• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Chikkamagaluru: ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ, ಕಾಂಗ್ರೆಸ್ ಕಚೇರಿಯಲ್ಲೇ ಕಾರ್ಯಕರ್ತರ ಹೊಡೆದಾಟ

Chikkamagaluru: ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ, ಕಾಂಗ್ರೆಸ್ ಕಚೇರಿಯಲ್ಲೇ ಕಾರ್ಯಕರ್ತರ ಹೊಡೆದಾಟ

ಕಾರ್ಯಕರ್ತರ ಹೊಡೆದಾಟ

ಕಾರ್ಯಕರ್ತರ ಹೊಡೆದಾಟ

ಚಿಕ್ಕಮಗಳೂರಿನ ಜಿಲ್ಲಾ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ. ನಗರ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಎದುರಿನಲ್ಲೇ ಗಲಾಟೆ ನಡೆಯಿತು.

  • Share this:

ಚಿಕ್ಕಮಗಳೂರು (ಜು.24) : ಚಿಕ್ಕಮಗಳೂರಿನ ಜಿಲ್ಲಾ ಕಾಂಗ್ರೆಸ್ (District Congress) ಮನೆಯೊಂದು ಮೂರು ಬಾಗಿಲಾಗಿದೆ. ನಗರ ಕಾಂಗ್ರೆಸ್ ಕಚೇರಿಯಲ್ಲಿ (Office) ಭಾನುವಾರ ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಬೆಂಬಲಿಗರು ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ನಿತೀಶ್  (Nitish )ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕಾರ್ಯದರ್ಶಿ ಹುದ್ದೆಯಿಂದ ನಿತೀಶ್ ಅವರನ್ನು ತೆಗೆದುಹಾಕಿದ್ದೇ ಘರ್ಷಣೆಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ  (Block Congress President Manje Gowda) ಎದುರಿನಲ್ಲೇ ಗಲಾಟೆ ನಡೆಯಿತು. ಯುವಕರ ವರ್ತನೆಯಿಂದ ಬೇಸತ್ತ ಮಂಜೇಗೌಡ ರಾಜೀನಾಮೆ ನೀಡಲು ಮುಂದಾದರು.


ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ


ಚಿಕ್ಕಮಗಳೂರು ಯೂಥ್ ಕಾಂಗ್ರೆಸ್​ ನಲ್ಲಿ ಜಾತಿ ರಾಜಕಾರಣ ಹೆಚ್ಚಿದೆ ಎಂಬ ಆರೋಪವಿದೆ. ಈ ಮಧ್ಯೆ ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ್ 17 ಕಾರ್ಯಕರ್ತರನ್ನ ಸಸ್ಪೆಂಡ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಕಾರ್ಯಕರ್ತರು ಸಮಯಕ್ಕೆ ಕಾಯುತ್ತಿದ್ದರು. ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾಧ್ಯಕ್ಷರ ನಡೆ ಖಂಡಿಸಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಜಿಲ್ಲಾ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ನಿತೀಶ್ ನನ್ನ ಕಾರ್ಯದರ್ಶಿ ಸ್ಥಾನದಿಂದ ತೆಗೆದು ಹಾಕಿದ್ದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.


ಯೂತ್ ಕಾಂಗ್ರೆಸ್ ನದ್ದೇ  3 ಬಾರಿ ಗಲಾಟೆ


ಯೂಥ್ ಕಾಂಗ್ರೆಸ್ ಕಾರ್ಯಕರ್ತರ ಈ ರೀತಿಯ ಗಲಾಟೆ ಇದೇ ಮೊದಲಲ್ಲ. ಕಳೆದ ಒಂದು ವರ್ಷದಲ್ಲಿ ಯೂತ್ ಕಾಂಗ್ರೆಸ್ ನದ್ದೇ ಸುಮಾರು ಮೂರು ಗಲಾಟೆಗಳಾಗಿವೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಮನವಿ ನೀಡುವ ವೇಳೆ ನಡು ರಸ್ತೆಯಲ್ಲಿ ಹೊಡೆದಾಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಾಳೆಹೊನ್ನೂರಿಗೆ ಬಂದಾಗ ಇಲ್ಲಿ ಕಾರ್ಯಕರ್ತರು ಯಾರು ಇಲ್ಲ. ಎಲ್ಲರೂ ನಾಯಕರೇ ಎಂದು ಅಸಮಾಧಾನ ಕೂಡ ಹೊರ ಹಾಕಿದ್ದರು. ಕಾಫಿನಾಡ ಜಿಲ್ಲಾ ಕಾಂಗ್ರೆಸ್​ನ ದ್ದು ಒಂದು ಕಥೆಯಾದರೆ ಯೂಥ್ ಕಾಂಗ್ರೆಸ್ ನದ್ದು ಮತ್ತೊಂದು ಕತೆಯಾಗಿದೆ.




ನಿತೇಶ್ ವಿರುದ್ಧ ಪೊಲೀಸರಿಗೆ ಸಂತೋಷ್ ದೂರು


ಗಲಾಟೆಯ ನಂತರ ನಿತೇಶ್ ವಿರುದ್ಧ ಪೊಲೀಸರಿಗೆ ಸಂತೋಷ್ ದೂರು ನೀಡಿದರು. ‘ನಿತೀಶ್ ಅವರನ್ನು ಅವರ ಜವಾಬ್ದಾರಿಯಿಂದ ನಾನು ತೆಗೆದು ಹಾಕಿಲ್ಲ. ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಮೊಹಮದ್ ನಲಪಾಡ್ ಅವರ ಒಪ್ಪಿಗೆ ಮೇರೆಗೆ ಅವರನ್ನು ತೆಗೆಯಲಾಗಿದೆ. ನಲಪಾಡ್ ಅವರ ಲೆಟರ್ ಹೆಡ್​ನಲ್ಲಿಯೇ ಅಮಾನತು ಪತ್ರ ರವಾನೆಯಾಗಿದೆ. ನಿತೀಶ್ ಯಾರು ಅಂತಾನೆ ನನಗೆ ಗೊತ್ತಿಲ್ಲ, ಅವನ ಮುಖವನ್ನೇ ನಾನು ನೋಡಿಲ್ಲ’ ಎಂದು ಸಂತೋಷ್ ಪ್ರತಿಕ್ರಿಯಿಸಿದರು.


ಗಾಂಜಾ ಹೊಡೆದು ಬಂದ ಹುಡುಗರನ್ನು ಕರೆಸಿ ಗಲಾಟೆ


‘ಗಲಾಟೆ ಮಾಡಲೆಂದು ಗಾಂಜಾ ಹೊಡೆದು ಬಂದ ಹುಡುಗರನ್ನು ಕರೆಸಿ ಗಲಾಟೆ ಮಾಡಿಸಿದ್ದಾರೆ. ನಾನು ವೀರಶೈವ ಸಮಾಜದ ಯುವ ಘಟಕದ ಜಿಲ್ಲಾಧ್ಯಕ್ಷ ಕೂಡ ಆಗಿದ್ದೇನೆ. ವೀರಶೈವ ಸಮಾಜಕ್ಕೆ ಸೇರಿದವರು ರಾಜಕೀಯವಾಗಿ ಮುಂದೆ ಬರಬಾರದು ಎನ್ನುವ ಚಿತಾವಣೆಯಿಂದ ಹೀಗೆ ಮಾಡುತ್ತಿದ್ದಾರೆ ಎನಿಸುತ್ತದೆ. ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ’ ಎಂದು ಅವರು ಹೇಳಿದರು.


ಒಟ್ಟಾರೆ, ರಾಜ್ಯ ರಾಜಧಾನಿಯಲ್ಲಿ ಕುರ್ಚಿಗಾಗಿ ದೊಡ್ಡವರು ಕಿತ್ತಾಡುತ್ತಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಸಣ್ಣ-ಸಣ್ಣ ವಿಚಾರಕ್ಕೆ ಸಣ್ಣವರು ಕಿತ್ತಾಡುತ್ತಿದ್ದಾರೆ. ದಿನ ಕಳೆದಂತೆ ಚುನಾವಣೆ ಹತ್ತಿರ ಬರುತ್ತಿದೆ. ಈ ಹೊತ್ತಲ್ಲಿ ಯೂಥ್ ಕಾಂಗ್ರೆಸ್ಸಿಗರ ಇಂತಹ ಗಲಾಟೆ ಕಾಂಗ್ರೆಸ್ಸಿಗೆ ಮಗ್ಗಲ ಮುಳ್ಳಾಗುತ್ತೆ ಎಂದು ಕಾಂಗ್ರೆಸ್ಸಿಗರೇ ಅಭಿಪ್ರಾಯ ಪಟ್ಟಿದ್ದಾರೆ...

First published: