Karnataka Election Voting 2023: ಚಿಕ್ಕಮಗಳೂರಿನಲ್ಲಿ ಮತಗಟ್ಟೆ ಮುಂದೆ ಗಲಾಟೆ

ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನುಡವೆ ಗಲಾಟೆ

ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನುಡವೆ ಗಲಾಟೆ

Chikkamagaluru Election: ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಚದುರಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

  • Share this:

ಚಿಕ್ಕಮಗಳೂರು: ಇಂದು ಬೆಳಗ್ಗೆ ಏಳು ಗಂಟೆಯಿಂದಲೇ ರಾಜ್ಯದಲ್ಲಿ ಮತದಾನ ಹಬ್ಬ ಆರಂಭವಾಗಿದ್ದು, ಜನರು ಉತ್ಸಾಹದಿಂದ ಬಂದು ಮತದಾನ ಮಾಡುತ್ತಿದ್ದಾರೆ. ಚಿಕ್ಕಮಗಳೂರು ನಗರದ (Chikkamagaluru) ಬಸವನಹಳ್ಳಿ ಶಾಲೆ ಮತಗಟ್ಟೆಯ ಮುಂಭಾಗ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ (Congress-BJP Activist) ನಡುವೆ ಗಲಾಟೆ ಉಂಟಾಗಿದೆ. ಕೆಲ ಬಿಜೆಪಿ ಕಾರ್ಯಕರ್ತರು ಮತಗಟ್ಟೆ (Polling Booth) ಮುಂಭಾಗ ಕೇಸರಿ ಶಾಲು ಧರಿಸಿ ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ ಕಾಂಗ್ರೆಸ್ ಕಾರ್ಯಕರ್ತರು ಯಾಕೆ ಹಿಂದುತ್ವದ ಶಾಲು ಹಾಕಿಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದರು. ಕೇಸರಿ ಶಾಲು ತೆಗೆಯಲು ಸೂಚಿಸಿದ್ದಕ್ಕೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಯ್ತು.


ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಚದುರಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.


ಕಾರ್ಯಕರ್ತರ ನಡುವೆ ವಾಗ್ವಾದ


ಚಿತ್ರದುರ್ಗದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಜೋಗಿಮಟ್ಟಿ ರಸ್ತೆಯ ಮತಗಟ್ಟೆ ಸಂಖ್ಯೆ 103ರ ಬಳಿ ವಾಗ್ವಾದ ಆಗಿದೆ. ದೇಶದ್ರೋಹಿಗಳ ಪರ ಪಕ್ಷಕ್ಕೆ ಮತ ಹಾಕದಂತೆ ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದು, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.




ಇದನ್ನೂ ಓದಿ: Karnataka Election 2023 Live: ಕರ್ನಾಟಕ ವಿಧಾನಸಭಾ ಚುನಾವಣೆ- ಮತಯಂತ್ರ ಎಡವಟ್ಟು, ನಿಲ್ಲದ ಜನರ ಉತ್ಸಾಹ


ದೇವರ ಮೊರೆ ಹೋದ ಸವದಿ


ಮತ ಚಲಾವಣೆ ಮೊದಲು ಮಾಜಿ ಸಚಿವ ಸವದಿ ದೇವರ ಮೊರೆ ಹೋಗಿದ್ದು, ನಾಗನೂರ ಪಿಕೆ ಲಕ್ಷ್ಮಿ ದೇವರ ದರ್ಶನ ಪಡೆದಿದ್ದಾರೆ. ಸ್ವ ಗ್ರಾಮದ ದೇವತೆ ಲಕ್ಷ್ಮಿ ದೇವಿಯು ದರ್ಶನ ಪಡೆದ ನಂತರ ಮತ ಚಲಾವಣೆ ಮಾಡಲಿದ್ದಾರೆ.

First published: