ತಪ್ಪು ಎಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿ:  Shivamogga: ನಿಷೇಧಿತ PFI ಅಂಗಸಂಸ್ಥೆ CFI ಸೇರುವಂತೆ ಶಿವಮೊಗ್ಗದಲ್ಲಿ ಗೋಡೆ ಬರಹ ಪತ್ತೆ


ಕಾಂಗ್ರೆಸ್ ಕಾರ್ಯಕರ್ತೆ ವಿರುದ್ಧ  ದೂರು ದಾಖಲು


ಈ ಸಂದರ್ಭದಲ್ಲಿ ಕಾರ್ಯಕರ್ತೆಯರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಕೊನೆಗೆ ಬಿಜೆಪಿ ಕಾರ್ಯಕರ್ತೆಯರು ಮಹಿಳೆ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಭಾಗ್ಯಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


ಬಿಜೆಪಿ ಸೇರಲು ಪಾನಿಪುರಿ ಮಂಜು ಪ್ರತಿಭಟನೆ!


ರೌಡಿ ಶೀಟರ್‌ಗಳು ಬಿಜೆಪಿ ಸೇರಲು ಆಸಕ್ತಿ ತೋರುತ್ತಿದ್ದಾರೆ ಎಂಬ ಚರ್ಚೆ ಜೋರಾಗಿರುವಾಗಲೇ, ಮೈಸೂರಿನಲ್ಲಿ ರೌಡಿ ಶೀಟರ್ ಒಬ್ಬ “ನನ್ನನ್ನೂ ಬಿಜೆಪಿಗೆ ಸೇರಿಸಿಕೊಳ್ಳಿ” ಅಂತ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾನೆ.


ಇದನ್ನೂ ಓದಿ: Bettanagere Shankara: ಬಿಜೆಪಿ ಸೇರಲು ಮುಂದಾಗಿರುವ ಬೆತ್ತನಗೆರೆ ಯಾರು? ಇಲ್ಲಿದೆ ಶಂಕರನ 'ರಕ್ತ'ಚರಿತ್ರೆ!


ರೌಡಿ ಶೀಟರ್ ಪಾನಿಪುರಿ ಮಂಜನ ಏಕಾಂಗಿ ಪ್ರತಿಭಟನೆ


ಮೈಸೂರಿನಲ್ಲಿ ರೌಡಿ ಶೀಟರ್ ಪಾನಿಪೂರಿ ಮಂಜು ಎಂಬಾತ ಏಕಾಂಗಿಯಾಗಿ, ಬ್ಯಾನರ್ ಹಿಡಿದು ಪ್ರತಿಭಟನೆ ಮಾಡಿದ್ದಾನೆ. ನಾನು ರೌಡಿ ಶೀಟರ್, ನನಗೂ ಸ್ಥಾನ-ಮಾನ ಕೊಡಿ, ಬಿಜೆಪಿಗರೇ ನನಗೂ ಟಿಕೆಟ್ ನೀಡಿ ಅಂತ ಆಗ್ರಹಿಸಿದ್ದಾನೆ.


ಕೈ ಆರೋಪಕ್ಕೆ ಸಿಎಂ ತಿರುಗೇಟು


ಕಾಂಗ್ರೆಸ್​ ಆರೋಪಕ್ಕೆ ಟ್ವೀಟ್ (Tweet) ಮೂಲಕ ಬಸವರಾಜ ಬೊಮ್ಮಾಯಿ (Basavaraj Bommai) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಟ್ವೀಟ್ ಗೆ ಸಂಬಂಧಿಸಿದಂತೆ ರೌಡಿಶೀಟರ್ ಗಳ (Rowdy Sheeter) ಕುರಿತಾದ ಪತ್ರಕರ್ತರ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆ. ಇದನ್ನು ಇಷ್ಟಕ್ಕೆ ಸೀಮಿತವಾಗಿ ನೋಡಬೇಕು. ನಮ್ಮ ಪಕ್ಷವು (Party) ಯಾವುದೇ ರೌಡಿಶೀಟರ್ ಗಳಿಗೆ ಮನ್ನಣೆ ಕೊಡುವುದಿಲ್ಲ ಹಾಗೂ ಅವರನ್ನು ಸಹಿಸುವುದಿಲ್ಲ.


ನಮ್ಮ ಪಕ್ಷದ ಅಧ್ಯಕ್ಷರು ಈಗಾಗಲೇ ತಿಳಿಸಿರುವಂತೆ ಸೈಲೆಂಟ್ ಸುನೀಲರನ್ನು (Silent Sunila) ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Published by:Mahmadrafik K
First published: