ಸಾಲಮನ್ನಾ ಬಗ್ಗೆ ಸ್ಪಷ್ಟನೆ ನೀಡಿ - ಸದನದಲ್ಲಿ ಕಿಡಿಕಾರಿದ ಯಡಿಯೂರಪ್ಪ

ವಿಧಾನಸಭೆ ವಿಪಕ್ಷ ನಾಯಕನಾಗಿ ನನಗೆ ಬ್ಯಾಂಕ್ ಜತೆ ಮಾತನಾಡುವ ಹಕ್ಕಿದೆ. ಹೀಗಾಗಿ ನಾನು ಸಾಲಮನ್ನಾಗೆ ಅಡ್ಡಿಪಡಿಸುತ್ತಿದ್ದೇನೆ ಎಂಬ ಹೇಳಿಕೆ ಸರಿಯಲ್ಲ ಎಂದು ಬಿಎಸ್ ವೈ ಕಿಡಿಕಾರಿದರು

G Hareeshkumar | news18
Updated:December 20, 2018, 4:19 PM IST
ಸಾಲಮನ್ನಾ ಬಗ್ಗೆ ಸ್ಪಷ್ಟನೆ ನೀಡಿ - ಸದನದಲ್ಲಿ ಕಿಡಿಕಾರಿದ ಯಡಿಯೂರಪ್ಪ
ವಿರೋಧ ಪಕ್ಷದ ನಾಯಕ ಯಡಿಯೂರಪ್ಪ
  • News18
  • Last Updated: December 20, 2018, 4:19 PM IST
  • Share this:
-ರಮೇಶ್ ಹಿರೇಜಂಬೂರು

ಬೆಳಗಾವಿ ( ಡಿ.20) : ರಾಜ್ಯ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿ ಅಧಿಕಾರ ಹಿಡಿದಿರುವ ಸಮ್ಮಿಶ್ರ ಸರ್ಕಾರ ನಾಟಕವಾಡುತ್ತಿದೆ. ಹೀಗಾಗಿ ರೈತರ ಸಾಲಮನ್ನಾ ಬಗ್ಗೆ ಸ್ಪಷ್ಟನೆ ನೀಡಿಬೇಕೆಂದು ಬಿಜೆಪಿ ಸದಸ್ಯರು ವಿಧಾನಸಭೆ ಕಲಾಪದಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ವಿಧಾನ ಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಸಾಲಮನ್ನಾ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಡಳಿತ ಪಕ್ಷಕ್ಕೆ ಒತ್ತಾಯಿಸಿ ಧರಣಿ ಮುಂದುವರೆಸಿದರು. ಬಿಜೆಪಿ ಶಾಸಕರ ಧರಣಿ ಹಿನ್ನೆಲೆ ಸ್ಪೀಕರ್ ರಮೇಶ್ ಕುಮಾರ್ ಕಲಾಪವನ್ನ ಅರ್ಧಗಂಟೆ ಮುಂದೂಡಿದರು.

ಇದನ್ನು ಓದಿ : ಬಿಜೆಪಿ ಔತಣಕೂಟಕ್ಕೆ ಹೋಗಿದ್ದರ ರಹಸ್ಯವನ್ನು ಸಿದ್ದರಾಮಯ್ಯ ಮುಂದೆ ಬಿಚ್ಚಿಟ್ಟ ಸಚಿವ ರಮೇಶ್​ ಜಾರಕಿಹೊಳಿ

ಇನ್ನು ಸಾಲಮನ್ನಾಗೆ ಬಿಎಸ್  ವೈ ಅಡ್ಡಿಪಡಿಸುತ್ತಿದ್ದಾರೆ ಎಂಬ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಗರಂ ಆದರು. ನಿನ್ನೆ ಸಿಎಂ ಉತ್ತರ ನೀಡಿದರು. ಇಂದು ಸಿಎಂ ಉತ್ತರ ಮೊಟಕುಗೊಳಿಸಿದ್ದಾರೆ. ವಿಧಾನಸಭೆ ಸ್ಪೀಕರ್ ಆಗಿ ನೀವು ಹೇಗೆ ಅದನ್ನ ಒಪ್ಪಿಕೊಂಡ್ರಿ ಎಂದು ಸ್ಪೀಕರ್ ಅವರನ್ನ ಪ್ರಶ್ನಿಸಿದರು ಎನ್ನಲಾಗಿದೆ.

ವಿಧಾನಸಭೆ ವಿಪಕ್ಷ ನಾಯಕನಾಗಿ ನನಗೆ ಬ್ಯಾಂಕ್ ಜತೆ ಮಾತನಾಡುವ ಹಕ್ಕಿದೆ. ಹೀಗಾಗಿ ನಾನು ಸಾಲಮನ್ನಾಗೆ ಅಡ್ಡಿಪಡಿಸುತ್ತಿದ್ದೇನೆ ಎಂಬ ಹೇಳಿಕೆ ಸರಿಯಲ್ಲ ಎಂದು ಬಿಎಸ್ ವೈ ಕಿಡಿಕಾರಿದರು

ಇದನ್ನು ಓದಿ : ಬೆಳಗಾವಿಯಲ್ಲಿ ಬಿಜೆಪಿ ಶಾಸಕರ ಮಹತ್ವದ ಸಭೆ; ಮುಂದಿನ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ
First published: December 20, 2018, 2:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading